ದೇವರಹಿಪ್ಪರಗಿ: ೧೦ ವರ್ಷಗಳ ಕಾಲ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ಮೋದಿಯವರನ್ನು ಮತ್ತೇ ಪ್ರಧಾನಿಯನ್ನಾಗಿ ಮಾಡೋಣ. ಅದಕ್ಕಾಗಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರಿಗೆ ಮತ ನೀಡಿ ಎಂದು ಜಿಲ್ಲಾ ಕಾರ್ಯದರ್ಶಿ ರಮೇಶ ಮಸಬಿನಾಳ ಹೇಳಿದರು.
ಪಟ್ಟಣದ ಹೊಸನಗರದಲ್ಲಿ ಶನಿವಾರ ಸಾಯಂಕಾಲ ಲೋಕಸಭಾ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ ಪ್ರಚಾರದ ನೇತೃತ್ವ ವಹಿಸಿ ಮಾತನಾಡಿದರು. ಪ್ರಧಾನಿ ಮೋದಿಯವರ ಹತ್ತು ವರ್ಷದ ಆಡಳಿತದಲ್ಲಿ ಇಡೀ ಜಗತ್ತೇ ಭಾರತದತ್ತ ನೋಡುವಂತಾಯಿತು. ಮೇಕ್ ಇಂಡಿಯಾ ಹಾಗೂ ಕರೋನಾ ಲಸಿಕೆ ಮೂಲಕ ಭಾರತದ ತಂತ್ರಜ್ಞಾನ ಹಾಗೂ ವೈದ್ಯಕೀಯ ನೆರವನ್ನು ಜಗತ್ತಿನ ವಿವಿಧ ದೇಶಗಳಿಗೆ ನೀಡಲಾಯಿತು. ಇಂಥ ಸಾಧನೆಗೆ ಕಾರಣರಾದ ವ್ಯಕ್ತಿ ಮೂರನೆಯ ಬಾರಿಗೆ ಪ್ರಧಾನಿ ಹುದ್ದೆಯಲ್ಲಿ ಇರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಇನ್ನೂ ರಮೇಶ ಜಿಗಜಿಣಗಿ ಅವರು ಸಹ ಒಂದು ಲಕ್ಷ ಕೋಟಿ ಅನುದಾನದ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಇವರ ಆಯ್ಕೆ ಮೂಲಕ ಪ್ರಧಾನಿಯವರ ಕೈ ಬಲಪಡಿಸೋಣ ಎಂದರು.
ಸುರೇಶ ಒಂಟೆತ್ತಿನ, ಸಲಬಯ್ಯ ಸದಯ್ಯನಮಠ, ಪ್ರವೀಣ ನಾಯ್ಕೋಡಿ, ಕುಮಾರ ಒಂಟೆತ್ತಿನ, ವiಹಾಂತೇಶ ಬಿರಾದಾರ, ಅಂಬರೀಷ ಒಂಟೆತ್ತಿನ, ಕುಮಾರ ದೇವಣಗಾಂವ, ಸಂತೋಷ ಹೀರಾಪುರ, ಮುತ್ತು ಜಾಲಗಾರ, ಬಸವರಾಜ ಒಂಟೆತ್ತಿನ, ಸಂಗು ಮಸಬಿನಾಳ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

