Author: editor.udayarashmi@gmail.com

ಮುದ್ದೇಬಿಹಾಳ: ಸತತ ಪ್ರಯತ್ನದಿಂದ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಹೇಳಿದರು.ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ದಕ್ಷಿಣ ವಲಯ ಮಟ್ಟದ ಕ್ರೀಡಾ ಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕ್ರೀಡೆ ನ್ಯಾಯಯುತವಾಗಿರಬೇಕು. ಕ್ರೀಡೆಯಲ್ಲಿ ಆಸಕ್ತಿ ಮತ್ತು ಅಭಿರುಚಿಯನ್ನು ತೋರಿಸಬೇಕು. ಆಗಲೇ ಮಗುವಿನ ಮುಂದಿನ ಭವಿಷ್ಯದ ಔದ್ಯೋಗಿಕ ರಂಗದಲ್ಲಿ ಸಹಕಾರಿಯಾಗುತ್ತದೆ ಎಂದರು.ಸಂಸ್ಥೆಯ ಕಾರ್ಯದರ್ಶಿ ಪ್ರಭು ಎಸ್.ಕಡಿ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕ್ರೀಡಾಕೂಟದಲ್ಲಿ ಬಾಲಕರ ಕಬಡ್ಡಿಯಲ್ಲಿ ಎಸ್.ಎಸ್.ಎಮ್ ಪ್ರೌಢ ಶಾಲೆ ಪ್ರಥಮ, ಬಾಲಕೀಯರ ಕಬಡ್ಡಿಯಲ್ಲಿ ಜ್ಞಾನ ಭಾರತಿ ಪ್ರೌಢ ಶಾಲೆ ಪ್ರಥಮ, ಬಾಲಕರ ಮತ್ತು ಬಾಲಕೀಯರ ಖೋಖೋದಲ್ಲಿ ಸಂತ ಕನಕದಾಸ ಪ್ರೌಢ ಶಾಲೆ ಪ್ರಥಮ, ಬಾಲಕರ ವಾಲಿಬಾಲ್ ನಲ್ಲಿ ಟಿ.ಎಸ್.ಎಸ್. ಪ್ರೌಢ ಶಾಲೆ ಪ್ರಥಮ, ಬಾಲಕೀಯರ ವಾಲಿಬಾಲ್ ನಲ್ಲಿ ಸರಕಾರಿ ಪ್ರೌಢ ಶಾಲೆ ಪ್ರಥಮ ಸ್ಥಾನಗಳಿಸಿ ತಾಲೂಕಾ ಮಟ್ಟಕ್ಕೆ ಆಯ್ಕೆಯಾದರು.ಈ ವೇಳೆ ದೈಹಿಕ ಪರಿವೀಕ್ಷಕ ಬಿ.ವಾಯ್.ಕವಡಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಮ್.ಎಮ್.ಬೆಳಗಲ್, ಶಿಕ್ಷಣ ಸಂಯೋಜಕಿ…

