ಮೋರಟಗಿ: ಬೊಲೆರೋ ಗೂಡ್ಸ ಪಿಕಪ್ ನಲ್ಲಿ ೫ ಜನರು ಶಹಾಪುರದಿಂದ ಅಫ್ಜಲಪುರ ಪಟ್ಟಣಕ್ಕೆ ಹೋಗುತ್ತಿರುವ ಎಂ೧೬, ಂA೨೮೨೪ ವಾಹನದಲ್ಲಿ ಸಾಗಿಸುತಿದ್ದ ದಾಖಲೆ ಇಲ್ಲದ ರೂ.11,07,000 ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಶುಕ್ರವಾರ ೧.೩೦ ಘಂಟೆಗೆ ಇಂಡಿ ಡಿ,ವಾಯ್,ಎಸ್ಪಿ, ನಂದರೆಡ್ಡಿ, ಹಾಗೂ ಸಿಪಿಐ ಡಿ, ಹುಲಗಪ್ಪಾ ,ಪಿಎಸ್ಐ ಶಿವರಾಜ ನಾಯಕವಾಡಿ ಮೋರಟಗಿ ಚೆಕ್ ಪೋಸ್ಟ ಗೆ ಪರಿಶೀಲನೆಗೆ ಆಗಮಿಸಿ ವಾಹನ ಪರಿಶೀಲನೆ ಮಾಡುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಕೂಡಲೇ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಕರೆಸಿ ೧೧ ಲಕ್ಷದ ಏಳು ಸಾವಿರ ಹಣವನ್ನು ತೆರಿಗೆ ಇಲಾಖೆಗೆ ಒಪ್ಪಿಸಿ ವಾಹನದಲ್ಲಿದ್ದ ೫ ಜನರನ್ನು ವಶಕ್ಕೆ ನೀಡಿ ಹಣ ಪಡೆದುಕೊಂಡು ಹೋಗಲು ಸೂಚಿಸಿದ್ದಾರೆ.
ಪರಿಶೀಲನೆ ಸಂದರ್ಭದಲ್ಲಿ ರಾಜಪ್ಪ ಎಸ್, ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಚಕ್ರವರ್ತಿ, ಪೊಲೀಸ್ ಸಿಬ್ಬಂದಿಗಳಾದ ನಿಂಗಪ್ಪ ಪೂಜಾರಿ, ಸಿದ್ದನಗೌಡ ಬಿರಾದಾರ ಅನೀಲ ಕುಂಬಾರ, ಗ್ರಾಮ ಸಹಾಯಕ ವಿಶ್ವಾನಾಥ ವಾಲಿಕಾರ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment