ಬಸವನಬಾಗೇವಾಡಿ: ಪಟ್ಟಣದಿಂದ ಇಂಗಳೇಶ್ವರ ಗ್ರಾಮಕ್ಕೆ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಡಾ.ಗುಬ್ಬಾ ಅವರ ಜಮೀನು ಹತ್ತಿರ ಸೋಮವಾರ ರಾತ್ರಿ ಬಸವನಬಾಗೇವಾಡಿಯಿಂದ ಇಂಗಳೇಶ್ವರ ಗ್ರಾಮದ ಕಡೆಗೆ ರಭಸವಾಗಿ ಚಲಿಸುತ್ತಿದ್ದ ಸ್ವಿಪ್ಟ್ ಕಾರವೊಂದು ರಸ್ತೆ ಬದಿಯಲ್ಲಿರುವ ಪೂಟ್ ಕಟ್ಟೆಗೆ ಚಾಲಕನ ನಿರ್ಲಕ್ಷ್ಯತನದಿಂದಾಗಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಮೃತರಾಗಿ, ಮೂವರು ಗಾಯಗೊಂಡ ಘಟನೆ ಜರುಗಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ನುಜ್ಜುಗುಜ್ಜಾಗಿದೆ. ಕಾರಿನಲ್ಲಿ ಐವರು ಪ್ರಯಾಣಿಸುತ್ತಿದ್ದರು.
ಕಾರು ಚಲಾಯಿಸುತ್ತಿದ್ದ ಇಂಗಳೇಶ್ವರ ಗ್ರಾಮದ ಪ್ರಶಾಂತ ಮಹಾದೇವಪ್ಪ ಮಿಣಜಗಿ (೨೮), ಇವನ ಪಕ್ಕದಲ್ಲಿದ್ದ ಇದೇ ಗ್ರಾಮದ ಮಲ್ಲಿಕಾರ್ಜುನ ಮಾಳಪ್ಪ ಡೋಳಗೊಂಡ(೩೦) ಸ್ಥಳದಲ್ಲಿಯೇ ಮೃತ ಪಟ್ಟ ದುರ್ದೈವಿಗಳು.
ಇದೇ ಗ್ರಾಮದ ವಿಜಯಕುಮಾರ ಮಲಪ್ಪ ದಳವಾಯಿ (೨೦), ಮಾಳಪ್ಪ ಲಗಮಣ್ಣ ತೆಲಗಿ (೨೧), ರೇವಣಸಿದ್ದಪ್ಪ ಭೀಮರಾಯ ಶೇಖಣ್ಣಿ (೨೪) ಗಾಯಗೊಂಡಿದ್ದಾರೆ. ರೇವಣಸಿದ್ದಪ್ಪ ಶೇಖಣ್ಣಿ ಗಂಭೀರ ಗಾಯಗೊಂಡಿದ್ದು. ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.
ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ, ಪಿಐ ವಿಜಯ ಮುರಗೊಂಡ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Subscribe to Updates
Get the latest creative news from FooBar about art, design and business.
ರಸ್ತೆ ಬದಿಯ ಪೂಟ್ ಕಟ್ಟೆಗೆ ಕಾರು ಡಿಕ್ಕಿ :ಇಬ್ಬರು ಸ್ಥಳದಲ್ಲೇ ಸಾವು
Related Posts
Add A Comment

