Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಸಂಜೆಯ ಕತ್ತಲಲಿ.. ಮೌನದ ಹಿನ್ನೆಲೆಯಲ್ಲಿ..

ಎಲ್ಲೆಡೆ ಪಟಾಕಿಗಳ ಅಬ್ಬರ; ತಯಾರಕರ ಬಾಳು ದುಸ್ತರ

ದೀಪಾವಳಿ ಸಂಭ್ರಮ ನಡುವೆ ಪರಿಸರ ಪ್ರಜ್ಞೆ ಮತ್ತು ಸುರಕ್ಷತೆ ಸವಾಲು

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಎಲ್ಲೆಡೆ ಪಟಾಕಿಗಳ ಅಬ್ಬರ; ತಯಾರಕರ ಬಾಳು ದುಸ್ತರ
ವಿಶೇಷ ಲೇಖನ

ಎಲ್ಲೆಡೆ ಪಟಾಕಿಗಳ ಅಬ್ಬರ; ತಯಾರಕರ ಬಾಳು ದುಸ್ತರ

By No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ- ದರ್ಶಿನಿ ಪ್ರಸಾದ್ವನಗೂರುಹಾಸನ ಜಿಲ್ಲೆ

ಉದಯರಶ್ಮಿ ದಿನಪತ್ರಿಕೆ

ದೀಪಾವಳಿ ಹಬ್ಬ ಬಂತು ಅಂದ್ರೆ ಎಲ್ಲೆಡೆ ಸಡಗರ ಸಂಭ್ರಮ. ದೀಪಾಲಂಕಾರದ ಜೊತೆಗೆ ಸಂಭ್ರಮಿಸಲು ಪಟಾಕಿಗಳ ಅಬ್ಬರ ಹಬ್ಬದ ವಿಶೇಷ. ದೀಪವೇನೋ ಶಾಂತವಾಗಿ ಉರಿಯುತ್ತೆ ಆದರೆ ಪಟಾಕಿ ಹಾಗಲ್ಲ.. ಎಲ್ಲೆಡೆ ಗದ್ದಲ, ಹೊಗೆ, ಬೆಳಕಿನ ಅಬ್ಬರದೊಂದಿಗೆ ಖುಷಿಯನ್ನು ಕೊಡುತ್ತೆ.
ಪಟಾಕಿ ಹಚ್ಚುವುದರಿಂದ ಮುಖ್ಯವಾಗಿ ಶಬ್ದ ಮಾಲಿನ್ಯ, ವಾಯು ಮಾಲಿನ್ಯ ಜೊತೆಗೆ ಅದರ ಹೊಗೆ ಆರೋಗ್ಯವನ್ನು ಹಾಳು ಮಾಡುತ್ತದೆ. ಇದು ತಿಳಿದಿದ್ದರೂ ಆ ಸಂಭ್ರಮದ ಕ್ಷಣವನ್ನು ಯಾರೂ ಬಿಡಲು ತಯಾರಿಲ್ಲ. ಅದರಲ್ಲೂ ಮಕ್ಕಳಿಗಂತೂ ಪಟಾಕಿ ಹಚ್ಚಿ ಕುಣಿದಾಡುವುದು ಅಂದ್ರೆ ಅಚ್ಚು ಮೆಚ್ಚು.
ಪೋಷಕರು ಮಕ್ಕಳನ್ನ ದೂರ ಇರಿಸಿ ಜಾಗರೂಕತೆಯಿಂದ ಪಟಾಕಿಯನ್ನು ಹಚ್ಚುತ್ತಾರೆ.
ಒಂದು ದಿನ ಪಟಾಕಿ ಹಚ್ಚುವ ನಾವು ಎಷ್ಟೊಂದು ಕಾಳಜಿಯಿಂದ ಆರೋಗ್ಯದ ಕಡೆ ಗಮನಹರಿಸಿ ಪಟಾಕಿಗೆ ಬೆಂಕಿ ಹಚ್ಚುತ್ತೇವೆ. ಕಾರಣ ಅದರ ರಾಸಾಯನಿಕಯುಕ್ತ ಹೊಗೆ ದೇಹದೊಳಗೆ ಸೇರಿದಿರಲಿ ಎಂದು.
ಆದರೆ.. ದಿನನಿತ್ಯ ಪಟಾಕಿ ತಯಾರಿಕೆಯಲ್ಲಿ ತೊಡಗಿಕೊಂಡ ಕಾರ್ಮಿಕರ ಸ್ಥಿತಿ ಏನಾಗಬಹುದು, ಅವರ ಆರೋಗ್ಯ ಹೇಗಿರಬಹುದು ಅಲ್ವಾ..
ಹೌದು.. ಪಟಾಕಿಗಳು ಬಹಳಷ್ಟು ಭಾರವಾದ ಲೋಹಗಳು ಮತ್ತು ಕ್ಯಾಡ್ಮಿಯಮ್, ಸೀಸ, ಕ್ರೋಮಿಯಂ, ಅಲ್ಯೂಮಿನಿಯಂ, ಇತ್ಯಾದಿ ವಿಷಕಾರಿ ರಾಸಾಯನಿಕಗಳನ್ನು ಒಳಗೊಂಡಿರುತ್ತವೆ. ಇವುಗಳು ಉಸಿರಾಟದೊಂದಿಗೆ ದೇಹದಲ್ಲಿ ಸಂಗ್ರಹಗೊಂಡರೆ ಕ್ರಮೇಣ ಆರೋಗ್ಯವನ್ನು ಹಾನಿಗೊಳಿಸಬಹುದು.
ವಿಶೇಷವಾಗಿ ಹೃದಯದ ಕಾಯಿಲೆಗಳು, ಉಸಿರಾಟ ಅಥವಾ ನರಮಂಡಲದ ಅಸ್ವಸ್ಥತೆ, ಸಾಮಾನ್ಯ ನೆಗಡಿ ಮತ್ತು ಕೆಮ್ಮಿನಿಂದ ಬಳಲುವುದು, ಗಂಟಲು ಕೆರೆತ, ಕಫ, ಇದಿಷ್ಟೇ ಅಲ್ಲದೆ ಅಸ್ತಮಾದಂತಹ ಗಂಭೀರ ಸಮಸ್ಯೆಯನ್ನೂ ಉಂಟುಮಾಡಬಹುದು.


ಪಟಾಕಿ ತಯಾರಿಕೆ ಹೆಚ್ಚಾಗಿ ಸಣ್ಣ ಕೈಗಾರಿಕೆಗಳಲ್ಲಿ ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ನೆಲೆಗೊಂಡಿರುವುದರಿಂದ, ಈ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಜನರು ಬಹುತೇಕ ಅನಕ್ಷರಸ್ಥರಾಗಿರುತ್ತಾರೆ. ಹಾಗೂ ಬಡತನದ ಜೀವನ ಸಾಗಿಸುತ್ತಿರುತ್ತಾರೆ. ಆರೋಗ್ಯದ ಬಗ್ಗೆ ಕೂಡ ಹೆಚ್ಚಿನ ಕಾಳಜಿ ವಹಿಸುವುದಿಲ್ಲ. ಅಲ್ಲದೆ ಪ್ರತಿಯೊಂದು ಕೆಲಸವನ್ನು ಕೈಯಿಂದಲೇ ಮಾಡುವುದರಿಂದ ಹೆಚ್ಚಿನ ಕೆಲಸಗಾರರಿಗೆ ರಾಸಾಯನಿಕಗಳನ್ನು ನಿರ್ವಹಿಸುವ ಬಗ್ಗೆ ಅದರ ಅಪಾಯದ ತೀವ್ರತೆ ತಿಳಿದಿರುವುದಿಲ್ಲ. ಒಂದು ವೇಳೆ ಅರಿವಿದ್ದರೂ ಕೂಡ ಕೆಲಸದ ಅನಿವಾರ್ಯತೆ ಎಲ್ಲವನ್ನು ಮರೆಸುತ್ತದೆ.
ಈ ಬಗೆಯ ಉದ್ಯಮಗಳು ಅತ್ಯಂತ ಅಪಾಯಕಾರಿ
ಅಲ್ಲಿನ ಕೂಲಿ ಕಾರ್ಮಿಕರು, ಚಿಕ್ಕ ಪಟಾಕಿಯಿಂದ ಹಿಡಿದು ದೊಡ್ಡ ದೊಡ್ಡ ಪಟಾಕಿಗಳವರೆಗೂ ರಾಸಾಯನಿಕಗಳನ್ನು ಮಿಶ್ರ ಮಾಡಿ, ವಿಭಿನ್ನ ವಿನ್ಯಾಸದ ಕೊಳವೆಗಳಲ್ಲಿ ತುಂಬಿಸಿ, ಪ್ಯಾಕಿಂಗ್ ಮಾಡುವವರೆಗೂ ಬೆಳಗ್ಗಿನಿಂದ ಸಂಜೆಯ ತನಕ ವಿಷಯುಕ್ತ ರಾಸಾಯನಿಕಗಳ ಮಧ್ಯೆಯೇ ಜೀವನ ಸಾಗುತ್ತಿರುತ್ತದೆ. ಕೆಲವರು ಮಾಸ್ಕ್, ಕೈಚೀಲಗಳನ್ನು ಧರಿಸಿದರೆ, ಇನ್ನು ಕೆಲವರು ಹಾಗೆಯೇ ಕೆಲಸದಲ್ಲಿ ಮುಂದುವರಿಯುತ್ತಾರೆ. ಇದು ಅತ್ಯಂತ ಅಪಾಯಕಾರಿ. ಅವರಿಗೇ ಅರಿವಿಲ್ಲದೆ, ವಿಷಯುಕ್ತ ರಾಸಾಯನಿಕಗಳು ಉಸಿರಾಟದ ಮೂಲಕ ದೇಹವನ್ನು ಸೇರುತ್ತವೆ. ನಂತರ ಒಮ್ಮೆ ದೇಹದ ಸ್ಥಿತಿ ಹದಗೆಟ್ಟಾಗ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ.
