ವಿಜಯಪುರ: ಕನ್ನಡ ಸಾಹಿತ್ಯ ಪರಿಷತ್ತಿಗೆ ನೂರು ವರ್ಷಗಳ ಇತಿಹಾಸವಿದೆ. ಈ ಮುಖಾಂತರ ನಾಡು ನುಡಿ ಸಂಸ್ಕೃತಿ ಗಾಗಿ ಶ್ರಮಿಸಿದ ಜೀವಿಗಳು ಸ್ಮರಿಸುವ ಮತ್ತು ಸಮಾಜಕ್ಕೆ ಸಂದೇಶ ನೀಡುವ ಕೆಲಸ ಮಾಡುತ್ತ ಬಂದಿದೆ ಎಂದು ದೊಡ್ಡಣ್ಣ ಭಜಂತ್ರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸೋಮವಾರ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾ ಭವನದಲ್ಲಿ ಜರುಗಿದ ಮ ಮ ಹುಂಡೇಕಾರ ಸಾ ಮ ಹುಂಡೇಕಾರ ಅವರ ಸ್ಮರಣಾರ್ಥ ಏರ್ಪಡಿಸಿದ ದತ್ತಿ ಉಪನ್ಯಾಸ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿರುವ ಮೇಲುಕೀಳು ತೊಡೆದು ಸಮ ಸಮಾಜ ನಿರ್ಮಾಣ ಮಾಡುವ ಶಕ್ತಿ ಸಾಹಿತ್ಯಕ್ಕೆ ಇದೆ. ಪ್ರತಿ ದಿನವೂ ಕ್ರಿಯಾಶೀಲವಾಗಿ ಸಾಹಿತ್ಯದ ಚಟುವಟಿಗಳು ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತ ಬಂದಿದೆ ಈ ರೀತಿ ಸಮಾಜ ತಿದ್ದುವ ಶಕ್ತಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಇದೆ ಎಂದರು.
ಉಪನ್ಯಾಸಕರಾಗಿ ಮಲ್ಲಮ್ಮ ಬಿರಾದಾರ ಅವರು ಜನಪದ ಸಾಹಿತ್ಯ ಕುರಿತು ಮಾತನಾಡುತ್ತ, ಜನಪದ ಸಾಹಿತ್ಯ ಸಾವನ್ನು ಧಿಕ್ಕರಿಸುವ ಜೀವಂತ ಪಳೆಯುಳಿಕೆ, ಮಣ್ಣನ್ನು ಪೂಜಿಸುವ ಮತ್ತು ಪ್ರೀತಿಸುವ ಸಂಸ್ಕಾರ ಜನಪದರಿಗಿದೆ, ಜನಪದ ಸಾಹಿತ್ಯ ಕಲೆಗಳು ಮಾನವ ಸಂಸ್ಕೃತಿ ಸಂಪ್ರದಾಯಗಳ ಆಚರಣೆ ಸಮಾಜದಲ್ಲಿ ಸಾಮರಸ್ಯ ತರುತ್ತವೆ ಎಂದರು.
ಸಂಗಮೇಶ ಬದಾಮಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಡಾ ಸುಮಾ ಬೋಳರಡ್ಡಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವಹಿಸಿ ಮಾತನಾಡಿದ ಡಾ ಸಂಗಮೇಶ ಮೇತ್ರಿ, ವಿಜಯಪುರ ಜಿಲ್ಲೆ ಜನಪದ ರಂಗಭೂಮಿಯ ಹೆಬ್ಬಾಗಿಲು, ಜನಪದ ಆಟಗಳು ಉತ್ತರ ಕರ್ನಾಟಕ ತುಂಬ ಬೆಳಯಲು ಕಾರಣ ವಿಜಯಪುರ ಜಿಲ್ಲೆಯ ರಂಗ ಕಲಾವಿದರು ಅದೃಷ್ಯಪ್ಪ ಮಾನ್ವಿ ಅಂತಹ ಕಲಾವಿದರ ಹುಟ್ಟುರು ವಿಜಯಪುರ ಜಿಲ್ಲೆಯಾಗಿದೆ ಎಂದರು.
ವೇದಿಕೆ ಮೇಲೆ ದತ್ತಿ ದಾನಿಗಳಾದ ವಿವೇಕ ಹುಂಡೇಕಾರ, ವಿಜಯ ಹುಂಡೇಕಾರ, ಎಂ ಎ ಅವಟಿ ದತ್ತಿ ಸಂಚಾಲಕರಾಸ ರಾಜಾಸಾಹೇಬ ಶಿವನಗುತ್ತಿ ಉಪಸ್ಥಿತಿತರಿದ್ದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಸಿಂಪೀರ ವಾಲೀಕಾರ ಸ್ವಾಗತಿಸಿ ಪರಿಚಯಿಸಿದರು. ಪ್ರಾಸ್ತಾವಿಕವಾಗಿ ಸುಖದೇವಿ ಅಲಬಾಳಮಠ ಮಾತನಾಡಿದರು. ಕಾರ್ಯಕ್ರಮ ದಲ್ಲಿ ವಿಜಯಪುರ ನಗರ ಘಟಕ ಅಧ್ಯಕ್ಷೆ ಅನ್ನಪೂರ್ಣ ಬೆಳ್ಳಣ್ಣವರ, ತಿಕೋಟಾ ತಾಲೂಕ ಅಧ್ಯಕ್ಷ ಸಿದ್ದ್ರಾಮಯ್ಯ ಲಕ್ಕುಂಡಿಮಠ, ಕಮಲಾ ಮುರಾಳಿ, ವಿದ್ಯಾವತಿ ಅಂಕಲಗಿ, ರಜಾಕ ಮುಲ್ಲಾ, ರಮೇಶ ಜಾದವ , ಜಿ ಎಸ್ ಬಳ್ಳೂರ , ರಾಮನಗೌಡ ಪಾಟೀಲ, ಸುನೀಲ್ ಒಣರೊಟ್ಟಿ, ಶಾಂತಾ ವಿಭೂತಿ, ಎಸ್ ಜಿ ಜಂಗಮಶೆಟ್ಟಿ, ಕೆ ಎಫ್ ಅಂಕಲಗಿ, ಗಂಗಮ್ಮ ರೆಡ್ಡಿ, ಎ ಜಿ ಪಾಟೀಲ, ಅಲಿಸಾಬ ಕಡಕೆ, ಅಹ್ಮದ ವಾಲೀಕಾರ, ಎಂ ಎಂ ಅಂದಾನಿಮಠ, ಅನಿತಾ ಕಾಂಬಳೆ, ಈರಣ್ಣಾ ಮಾಮನೆ,
ಶರಣಪ್ಪ ಬಿರಾದಾರ ಮುಂತಾದದವರು ಉಪಸ್ಥಿತರಿದ್ದರು.
ಮಹಾದೇವಿ ತೆಲಗಿ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