Read More

ಬಸವನಬಾಗೇವಾಡಿ: ಪಟ್ಟಣದ ಕಾಳಹಸ್ತೇಶ್ವರಮಠದ ಹತ್ತಿರವಿರುವ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಶ್ರದ್ಧಾ-ಭಕ್ತಿಯಿಂದ ವೀರಭದ್ರೇಶ್ವರ ಜಯಂತಿಯನ್ನು ಆಚರಿಸಲಾಯಿತು.ಬೆಳಗ್ಗೆ ವೀರಭದ್ರೇಶ್ವರ ಜಯಂತಿಯಂಗವಾಗಿ ವೀರಭದ್ರೇಶ್ವರ ದೇವರಿಗೆ ರುದ್ರಾಭಿಷೇಕ, ವಿಶೇಷ ಪೂಜೆ ನೆರವೇರಿಸಲಾಯಿತು. ವೀರಭದ್ರೇಶ್ವರ ಜಯಂತ್ಯೋತ್ಸವದಂಗವಾಗಿ ಬೆಳಗ್ಗೆ ದೇವಸ್ಥಾನದಿಂದ ಮೆರವಣಿಗೆ ಮೂಲಕ ಬಸವೇಶ್ವರ ದೇವಸ್ಥಾನದ ಬಸವ ತೀರ್ಥ ಬಾವಿಗೆ ತೆರಳಿ ಗಂಗಾಸ್ಥಳ ಮುಗಿಸಿಕೊಂಡು ಬಂದ ನಂತರ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸುವರ್ಣಾ ಕಾಳಹಸ್ತೇಶ್ವರಮಠ, ಜಯಶ್ರೀ ಕಾಳಹಸ್ತೇಶ್ವರಮಠ ಸಮ್ಮುಖದಲ್ಲಿ ವಿವಿಧ ಸುಮಂಗಲೆಯರು ವೀರಭದ್ರೇಶ್ವರ ದೇವರ ತೊಟ್ಟಿಲೋತ್ಸವ ಕಾರ್ಯಕ್ರಮ ನಡೆಸಿಕೊಟ್ಟರು. ತೊಟ್ಟಿಲೋತ್ಸವದಲ್ಲಿ ಅನುಸೂಯಾ ಹಡಪದ, ಲಕ್ಷ್ಮೀಬಾಯಿ ಹಡಪದ, ಸವಿತಾ ಮುಳವಾಡ, ಪ್ರೀತಿ ಜಾಡರ, ಸುಮಿತ್ರಾ ನಾಗೂರ, ಭಾರತಿ ಹಂಜಗಿ ಸೇರಿದಂತೆ ಓಣಿಯ ಎಲ್ಲ ತಾಯಂದಿರು ಭಾಗವಹಿಸಿದ್ದರು.ನಂತರ ಜರುಗಿದ ಕಾರ್ಯಕ್ರಮವನ್ನು ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಪಂಚಾಕ್ಷರಿ ಕಾಳಹಸ್ತೇಶ್ವರಮಠ ಉದ್ಘಾಟಿಸಿದರು.ಸಾನಿಧ್ಯ ವಹಿಸಿದ್ದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳಿಂದ ಜನರಿಗೆ ನೆಮ್ಮದಿ, ಶಾಂತಿ ಸಿಗುತ್ತದೆ. ಪದೇ ಪದೇ ಇಂತಹ ಕಾರ್ಯಕ್ರಮಗಳು ಜರುಗುತ್ತಿರಬೇಕು. ಇಂದಿನ ಮಕ್ಕಳಿಗೆ ಆಧ್ಯಾತ್ಮಿಕ ಸಂಸ್ಕಾರ ನೀಡುವ ಮೂಲಕ ಅವರಲ್ಲಿ ದೈವ ಭಕ್ತಿಯನ್ನು…

