ಕೊಲ್ಹಾರ: ವಿಜಯಪುರ ಜಿಲ್ಲೆಯ ಕೊಲ್ದಾರ, ಬ. ಬಾಗೇವಾಡಿ, ಬಬಲೇಶ್ವರ, ವಿಜಯಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ರೈತರ ಜಮೀನುಗಳಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಅಂತರ್ಜಲ ಹೆಚ್ಚಿಸುವ ಸಲುವಾಗಿ ಮುಳವಾಡ ಏತ ನೀರಾವರಿ ಬಿ, ಸ್ಕೀಂ ಪ್ರಾರಂಭಿಸಿ ಕೆರೆ ಮತ್ತು ಹಳ್ಳ ತುಂಬಿಸುವ ಕುರಿತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದಿಂದ ತಹಶೀಲ್ದಾರ ಸಂತೋಷ ಮ್ಯಾಗೇರಿ ಅವರ ಮೂಲಕ ಮತಕ್ಷೇತ್ರದ ಸಚಿವರಾದ ಶಿವಾನಂದ ಎಸ್. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ. ಪಾಟೀಲ ಹಾಗೂ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ರವರುಗಳಿಗೆ ಹಾಗೂ ಆಲಮಟ್ಟಿ ಕೆಬಿಜೆಎನ್ಎಲ್ ಅಧೀಕ್ಷಕ ಅಭಿಯಂತರರಿಗೆ ತಾಲೂಕಿನ ಮಸೂತಿ ಜಾಕ್ವೆಲನಲ್ಲಿ ಪ್ರತಿಭಟಿಸಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕೆಬಿಜೆಎನ್ಎಲ್ ಅಧಿಕಾರಿಗಳಾದ ಗೋವಿಂದ್ ರಾಥೋಡ, ಎನ್ ಟಿಪಿಸಿ ಪಿಎಸ್ಐ ಯತೀಶ್ ಕೆ ಎನ್, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಸೋಮು ಬಿರಾದಾರ, ಸಂತೋಷ ಚನಗೊಂಡ, ಶಶಿಕಾಂತ ಬಿರಾದಾರ, ಮುದುಕಣ್ಣ ಚಲವಾದಿ, ಸದಾಶಿವ್ ನಿಂಗನೂರ, ಆನಂದ ಬಿಸ್ಟಗೊಂಡ, ರಮೇಶ್ ಬೀಳಗಿ, ಸುನಿಲ್ ಹಿರೇಮಠ, ಸತ್ಯಪ್ಪ ಕುಳ್ಳೊಳ್ಳಿ, ಬಸವರಾಜ ಹೇಳವರ, ರವಿಕಾಂತ ಪಾಟೀಲ ಸೇರಿದಂತೆ ಇತರರು ಇದ್ದರು.

