ಸಿಂದಗಿ: ತಾಲೂಕಿನಲ್ಲಿ ಅನುಷ್ಠಾನಗೊಂಡ ಜೆಜೆಎಮ್ ಕಾಮಗಾರಿಗಳು ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿವೆ. ಈ ಕಾಮಗಾರಿಗಳ ಗುತ್ತಿಗೆದಾರರಿಗೆ ಕಳಪೆ ಮಾಡಲು ಸಹಕರಿಸಿದ ಅಧಿಕಾರಿಗಳನ್ನು ಕೂಡಲೆ ಅಮಾನತು ಮಾಡಬೇಕಲ್ಲದೇ, ಈ ಕಾಮಗಾರಿಯ ಬಿಲ್ಲನ್ನು ತಡೆಹಿಡಿಯಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಬುಧವಾರ ಪಟ್ಟಣದ ಅಂಬೇಡ್ಕರ ವೃತ್ತದಲ್ಲಿ ಪ್ರತಿಭಟಿಸಿ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ಡಿಎಸ್ಸೆಸ್ ರಾಜ್ಯ ಸಂಘಟನಾ ಸಂಚಾಲಕ ರಮೇಶ ಆಸಂಗಿ, ಬೆಳಗಾಂವ ವಿಭಾಗದ ಸಂಚಾಲಕ ವಿನಾಯಕ ಗುಣಸಾಗರ, ಜಿಲ್ಲಾ ಸಂಚಾಲಕ ಅಶೋಕ ಛಲವಾದಿ ಮತ್ತು ಶರಣು ಸಿಂಧೆ ಮಾತನಾಡಿ, ಸರ್ಕಾರ ಗ್ರಾಮೀಣ ಪ್ರದೇಶದ ಜನತೆಗೆ ಆರೋಗ್ಯ ದೃಷ್ಠಿಯಿಂದ ಜಲ ಜೀವನ ಮಿಷನ್ ದ ಮೂಲಕ ಶುದ್ದ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಆದರೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಾಲಯದಿಂದ ಸಿಂದಗಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳಾದ ಕೆರುಟಗಿ, ತಿಳಗೂಳ, ಆಲಗೂರ, ಬೆಕಿನಾಳ, ಬೂದಿಹಾಳ, ವಣಕಿಹಾಳ, ಕಲಕೇರಿ, ಕಲಕೇರಿ ಎಲ್.ಟಿ, ರಾಂಫುರ, ರಾಂಪೂರ ಎಲ್.ಟಿ, ಗುತ್ತರಗಿ, ಚಾಂದಕವಟೆ ಗ್ರಾಮಗಳಲ್ಲಿ ಸಂಭಂದಿಸಿದ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಕಾಲಗಾರಿಗಳು ಸಂಪೂರ್ಣ ಕಳಪೆಯಿಂದ ಕೂಡಿದೆ. ಹೀಗಾದಲ್ಲಿ ಈ ಕಾಮಗಾರಿಯ ಲಾಭವನ್ನು ಗ್ರಾಮೀಣ ಪ್ರದೇಶದ ಜನತೆ ಪಡೆಯುವದಾದರು ಹೇಗೆ ಎಂದು ಪ್ರಶ್ನಿಸಿದ ಅವರು, ಅಧಿಕಾರಿಗಳು ಹಣದ ಆಸೆಗೆ ಗುತ್ತಿಗೆದಾರರಿಗೆ ಕಳಪೆ ಕಾಮಗಾರಿ ಮಾಡಲು ಪ್ರಚೋದಿಸುತ್ತಿದ್ದಾರೆ. ಅಂತಹ ಅಧಿಕಾರಿಗಳ ವಿರುದ್ದ ಮೇಲಾಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಬೇಕು. ಈ ಕಾಳಗಾರಿಯನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರರ ಪರವಾನಿಗೆಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಕೂಡಲೇ ಎಲ್ಲ ಕಾಮಗಾರಿಗಳು ಗುಣಮಟ್ಟದಿಂದ ನಡೆಯಬೇಕು. ಇಲ್ಲವಾದಲ್ಲಿ ಜಿಲ್ಲಾದ್ಯಾಂತ ಉಗ್ರ ಹೋರಾಟ ಮಾಡುವುದಾಗಿ ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಲಕ್ಕಪ್ಪ ಬಡಿಗೇರ, ಪ್ರಕಾಶ ಗುಡಿಮನಿ, ಮಂಜುನಾಥ ಯಂಟಮಾನ, ರಾಜಕುಮಾರ ಸಿಂಧೂಕೇರಿ, ದೇವು ಕಲ್ಲೂರ, ಮೋಹನ ಬರಗಾಲ, ಶಿವು ರಾಂಫುರ, ರವಿ ತಳಕೇರಿ, ಮಲಕಪ್ಪ ಗಡೇನವರ, ರಮೇಶ ಹೊಸಮನಿ, ಪರುಶುರಾಮ ಬಡಿಗೇರ, ವಿಕಾಶ ಕಾಳೆ, ಮದೇವ ಲಿಂಗದಳ್ಳಿ, ಸೋಮು ನಿರಲಗಿ ಸೇರಿದಂತೆ ಅನೇಕರು ಇದ್ದರು.
Subscribe to Updates
Get the latest creative news from FooBar about art, design and business.
ಕಳಪೆ ಕಾಮಗಾರಿ: ಅಧಿಕಾರಿಗಳ ಅಮಾನತಿಗೆ ಡಿಎಸ್ಸೆಸ್ ಪ್ರತಿಭಟನೆ
Related Posts
Add A Comment

