ಬಸವನಬಾಗೇವಾಡಿ: ಶಿಕ್ಷಕ ಬಾಂಧವರು ತಮ್ಮ ಪಾಠ-ಪ್ರವಚನದೊಂದಿಗೆ ವಿದ್ಯಾರ್ಥಿಗಳಲ್ಲಿ ರಾಷ್ಟ್ರಾಭಿಮಾನವನ್ನು ಮೂಡಿಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸುವಂತಾಗಬೇಕೆಂದು ಭಾರತ ಸೇವಾದಳದ ವಲಯ ಸಂಘಟಕ ನಾಗೇಶ ಡೋಣೂರ ಹೇಳಿದರು.
ಪಟ್ಟಣದ ಅಕ್ಕನಾಗಮ್ಮ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಭಾರತ ಸೇವಾದಳದ ಜಿಲ್ಲಾ ಹಾಗೂ ತಾಲೂಕು ಸಮಿತಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಅಕ್ಕನಾಗಮ್ಮ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಕುರಿತಾದ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ರಾಷ್ಟ್ರಧ್ವಜದ ನೀತಿ ಸಂಹಿತೆ, ಧ್ವಜಾರೋಹಣ, ಧ್ವಜಾಅವರೋಹಣ, ಧ್ವಜದ ನಿಯಮಗಳು, ರಾಷ್ಟ್ರಗೀತೆಯ ಮಹತ್ವ, ಶಬ್ದಗಳ ಅರ್ಥ, ಹಾಡುವ ಸಮಯ, ರಾಗ-ಲಯ-ತಾಳ ಇವುಗಳ ಕುರಿತು ತಿಳಿಸಿಕೊಡುವ ಕಾರ್ಯವಾಗಬೇಕಿದೆ ಎಂದರು. ನಂತರ ಎರಡು ಗಂಟೆ ಕಾಲ ಶಿಕ್ಷಕರಿಗೆ, ವಿದ್ಯಾರ್ಥಿನಿಯರಿಗೆ ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಕುರಿತು ಮಾಹಿತಿ, ತರಬೇತಿ ನೀಡಿದರು.
ಕಾರ್ಯಾಗಾರದಲ್ಲಿ ಪ್ರೌಢಶಾಲೆಯ ಪ್ರಭಾರಿ ಮುಖ್ಯಗುರು ವೇಣುಗೋಪಾಲ ಅಪಸಂಗಿ, ಶಿಕ್ಷಕರಾದ ಮಾಲತಿ ಬಿದರಿ, ಎಂ.ವೈ.ಜಾಲವಾದಿ, ಸುರೇಶ ಬಾಗೇವಾಡಿ ಇತರರು ಇದ್ದರು. ಜಿ.ಎಂ.ಗಂಜಾಳ ಸ್ವಾಗತಿಸಿದರು. ಅಶೋಕ ಹಂಚಲಿ ನಿರೂಪಿಸಿದರು. ಶಿವಕುಮಾರ ಹುಲಸೂರ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

