ವಿಜಯಪುರ: ಸಾಂಖ್ಯಿಕ ತಜ್ಞ ಪಿ.ಸಿ.ಮಹಾಲನೋಬಿಸ್ ಅವರ ಜನ್ಮ ದಿನದ ಅಂಗವಾಗಿ ವಿಜಯಪುರ ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಬುಧವಾರ ನಿರ್ಣಯಗಳನ್ನು ಕೈಗೊಳ್ಳುವಲ್ಲಿ ದತ್ತಾಂಶಗಳ ಬಳಕೆ ಎಂಬ ಘೋಷವಾಕ್ಯದೊಂದಿಗೆ ಸಾಂಖ್ಯಿಕ ದಿನ ಆಚರಣೆ ಮಾಡಲಾಯಿತು.
ಬುಧವಾರ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಲಾಯಿತು. ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಎನ್.ಕೆ.ಗೋಠೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಯೋಜನೆಗಳನ್ನು ರೂಪಿಸಲು ಅಂಕಿ-ಅಂಶಗಳು ಮಹತ್ವದ ಪಾತ್ರ ವಹಿಸುತ್ತವೆ. ಯಾವುದೇ ಕೆಲಸವನ್ನು ಮಾಡಲು ಮೊದಲಿಗೆ ಯೋಜನೆಯನ್ನು ಹಾಕಿಕೊಳ್ಳಬೇಕು. ಯೋಚನೆ, ಯೋಜನೆಯಿಂದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ವ್ಹಿವ್ಹಿಎಸ್ ಭನಸಿಲ್ ವ್ಹಿಠಲದಾಸ ದರಬಾರ ಪದವಿ ಮಹಾ ವಿದ್ಯಾಲಯದ ಉಪನ್ಯಾಸಕ ಆನಂದ ಕುಲಕರ್ಣಿ ನಿರ್ಣಯ ಕೈಗೊಳ್ಳುವಲ್ಲಿ ದತ್ತಾಂಶಗಳ ಬಳಕೆ (Use of Data for Decision Making) ಕುರಿತು ಉಪನ್ಯಾಸ ನೀಡಿ, ನಮ್ಮ ದಿನನಿತ್ಯದ ಜೀವನದಲ್ಲಿ ಗಣಿತ ಮತ್ತು ಸಂಖ್ಯಾಶಾಸ್ತ್ರವನ್ನು ಹೇಗೆ ಉಪಯೋಗಿಸುತ್ತೆವೆ ಎಂಬುವುದನ್ನು ನೈಜ ಉದಾಹರಣೆಗಳೊಂದಿಗೆ ವಿವರಿಸಿ ಸವಿಸ್ತಾರವಾಗಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಬಸವನ ಬಾಗೇವಾಡಿ ತಾಲ್ಲೂಕಿನ ನಿವೃತ್ತ ತಾಲ್ಲೂಕು ಯೋಜನಾಧಿಕಾರಿಗಳಾದ ಆರ್.ಪಿ.ಪಾಟೀಲ, ತಾಲ್ಲೂಕು ಪಂಚಾಯತ್ ತಾಲ್ಲೂಕು ಯೋಜನಾಧಿಕಾರಿ ಶ್ರೀಮತಿ ಎಸ್.ಎಸ್.ಅಳ್ಳಗಿ ಭಾಗವಹಿಸಿದ್ದರು. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಛೇರಿಯ ಸಹಾಯಕ ನಿರ್ದೇಶಕ ಅಲ್ತಾಫ್‌ಅಹ್ಮದ್ ಬಾಶಾಲಾಲ ಮಣಿಯಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಾಲಯದ ಶ್ರೀಮತಿ ಶ್ರುತಿ ಶಿಂದ್ರೆ(ಎಸ್.ಡಿ.ಎ) ಮತ್ತು ಶ್ರೀಮತಿ ಸವಿತಾ ಕೌಜಲಗಿ(ಸ.ಸಾಂ.ಅ) ಪ್ರಾರ್ಥನಾ ಗೀತೆಯನ್ನು ಹಾಡಿದರು, ಸಹಾಯಕ ಸಾಂಖ್ಯಿಕ ಅಧಿಕಾರಿಯಾದ ಪರಮೇಶ ಕೆಂಚಣ್ಣವರ ನಿರೂಪಿಸಿದರು. ಸಹಾಯಕ ಸಾಂಖ್ಯಿಕ ಅಧಿಕಾರಿಯಾದ ಶ್ರೀಮತಿ ಸುಷ್ಮಾ ಮಜ್ಜಗಿ ಸ್ವಾಗತಿಸಿ, ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