Read More

ಬಸವನಬಾಗೇವಾಡಿ: ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ(ಬಸವೇಶ್ವರ) ದೇವರ ಜಾತ್ರಾಮಹೋತ್ಸವ, ಶ್ರಾವಣ ಮಾಸದಂಗವಾಗಿ ಒಂದು ತಿಂಗಳ ಕಾಲ ಹಮ್ಮಿಕೊಂಡಿದ್ದ ಬಸವಾದಿ ಪ್ರಮಥರ ವಚನ-ಚಿಂತನ ಪ್ರವಚನ ಮಂಗಲೋತ್ಸವದಂಗವಾಗಿ ಬುಧವಾರ ಸಂಜೆ ಜರುಗಿದ ಮೂಲನಂದೀಶ್ವರ(ಬಸವೇಶ್ವರ) ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ದೇವಸ್ಥಾನದ ಆವರಣದಲ್ಲಿ ಬಾಗಲಕೋಟ ತೋಟಗಾರಿಕೆ ವಿಶ್ವವಿದ್ಯಾಲಯ ಕುಲಸಚಿವ, ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಆಯುಕ್ತ ಮಹಾದೇವ ಮುರಗಿ ಚಾಲನೆ ನೀಡಿದರು.ದೇವಸ್ಥಾನದದಿಂದ ಆರಂಭಗೊಂಡ ಪಲ್ಲಕ್ಕಿ ಉತ್ಸವವು ಬಸವೇಶ್ವರ ವೃತ್ತ, ಅಗಸಿ ಮಾರ್ಗವಾಗಿ ಗ್ರಾಮದೇವತೆ ದೇವಸ್ಥಾನ, ಬಸವಜನ್ಮ ಸ್ಮಾರಕ ರಸ್ತೆ, ಅಶ್ವಥಾಂಜನೇಯ ದೇವಸ್ಥಾನ ರಸ್ತೆ, ಹಳ್ಳೆ ಪಲ್ಲೇಕಟ್ಟಿ, ಸಾರಂಗಮಠದ ಬಾವಿ ರಸ್ತೆ, ಕೊಡೆಕಲ್ಲ ಬಸವೇಶ್ವರ ದೇವಸ್ಥಾನದ ರಸ್ತೆ ಮಾರ್ಗವಾಗಿ ಪುನಃ ಅಗಸಿ, ಬಸವೇಶ್ವರ ವೃತ್ತ ಮಾರ್ಗವಾಗಿ ಬರುವ ಮೂಲಕ ದೇವಸ್ಥಾನಕ್ಕೆ ಆಗಮಿಸಿತು. ಪಲ್ಲಕ್ಕಿಯಲ್ಲಿ ಉತ್ಸವ ನಂದಿ ಮೂರ್ತಿಯೊಂದಿಗೆ ವಚನ ಗ್ರಂಥಗಳ ಕಟ್ಟು ಮೆರವಣಿಗೆ ಮಾಡಲಾಯಿತು. ಪಲ್ಲಕ್ಕಿ ಉತ್ಸವ ಮಾರ್ಗದಲ್ಲಿ ಭಕ್ತರು ದೇವರಿಗೆ ಕಾಯಿ, ಸಕ್ಕರೆ, ಕರ್ಪೂರ ಅರ್ಪಿಸಿ ಭಕ್ತಿ ಸಮರ್ಪಿಸಿದರು.ಪಲ್ಲಕ್ಕಿ ಉತ್ಸವ ಮೆರವಣಿಗೆಯಲ್ಲಿ ಮುಖಂಡರಾದ ಈರಣ್ಣ ಪಟ್ಟಣಶೆಟ್ಟಿ, ಭರತು ಅಗರವಾಲ,ಬಸವರಾಜ ಹಾರಿವಾಳ,…

Read More

ಬಸವನಬಾಗೇವಾಡಿ: ಯುವಜನಾಂಗ ಮೊಬೈಲ್ ಗೀಳಿಗೆ ಸಿಲುಕಿ ತಮ್ಮ ಸುಂದರ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವದು ವಿಷಾಧನಿಯ. ಕೆಟ್ಟ ಸಂಸ್ಕೃತಿ ಬೆಳೆಸಿಕೊಳ್ಳದೇ ಶರಣ ಸಂಸ್ಕೃತಿಯನ್ನು ರೂಢಿಸಿಕೊಂಡು ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸಿಕೊಂಡರೆ ಸದೃಢ ಸಮಾಜ ನಿರ್ಮಾಣವಾಗಲು ಸಾದ್ಯವಾಗುತ್ತದೆ ಎಂದು ಡಿವೈಎಸ್ಪಿ ಬಲ್ಲಪ್ಪ ನಂದಗಾವಿ ಹೇಳಿದರು.ತಾಲೂಕಿನ ಇಂಗಳೇಶ್ವರ ಗ್ರಾಮದ ಮಾದಲಾಂಬಿಕೆ ಸ್ಮಾರಕ ಭವನದಲ್ಲಿ ಮಂಗಳವಾರ ಸಂಜೆ ಶ್ರಾವಣ ಮಾಸದಂಗವಾಗಿ ಹನ್ನೊಂದು ದಿನಗಳ ಕಾಲ ಹಮ್ಮಿಕೊಂಡಿದ್ದ ಪ್ರವಚನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮನದ ಮೈಲಿಗೆಯನ್ನು ಹೋಗಲಾಡಿಸಿಕೊಳ್ಳಲು ಶರಣರ ವಚನಾಮೃತ ಆಲಿಸಿ ಪ್ರತಿಯೊಬ್ಬರೂ ಸುಂದರ ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂದರು.ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸುವ ಮೂಲಕ ಎಲ್ಲ ಸಮುದಾಯದ ಶರಣರನ್ನು ಒಂದೆಡೆ ಸೇರಿಸಿ ಸಮಾನತೆಯನ್ನು ತಂದರು. ಮಾನವರಲ್ಲಿ ಮೇಲು ಕೀಳು ಎಂಬುವುದಿಲ್ಲ. ಹುಟ್ಟಿನಿಂದ ಯಾರು ಜಾತಿಯನ್ನು ಪಡೆದುಕೊಂಡು ಬಂದಿಲ್ಲ. ಕಾಯಕದ ಆಧಾರದಮೇಲೆ ಜಾತಿಗಳು ಹುಟ್ಟಿಕೊಂಡಿವೆ ಎಂದು ಹೇಳಿದರು.ಸಾನಿಧ್ಯ ವಹಿಸಿದ್ದ ಚನ್ನಬಸವ ಸ್ವಾಮೀಜಿ ಮಾತನಾಡಿ, ಇಂಗಳೇಶ್ವರ ಗ್ರಾಮದಲ್ಲಿ ಹಲವಾರು ಶರಣರು ಜನಿಸಿದ್ದಾರೆ. ಇಂತಹ ಪವಿತ್ರ ಭೂಮಿಯಲ್ಲಿ…

