ನಿಡಗುಂದಿ: ಸರ್ಕಾರಿ ಪ್ರೌಡಶಾಲೆ ಕಮದಾಳ ಪ್ಲಾಟ್ ದಲ್ಲಿ ಋತು ಚಕ್ರ ಸಮಯದಲ್ಲಿ ಶುಚಿತ್ವ ನಿರ್ವಹಣೆ ಮತ್ತು ಋತು ಬಂಧದ ಕುರಿತು ಅರಿವು ಅವಶ್ಯ ಎಂದು ಹಿರಿಯ ಉಪನ್ಯಾಸಕಿ ಗೀತಾಂಜಲಿ ಹೇಳಿದರು.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ ಬೆಂಗಳೂರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯಪೂರ, ತಾಲುಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಬಸವನಬಾಗೇವಾಡಿ, ಸಮುದಾಯ ಆರೋಗ್ಯ ಕೇಂದ್ರ ನಿಡಗುಂದಿ ಹಾಗು ಸರ್ಕಾರಿ ಪ್ರೌಡಶಾಲೆ ಕಮದಾಳ ಪ್ಲಾಟ್ ಇವರ ಸಂಯುಕ್ತ ಆಶ್ರಯದಲ್ಲಿ, ರಾಜ್ಯ ಆರೋಗ್ಯ ಸಂಸ್ಥೆಯ ಪ್ರಶಿಕ್ಷಣಾರ್ಥಿಗಳ ಕ್ಷೇತ್ರ ಅಧ್ಯಯನ ಕಾರ್ಯಕ್ರಮದ ಅಂಗವಾಗಿ ಜರುಗಿದ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡುತ್ತಾ ಅವರು, ಋತು ಚಕ್ರದ ಕಾಲಾವದಿ,ಆ ಅವದಿಯಲ್ಲಿಯ ತೊಂದರೆಗಳು, ಮೂಡನಂಬಿಕೆಗಳಿಂದ ಆಗುವ ದುಷ್ಟ್ಪರಿಣಾಮಗಳು, ಶುಚಿತ್ವ ಕಾಪಾಡುವ ಕುರಿತು ಹಾಗು ಆರೋಗ್ಯ ಸಮಸ್ಯೆ ಕುರಿತು ಮಾಹಿತಿ ನೀಡಿದರು.
ತಾಲುಕಾ ಆರೋಗ್ಯ ಶಿಕ್ಷಣಾಧಿಕಾರಿ ಹಾಗು ಪ್ರಶಿಕ್ಷಣಾರ್ಥಿಗಳ ಮಾರ್ಗದರ್ಶಕ ಎಸ್ ಎಸ್ ಮೇಟಿ, ರಾಜ್ಯ ಆರೋಗ್ಯ ಸಂಸ್ಥೆಯ ಕ್ಷೇತ್ರ ಅಧ್ಯಯನವು ನಮ್ಮ ಗ್ರಾಮಿಣ ಹೆಣ್ಣುಮಕ್ಕಳಲ್ಲಿ ಋತು ಚಕ್ರದ ಬಗ್ಗೆ ಇರುವ ಜ್ಞಾನದ ಕೋರತೆಯನ್ನು ಹೋಗಲಾಡಿಸಲು ಸಹಕಾರಿಯಾಗಿದೆ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ರಾಜ್ಯಾದ್ಯಾಂತ ಉಲ್ಬಣಗೊಂಡಿರುವ ಡೆಂಗ್ಯೂ ರೋಗ ನಿಯಂತ್ರಣ ಕುರಿತು ಮಾಹಿತಿ ನೀಡಿ ಜನರಿಗೆ ರೋಗದ ಬಗ್ಗೆ ಎಚ್ಚರ ಇರಲಿ, ಭಯ ಬೇಡ ಎಂದು ಸಲಹೆ ನೀಡಿದರು.
ಪ್ರೌಡಶಾಲೆಯ ಮುಖ್ಯೊಪಾದ್ಯಾಯ ವಿಜಯಕುಮಾರ ದಾಸಪ್ಪನವರ ಅದ್ಯಕ್ಷತೆ ವಹಿಸಿದ್ದರು, ಹಿರಿಯ ಆರೋಗ್ಯ ನಿರಿಕ್ಷಣಾಧಿಕಾರಿ ಜೆ ಸಿ ಮುಚ್ಚಂಡಿ, ಶಿಕ್ಷಕರಾದ ಎಸ್ ಎಸ್ ಹೊಸಮನಿ, ಪಿ ಬಿ ಕೂಚಬಾಳ, ಪಿ ಎಸ್ ಗುರಡ್ಡಿ, ಆರ್ ಎಸ್ ವಡ್ಡರ್,ಎಸ್ ಪಿ ಕುರುಗೋಡಿ, ಶಿಕ್ಷಕಿಯರಾದ ಆರ್ ಬಿ ಪಾಟಿಲ, ಜಿ ವಾಯ್ ಕೆಂಪವಾಡ ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.
ಪ್ರಾರಂಭದಲ್ಲಿ ವಿದ್ಯಾರ್ಥಿನಿಯರು ಪ್ರಾರ್ಥನೆ ಗೀತೆ ಹಾಡಿದರು, ಪ್ರಶಿಕ್ಷಣಾರ್ಥಿ ರೇಣುಕಾ ಜಡಗನ್ನವರ ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

