ವಿಜಯಪುರ: ಮೃದು ಮನಸ್ಸಿನ ಮಕ್ಕಳಿಗೆ ಶಾಲೆಯಲ್ಲಿ ಉತ್ತಮ ಕಲಿಕಾ ವಾತಾವರಣ ನಿರ್ಮಿಸಿ ತಿದ್ದಿ ತೀಡಿ ಶಿಕ್ಷಣ ನೀಡಿ ಅವರ ಜೀವನವನ್ನು ನಿರ್ಮಿಸುವ ಶಿಕ್ಷಕರೇ ಧನ್ಯರು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಎನ್.ಎಚ್. ನಾಗೂರ ಹೇಳಿದರು.
ತಾಲ್ಲೂಕಿನ ತಿಡಗುಂದಿಯ ಕಾಯಕಯೋಗಿ ಗ್ರಾಮೀಣ ಸಂಸ್ಥೆ ಮಾನಸ ಗಂಗೋತ್ರಿ ವಸತಿ ಶಾಲೆಯಲ್ಲಿ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗ್ರಾಮೀಣವಲಯ ವಿಜಯಪುರ ಸಹಯೋಗದಲ್ಲಿ ಬುಧವಾರ ನಡೆದ ಹಿರಿಯ ಪ್ರಾಥಮಿಕ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಏರ್ಪಡಿಸಿದ ಪ್ರೇರಣಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಗುರು ಪರಂಪರೆಗೆ ಹೆಚ್ಚು ಮಹತ್ವ ಕೊಟ್ಟಿರುವವರು ನಾವು, ಸಮಾಜ ಅತೀ ಹೆಚ್ಚು ಗೌರವ ಕೊಡುವ ಕ್ಷೇತ್ರ ನಮ್ಮ ಶಿಕ್ಷಕರ ಕ್ಷೇತ್ರವಾಗಿದೆ. ಶಾಲೆಯು ಜೀವಂತ ದೇವರ ಗುಡಿ ಎಂದು ಸಮಾಜವು ನಂಬಿದೆ. ಕಡುಬಡತನದ ಮಕ್ಕಳು ಸರ್ಕಾರಿ ಶಾಲೆಗೆ ಬರುತ್ತಾರೆ. ಅವರ ಜೀವನ ಉಜ್ವಲಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಶಾಲೆಯಲ್ಲಿ ಉತ್ತಮ ಪರಿಸರ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿ ಮುಖ್ಯೋಪಾಧ್ಯಾಯರದ್ದಾಗಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಾಗಬೇಕು. ಗೈರು ಮಕ್ಕಳ ಸಂಖ್ಯೆ ಹಾಗೂ ಕೋಚಿಂಗ್ ಕೇಂದ್ರಗಳಿಗೆ ಹೋಗುವ ಮಕ್ಕಳ ಸಂಖ್ಯೆ ಕಡಿಮೆ ಮಾಡಬೇಕು ಎಂದರು.
ಗ್ರಾಮೀಣವಲಯದ ಬಿಇಓ ಪ್ರಮೋದಿನಿ ಬಳೋಲಮಟ್ಟಿ ಮಾತನಾಡಿ ಸರಕಾರಿ ಶಾಲೆಗಳ ಉಳಿವಿಗಾಗಿ, ಮಕ್ಕಳ ಭವಿಷ್ಯ ನಿರ್ಮಾಣಕ್ಕೆ, ಹಿಂದುಳಿದ ಮಕ್ಕಳ ಜೀವನ ನಿರ್ಮಿಸಲು ನಮ್ಮ ಶಿಕ್ಷಕರ ಪಾತ್ರ ದೊಡ್ಡದಾಗಿದೆ ಎಂದರು.
ನಿವೃತ್ತ ಉಪನಿರ್ದೆಶಕ ಎಂ.ಜಿ.ದಾಸರ ಮಾತನಾಡಿ ಮಕ್ಕಳ ಮಟ್ಟಕ್ಕೆ ಇಳಿದು ಪಾಠಭೋದನೆ ಮಾಡುವದು. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ, ಸ್ಪರ್ಧಾತ್ಮಕ ಜಗತ್ತಿಗೆ ಅನಿಯಾಗುವ ರೀತಿಯಲ್ಲಿ ಕಾರ್ಯ ಪ್ರವೃತ್ತರಾಗಬೇಕು. ಪೂರ್ವ ತಯಾರಿಯೊಂದಿಗೆ ಹಸನ್ಮುಖಿಯಿಂದ ಬೋಧನೋಪಕರಗಳನ್ನು ಬಳಸಿಕೊಂಡು ವರ್ಗ ಕೊನೆಯಲ್ಲಿ ಪಾಠ ಭೋದನೆ ಮಾಡಬೇಕು. ಮಕ್ಕಳಿಗೆ ಹುರುಪು ತುಂಬುವದು, ಪ್ರೋತ್ಸಾಹಿಸುವದು, ಚಿಕ್ಕ ಚಿಕ್ಕ ಬಹುಮಾನ ಕೊಡುವದರ ಮೂಲಕ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಅನಿ ಮಾಡಬೇಕು. ವೃತ್ತಿ ಗೌರವ ಬೆಳೆಸಿಕೊಂಡು ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಶೈಕ್ಷಣಿಕ ಅಭಿವೃದ್ಧಿಗೊಳಿಸಬೇಕು. ಶಾಲೆಯ ಸೊಬಗನ್ನು ಹೆಚ್ಚಿಸುವ ಕಾರ್ಯ ಮಾಡಬೇಕು. ಸೇವೆ ಸಲ್ಲಿಸಿದ ಶಾಲೆಯಲ್ಲಿ ತಮ್ಮ ಧನಾತ್ಮಕ ಅಂಶಗಳನ್ನು ಬಿಟ್ಟು ಬರುವಂತೆ ಎಲ್ಲರೂ ನೆನಪು ಇಟ್ಟುಕೊಳ್ಳುವಂತ ಸೇವೆ ಸಲ್ಲಿಸಬೇಕು.
ಸಂಸ್ಥೆಯ ಅಧ್ಯಕ್ಷರು ಬಸನಗೌಡ ಹರನಾಳ ಮಾತನಾಡಿದರರು.
ಈ ಸಂದರ್ಭದಲ್ಲಿ ಚಂದ್ರಶೇಖರ ಕೋರೆ, ರವಿ ಪವಾರ, ಸುಭಾಸ್ ರಾಠೋಡ್, ರಜಿಯಾಉದ್ದಿನ ರೋಜಿಂದರ್, ಮಾಂತೇಶ ಭಾಪ್ರಿ, ಶ್ರೀಧರ್ ಕುಲಕರ್ಣಿ, ಅಮರಗೊಂಡ, ಸಿಆರ್ಪಿಗಳು ಹಾಗೂ ಮುಖ್ಯ ಗುರುಗಳು ಹಾಜರಿದ್ದರು.
ನಿರೂಪಣೆಯನ್ನು ರವೀಂದ್ರ ಚಿಕ್ಕಮಠ, ಸ್ವಾಗತವನ್ನು ಪ್ರಭು ಬಿರಾದಾರ, ವಂದನಾರ್ಪಣೆಯನ್ನು ಎಸ್.ಡಿ. ಮೋಸಲಗಿ ನೆರವೇರಿಸಿದರು .
Subscribe to Updates
Get the latest creative news from FooBar about art, design and business.
ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರೇ ಧನ್ಯರು :ಡಿಡಿಪಿಐ ನಾಗೂರ
Related Posts
Add A Comment