ಆದಷ್ಟು ಚಿಕ್ಕ ಮಕ್ಕಳು ಗರ್ಭಿಣಿಯರು ವಯೋವೃದ್ಧರು ಇಂತಹ ಕೆಲಸಗಳಿಂದ ದೂರವಿರುವುದು ಸೂಕ್ತ. ಆದರೆ ಹೊಟ್ಟೆಪಾಡಿಗಾಗಿ ಎಂತಹ ಕೆಲಸಕ್ಕೂ ತಯಾರಿರುವ ಕೆಲವರು ಇದರಿಂದ ತೊಂದರೆಗಳನ್ನು ಅನುಭವಿಸುತ್ತಾರೆ.
ಇದಿಷ್ಟೇ ಅಲ್ಲದೆ ಪಟಾಕಿ ಉದ್ಯಮದಲ್ಲಿ ಅಸುರಕ್ಷಿತ ಕೆಲಸಕ್ಕೆ ಪರವಾನಗಿ ಪಡೆಯದ ಕೆಲವು ಘಟಕಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿವೆ, ಇದು ಪಟಾಕಿ ಉದ್ಯಮಗಳಲ್ಲಿ ಆಗಾಗ್ಗೆ ಅಪಘಾತಗಳಿಗೆ ಕಾರಣವಾಗುತ್ತದೆ. ಪಟಾಕಿ ಮಾರಾಟ ಮತ್ತು ಬಳಕೆಯ ಸಮಯದಲ್ಲಿ ಸರಿಯಾದ ಕ್ರಮದಲ್ಲಿ ತಯಾರಿಕೆಯಲ್ಲಿ ತೊಡಗದಿದ್ದರೆ ಬೆಂಕಿ ಅವಘಡಗಳು ಸಂಭವಿಸಲು ಕಾರಣವಾಗುತ್ತದೆ. ಇಂತಹ ದುರ್ಘಟನೆಗಳು ನಡೆದಾಗ ಹಲವಾರು ಮಂದಿ ಜೀವ ತ್ಯಾಗ ಮಾಡಿರುವ ಉದಾಹರಣೆಗಳು ಕೂಡ ಇವೆ.
ಇದರ ಕುರಿತಾಗಿ ಸರ್ಕಾರ ಗಂಭೀರವಾದ ಕ್ರಮ ಕೈಗೊಳ್ಳಬೇಕು.
ಪಟಾಕಿ ತಯಾರಿಕೆಯ ಬಗ್ಗೆ ಅರ್ಥಮಾಡಿಕೊಳ್ಳುವಂತೆ ಕೆಲಸಗಾರರಿಗೆ ತರಬೇತಿ ನೀಡಬೇಕು. ರಾಸಾಯನಿಕಗಳನ್ನು ಬಳಸುವಾಗ ಲೋಹದ ಉಪಕರಣಗಳನ್ನು ತಪ್ಪಿಸಬೇಕು. ಚಿಕ್ಕ ಪುಟ್ಟ ಮಳಿಗೆಗಳಲ್ಲಿ, ಇಕ್ಕಟ್ಟಾದ ಜಾಗಗಳಲ್ಲಿ, ಸರಿಯಾಗಿ ಗಾಳಿಯಾಡದ ಪ್ರದೇಶಗಳಲ್ಲಿ ಪಟಾಕಿ ತಯಾರಿಸುವುದನ್ನು ನಿಲ್ಲಿಸಬೇಕು.
ಕೆಲಸದ ಸ್ಥಳದಲ್ಲಿ ಸಂಭವಿಸುವ ಅಪಾಯವನ್ನು ತಪ್ಪಿಸಲು ಸೂಕ್ತವಾದ ಕ್ರಮಗಳನ್ನು ಒದಗಿಸಬೇಕು
ಪ್ರತಿ ಪಟಾಕಿ ಉದ್ಯಮವು ಕಾರ್ಖಾನೆಗಳ ಕಾಯಿದೆಯಲ್ಲಿ ಉಲ್ಲೇಖಿಸಿರುವಂತೆ ಆರೋಗ್ಯ ಸುರಕ್ಷತಾ ಕಾರ್ಯವಿಧಾನವನ್ನು ಅನುಸರಿಸಬೇಕು. ಮತ್ತು ಕೈಗಾರಿಕೆಗಳ ಸುರಕ್ಷತಾ ನೀತಿಗಳು ಮತ್ತು ಕಾರ್ಯವಿಧಾನಗಳನ್ನು ಮೌಲ್ಯಮಾಪನ ಮಾಡಲು ಸರ್ಕಾರವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು.


