ವಿಜಯಪುರ: ಜಿಲ್ಲೆಯಲ್ಲಿನ ಗ್ರಾಮೀಣ ಪ್ರದೇಶಗಳಿಗೂ ಬಿಎಸ್‌ಎನ್‌ಎಲ್ ೪ಜಿ ಸೇವೆಗಳನ್ನು ತ್ವರಿತವಾಗಿ ಒದಗಿಸಲು ಆದ್ಯತೆ ಮೇರೆಗೆ ಕಾರ್ಯನಿರ್ವಹಿಸುವಂತೆ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಬಿಎಸ್‌ಎನ್‌ಎಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸೋಮವಾರ ನಡೆದ ಬಿಎಸ್‌ಎನ್‌ಎಲ್ ಟೆಲಿಕಾಂ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಅವಳಿ ಜಿಲ್ಲೆಯ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಅಗತ್ಯ ಸಹಕಾರ ಹಾಗೂ ಬೆಂಬಲ ನೀಡುವುದಾಗಿ ಅವರು ಭರವಸೆ ನೀಡಿದರು.
ಬಿಎಸ್‌ಎನ್‌ಎಲ್‌ನ ಡಿಜಿಎಂ ರವೀಂದ್ರ ಜಂಬಗಿ ಅವರು ಮಾತನಾಡಿ, ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ೪ಜಿ ತಂತ್ರಜ್ಞಾನವನ್ನು ಸ್ಥಳೀಯವಾಗಿ ಅಭಿವೃದ್ದಿಪಡಿಸಲಾಗಿದೆ. ಇದನ್ನು ಸುಲಭವಾಗಿ ೫ಜಿಗೆ ಉನ್ನತೀಕರಿಸಬೇಕಾಗಿದ್ದು, ಮುಂದಿನ ೧೦ ತಿಂಗಳೊಳಗೆ ಜಿಲ್ಲೆಯಾದ್ಯಂತೆ ೩೪೩ ಹೊಸ ೪ಜಿ ಮೊಬೈಲ್ ಟವರ್‌ಗಳನ್ನು ಅಳವಡಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ಉಪ ಮಹಾಪ್ರಬಂಧಕ ಅರವಿಂದ ಸಕಟೆ, ಎಜಿಎಂ ಎ.ವ್ಹಿ.ಮಹಾಜನ್, ಮುಖ್ಯ ಲೆಕ್ಕಾಧಿಕಾರಿ ಎ.ಎಂ.ಪಾಟೀಲ, ಎಜಿಎಂ ಎಸ್.ಎಂ.ರಾಠೋಡ, ವಿ.ಡಿ.ನಾಯಕ, ಲೆಕ್ಕಾಧಿಕಾರಿ ರಾಮಪ್ಪ ಹೂಗಾರ ಸಭೆಯಲ್ಲಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

