ಚಡಚಣ : ದಾಖಲೆ ಇಲ್ಲದ 480 ಗ್ರಾಂ ಚಿನ್ನ ಹಾಗೂ ರೂ.6 ಲಕ್ಷ ನಗದು ಹಣ ವಶಪಡಿಸಿಕೊಂಡ ಘಟನೆ ಪಟ್ಟಣದಲ್ಲಿ ಗುರುವಾರ ನಡೆದಿದೆ.
ಪಟ್ಟಣದ ದೇವರನಿಂಬರಗಿ ಕ್ರಾಸ್ ಬಳಿ ಮಾರುತಿ ವ್ಯಾನದಲ್ಲಿ ಅಕ್ರಮವಾಗಿ ಸಾಗಿಸುತಿದ್ದ 480ಗ್ರಾಮ್ ಚಿನ್ನ ಹಾಗೂ ರೂ.6 ಲಕ್ಷ ನಗದು ಹಣ ವಶ ಪಡಿಸಿಕೊಂಡ ಘಟನೆ ನಡೆದಿದೆ.
ನಿಖರ ಮಾಹಿತಿ ಮೇರೆಗೆ ಸಿಪಿಐ ಸಾಹೇಬಗೌಡ ಪಾಟೀಲ ಹಾಗೂ ಪಿಎಸೈ ಸಂಜಯ ತಿಪ್ಪರೆಡ್ಡಿ ಹಾಗೂ ಸಿಬ್ಬಂದಿ ಮಾರುತಿ ವ್ಯಾನ್ ದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 480 ಗ್ರಾಮ ಚಿನ್ನ ಹಾಗೂ 6ಲಕ್ಷ ನಗದು ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಸಿಪಿಐ ಸಾಹೇಬಗೌಡ ಪಾಟೀಲ ತಿಳಿಸಿದ್ದಾರೆ.
ಈ ಪ್ರಕರಣ ಚಡಚಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
Related Posts
Add A Comment