Read More

ಯಡ್ರಾಮಿ: ಕಲಬುರಗಿ ಜಿಪಂ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ 2024-25 ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ (2024-25) ಯಡ್ರಾಮಿ ತಾಲೂಕಿನ ಮಳ್ಳಿ (ಗಾಂಧಿ ನಗರ) ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ನಿಂಗಣ್ಣ ರೂಗಿ ಭಾಜನರಾಗಿದ್ದಾರೆ.ಹರ್ಷ: ಶಿಕ್ಷಕ ನಿಂಗಣ್ಣ ರೂಗಿ ಸಾಧನೆಗೆ ಮಳ್ಳಿ ಸಿ.ಆರ್.ಪಿ ಪ್ರಶಾಂತ ಕುನ್ನೂರ, ಶಾಲೆಯ ಮುಖ್ಯ ಶಿಕ್ಷಕಿ ಗಂಗೂಬಾಯಿ ಆಳೂರ, ಎಸ್.ಡಿ.ಎಮ್.ಸಿ ಅಧ್ಯಕ್ಷ ಸಂತೋಷ ಗಡ್ಡಾಳೆ, ಗ್ರಾಪಂ ಅಧ್ಯಕ್ಷೆ ಖಾದರಬೀ ರಾಜೇಸಾಬ್ ಗುಡಿಮನಿ, ಗ್ರಾಪಂ ಸದಸ್ಯ ಕಂಠೆಪ್ಪ ಪೂಜಾರಿ ಚೊಣ್ಣಿ ಹಾಗೂ ನಿಂಗಣ್ಣ ಲಕ್ಕೊಂಡ, ಗುತ್ತಪ್ಪ ಸಾಸನೂರ, ಶ್ರೀಶೈಲ ನಾಗಾವಿಮಠ, ನಾಗೇಶ ಪಾಟೀಲ, ಸುಖಮುನಿ ನಾಗಾವಿಮಠ, ಗಂಗಣ್ಣ ಹಾದಿಮನಿ, ಹಸನ್ ಸಾಬ್, ಅಲ್ಲಾಬಕ್ಷ ಹರ್ಷ ವ್ಯಕ್ತಪಡಿಸಿದ್ದಾರೆ.