ಕಾರ್ಖಾನೆಯ ವಿನ್ಯಾಸ, ಅಪಘಾತಗಳ ಬಗ್ಗೆ ಅರಿವು, ಸುರಕ್ಷತೆಗಾಗಿ ಸಹಾಯಕ ಸಾಧನಗಳು, ಕೆಲಸದ ವಾತಾವರಣ ಮತ್ತು ಅಧಿಕ ಸಮಯ, ಅಪಾಯದಿಂದ ತಪ್ಪಿಸಿಕೊಳ್ಳುವ ವಿಧಾನಗಳು, ಸುರಕ್ಷಿತ ವಿಲೇವಾರಿ ಮತ್ತು ಅಗ್ನಿಶಾಮಕ ಸಹಾಯ, ಕೆಲಸದ ತರಬೇತಿ, ಇದೆಲ್ಲದರ ಕುರಿತು ಆ ಕೂಲಿ ಕಾರ್ಮಿಕರಿಗೆ ಶಿಕ್ಷಣ ನೀಡಬೇಕು.
ಕಾನೂನಿನ ಪ್ರಕಾರ ಕಾರ್ಮಿಕರಿಗೆ ಕಲ್ಯಾಣ ಯೋಜನೆ ಸೌಲಭ್ಯಗಳು, ಸುರಕ್ಷತೆ ಮತ್ತು ಆರೋಗ್ಯವನ್ನು ಒದಗಿಸಿದರೆ, ಕಾರ್ಮಿಕರು ಅಪಾಯ ಮುಕ್ತ ವಾತಾವರಣವನ್ನು ಹೊಂದಬಹುದು.
ನಮ್ಮನ್ನೆಲ್ಲ ಖುಷಿಪಡಿಸುವ ಆ ಕೂಲಿ ಕಾರ್ಮಿಕರು ಕೂಡ ಆರೋಗ್ಯವಾಗಿ ಖುಷಿಯಿಂದ ಕಾಯಕದಲ್ಲಿ ತೊಡಗಬಹುದು.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಸಂಜೆಯ ಕತ್ತಲಲಿ.. ಮೌನದ ಹಿನ್ನೆಲೆಯಲ್ಲಿ..

