Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವಿಜಯಪುರ ಜಿಲ್ಲೆಯ 10 ತಾಲೂಕುಗಳು ಬರಪೀಡಿತವೆಂದು ಘೋಷಣೆ

ಉದ್ಯಮಗಳಿಗೆ ಬೆಂಬಲ ನೀಡಿದಾಗ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ

ನಂಬಿಕೆಯೇ ಸಹಕಾರಿ ಸಂಸ್ಥೆಗಳ ಯಶಸ್ಸಿನ ಮೂಲ :ನಿರಾಣಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ರಂಜಾನ ಹಬ್ಬದ ಆಚರಣೆ ಹಿನ್ನೆಲೆ :ಖರೀದಿ ಜೋರು
(ರಾಜ್ಯ ) ಜಿಲ್ಲೆ

ರಂಜಾನ ಹಬ್ಬದ ಆಚರಣೆ ಹಿನ್ನೆಲೆ :ಖರೀದಿ ಜೋರು

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

– ಬಸವರಾಜ ನಂದಿಹಾಳ
ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಮುಸ್ಲಿಂ ಬಾಂಧವರು ರಂಜಾನ ಹಬ್ಬದ ಆಚರಣೆ ಮಾಡುವ ಹಿನ್ನೆಲೆಯಲ್ಲಿ ಸೋಮವಾರ ಮಾರುಕಟ್ಟೆಯಲ್ಲಿ ಮುಸ್ಲಿಂ ಬಾಂಧವರ ಖರೀದಿ ಭರಾಟೆ ಜೋರಾಗಿತ್ತು.
ಪಟ್ಟಣದಲ್ಲಿ ಬಹುತೇಕ ಕಿರಾಣಿ ಅಂಗಡಿಗಳ ಮುಂದೆ, ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿರುವ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಖರೀದಿಯಲ್ಲಿ ನಿರತರಾಗಿದ್ದರು. ಪಟ್ಟಣದಲ್ಲಿರುವ ಬಟ್ಟೆ ಅಂಗಡಿ, ಕಿರಾಣಿ ಅಂಗಡಿ-ಮುಂಗಟ್ಟುಗಳಲ್ಲಿ ಹೆಚ್ಚಾಗಿ ಮುಸ್ಲಿಂ ಬಾಂಧವರು ಖರೀದಿಯಲ್ಲಿ ತೊಡಗಿರುವುದು ಕಂಡುಬರುತ್ತಿದೆ. ಮುಸ್ಲಿಂ ಬಾಂಧವರ ಖರೀದಿ ಭರಾಟೆ ಜೋರಾಗಿದೆ. ಸಂಪ್ರದಾಯದಂತೆ ಪವಿತ್ರ ರಂಜಾನ್ ಹಬ್ಬ ಇದಾಗಿರುವದರಿಂದಾಗಿ ಮುಸ್ಲಿಂ ಬಾಂಧವರು ಪ್ರತಿಯೊಬ್ಬರು ದಾನ, ಧರ್ಮ ಮಾಡುವುದರ ಜೊತೆಗೆ ಹೊಸ ಬಟ್ಟೆಗಳ ಖರೀದಿಗೆ ಮುಂದಾಗುವುದು ಸಹಜ. ಪಟ್ಟಣದ ಪ್ರಮುಖ ಅಂಗಡಿಗಳಲ್ಲಿ ಬಟ್ಟೆ ಖರೀದಿ ಹೆಚ್ಚಾಗಿರುವುದು ಕಂಡುಬಂದಿತ್ತು.
ಮಹಿಳೆಯರು, ಮಕ್ಕಳು, ಯುವಕರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಯ ಮೊರೆ ಹೋಗುತ್ತಿದ್ದಾರೆ. ಇಂದು ಸಂತೆ ದಿನವಾಗಿರುವದರಿಂದ ತಾಲೂಕಿನ ಕೆಲವೆಡೆಗಳಿಂದ ಜನರು ಬಂದಿದ್ದರಿಂದಾಗಿ ಜನಸಂದಣಿ ಕಂಡುಬಂದಿತ್ತು. ವ್ಯಾಪಾರ ವಹಿವಾಟು ಜೋರಾಗಿ ನಡೆಯಿತು. ಮಹಿಳೆಯರು ತಮಗೆ ಬೇಕಾದ ಬಳೆ, ರಿಬ್ಬನ್ ಇತ್ಯಾದಿ ಖರೀದಿ ಮಾಡಿದರು. ಬಟ್ಟೆಗಳನ್ನು ಖರೀದಿಸುವ ಜೊತೆಗೆ ಚಪ್ಪಲಿ ಮತ್ತಿತರ ದಿನಬಳಕೆ ವಸ್ತುಗಳನ್ನು ಖರೀದಿಸುವದು ಸಾಮಾನ್ಯವಾಗಿತ್ತು. ರಂಜಾನ ಹಬ್ಬದಲ್ಲಿ ತಯಾರಿಸುವ ಸುರಕಮ್ ತಯಾರಿಸಲು ಬೇಕಾದ ಡ್ರೈಪುಡ್ಸ್ ,ಹಣ್ಣು ಖರೀದಿ ಭರಾಟೆಯು ಜೋರಾಗಿತ್ತು. ರಂಜಾನ್ ತಿಂಗಳಲ್ಲಿ ಮುಸ್ಲಿಂ ಬಾಂಧವರು ಒಂದು ತಿಂಗಳ ಕಾಲ ಉಪವಾಸ ಇದ್ದು. ಒಂದು ತಿಂಗಳ ಕಾಲ ಉಪವಾಸ ಬಿಡುವ ಪವಿತ್ರ ಹಬ್ಬ ಇದಾಗಿದೆ.
ನಮ್ಮ ಬಾಂಧವರಿಗೆ ರಂಜಾನ್ ಹಬ್ಬ ಬಹಳ ಪವಿತ್ರ ಹಬ್ಬವಾಗಿದೆ. ರಂಜಾನ್ ಹಬ್ಬದಂಗವಾಗಿ ಒಂದು ತಿಂಗಳ ಕಾಲ ರೋಜಾ ಮಾಡುವ ಮೂಲಕ ಭಗವಂತನಿಗೆ ಪ್ರಾರ್ಥನೆ ಸಲ್ಲಿಸುತ್ತೇವೆ. ರೋಜಾ ಕೊನೆಯ ದಿನ ರಂಜಾನ ಹಬ್ಬವನ್ನು ಆಚರಿಸುವ ಮೂಲಕ ಉಪವಾಸ ಮುಕ್ತಾಯಗೊಳಿಸಲಾಗುವುದು. ಸೌದಿ ಅರೇಬಿಯಾದಲ್ಲಿ ಬುಧವಾರ ರಂಜಾನ್ ಹಬ್ಬ ಆಚರಣೆಯಾಗುತ್ತಿದೆ. ನಾಳೆ ನಮ್ಮಲ್ಲಿ ಚಂದ್ರ ಕಂಡರೆ ಬುಧವಾರ ಎಲ್ಲೆಡೆ ರಂಜಾನ್ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಒಂದು ವೇಳೆ ನಾಳೆ ಚಂದ್ರ ಕಾಣಿಸದಿದ್ದರೆ ಗುರುವಾರ ರಂಜಾನ ಹಬ್ಬದ ಆಚರಣೆಯಾಗುತ್ತದೆ ಎಂದು ದಸ್ತಗೀರ ವಜ್ಜಲ ಹೇಳಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ವಿಜಯಪುರ ಜಿಲ್ಲೆಯ 10 ತಾಲೂಕುಗಳು ಬರಪೀಡಿತವೆಂದು ಘೋಷಣೆ

