ಅವಳಿ ಜಿಲ್ಲೆಯ ಪೊಲೀಸರಿಗೆ ಐಜಿಪಿ ಎನ್.ಸತೀಶಕುಮಾರ ಸೂಚನೆ
ಆಲಮಟ್ಟಿ: ಈಗ ವಿಧಾನಸಬಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ವ್ಯಕ್ತಿಗಳು, ಪಕ್ಷಗಳು ಮತದಾರರ ಆಮಿಷಕ್ಕಾಗಿ ತಂದಿರುವ ವಸ್ತುಗಳನ್ನು ಅನಧಿಕೃತವಾಗಿ ಸಂಗ್ರಹಿಸಿದ್ದರೆ ಅವಳಿ ಜಿಲ್ಲೆಯ ಪೋಲಿಸರು ಪಾರದರ್ಶಕವಾಗಿ ಕಾರ್ಯ ನಿರ್ವಹಿಸಲು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಲಾಗಿದೆ ಎಂದು ಬೆಳಗಾವಿ ವಲಯ ಐಜಿಪಿ ಎನ್.ಸತೀಶಕುಮಾರ ಹೇಳಿದರು.
ಗುರುವಾರ ಆಲಮಟ್ಟಿಯ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಸಬಾಂಗಣದಲ್ಲಿ ವಿಜಯಪುರ-ಬಾಗಲಕೋಟ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ವಿಜಯಪುರ ಹಾಗೂ ಬಾಗಲಕೋಟ ಜಿಲ್ಲೆಗಳಲ್ಲಿ 46 ಅಂತರಾಜ್ಯ ಮತ್ತು ಅಂತರ್ಜಿಲ್ಲಾ ಚೆಕ್‌ಪೋಸ್ಟಗಳನ್ನು ಆರಂಭಿಸಲಾಗುವುದು. ಅಷ್ಟೇ ಅಲ್ಲದೇ ಕಂದಾಯ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ದಿನದ ೨೪ಗಂ. ಕಾರ್ಯನಿರ್ವಹಿಸುತ್ತಾರೆ, ಆ ವೇಳೆಯಲ್ಲಿ ಕಾಲಕಾಲಕ್ಕೆ ಸಿಪಿಐ, ಡಿವೈಎಸ್ಪಿ, ಆಡಿಷನಲ್ ಎಸ್ಪಿ ಮತ್ತು ಎಸ್ಪಿಯವರು ಕಡ್ಡಾಯವಾಗಿ ಪರಿಶೀಲಿಸಲಿ ಸೂಚಿಸಲಾಗಿದೆ ಎಂದರು.
ಪ್ರತಿಯೊಬ್ಬ ಪೊಲೀಸ್ ಪಕ್ಷಾತೀತವಾಗಿ ಕಾರ್ಯನಿರ್ವಹಿಸುವ ಬಗ್ಗೆ, ಪೊಲೀಸ್ ಮಾದರಿ ನಡತೆಯ ಬಗ್ಗೆ ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚನೆ ನೀಡಲಾಗಿದೆ ಎಂದರು. ಮುಂದಿನ ಎರಡು ತಿಂಗಳು ಹೆಚ್ಚು ಜವಾಬ್ದಾರಿಯುತವಾಗಿ, ದಕ್ಷತೆಯಿಂದ, ಹೆಚ್ಚಿನ ಅವಧಿ ಕಾರ್ಯನಿರ್ವಹಿಸಲು ತಿಳಿಸಲಾಗಿದೆ ಎಂದರು.
ಚುನಾವಣೆಗಾಗಿ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು, ರಾಜಕೀಯ ಮುಖಂಡರುಗಳು ಹಲವಾರು ರೀತಿಯ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸುತ್ತಿರುವ ಮತ್ತು ಸಂಗ್ರಹ ಮಾಡಿಕೊಂಡಿರುವ ಸ್ಥಳದ ಮೇಲೆ ಈಗಾಗಲೇ ರಾಜ್ಯದಾದ್ಯಂತ ಪೊಲೀಸ್ ಇಲಾಖೆ ಕಣ್ಣಿಟ್ಟು ದಾಳಿ ಮಾಡಿ ಸಂಬAಧಿಸಿದ ಸಾಮಗ್ರಿಗಳನ್ನು ವಶಪಡಿಸಿಕೊಂಡು ಸಂಬAಧಿಸಿದವರ ಮೇಲೆ ಪ್ರಕರಣಗಳನ್ನೂ ದಾಖಲಿಸುವ ಕಾರ್ಯ ನಡೆದಿದೆ. ಅದೇ ರೀತಿಯಾಗಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಿಗಾವಹಿಸಿ ಹೆಚ್ಚು ದಾಳಿಗಳನ್ನು ಮಾಡಲು ಅಧಿಕಾರಿಗಳಿಗೆ ಸಭೆಯಲ್ಲಿ ನಿರ್ದೇಶನ ನೀಡಲಾಗಿದೆ ಎಂದರು.
ಅಧಿಕಾರಿಗಳ ಸಭೆ ನಡೆಸಿದ ಐಜಿಪಿ,
ಪ್ರತಿ ತಾಲ್ಲೂಕಿನ ಪೊಲೀಸ್ ಅಧಿಕಾರಿಗಳಿಂದ ಅಪರಾಧದ ಬಗ್ಗೆಯೂ ಮಾಹಿತಿ ಪಡೆದು ನಾನಾ ಸೂಚನೆ ನೀಡಿದರು..
ವಿಜಯಪುರ ಎಸ್ ಪಿ, ಎಚ್.ಡಿ. ಆನಂದಕುಮಾರ, ಬಾಗಲಕೋಟೆ ಎಸ್.ಪಿ. ಜಯಕುಮಾರ ಇನ್ನೀತರರು ಇದ್ದರು.