ಸ್ವಸ್ತ ಸ್ವಸ್ತ, ಎಚ್ಚರ ಎಚ್ಚರ, ಸುಖಿ ಸುಖಿ ಮಳೆಗಾಲ ಘೂಳೇಶ್ವರರಿಂದ ಈ ವರ್ಷದ ಹೇಳಿಕೆ
ಚಡಚಣ :ಸಮೀಪದ ಉಮರಜ ಗ್ರಾಮದ ರೇವಣಸಿದ್ಧೇಶ್ವರ ಜಾತ್ರೆಯ ನಿಮಿತ್ಯ ರವಿವಾರ ನಸುಕಿನ ಜಾವ 4 ರಿಂದ 5 ಗಂಟೆಯವರೆಗೆ ರುದ್ರಾವತಾರಿ ಶ್ರೀ ಘೂಳೇಶ್ವರ ಮಹಾರಾಜರು ನುಡಿಮುತ್ತುಗಳು ಹೇಳಿದರು, ಅಲ್ಲದೇ ರುದ್ರಕಟ್ಟೆಯ ಮೇಲೆ ದೇವಾಸ್ಥಾನದ ಗರ್ಭ ಗುಡಿಯಲ್ಲಿರುವ ಶ್ರೀ ರೇವಣಸಿದ್ದೇಶ್ವರರ ಬೃಹತ್ ಲಿಂಗದ ಕಡೆ ಕೈಮುಗಿದು ನಿಂತಿರುವುದು ಭಕ್ತರಲ್ಲಿ ಆತಂಕ ಮೂಡಿಸಿರುವುದು ಕಂಡು ಬಂದಿತು.ಇವರ ನುಡಿಮುತ್ತುಗಳನ್ನು ಕೇಳುತ್ತಲೆ ಸೇರಿದ ಸಹಸ್ರಾರು ಭಕ್ತಾಧಿಗಳು ಸಂತಸ ಚಪ್ಪಾಳೆ ಹೊಡೆದು ಆನಂದ ಪಟ್ಟರು.
ಶನಿವಾರ ರಾತ್ರಿ 12:30 ಗಂಟೆಗೆ ಗ್ರಾಮದಿಂದ ವಿವಿಧ ವಾದ್ಯ ವೈಭವಗಳೊಂದಿಗೆ ಪಲ್ಲಕ್ಕಿ, ನಂದಿ ಧ್ವಜ ಭವ್ಯ ಮೆರವಣಿಗೆಯು ದೇವಸ್ಥಾನಕ್ಕೆ ತಲುಪಿತು. ಅಲ್ಲದೆ ಮದ್ದು ಸುಡುವುದರೊಂದಿಗೆ ನಂತರ ನುಡಿಮುತ್ತುಗಳು ಜರುಗಿದವು. ಇದನ್ನು ಆಲಿಸಲು ಕರ್ನಾಟಕ ಸೇರಿದಂತೆ ನೆರೆಯ ಮಹಾರಾಷ್ಟದಿಂದ ಸುಮಾರು 30 ರಿಂದ 40 ಸಾವಿರ ಭಕ್ತಾಧಿಗಳು ಶಾಂತ ರೀತಿಯಿಂದ ನುಡಿಮುತ್ತುಗಳನ್ನು ಆಲಿಸಿದರು.ಸಹಸ್ರಾರು ಭಕ್ತರು ನೆರೆದಿದ್ದರು.

