ಸಿಂದಗಿ: ಭಾರತದಲ್ಲಿ ತಾಯಿಗೆ ಪವಿತ್ರವಾದ ಸ್ಥಾನವಿದೆ. ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ಎಸ್.ತಂಗಡಗಿಯವರ ತಾಯಿಯನ್ನು ಹೀನಾ ಪದ ಬಳಸಿ ಹಿಯ್ಯಾಳಿಸಿ ಅಪಮಾನ ಮಾಡಿರುವ ಬಿಜೆಪಿಯ ಸಿ.ಟಿ.ರವಿ ಯವರು ಈ ಕೂಡಲೇ ಇಡೀ ಹೆಣ್ಣು ಕುಲಕ್ಕೆ ಕ್ಷಮೆ ಕೇಳಬೇಕು, ಇಲ್ಲದೇ ಹೋದರೆ ಉಗ್ರವಾದ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಭೋವಿ ವಡ್ಡರ ಸಮಾಜದ ತಾಲೂಕಾಧ್ಯಕ್ಷ ಪಂಡಿತ ಯಂಪೂರೆ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜಕೀಯ ವ್ಯವಸ್ಥೆಯಲ್ಲಿ ರಾಜಕಾರಣಿಗಳು ಟೀಕೆ ಮಾಡುವುದು ಸರ್ವ ಸಾಮಾನ್ಯ, ಟೀಕೆ ಜೊತೆಯಲ್ಲಿ ಆರೋಪ-ಪ್ರತ್ಯಾರೋಪ ಮಾಡುವುದು ನಿರಂತರವಾಗಿ ನಡೆಯುತ್ತಿರುವುದನ್ನು ಗಮನಿಸುತ್ತಿದ್ದೇವೆ. ಆದರೆ ಹೆಣ್ಣು ಸಂಕುಲವನ್ನು ಕೀಳಾಗಿ ಕಂಡು ಅವಮಾನಿಸಿ ಮಾತನಾಡಿರುವುದು ಕಾಣಲು ಸಾಧ್ಯವಿಲ್ಲ. ಶಿಸ್ತಿನ ಪಕ್ಷವೆಂದು ಹೇಳಿಕೊಂಡಿರುವ ಸಿ.ಟಿ.ರವಿ ಯವರ ಬಾಯಿಯಿಂದ ಇಂತಹ ಕೆಟ್ಟ ಪದಗಳನ್ನು ಬಳಸಿರುವುದು ಇಡೀ ಅವರ ಪಕ್ಷಕ್ಕೆ, ಅವರ ರಾಜಕೀಯ ವ್ಯಕ್ತಿತ್ವಕ್ಕೆ ಶೋಭೆ ತರುವಂತಹದ್ದಲ್ಲ. ಭಾರತಾಂಭೆಯನ್ನು ಅವಮಾನಿಸಿರುವ ಹೀನ ಮನಸ್ಥಿತಿಯ ವಿಕೃತ ಆಲೋಚನೆಯ ಸಿ.ಟಿ.ರವಿ ಯವರನ್ನು ಗಡಿಪಾರು ಮಾಡುವುದಕ್ಕಿಂತ ದೇಶದ ಗಡಿಯನ್ನೇ ದಾಟಿಸುವುದು ಉತ್ತಮ ಎಂದಿದ್ದಾರೆ.
ತಾಯಿಯನ್ನು ಶಾರದೆಯ ರೂಪದಲ್ಲಿ ಪೂಜಿಸುವ ಪರಂಪರೆ ಭಾರತೀಯ ಪರಂಪರೆ, ಇಡೀ ಭಾರತದ ಪರಂಪರೆಗೆ ನೋವುಂಟು ಮಾಡುವಂತಹ ಮಾತುಗಳನ್ನಾಡಿದ್ದಾರೆ. ತಾಯಿ ಶಾರದೆಯನ್ನೇ ಅವಮಾನಿಸುವ ಇವರು ಬೇರೆಯ ಸಂಸ್ಕೃತಿಗಳ ಬಗ್ಗೆ ಮತ್ಯಾವ ರೀತಿ ಚಿಂತಿಸುತ್ತಾರೆ ಎಂಬುವುದನ್ನು ಪ್ರಜ್ಞಾವಂತರು ತಿಳಿಯಬೇಕಾಗಿದೆ. ತಾಯಿಗಿಂತ ದೊಡ್ಡ ದೇವರಿಲ್ಲ ಎಂಬ ಮಾತನ್ನು ಸಿ.ಟಿ.ರವಿಯವರು ಓದಿದಂತಿಲ್ಲ, ಸಿ.ಟಿ.ರವಿಯವರು ಈ ಕೂಡಲೇ ತಾಯಿಯ ಬಗ್ಗೆ ವಿವೇಕ ಬಳಸಿಕೊಳ್ಳಲಿ ಎಂದು ತಾಲೂಕಾ ಉಪಾದ್ಯಕ್ಷ ದಿಲೀಪ ಆಲಕುಂಟೆ, ಕೊಳ್ಳಪ್ಪ ಚಾಕರೆ, ತಿರುಪತಿ ಬಂಡಿವಡ್ಡರ, ದಯಾನಂದ ಗೊಳಸಾರ, ರವಿ ಚಾಕರೆ, ರಘುಪತಿ ಬಂಡಿವಡ್ಡರ, ಭೀಮಾಶಂಕರ ಯಂಪೂರೆ, ರಾಜು ಆಲಕುಂಟೆ, ಲಕ್ಷ್ಮಣ ಆಲಕುಂಟೆ, ಕಾಂತಪ್ಪ ಯಂಪೂರೆ ಸೇರಿದಂತೆ ಅನೇಕರು ಎಚ್ಚರಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

