ಮೂಲ ಸ್ಥಳದಲ್ಲಿ ಪುನಃ ಪುತ್ಥಳಿ ಸ್ಥಾಪಿಸಲು ಪ್ರತಿಭಟನಾಕಾರರ ಆಗ್ರಹ
ವಿಜಯಪುರ: ನವದೆಹಲಿಯ ಐತಿಹಾಸಿಕ ಹಳೆಯ ಸಂಸತ್ ಭವನದ ಮುಂದೆ ಇದ್ದ ಛತ್ರಪತಿ ಶಿವಾಜಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗಳನ್ನು ತೆರುವುಗೊಳಿಸಿದ ಕೇಂದ್ರ ಸರ್ಕಾರದ ಕ್ರಮ ಅತ್ಯಂತ ಖಂಡನೀಯ ಎಂದು ಬುದ್ಧ, ಬಸವ, ಅಂಬೇಡ್ಕರ್ ಸೇವಾ ಸಂಸ್ಥೆಯ ಅಧ್ಯಕ್ಷ ತುಳಸಿರಾಮ ಹರಿಜನ ಹೇಳಿದರು.
ಅವರು ವಿಜಯಪುರ ನಗರದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಸೇವಾ ಸಂಸ್ಥೆಯಿಂದ ಛತ್ರಪತಿ ಶಿವಾಜಿ ಮಹಾರಾಜರ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಇತರ ಮಹಾನ್ ನಾಯಕರ ಪುತ್ಥಳಿಗಳನ್ನು ಕೇಂದ್ರ ಸರ್ಕಾರ ತೆರವುಗೊಳಿಸಿರುವುದನ್ನು ಖಂಡಿಸಿ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಿದರು.
ಭಾರತೀಯ ಚರಿತ್ರೆಯ ಪುಟದಲ್ಲಿ ಅಜರಾಮರವಾಗಿ ಉಳಿದ ವಿಶ್ವಮಾನ್ಯ ಅಮೂಲ್ಯ ರತ್ನಗಳೆಂದರೆ ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರು. ಅಂತಹ ಮಹಾನ್ ನಾಯಕರಿಗೆ ಗೌರವ ಸಲ್ಲಿಸುವ ದ್ಯೋತಕವಾಗಿ ಹಿಂದಿನ ನಾಯಕರು ರಾಷ್ಟ್ರದ ಐತಿಹಾಸಿಕ ಸಂಸತ್ ಭವನದ ಮುಂದೆ ಪುತ್ಥಳಿಗಳನ್ನು ನಿರ್ಮಿಸಿ ಚರಿತ್ರೆಯ ಪುಟದಲ್ಲಿ ಅಚ್ಛಳಿಯದಂತೆ ನೋಡಿಕೊಂಡಿದ್ದರು. ಆದರೆ ದೇಶದಲ್ಲಿರುವ ಈಗಿನ ಕೇಂದ್ರ ಸರ್ಕಾರ ಯಾವುದೇ ಸಕಾರಣವಿಲ್ಲದೇ ಏಕಾಏಕಿ ಪ್ರತಿಮೆಗಳನ್ನು ತೆರವುಗೊಳಿಸಿರುವ ಕ್ರಮ ವಿಶ್ವವ್ಯಾಪಿ ಇರುವ ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಅಸಂಖ್ಯಾತ ಅನುಯಾಯಿಗಳಿಗೆ ಆಘಾತವನ್ನುಂಟು ಮಾಡಿದೆ. ಕೂಡಲೇ ರಾಷ್ಟ್ರಪತಿಗಳು ಹಳೆಯ ಸಂಸತ್ ಭವನದ ಮೂಲ ಸ್ಥಳದಲ್ಲಿ ಪುನಃ ಪ್ರತಿಷ್ಠಾಪಿಸುವ ಮೂಲಕ ಗೌರವ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಪ್ರತಾಪ ಚಿಕ್ಕಲಕಿ, ಜಿತೇಂದ್ರ ಕಾಂಬಳೆ, ಮತೀನಕುಮಾರ ದೇವದರ, ವೈ.ಸಿ. ಮಯೂರ, ಭಾರತಿ ಹೊಸಮನಿ, ನಾಗೇಶ ತಳಕೇರಿ, ಪರಶುರಾಮ ಚಲವಾದಿ, ರಮೇಶ ಕವಲಗಿ, ಅಕ್ಷಯ ಅಜಮನಿ, ಬಸವಕುಮಾರ ಕಾಂಬಳೆ, ಗೋಪಿನಾಥ ಚಲವಾದಿ, ಪ್ರದೀಪ ಚಲವಾದಿಯವರು ಮಾತನಾಡಿ, ಹಳೆಯ ಸಂಸತ್ ಭವನದ ಮುಂದೆ ಪುನಃ ಪುತ್ಥಳಿಗಳನ್ನು ಪ್ರತಿಷ್ಠಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಜು ಮೇಲಿನಮನಿ, ರಘು ಕಣಮೇಶ್ವರ, ಮಲ್ಲು ಜಾಲಗೇರಿ, ವಿವೇಕ ಶಾಹಾಪೂರ, ವೆಂಕಟೇಶ ವಗ್ಯಾಣವರ, ಸಿದ್ಧು ರಾಯಣ್ಣವರ, ಶಂಕರ ಚಲವಾದಿ, ಸಂಜು ಕಂಬಾಗಿ, ಆಕಾಶ ಕಲ್ಲವಗೋಳ, ಬಾಗ್ಯಶ್ರೀ ವಗ್ಯಾಣವರ, ಲಕ್ಷö್ಮಣ ಬಿರಾದಾರ, ಮಲ್ಲಿಕಾರ್ಜುನ ಪಾಟೀಲ, ಲಕ್ಷ್ಮಣ ಚಲವಾದಿ, ರೋಹಿತ ಮಲಕಣ್ಣವರ, ಮಂಜುನಾಥ ಶಿವಶರಣ, ರಮೇಶ ಕಾಂಬಳೆ, ಅಪ್ಪಾಸಾಬ ಬನಸೋಡೆ, ಮಲ್ಲು ಬನಸೊಡೆ, ವಿಕಾಸ ಹೊಸಮನಿ, ರುದ್ರು ಬನಸೋಡೆ, ಸಂತೋಷ ಟಕ್ಕೆ, ಶಿವು ಮೇಲಿನಮನಿ, ಶೇಖರ ಕೂಡಗಿ, ಚಂದ್ರು ನಾಗಠಾಣ, ಕೀರ್ತಿ ಕಾಖಂಡಕಿ, ವಿಶ್ವನಾಥ ತಾಳಿಕೋಟಿ, ಅರವಿಂದ ಕಾಖಂಡಕಿ, ಬಸವರಾಜ ಕುಬಕಡ್ಡಿ ಇತರೆ ಮುಖಂಡರು ಉಪಸ್ಥಿತರಿದ್ದರು.

