ಶಾಸಕರಿಂದ ಅಧಿಕಾರ ದುರುಪಯೋಗ | ದೌರ್ಜನ್ಯ, ಗೂಂಡಾಗಿರಿ | ಎಸ್ಕಾರ್ಟ ಹಿಂಪಡೆಯದಿದ್ದರೆ ಹೋರಾಟದ ಎಚ್ಚರಿಕೆ
ಕಾಂಗ್ರೆಸ್ ಮುಖಂಡರಿಂದ ಆರೋಪಗಳ ಸುರಿಮಳೆ
ಮುದ್ದೇಬಿಹಾಳ: ಜೀವ ಬೆದರಿಕೆ ಇದೆ, ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಹೇಳಿ ಎಸ್ಕಾರ್ಟ ಪಡೆದಿರುವ ಶಾಸಕ ನಡಹಳ್ಳಿ ತಾವೇ ಸಾಕಷ್ಟು ಜನರ ಮೇಲೆ ಗೂಂಡಾಗಿರಿ ಮಾಡಿ ರೌಡಿ ಶೀಟರ್ ಕೇಸ್ ದಾಖಲಿಸಿದ್ದಾರೆ. ಕೂಡಲೇ ಪೊಲೀಸ್ ಇಲಾಖೆ ಅವರಿಗೆ ನೀಡಲಾದ ಎಸ್ಕಾರ್ಟನ್ನು ಮರಳಿ ಪಡೆಯದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಎಚ್ಚರಿಸಿದರು.
ಪಟ್ಟಣದ ಹುಡ್ಕೋದಲ್ಲಿರುವ ಮಾಜಿ ಸಚಿವರು ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿ.ಎಸ್.ನಾಡಗೌಡ ಅಪ್ಪಾಜಿ ಅವರ ಗ್ರಹ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಮೇಲೆ ಗೂಬೆ ಕೂರಿಸಲು ಹೊರಟಿರುವ ಶಾಸಕ ನಡಹಳ್ಳಿ ಅವರು ತಾವೇ ಸಾಕಷ್ಟು ಜನರ ಮೇಲೆ ದೌಜ್ಯನ್ಯ ಮಾಡಿದ್ದಾರೆ. ಚುನಾವಣಾ ಸಮಯದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿ ಒಂದೂವರೆ ಕೋಟಿ ರೂಗಳನ್ನು ಕಾನೂನುಬಾಹಿರವಾಗಿ ವಾಪಸಾತಿ ಮಾಡಿಕೊಂಡಿದ್ದಾರೆ. ಇವರ ಮೇಲೆ ಕೂಡಲೇ ಚುನಾವಣಾ ಆಯೋಗ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಗೋವಾ ಕನ್ನಡಿಗರ ಹೋರಾಟ ಸಮೀತಿಯ ಗೌರವಾಧ್ಯಕ್ಷ ಸಿದ್ದಣ್ಣ ಮೇಟಿ ಮಾತನಾಡಿ, ಎ.ಎಸ್.ಪಾಟೀಲ(ನಡಹಳ್ಳಿ)ಯವರು ಜನರಿಗೆ ಬರಿ ಸುಳ್ಳು ಹೇಳಿಯೇ ದೇವರ ಹಿಪ್ಪರಗಿಯಲ್ಲಿ ಎರಡು ಬಾರಿ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಒಂದು ಬಾರಿ ಶಾಸಕರಾಗಿದ್ದಾರೆ. ನಾನು ಊರಲ್ಲಿ ಇಲ್ಲದ ಸಮಯದಲ್ಲಿ ನನ್ನ ಮನೆಗೆ ಪೋಲಿಸರನ್ನು ಕಳುಹಿಸಿ ತಪಾಸಣೆ ನಡೆಸುವ ಮೂಲಕ ವಯಸ್ಸಾದ ನಮ್ಮ ತಂದೆ ತಾಯಿಯರಲ್ಲಿ ಭಯ ಹುಟ್ಟಿಸಿದ್ದಾರೆ. ಯರಗಲ್ಲ ಗ್ರಾಮದ ಬಳಿ ಇರುವ ಬಾಲಾಜಿ ಶುಗರ‍್ಸ ಕಾರ್ಖಾನೆ ಈ ಭಾಗದ ಸಾವಿರಾರು ರೈತರ ಪಾಲಿಗೆ ವರವಾಗಿದೆ. ಇಂತಹ ಕಾರ್ಖಾನೆಯ ಮೇಲೆ ಪೋಲಿಸರನ್ನು ಬಿಟ್ಟು ದಾಳಿ ನಡೆಸಿ, ಕಾರ್ಖಾನೆಯ ಎಂಡಿ ವೆಂಕಟೇಶ ಅವರಿಗೆ ಒದ್ದು ಓಡಿಸುತ್ತೇನೆ ಎಂದು ಧಮಕಿ ಹಾಕಿದ್ದಾರೆ. ಇನ್ನು ಮುಂದೆ ನಿಮ್ಮ ಡೋಂಗಿ ರಾಜಕಾರಣ ನಮ್ಮಮುಂದೆ ನಡೆಯೋದಿಲ್ಲ. ಬರುವ ಚುನಾವಣೆಯಲ್ಲಿ ಜನರೇ ನಿಮಗೆ ತಕ್ಕ ಉತ್ತರ ಕೊಡುತ್ತಾರೆ ಎಂದರು.