ದೀಪಾವಳಿ ಸಂಭ್ರಮ ನಡುವೆ ಪರಿಸರ ಪ್ರಜ್ಞೆ ಮತ್ತು ಸುರಕ್ಷತೆ ಸವಾಲು

ಉದಯರಶ್ಮಿ ಇಂದಿನ ದಿನಪತ್ರಿಕೆ ನವೆಂಬರ್ 07,2026

ರಾಜ್ಯ ಉಪಾಧ್ಯಕ್ಷರಾಗಿ ರಾವಸಾಬ ಐಹೊಳೆ ನೇಮಕ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಸಂಜೆಯ ಕತ್ತಲಲಿ.. ಮೌನದ ಹಿನ್ನೆಲೆಯಲ್ಲಿ..
    In ವಿಶೇಷ ಲೇಖನ
  • ಎಲ್ಲೆಡೆ ಪಟಾಕಿಗಳ ಅಬ್ಬರ; ತಯಾರಕರ ಬಾಳು ದುಸ್ತರ
    In ವಿಶೇಷ ಲೇಖನ
  • ದೀಪಾವಳಿ ಸಂಭ್ರಮ ನಡುವೆ ಪರಿಸರ ಪ್ರಜ್ಞೆ ಮತ್ತು ಸುರಕ್ಷತೆ ಸವಾಲು
    In ವಿಶೇಷ ಲೇಖನ
  • ಉದಯರಶ್ಮಿ ಇಂದಿನ ದಿನಪತ್ರಿಕೆ ನವೆಂಬರ್ 07,2026
    In ದಿನಪತ್ರಿಕೆ
  • ರಾಜ್ಯ ಉಪಾಧ್ಯಕ್ಷರಾಗಿ ರಾವಸಾಬ ಐಹೊಳೆ ನೇಮಕ
    In (ರಾಜ್ಯ ) ಜಿಲ್ಲೆ
  • ಕುಖ್ಯಾತ ರೌಡಿ ಮಾಳಪ್ಪ ದೇವಕತೆ ಬಂಧನ ಅವಧಿ ವಿಸ್ತರಣೆ
    In (ರಾಜ್ಯ ) ಜಿಲ್ಲೆ
  • ಕೃಷ್ಣಾ-ಭೀಮಾ ತೀರದ ಕಬ್ಬಿಗೂ ೩೬೦೦ ರೂ. ದರ ಅನ್ವಯಿಸಲು ಹಕ್ಕೊತ್ತಾಯ
    In (ರಾಜ್ಯ ) ಜಿಲ್ಲೆ
  • ಸರ್ಕಾರಿ ಶಾಲಾ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ!
    In (ರಾಜ್ಯ ) ಜಿಲ್ಲೆ
  • ಪ್ರಾಯೋಗಿಕ ಕೌಶಲ ಬೆಳೆಸಿಕೊಂಡರೆ ಉದ್ಯೋಗಾವಕಾಶ ಹೆಚ್ಚಳ
    In (ರಾಜ್ಯ ) ಜಿಲ್ಲೆ
  • ಪ್ರತಿಭಾ ಅನ್ವೇಷಣೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕ :ಪಾಟೀಲ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.