ಅತೀ ಕಡಿಮೆ ದರದಲ್ಲಿ ಉನ್ನತ ಪರೀಕ್ಷೆ | ತ್ವರಿತ ಫಲಿತಾಂಶ | ಮನೆ ಬಾಗಿಲಿಗೆ ಸೇವೆ
ವಿಜಯಪುರ: ಐತಿಹಾಸಿಕ ನಗರವಾಗಿ ಗುರುತಿಸಿಕೊಂಡಿರುವ ನಮ್ಮ ವಿಜಯಪುರ ಜಿಲ್ಲೆಯು ಆರೋಗ್ಯ ಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆಯನ್ನು ಹೊಂದಬೇಕು, ಹಾಗೂ ವಿಶ್ವದರ್ಜೆಯ ಆರೋಗ್ಯ ಸೇವೆಗಳು ಒಂದೇ ಸೂರಿನಡಿಯಲ್ಲಿ ಸಿಗಬೇಕು ಎನ್ನುವ ದೃಷ್ಠಿಯಿಂದ ಶ್ರೀ ಸಿದ್ಧೇಶ್ವರ ಲೋಕ ಕಲ್ಯಾಣ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜೆ.ಎಸ್.ಎಸ್ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಯಿತು. ಅದರ ವಿಸ್ತೃತ ರೂಪವಾಗಿ ಇಂದು ಜೆ.ಎಸ್.ಎಸ್ ಡೈಗ್ನೊಸ್ಟಿಕ್ಸ್ನ್ನು ಪ್ರಾರಂಭಿಸಲಾಗಿದ್ದು ಉತ್ತರ ಕರ್ನಾಟಕ ಭಾಗದಲ್ಲಿಯೇ ಅತ್ಯುತ್ತಮ ಹೈಟೆಕ್ ಲ್ಯಾಬ್ ಆಗಿ ಸಾರ್ವಜನಿಕರ ಸೇವೆಗೆ ಸಜ್ಜುಗೊಂಡು ನಿಂತಿದೆ. ವಿಶೇಷ ಸೇವೆಗಳೊಂದಿಗೆ ಕಾರ್ಯವನ್ನು ಪ್ರಾರಂಭಿಸಿರುವ ಡೈಗ್ನೊಸ್ಟಿಕ್ಸ್ ಅತೀ ಕಡಿಮೆ ದರದಲ್ಲಿ ಉನ್ನತವಾದ ಪರೀಕ್ಷೆಗಳನ್ನು ನಡೆಸುತ್ತಿದೆ. ಡ್ರೆöÊವ್ ಥ್ರೂ ಕಲೆಕ್ಷನ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಸಾರ್ವಜನಿಕರು ಬಂದಲ್ಲಿ ವಾಹನದಲ್ಲಿಯೇ ರಕ್ತ ಮಾದರಿಯನ್ನು ಸಂಗ್ರಹಿಸಿಕೊಳ್ಳುವ ವ್ಯವಸ್ಥೆ ಇದಾಗಿದ್ದು ಕಾಲು ನೋವು ಹಾಗೂ ತೀವ್ರ ಸಮಸ್ಯೆ ಇರುವ ಜನಗಳಿಗೆ ಇದು ನೆರವು ನೀಡುತ್ತದೆ. ಅದೂ ಅಲ್ಲದೇ ಸಾರ್ವಜನಿಕರಿಗೆ
ಸಮಯ ಹಾಗೂ ಶ್ರಮ ಎರಡನ್ನೂ ಉಳಿಸುವುದಕ್ಕಾಗಿ ಮನೆ ಮನೆಗೂ ತೆರಳಿ ಉಚಿತವಾಗಿ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ. ನಗರದಾದ್ಯಂತ ಕಲೆಕ್ಷನ್ ಪಾಯಿಂಟ್‌ಗಳನ್ನು ತೆರೆದಿದ್ದು ಕರೆ ಮಾಡಿದ ತಕ್ಷಣ ಕಾರ್ಯ ಪ್ರವೃತ್ತರಾಗುವ ಸಿಬ್ಬಂದಿ ಕಡಿಮೆ ಅವಧಿಯಲ್ಲಿಯೇ ಮನೆ ಬಾಗಿಲಿಗೆ ಬಂದು ಅವಶ್ಯಕವಾಗಿರುವ ಸೇವೆಯನ್ನು ಒದಗಿಸುತ್ತಾರೆ. ಅಲ್ಲದೇ ಪರೀಕ್ಷೆ ಮಾಡಿದ ನಂತರ ಪರೀಕ್ಷಾ ವರದಿಯನ್ನು ಪಡೆದುಕೊಳ್ಳುವುದಕ್ಕೆಂದು ಲ್ಯಾಬ್ ಗೆ ಬರುವ ಅವಶ್ಯಕತೆ ಇರುವುದಿಲ್ಲ. ಬದಲಿಗೆ ಮೊಬೈಲ್ ಮೂಲಕವೇ ವರದಿಯನ್ನು ರವಾನಿಸಲಾಗುತ್ತದೆ. ಇದು ಅತೀ ವೇಗದಲ್ಲಿ ವರದಿಯನ್ನು ಪಡೆದುಕೊಳ್ಳುವುದಕ್ಕೆ ನೆರವಾಗುತ್ತದೆ. ಅಲ್ಲದೇ ಸಾರ್ವಜನಿಕರಿಗೆ ನೆರವಾಗಲಿ ಎನ್ನುವ ಉದ್ಧೇಶದಿಂದ ಡೈಯಾಬಿಟಿಕ್ ಪ್ಯಾಕೇಜ್, ಹಾರ್ಟ ಚೆಕಪ್ ಪ್ಯಾಕೇಜ್, ಉಮನ್ ವೆಲ್‌ನೆಸ್ ಪ್ಯಾಕೇಜ್, ಸಿನಿಯರ್ ಸಿಟಿಜನ್ ಪ್ಯಾಕೇಜ್, ಪ್ರೀಮಿಯಂ ಪ್ಯಾಕೇಜ್ ಹಾಗೂ ಕಿಡ್ನಿ ಪ್ಯಾಕೇಜ್ ಸೇರಿದಂತೆ ಹಲವಾರು ಪರೀಕ್ಷೆಗಳನ್ನು ಅತ್ಯಂತ ಕಡಿಮೆ ದರದಲ್ಲಿ ಹಾಗೂ ನಿಗದಿತ ಸಮಯಕ್ಕೆ ಪ್ಯಾಕೇಜ್ ರೂಪದಲ್ಲಿಯೂ ಸಹ ಸೇವೆಯನ್ನು ಒದಗಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ೦೮೩೫೨-೨೪೯೩೯೯ ಸಂಪರ್ಕಿಸಬೇಕು. ಹಾಗೂ ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಜೆ.ಎಸ್.ಎಸ್ ಆಸ್ಪತ್ರೆಯ ಸಿ.ಇ.ಓ ಶರಣ ಮಳಖೇಡ್ಕರ ಪ್ರಕಟಣೆಯಲ್ಲಿ ತಿಳಿಸಿದರು