ಮುಖAಡರಾದ ಸುರೇಶಗೌಡ ಪಾಟೀಲ, ಶಾಂತಗೌಡ ಪಾಟೀಲ ನಡಹಳ್ಳಿ, ಬಹದ್ದೂರ ರಾಠೋಡ, ವಾಯ್.ಎಚ್.ವಿಜಯಕರ ಮಾತನಾಡಿ, ಮತಕ್ಷೇತ್ರದ ಜನ ಅತ್ಯಂತ ಸೌಮ್ಯ ಹಾಗೂ ಶಾಂತಿ ಪ್ರೀಯರಾಗಿದ್ದಾರೆ. ಈ ಹಿಂದೆ ಯಾವುದೇ ಚುನಾವಣೆಗಳು ನಡೆದರೂ ಪರ ವಿರೋಧ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಸಂತೋಷದಿAದ ಯಾವುದೇ ವೈಷಮ್ಯಗಳಿಲ್ಲದೆ ಚುನಾವಣೆಗಳನ್ನು ಎದುರಿಸುತ್ತಿದ್ದರು ಯಾರೇ ಗೆದ್ದರೂ, ಎಲ್ಲರೂ ಒಂದಾಗಿ ಕೂಡಿ ನಡೆಯುವ ಸಂಸ್ಕೃತಿ ಇಲ್ಲಿಯದ್ದಾಗಿದೆ. ಕಳೆದ ಹಲವು ವರ್ಷಗಳಿಂದಲೂ ಇಲ್ಲಿ ದೌರ್ಜನ್ಯ ಹಾಗೂ ದಬ್ಬಾಳಿಕೆ ನಡೆದಿರುವ ಯಾವ ಉದಾಹರಣೆಗಳೂ ಇಲ್ಲ. ಆದರೇ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ)ಯವರು ಶಾಸಕರಾದ ಮೇಲೆ ಅನೈತಿಕ, ಭ್ರಷ್ಟಾಚಾರ, ದುರಾಡಳಿತ, ದ್ವೇಷದ ರಾಜಕಾರಣ ಮಿತಿ ಮೀರಿದೆ. ಸಾಮಾನ್ಯ ಜನರ ಮೇಲೆ ಪೊಲೀಸ ಕೇಸ್ ಗಳನ್ನು ಹಾಕಿಸುವ ಮೂಲಕ ವೈಷಮ್ಯಗಳನ್ನು ಸೃಷ್ಠಿಸಿ ಮತಕ್ಷೇತ್ರದ ಜನರ ನೆಮ್ಮದಿ ಹಾಳು ಮಾಡಿದ್ದಾರೆ. ಜನಸಾಮಾನ್ಯರಿಗೆ ಆಗಿರುವ ನೋವನ್ನು ಹೇಳಲು ಸಾಧ್ಯವಾಗದೇ ಈ ಬಾರಿ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲು ಕಾತುರದಿಂದ ಕಾಯುತ್ತಿದ್ದಾರೆ. ಸಧ್ಯ ಇಂತಹ ಶಾಸಕರಿಗೆ ನೀತಿ ಸಂಹಿತೆ ಇದ್ದರೂ ಪೋಲಿಸ್ ಎಸ್ಕಾರ್ಟ್ ಕೊಟ್ಟಿದ್ದು ಭ್ರಷ್ಟಾಚಾರಕ್ಕೆ ಮತ್ತು ದೌರ್ಜನ್ಯದ ರಾಜಕಾರಣಕ್ಕೆ ಚುನಾವಣಾ ಆಯೋಗದ ಅಧಿಕಾರಿಗಳು ಸೇರಿದಂತೆ ಸಂಬAಧ ಪಟ್ಟ ಇತರೆ ಇಲಾಖೆ ಅಧಿಕಾರಿಗಳು ಬೆಂಬಲಿಸುತ್ತಿದ್ದಾರೆಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕಾರಣ ಅವರಿಗೆ ಸರಕಾರದಿಂದ ನೀಡಲಾದ ಎಸ್ಕಾರ್ಟನ್ನು ಈ ಕೂಡಲೇ ಹಿಂಪಡೆಯಬೇಕು.
ಇಲ್ಲದಿದ್ದರೆ ಕಪ್ಪುಬಟ್ಟೆ ಧರಿಸಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದರು.
