ಬಸವನಬಾಗೇವಾಡಿ: ತಾಲೂಕಿನ ಉಪ್ಪಲದಿನ್ನಿ ಎಲ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಶಾಲಾ ಸಂಸತ್ ರಚನೆಯು ಚುನಾವಣೆಯ ಮಾದರಿಯಲ್ಲಿ ಜರುಗಿತು. ಚುನಾವಣೆಯಲ್ಲಿ ವೋಟಿಂಗ್ ಮಷಿನ್ ಆಪ್ ಬಳಕೆ ಮಾಡಲಾಯಿತು. ಶಾಲೆಯ ೩ ರಿಂದ ೮ ನೇ ತರಗತಿಯ ೯೦ ವಿದ್ಯಾರ್ಥಿಗಳು ಉತ್ಸಾಹದಿಂದ ಸರದಿಯ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ವಿದ್ಯಾರ್ಥಿಗಳು ದೇಶದ ಸಂಪತ್ತು. ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ಮಾದರಿ ಚುನಾವಣೆಯ ಪ್ರಕ್ರಿಯೆ ಪರಿಕಲ್ಪನೆಯನ್ನು ಶಿಕ್ಷಕರು ಮಾಡಿಕೊಟ್ಟಿದ್ದು ವಿಶೇಷ.
ಈ ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶುಭಕೋರಿ, ಸೋತ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿ ಸೋಲೇ ಗೆಲುವಿನ ಸೋಪಾನ ಎಂಬ ಸಂದೇಶವನ್ನು ವಿದ್ಯಾರ್ಥಿಗಳಿಗೆ ಶಿಕ್ಷಕರು ತಿಳಿಸಿದರು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಖಾತೆಯನ್ನು ಹಂಚಿ ಪ್ರಮಾಣ ವಚನ ಬೋಧಿಸಲಾಯಿತು. ವಿದ್ಯಾರ್ಥಿಗಳು ತಾವು ಪಡೆದುಕೊಂಡ ಖಾತೆಗಳ ಮಾಹಿತಿ, ಅವರು ಶಾಲೆಯಲ್ಲಿ ಯಾವ ಯಾವ ಕರ್ತವ್ಯಗಳನ್ನು ನಿರ್ವಹಿಸಬೇಕೆಂಬುವದರ ಕುರಿತು ಶಿಕ್ಷಕ ಪ್ರಕಾಶ ಕೊಂಡಿಕೊಪ್ಪದವರ ವಿದ್ಯಾರ್ಥಿಗಳಿಗೆ ಹೇಳಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಮಾತೆ ಎಂ.ಎನ್.ನಾಯಕ, ಶಿಕ್ಷಕರಾದ ಯು.ಐ.ಭರಮಗೌಡ್ರು, ಆರ್.ಡಿ.ಪವಾರ, ಕೊಟ್ರೇಶ ಹೆಗ್ಡಾಳ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