ಉದ್ಯಮಗಳಿಗೆ ಬೆಂಬಲ ನೀಡಿದಾಗ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ

ನಂಬಿಕೆಯೇ ಸಹಕಾರಿ ಸಂಸ್ಥೆಗಳ ಯಶಸ್ಸಿನ ಮೂಲ :ನಿರಾಣಿ

ಸೆ.೩೦ ರೊಳಗೆ ಇಂಡಿ ತಾಲೂಕು ಬರಪೀಡಿತವೆಂದು ಘೋಷಣೆ ಸಾದ್ಯತೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವಿಜಯಪುರ ಜಿಲ್ಲೆಯ 10 ತಾಲೂಕುಗಳು ಬರಪೀಡಿತವೆಂದು ಘೋಷಣೆ
    In (ರಾಜ್ಯ ) ಜಿಲ್ಲೆ
  • ಉದ್ಯಮಗಳಿಗೆ ಬೆಂಬಲ ನೀಡಿದಾಗ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ
    In (ರಾಜ್ಯ ) ಜಿಲ್ಲೆ
  • ನಂಬಿಕೆಯೇ ಸಹಕಾರಿ ಸಂಸ್ಥೆಗಳ ಯಶಸ್ಸಿನ ಮೂಲ :ನಿರಾಣಿ
    In (ರಾಜ್ಯ ) ಜಿಲ್ಲೆ
  • ಸೆ.೩೦ ರೊಳಗೆ ಇಂಡಿ ತಾಲೂಕು ಬರಪೀಡಿತವೆಂದು ಘೋಷಣೆ ಸಾದ್ಯತೆ
    In (ರಾಜ್ಯ ) ಜಿಲ್ಲೆ
  • ಸಿಂದಗಿ-ಆಲಮೇಲ ತಾಲೂಕುಗಳು ಬರಪೀಡಿತವೆಂದು ಘೋಷಣೆ
    In (ರಾಜ್ಯ ) ಜಿಲ್ಲೆ
  • ಸ್ವಾಮಿ ರಾಮಾನಂದ ತೀರ್ಥರ ಸ್ಮಾರಕ ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಲಿ
    In (ರಾಜ್ಯ ) ಜಿಲ್ಲೆ
  • ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಅನುದಾನ :ಶಾಸಕ ಮನಗೂಳಿ
    In (ರಾಜ್ಯ ) ಜಿಲ್ಲೆ
  • ಪ್ರಧಾನಿ ಮೋದಿ ಜನ್ಮದಿನ ಪ್ರಯುಕ್ತ ಅಭಿಮಾನಿಗಳಿಂದ ಪೂಜೆ
    In (ರಾಜ್ಯ ) ಜಿಲ್ಲೆ
  • ದೇವರಹಿಪ್ಪರಗಿಯಲ್ಲಿ ವಿಶ್ವಕರ್ಮ ಜಯಂತ್ಯುತ್ಸವ
    In (ರಾಜ್ಯ ) ಜಿಲ್ಲೆ
  • ಭಕ್ತಿಯ ಪುರ & ಹೃದಯವಂತರ ಬೀಡಾಗಿರುವ ಬಬಲೇಶ್ವರ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.