ಈ ವೇಳೆ ನ್ಯಾಯವಾದಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಚ್.ಹಾಲಣ್ಣವರ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ, ನ್ಯಾಯವಾದಿಗಳಾದ ಆರ್.ಬಿ.ಪಾಟೀಲ, ಬಿ.ಆರ್.ನಾಡಗೌಡರ, ಬಿ.ಎ.ನಾಡಗೌಡ, ಎಲ್.ಎಚ್.ಮೇಟಿ, ಮುಖಂಡರಾದ ಬಾಪುರಾಯ ದೇಸಾಯಿ, ಬೀರಪ್ಪ ಯರಝರಿ, ಚಿನ್ನು ನಾಡಗೌಡ, ಹುಲಗಪ್ಪ ನಾಯಕಮಕ್ಕಳ, ರುದ್ರಗೌಡ ಅಂಗಡಗೇರಿ, ತಿಪ್ಪಣ್ಣ ದೊಡಮನಿ, ಬಾಬಾ ಪಟೇಲ, ಸಿಕಂದರ ಜಾನ್ವೇಕರ, ಶರಣು ಚಲವಾದಿ, ತಾಲೂಕು ಯುವ ಕಾಂಗ್ರೇಸ್ ಅಧ್ಯಕ್ಷ ಮಹಮ್ಮದರಫಿಕ ಶಿರೋಳ, ಸೇರಿದಂತೆ ಹಲವರು ಇದ್ದರು.
ಮತಕ್ಷೇತ್ರಕ್ಕೆ ಸಂಬAಧಿಸಿದ ಚುನಾವಣಾ ಅಧಿಕಾರಿಗಳು ಸೇರಿದಂತೆ ಇನ್ನಿತರ ಅಧಿಕಾರಿಗಳು ಎ.ಎಸ್.ಪಾಟೀಲ ನಡಹಳ್ಳಿ ಅವರ ಮರ್ಜಿಯಲ್ಲಿ ಸೇವೆ ಸಲ್ಲಿಸುತ್ತಿರುವದು ಕಂಡು ಬಂದಿದೆ. ಜಿಲ್ಲಾಧಿಕಾರಿಗಳು, ರಾಜ್ಯ ಚುನಾವಣಾ ಅಧಿಕಾರಿಗಳು ಹಾಗೂ ಐಜಿ ಅಲೋಕ ಕುಮಾರ ಅವರು
-ವಾಯ್.ಎಚ್.ವಿಜಯಕರ ಎ.ಪಿ.ಎಂ.ಸಿ ನಿರ್ದೇಶಕರು
ಮುತುವರ್ಜಿ ವಹಿಸಿ ಈ ಕೂಡಲೇ ಸಧ್ಯ ಸೇವೆಯಲ್ಲಿರುವ ಅಧಿಕಾರಿಗಳನ್ನು ತಕ್ಷಣ ವರ್ಗಾವಣೆ ಮಾಡಿ ಬೇರೆ ಅಧಿಕಾರಿಗಳನ್ನು ನೇಮಕ ಮಾಡಬೇಕು. ಇಲ್ಲದೆ ಹೋದರೆ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗುವ ಅನಿವಾರ್ಯತೆ ಎದುರಾಗಬಹುದು.
ಮತದಾರರಿಗೆ ಹಣ ಹಂಚಲು ಪೊಲೀಸ್ ವಾಹನ ಹಾಗೂ ಆಂಬುಲೆನ್ಸ್ ದುರುಪಯೋಗ ಸಾಧ್ಯತೆ
ಸಧ್ಯ ಶಾಸಕ ನಡಹಳ್ಳಿಯವರಿಂದ ಮತಕ್ಷೇತ್ರದಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದೆ ವಿನಃ ನಾಡಗೌಡರಿಂದಲ್ಲ. ನಡಹಳ್ಳಿಯವರ ಬದಲಾಗಿ ನಾಡಗೌಡರಿಗೆ ಪೊಲೀಸ್ ಎಸ್ಕಾಟ್ ನೀಡಬೇಕು. ಆದರೆ ಎ.ಎಸ್.ಪಾಟೀಲ(ನಡಹಳ್ಳಿ)ಯವರಿಗೆ ಎಸ್ಕಾಟ್ ನೀಡಿರುವುದು ಹಾಸ್ಯಾಸ್ಪದವಾಗಿದೆ. ಇದೇ ಪೋಲಿಸ್ ಭದ್ರತೆಯನ್ನೇ ದುರುಪಯೋಗಪಡಿಸಿಕೊಂಡು ಮತದಾರರಿಗೆ ಹಣ ಹಂಚಲು ಪೊಲೀಸ್ ವಾಹನ ಹಾಗೂ ಎಂಬುಲೇನ್ಸ್ ಗಳನ್ನು ಬಳಸಿಕೊಳ್ಳುವ ಸಾಧ್ಯತೆಗಳು ಕೂಡ ಇದೆ ಎಂದು ಕಾಂಗ್ರೆಸ್ ಮುಖಂಡ ಶಾಂತಗೌಡ ಬಲವಾಗಿ ಆರೋಪಿಸಿದರು.