ವಿಜಯಪುರ: ಬೈಕ್ ಸವಾರನ ಸಾವಿಗೆ ಕಾರಣನಾದ ಲಾರಿ ಚಾಲಕನಿಗೆ ವಿಜಯಪುರದ 3ನೇ ಅಪರ ನ್ಯಾಯಾಲಯ 6 ತಿಂಗಳು ಶಿಕ್ಷೆ ಹಾಗೂ 6 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕವಲಗುಡ್ಡ ಗ್ರಾಮದ ಯಲ್ಲಪ್ಪ ಶಿವಲಿಂಗ ಅವಳೆ ಶಿಕ್ಷೆಗೊಳಗಾದ ಆರೋಪಿ. ತಿಕೋಟಾದಲ್ಲಿ ಇಳಿಜಾರಿನಲ್ಲಿ ಲಾರಿ ಗೇಯರ್‌ನಲ್ಲಿ ನಿಲ್ಲಿಸಿ ಹೋಗಿದ್ದ. ಆಗ ಅಲ್ಲಿ ಹೊರಟಿದ್ದ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದಿದ್ದರಿಂದ ಸವಾರ ಭೀಮಣ್ಣ ಯಡವೆ ಎಂಬಾತ ಮೃತಪಟ್ಟಿದ್ದ. ತಿಕೋಟಾ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ 3ನೇ ಅಪರ ಸಿವಿಲ್ ನ್ಯಾಯಾಧೀಶ ಮಾದೇಶ ಎಂ.ವಿ, ಪುರಾವೆ ಪರಿಶೀಲಿಸಿ, ಆರೋಪಿಗೆ ಈ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಎಂ.ಎಲ್. ಹಳ್ಳೂರ ವಾದ ಮಂಡಿಸಿದ್ದರು.
Related Posts
Add A Comment