“ವಿದ್ಯಾರ್ಥಿ ನಿಧಿ”- ಮಂಡ್ಯ ಮ.ನಾ.ಉಡುಪ
ಠಕ್ಕನರಿ ಮತ್ತು ಕೊಕ್ಕರೆ
ಅದೊಂದು ದೊಡ್ಡ ಕಾಡು. ಆ ಕಾಡಿನ ಒಡೆಯ ವನರಾಜ ಸಿಂಹ. ಒಮ್ಮೆ ಸಿಂಹವು ಜಿಂಕೆಯನ್ನು ಬೇಟೆಯಾಡಿ ತಿನ್ನುವಾಗ ಜಿಂಕೆಯ ಮೂಳೆ ಸಿಂಹದ ಗಂಟಲಿನೊಳಗೆ ಸಿಕ್ಕಿ ಸಿಂಹವು ಸಾಯುವ ಪರಿಸ್ಥಿತಿಗೆ ತಲುಪಿತು.
ಚಾಣಾಕ್ಷ ನರಿಯು ಸಿಂಹದ ಮಂತ್ರಿಯಾಗಿತ್ತು. ಅದು ರಾಜನ ಈ ಅವಸ್ಥೆ ನೋಡಲಾಗದೇ ಕೊಕ್ಕರೆಯ ಬಳಿ ಹೋಗಿ
” ನೋಡು ನಮ್ಮ ರಾಜನಿಗೆ ಗಂಟಲಿನಲ್ಲಿ ಮೂಳೆಸಿಕ್ಕಿ ಸಾಯುವ ಪರಿಸ್ಥಿತಿ ಬಂದಿದೆ. ನೀನು ಅವನ ಗಂಟಲಿನೊಳಗೆ ಸಿಕ್ಕಿರುವ ಮೂಳೆ ತೆಗೆದು ಪ್ರಾಣಭಿಕ್ಷೆ ನೀಡಿದರೆ ನಿನಗೆ ಜೀವಮಾನದಲ್ಲಿ ಪಡೆಲಾಗದ ಬಹುಮಾನ ಕೊಡಿಸುವೆ..”
ಎಂದು ಪುಸುಲಾಯಿಸಿ ಸಿಂಹದ ಬಳಿ ಕರೆದುಕೊಂಡು ಹೋಯಿತು .
ಸಿಂಹದ ಬಾಯೊಳಗಿನ ಮೂಳೆಯನ್ನು ತನ್ನ ಉದ್ದವಾದ ಕೊಕ್ಕಿನಿಂದ ತೆಗೆಯಿತು. ನಂತರ ನರಿಯ ಬಳಿ
” ಗೆಳೆಯ ನನ್ನ ಕೆಲಸ ಮುಗಿದಿದೆ . ನನಗೆ ಬರಬೇಕಾದ ಬಹುಮಾನ ಕೊಡಿಸು..” ಎಂದಿತು.
ಆಗ ಸಿಂಹವು
” ನೋಡು ನೀನು ನನ್ನ ಬಾಯೊಳಗೆ ತಲೆಯನ್ನು ಹಾಕಿದಾಗ ನಿನ್ನ ತಿನ್ನದೇ ಬಿಟ್ಟಿರುವುದೇ ದೊಡ್ಡ ಬಹುಮಾನ . ಅದಕ್ಕಿಂತಲೂ ಮಿಗಿಲಾದ ಬಹುಮಾನ ಉಂಟೆ…”
ನರಿಯ ಮಾತನ್ನು ನಂಬಿಬಂದ ಕೊಕ್ಕರೆ ಪೆಚ್ಚುಮೋರೆ ಹಾಕಿಕೊಂಡು ತನ್ನ ಮನೆಯ ಕಡೆಗೆ ಹೊರಟಿತು.