ವಿಜಯಪುರ: ಜಿಲ್ಲೆಯ ನಾಗಠಾಣ ವಿಧಾನಸಭಾ ಮೀಸಲು ಮತಕ್ಷೇತ್ರದ ಟಿಕೇಟನ್ನು ಸಂಘ ಪರಿವಾರದ ಹಿನ್ನೆಲೆಯಿರುವ ಛಲವಾದಿ ಸಮುದಾಯದ ಮಂಜುನಾಥ ಮೀಸಿಯವರಿಗೆ ನೀಡಬೇಕು ಎಂದು ರಾಷ್ಟಿçÃಯ ಚಲವಾದಿ ಮಹಾಸಭಾ ಹಿಂದು ರಾಷ್ಟ್ರೀಯ ಅಧ್ಯಕ್ಷೆ ಡಾ.ಸ್ಪಂದನಾ ಮತ್ತು ರಾಷ್ರೀಯ ಸಮಾಜವಾದ ಆಂದೋಲನದ ರಾಷ್ರೀಯ ಸಂಚಾಲಕ ಚಂದ್ರಶೇಖರ ಗಬ್ಬೂರ(ವಕೀಲರು) ಆಗ್ರಹಿಸಿದರು.
ಸೋಮವಾರ ನಗರದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಮAಜುನಾಥ ಮೀಸಿಯವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಲ್ಲಿ ನಗರ ಮಟ್ಟದಿಂದ ರಾಷ್ಟಿçÃಯ ಮಟ್ಟದವರೆಗೂ ಅನನ್ಯ ಜವಾಬ್ದಾರಿಗಳನ್ನು ನಿರ್ವಹಿಸಿದವರು. ರಾಜ್ಯದ ಸಂಘಟನಾ ಕಾರ್ಯದರ್ಶಿಯಾಗಿ ೨೦ ವರ್ಷಗಳ ಸುಧೀರ್ಘ ಕಾಲದವರೆಗೆ ಪೂರ್ಣಾವಧಿ ಕಾರ್ಯಕರ್ತರಾಗಿ ಕೆಲಸ ಮಾಡಿದವರು ದಲಿತ ಬಲಗೈ ಸಮುದಾಯದದಲ್ಲಿ ಯಾರೂ ಇಲ್ಲ. ಯಾವುದೇ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡಿದ ಇಂಥವರನ್ನು ಸಂಘ ಪರಿವಾರ ಗುರುತಿಸಬೇಕು ಎಂದರು.
ಕಳೆದ 75 ವರ್ಷಗಳಿಂದ ಕಾಂಗ್ರೆಸ್ ಪಕ್ಷ ದಲಿತ ಸಮುದಾಯಕ್ಕೆ £Ãಡಿದ ಕೊಡುಗೆ ಶೂನ್ಯ, ಕೇವಲ ನಮ್ಮ ಮತಗಳ ಓಲೈಕೆಗೆ ನಮ್ಮನ್ನು ಬಳಸಿಕೊಂಡರು. £ಜವಾಗಿಯೂ ದಲಿತರ ಕೂಗು ಕೇಳಿಸಿಕೊಂಡು ಈ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸಿದ್ದು ಈ ಬಿಜೆಪಿ ಸರ್ಕಾರ.
ದಲಿತ ಸಮುದಾಯಕ್ಕೆ ಕೇವಲ ಕಾಂಗ್ರೇಸ್ ಪೋಷಿತ ಸಮಾಜ ಎನ್ನುವ ಮಾತಿದೆ. ಅವರ ಮೋಟುಗಳು ಕೇವಲ ಹಸ್ತದ ಗುರುತಿಗೆ ಎಂದು ಜನಮಾನಸದಲ್ಲಿದೆ. ಈ ಮಾತು ಅಕ್ಷರಶಃ ಸುಳ್ಳಾಗಬೇಕಾದರೆ ದಲಿತ ಬಲಗೈ ಸಮುದಾಯದ ನ್ಯಾಯದ ಪರ ಅಭಿವೃದ್ದಿಯ ಪರ ಮತ್ತು ಪ್ರಗತಿಯ ಪರ ಎಂದು ತೋರಿಸಿದ ಮಂಜುನಾಥ ಮೀಸಿಯವರಿಗೆ ಟಿಕೇಟ್ £Ãಡಬೇಕು ಇದರಿಂದ ರಾಜ್ಯ ಮಟ್ಟದಲ್ಲಿ ಒಂದು ಹೊಸ ಸಂಚಲನ ಮೂಡುತ್ತದೆ. ದಲಿತ ಸಮುದಾಯವನ್ನು ಸೆಳೆಯಲು ಮತ್ತು ಪಕ್ಷದ ಬಗ್ಗೆ ಒಳ್ಳೆಯ ಅಭಿಪ್ರಾಯ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮಂಜುನಾಥ ಮೀಸಿ ರವರು ಯಾವುದೇ ಜಾತಿ-ಮತ ಭೇದವಿಲ್ಲದೆ ಅನೇಕ ವಿಧ್ಯಾರ್ಥಿಗಳಿಗೆ ದಾರಿದೀಪವಾದವರು. ಕಾರಣ ಪಕ್ಷದ ವರಿಷ್ಠರು ಇವರಿಗೆ ನಾಗಠಾಣ ವಿಧಾನಸಭಾ ಮೀಸಲು ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಕೊಡಬೇಕು ಎಂದು ಆಗ್ರಹಿಸಿದರು.
Subscribe to Updates
Get the latest creative news from FooBar about art, design and business.
ನಾಗಠಾಣ ಮೀಸಲು ಕ್ಷೇತ್ರ: ಮಂಜುನಾಥ ಮೀಸಿ ಗೆ ಬಿಜೆಪಿ ಟಿಕೆಟ್ ನೀಡಲು ಆಗ್ರಹ
Related Posts
Add A Comment