Read More

ಇಂಡಿ: ತಾಲೂಕು ಸೇರಿದಂತೆ ಸಿಂದಗಿ, ದೇವರ ಹಿಪ್ಪರಗಿ, ಆಲಮೇಲ ಮತ್ತು ಚಡಚಣ ತಾಲೂಕಿನಲ್ಲಿ ಸಂಭವಿಸಿರುವ ರೈತ ಆತ್ಮಹತ್ಯೆ ಪ್ರಕರಣ ಬೇಗ ಇತ್ಯರ್ಥ ಪಡಿಸಿ ಅವರಿಗೆ ಪರಿಹಾರ ಒದಗಿಸಬೇಕೆಂದು ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.ಪಟ್ಟಣದ ಮಿನಿ ವಿಧಾನಸೌಧದ ಕಂದಾಯ ಉಪ ವಿಬಾಗಾಧಿಕಾರಿ ಕಚೇರಿಯ ಸಬಾಭವನದಲ್ಲಿ ಬುಧವಾರ ನಡೆದ ರೈತ ಆತ್ಮಹತ್ಯೆಗಳ ಕುರಿತು ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.ರೈತ ಆತ್ಮಹತ್ಯೆ ಪ್ರಕರಣ ನಡೆದರೆ ಬೇಗ ದಾಖಲೆ ಪಡೆದು ಬೇಗ ಪರಿಹಾರ ಸಿಗುವಂತೆ ಪ್ರಯತ್ನಿಸಬೇಕು ಎಂದರು.ರೈತರ ಆತ್ಮಹತ್ಯೆ ಪ್ರಕರಣದ ಅಂತಿಮ ವರದಿ ಪೋಲಿಸ ಇಲಾಖೆ ೧೫ ದಿವಸದ ಒಳಗಾಗಿ ಕಂದಾಯ ಇಲಾಖೆ ಕಚೇರಿಗೆ ತಲುಪಿಸಲು ಕೇಳಿಕೊಂಡರು.ರೈತ ಆತ್ಮಹತ್ಯೆಯಾದರೆ ಐದು ಲಕ್ಷ ರೂ ಪರಿಹಾರ ಮತ್ತು ಕೃಷಿ ಚಟುವಟಿಕೆಯಲ್ಲಿ ತೊಡಗಿದಾಗ ಆಕಸ್ಮಿಕ ಮರಣ ಹೊಂದಿದರೆ ಎರಡು ಲಕ್ಷ ರೂ ಪರಿಹಾರ ನೀಡಲಾಗುತ್ತದೆ ಎಂದರು.ಇಂಡಿಯ ನಾಲ್ಕು ಸೇರಿದಂತೆ ಒಟ್ಟು ೯ ಆತ್ಮಹತ್ಯೆ ಪ್ರಕರಣ ಇಂದು ಇತ್ಯರ್ಥ ಪಡಿಸಲಾಯಿತು.ಅದಲ್ಲದೆ ಹಾವು ಕಡಿದು ಮರಣ ಹೊಂದಿದ ಎರಡು ರೈತರ ಮತ್ತು ಕೃಷಿ…

Read More

ಇಂಡಿ: ತಾಲೂಕಿನ ನಾದ ಕೆಡಿ ಗ್ರಾಮದ ಸರಕಾರಿ ಪ್ರೌಢಶಾಲೆಯ ವಿಜ್ಞಾನ ವಿಷಯದ ಶಿಕ್ಷಕಿ ಶಶಿಕಲಾ ಲಕ್ಷ್ಮಣ ಬಡಿಗೇರ ರಾಜ್ಯ ಪ್ರಶಸ್ತಿ ದೊರೆತಿದೆ.ಅವರಿಗೆ ಇಂದು ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.ಶಶಿಕಲಾ ಇವರ ಮಾರ್ಗದರ್ಶನದಲ್ಲಿ ಮಾಡಿದ ಕ್ರಾಪ್ ಕಟರ್ ಮಾದರಿ ರಾಷ್ಟ್ರ ಮಟ್ಟದ ಇನ್ ಸ್ಪಾಯರ್ ಆವಾರ್ಡ ಸ್ಪರ್ಧೇಯಲ್ಲಿ ರಾಷ್ಟ್ರಕ್ಕೆ ಪ್ರಥಮ ಸ್ಥಾನ ಪಡೆದು ಪ್ರಶಸ್ತಿ ಪಡೆದುಕೊಂಡಿದ್ದಾರೆ.ಅವರನ್ನು ಶಾಲೆಯ ಮುಖ್ಯೋಪಾಧ್ಯಾಯ ಚಿದಂಬರ ಬಂಡಗರ ಮತ್ತು ಸಿಬ್ಬಂದಿ ಅಭಿನಂದಿಸಿದ್ದಾರೆ.

