ಸಿಂದಗಿ: ಸ್ನೇಹಕ್ಕಿಂತ ಬಹು ದೊಡ್ಡ ಸಂಬಂಧ ಮಗದೊಂದಿಲ್ಲ. ಕುಟುಂಬದವರ ಬಳಿ ಹೇಳಿಕೊಳ್ಳಲಾಗದ ವಿಷಯಗಳನ್ನು ಗೆಳೆಯರ ಮುಂದೆ ಹೇಳಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತೇವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಅನಂತಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ೧೯೮೫-೮೬ನೆಯ ಸಾಲಿನ ಎಸ್‌ಎಸ್‌ಎಲ್‌ಸಿ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡ ಸ್ನೇಹ ಸಮಾಗಮ ಸಮಾರಂಭವನ್ನು ಸಸಿಗೆ ನೀರುನಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸ್ನೇಹವಿಲ್ಲದೇ ಸಂಬಂಧವೇ ಇಲ್ಲ ಎಂಬ ಮಾತಿದೆ. ನನ್ನ ಬದುಕಿನ ಬಾಂಧವ್ಯದಲ್ಲಿ ಅಪರೂಪದ ಸ್ನೇಹಿತರು ಬಳದ ದೊರತಿದ್ದು ಸೌಭಾಗ್ಯ ಎಂದರು.
ಈ ವೇಳೆ ನಾಗರತ್ನ ಅಶೋಕ ಮನಗೂಳಿ, ಭೀಮಾಶಂಕರ ಶ್ರೀಗಿರಿ, ಪ್ರಕಾಶ ಗುಣಾರಿ, ಮಾಹಾಂತೇಶ ಕೋರಿ, ದಯಾನಂದ ಪತ್ತಾರ, ನಾರಾಯಣ ಕುಲಕರ್ಣಿ, ಗಂಗಾಧರ ಉಪ್ಪಿನ, ರಾಜಶೇಖರ ಪೂಜಾರಿ, ಜಿಲಾನಿ ಮುಲ್ಲಾ, ಇಮಾಮ ನದಾಫ, ಶಶಿಕಲಾ ಸಾಲಿಮಠ, ಬಸಲಿಂಗಮ್ಮ ಪಟ್ಟಣಶೆಟ್ಟಿ, ಬಸಮ್ಮ ರೇಷ್ಮಿ, ಯಲ್ಲಪ್ಪ ಬಿರಾದಾರ, ಮುತ್ತಪ್ಪ ಪಾತ್ರೋಟ್ಟಿ ಸೇರಿದಂತೆ ಅನೇಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

