ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಮೊಹರಂ ಪ್ರಯುಕ್ತ ಜರುಗಿದ ಶಾಂತಿಸಭೆ
ದೇವರಹಿಪ್ಪರಗಿ: ಮೊಹರಂ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವುದರ ಮೂಲಕ ಪ್ರತಿಯೊಬ್ಬರು ಸಾಂಪ್ರದಾಯಿಕ ಸೌಹಾರ್ದತೆಯನ್ನು ಮುಂದುವರೆಸಬೇಕು ಎಂದು ಪಿ.ಎಸ್.ಐ ಬಸವರಾಜ ತಿಪ್ಪಾರೆಡ್ಡಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬುಧವಾರ ಮೊಹರಂ ಪ್ರಯುಕ್ತ ಜರುಗಿದ ಶಾಂತಿಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಟ್ಟಣ ಹಿಂದಿನಿಂದಲೂ ಶಾಂತಿ, ಸುವ್ಯವಸ್ಥೆ, ಸೌಹಾರ್ದತೆ, ಭಾತೃತ್ವಕ್ಕೆ ಹೆಸರಾಗಿದೆ. ಇಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲ. ಅದಾಗ್ಯೂ ಇಲಾಖೆಯ ನಿರ್ದೇಶನದಂತೆ ಸಭೆ ನಡೆಸಬೇಕಾಗುತ್ತದೆ. ಸಾರ್ವಜನಿಕರ ಹಿತರಕ್ಷಣೆಕ್ಕಾಗಿ ಇಲಾಖೆ ಕೈಗೊಳ್ಳುವ ಎಲ್ಲಾ ಮುಂಜಾಗ್ರತಾ ಕ್ರಮಗಳಿಗೆ ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದರು.
ನಾಗರೀಕರ ಪರವಾಗಿ ಮಹಿಬೂಬ್ ಹುಂಡೇಕಾರ ,ಶ್ರೀಧರ ನಾಡಗೌಡ, ಮಾತನಾಡಿದರು.
ಸಭೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಬಶೀರ್‌ಅಹ್ಮದ್ ಬೇಪಾರಿ, ಕಾಶೀನಾಥ ಬಜಂತ್ರಿ, ನಾಮ ನಿರ್ದೇಶಿತ ಸದಸ್ಯ ಸುನೀಲ ಕನಮಡಿ, ವಿನೋದ ಪಾಟೀಲ, ಮಲ್ಲನಗೌಡ ಪಾಟೀಲ, ಪ್ರಕಾಶ ಗುಡಿಮನಿ, ಪ್ರಕಾಶ ತಳಕೇರಿ, ಹುಸೇನ್ ಗೌಂಡಿ, ಅಕ್ಬರ್ ಬಾಗವಾನ, ನಬಿಲಾಲ್, ದೇವರಾಜ ಬಿರಾದಾರ, ಎಮ್.ಎಸ್.ಮೆಟಗಾರ, ಸಿಬ್ಬಂದಿ ಸಂಜೀವ ತಳವಾರ, ರಾಮನಗೌಡ ಬಿರಾದಾರ ಸಹಿತ ಇತರರು ಇದ್ದರು.