Read More

ಇಂಡಿ ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯ ದೇವೆಂದ್ರ ಸಲಹೆ ಇಂಡಿ: ಪಟ್ಟಣದ ಪುರಸಭೆಯ ಸಾಮಾನ್ಯ ಸಭೆಯು ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ ಇವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.ಪುರಸಭೆ ಸದಸ್ಯ ದೇವೆಂದ್ರ ಕುಂಬಾರ ಮಾತನಾಡಿ, ಆಶ್ರಯ ಯೋಜನೆ ಅಡಿ ನಿವೇಶನ ಹಂಚಲು ೧೫ ವರ್ಷಗಳಿಂದ ಇಲ್ಲಿಯ ವರೆಗೆ ಪುರಸಭೆಯಿಂದ ಜಮೀನು ಖರೀದಿಸಿಲ್ಲ. ಬಡ ಕುಟುಂಬಗಳಿಗೆ ಜಮೀನು ಹಂಚಲು ಜಮೀನು ಖರೀದಿಸಲು ಕೇಳಿಕೊಂಡರು.ಅದಲ್ಲದೆ ಇಂಡಿಯ ಹಳ್ಳವು ಪೂರ್ಣ ಪ್ರಮಾಣದಲ್ಲಿ ಅತಿಕ್ರಮಣ ಮಾಡಿದ್ದು ಹಂಜಗಿ ರಸ್ತೆಯಿಂದ ಸ್ಮಶಾನದ ವರೆಗೆ ಪೂರ್ಣ ಸ್ಥಳವನ್ನು ಸರ್ವೇ ಮಾಡಿ ಅತಿಕ್ರಮಣ ತೆರವುಗೊಳಿಸಲು ಸದಸ್ಯ ದೇವೆಂದ್ರ ಕುಂಬಾರ ಸಭೆಯ ಗಮನಕ್ಕೆ ತಂದರಲ್ಲದೆ, ಬೇಗ ಸರ್ವೇ ಮಾಡಲಿಕ್ಕೆ ಒತ್ತಾಯಿಸಿದರು.ಸದಸ್ಯ ಅಯೂಬ ಬಾಗವಾನ ಮಾತನಾಡಿ, ವಾರ್ಡ ೧೭ ರಲ್ಲಿ ನಗರೋತ್ಥಾನ ಹಂತ ೪ ರ ಕಾಮಗಾರಿಯಲ್ಲಿ ಗಟಾರು ತೆರೆದು ಹಾಗೆಯೇ ಬಿಟ್ಟಿದ್ದು, ಯುಜಿಡಿ ಹಾಗೂ ನೀರು ಪೂರೈಕೆ ಕನೆಕ್ಷನ್ ಒಡೆದಿದ್ದು ಕಾಮಗಾರಿ ಪೂರ್ಣಗೊಳಿಸುವ ಕುರಿತು, ಸದಸ್ಯ ಇಸ್ಮಾಯಿಲ್ ಅರಬ ನಗರೋತ್ಥಾನ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ…

Read More

ಮುದ್ದೇಬಿಹಾಳ: ತಾಲೂಕಿನ ಕೊಳೂರ ಗ್ರಾಮದ ಶಿರೋಳ ಕ್ರಾಸ್ ಬಳಿ ಧಾಬಾದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಮಧ್ಯ ಮಾರಾಟ ಮಾಡುತ್ತಿದ್ದವನ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ರಾಜಾಭಕ್ಷ ಸದಾಫ ಮೇಲೆ ಪ್ರಕರಣ ದಾಖಲಾಗಿದ್ದು ಬಿಸ್ಮಿಲ್ಲಾ ಧಾಭಾದ ಎದುರು ಗ್ಲಾಸು ನೀರು ಹಾಗೂ ತಿನಿಸು ಕೊಟ್ಟು ಮಧ್ಯ ಸೇವನೆಗೆ ಅವಕಾಶ ಕೊಟ್ಟ ಆರೋಪದಡಿ ಸಂಜಯ ತಿಪರೆಡ್ಡಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.

Read More