ವಿಜಯಪುರ: ನಗರದ ಸುರಸಿಂಗಾರ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ ಫೆ.೨೫ ರಂದು ನಗರದ ಕಂದಗಲ್ಲ ಶ್ರೀ ಹನುಮಂತ ರಾಯ ರಂಗಮಂದಿರದಲ್ಲಿ ದಿ. ಶ್ರೀ ಭೋಜಣ್ಣ ಬಿಳಗಿಯವರ ಸ್ಮರಣಾರ್ಥ ಏರ್ಪಡಿಸಿದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನವಾಯಿತು.
ದೆಹಲಿಯ ಪ್ರಸಿದ್ಧ ಹಿಂದುಸ್ಥಾನಿ ಗಾಯಕರಾದ ಪಂ. ಹರೀಶ ತಿವಾರಿಯವರು ರಾಗ ಭಾಗೇಶ್ರೀ, ಠೂಮರಿ, ಮತ್ತು ಭೈರವಿಯಲ್ಲಿ ತಮ್ಮ ಶಾಸ್ತ್ರೀಯ ಗಾಯನದ ಜೊತೆಗೆ ಅಭಂಗ್ ಮತ್ತ ಭಜನ ಪ್ರಸ್ತುತಪಡಿಸಿ ನೆರೆದ ಸಂಗೀತಾಸ್ತರ ಮನ ತಣಿಸಿದರು. ಇವರಿಗೆ ಪಂ. ಸಧಾಂಶು ಕುಲಕರ್ಣಿ ಹಾರ್ಮೋನಿಯಂ ಸಾಥ್ ಹಾಗೂ ಡಾ. ರವಿಕಿರಣ ನಾಕೋಡರವರು ತಬಲಾ ಸಾತ್ ಮತ್ತು ತಾನಪುರದಲ್ಲಿ ವಿಶಾಲ್ ಕಟ್ಟಿ, ಕಾಶಿನಾಥ ಭೋಸಲೆ ಸಾಥ ನೀಡಿ ಕಾರ್ಯಕ್ರಮಕ್ಕೆ ಮೆರಗುತಂದರು.
ಈ ಕಾರ್ಯಕ್ರಮಲ್ಲಿ ಡಾ. ಸತೀಶ ಜಿಗಜಿನ್ನಿ, ವಿಶ್ವನಾಥ ಬೀಳಗಿ, ಅರುಣ ಸೋಲಾಪೂರಕರ್, ತ್ರೀವೇಣಿ ಬೀಳಗಿ, ಸಂಗಣ್ಣ ಪಾಟೀಲ, ರಮೇಶ ಚವ್ಹಾಣ, ಸಿಂಗ್, ಪಿ.ಎಸ್.ಕಡೇಮನಿ, ವಿದ್ಯಾಧರ ಸಾಲಿ, ಬಿ.ಎಸ್.ಪಾಟೀಲ, ಲಿಂಗರಾಜ ಕಾಚಾಪೂರ, ಡಾ. ಸದಾಶಿವ ಪವಾರ ಸಹಿತ ವಿಜಯಪುರದ ಎಲ್ಲ ಸಂಗೀತ ಆಸಕ್ತರು ಕಲಾ ರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

