Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಇಂಡಿ: ಸುಂದರ ಕೈಬರಹವು ಅಂಕ ಗಳಿಕೆಗೆ ಸಹಾಯ ಮಾಡುವದಲ್ಲದೇ ಕಲಿಕೆ ಮತ್ತು ಮಿದುಳಿನ ಅಭಿವೃದ್ಧಿಗೆ ನೆರವಾಗುವ ಒಂದು ಕೌಶಲವಾಗಿದ್ದು, ಅದು ವ್ಯಕ್ತಿಯ ತಿಳುವಳಿಕೆಯನ್ನು ಸುಧಾರಿಸುತ್ತದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ಅವರು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಗುರುವಾರದಂದು ವಿಶ್ವ ಕೈಬರಹ ದಿನವನ್ನು ಉದ್ದೇಶಿಸಿ ಮಾತನಾಡಿದರು.ವಿದ್ಯಾರ್ಥಿಗಳು ಉತ್ತಮ ಕೈಬರಹ ಕೌಶಲ್ಯದಿಂದ ಸಂತೋಷ, ಆತ್ಮವಿಶ್ವಾಸ ಮತ್ತು ಸ್ಫೂರ್ತಿಯನ್ನು ಪಡೆಯುತ್ತಾರೆ. ಉತ್ತಮ ಕೈಬರಹವು ಮಕ್ಕಳ ಜೀವನದಲ್ಲಿ ಆತ್ಮ ವಿಶ್ವಾಸ, ಸೃಜನಶೀಲತೆ, ಕಲಿಕೆ ಮತ್ತು ಜ್ಞಾಪಕಶಕ್ತಿ ಹೆಚ್ಚಿಸುತ್ತದೆ. ಹಾಗಾಗಿ ಮಕ್ಕಳು ಸುಂದರವಾಗಿ ಬರೆಯುವ ರೂಢಿ ಮಾಡಬೇಕು ಎಂದು ಹೇಳಿದರು.ಶಿಕ್ಷಕಿ ಎನ್ ಬಿ ಚೌಧರಿ ಮಾತನಾಡಿ,ಕೈಬರಹವು ಭಾಷೆ, ಚಲನೆ, ಸ್ಮರಣೆ ಹಾಗೂ ಓದುವಿಕೆಗೆ ಸಂಬಂಧಿಸಿದ ಮಿದುಳಿನ ನರಗಳನ್ನು ಸಕ್ರಿಯಗೊಳಿಸುತ್ತದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಎಸ್ ಎಸ್ ಅರಬ ಮಾತನಾಡಿ, ನಾವು ಬರೆದ ಅಕ್ಷರದ ಗಾತ್ರಗಳು, ಪದಗಳ ಅಂತರ, ಅಕ್ಷರ ರೂಪಗಳು ನಮ್ಮ ಪ್ರಾಮಾಣಿಕತೆ, ಏಕಾಗ್ರತೆ, ಭಾವನಾತ್ಮಕ ಸ್ಥಿರತೆ, ಕೆಲಸ ನಿರ್ವಹಿಸುವ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಗ್ರಾಮ ಸೇವಾ ಸಾಮಾಜಿಕ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಸಂಸ್ಥೆ ಇಂಡಿ ಮತ್ತು ಸಮಾಜ ಕಲ್ಯಾಣ ಇಲಾಖೆ ಇಂಡಿ ಇವರ ಸಹಯೋಗದಲ್ಲಿ ಇಂಡಿ ತಾಲೂಕಿನ ಅಥರ್ಗಾ, ತಡವಲಗಾ ಮತ್ತು ತಾಂಬಾ ಗ್ರಾಮಗಳಲ್ಲಿ ಅಸ್ಪೃಶ್ಯತಾ ನಿವಾರಣೆ ಕುರಿತು ಬೀದಿ ನಾಟಕ ಮೂಲಕ ಜಾಗೃತಿ ಗೊಳಿಸಿದರು.ಬೀದಿ ನಾಟಕದಲ್ಲಿ ಇಂಡಿಯ ಸತೀಶ ಚವ್ಹಾಣ, ವಿನೋದ ಇಂಡಿ, ಹೊಸಪೇಟೆಯ ಗೋವಿಂದ ಬಂಡಿಹಳ್ಳಿ, ಹನುಮಯ್ಯ ವೆಂಕಟಾಪುರ,ಮಮತಮ್ಮ ತುಮಕುರ,ಹಿರಣ್ಯ ವಿಜಯಪುರ, ಮಂಜುನಾಥ ತುಮಕೂರ, ಪೂರ್ಣೀಮಾ ಬೈಲಹೊಂಗಲ ಭಾಗವಹಿಸಿದ್ದರು.ವಿಜಯಪುರ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿದೇರ್ಶಕ ಪುಂಡಲೀಕ ಮಾನವರ, ಇಂಡಿ ತಾಲೂಕಾ ಸಮಾಜ ಕಲ್ಯಾಣ ನಿದೇರ್ಶಕ ಉಮೇಶ ಲಮಾಣಿ ಭಾಗವಹಿಸಿದ್ದರು.
ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಸುರೇಶ ಕಾಂಬಳೆ ಇವರನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವಿಜಯಪುರ ಜಿಲ್ಲಾ ಸಂಚಾಲಕರಾಗಿ ಆಯ್ಕೆ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷ ರಾಜು ತಳವಾರ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಹೊರವಲಯದ ಇಟ್ಟಂಗಿ ಭಟ್ಟಿಯಲ್ಲಿ ಕೂಲಿ ಕಾರ್ಮಿಕರ ಮೇಲೆ ನಡೆದ ಮಾರಣಾಂತಿಕ ಹಲ್ಲೆಗೊಳಗಾದ ಕಾರ್ಮಿಕರನ್ನು ಜಿಲ್ಲಾಸ್ಪತ್ರೆಯಲ್ಲಿ ಇಂದು ವಿಜಯಪುರ ಜಿಲ್ಲಾ ಪರಿಶಿಷ್ಟ ಜಾತಿ ಘಟಕದ ವತಿಯಿಂದ ಭೇಟಿಯಾಗಿ ಸಾಂತ್ವನ ಹೇಳಲಾಯಿತು.ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ರಮೇಶ ಗುಬ್ಬೇವಾಡ ಮಾತನಾಡಿ, ಅಮಾಯಕ ಕಾರ್ಮಿಕರ ಮೇಲೆ ದೌರ್ಜನ್ಯ ಎಸಗಿರುವ ಇಟ್ಟಂಗಿ ಭಟ್ಟಿ ಮಾಲಿಕನಿಗೆ ಗಡಿಪಾರು ಮಾಡಬೇಕು. ಅವನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಈ ರೀಇಯ ಘಟನೆಗಳು ಮರುಕಳಿಸದಂತೆ ಸರಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಕಾರ್ಮಿಕರಿಗೆ ಸೂಕ್ತ ರಕ್ಷಣೆಯನ್ನು ಒದಗಿಸಬೇಕೆಂದು ಆಗ್ರಹಿಸಿದರು.ವಿಜಯಪುರ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುಭಾಷ ಕಾಲೇಬಾಗ, ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಮಾಧ್ಯಮ ವಕ್ತಾರ ಸಂಜೀವ ಚವ್ಹಾಣ ಮಾತನಾಡಿ, ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ನೊಂದ ಕಾರ್ಮಿಕರಿಗೆ ಸೂಕ್ತ ನ್ಯಾಯ ಒದಗಿಸಬೇಕೆಂದು ಹೇಳಿದರು.ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯೆ ಆರತಿ ಶಹಾಪೂರ, ರಾಘವೇಂದ್ರ ವಡವಡಗಿ, ಮಲ್ಲಿಕಾರ್ಜುನ ಮಡ್ಡಿಮನಿ, ಲಕ್ಷ್ಮಣ ಚಲವಾದಿ, ವಿಠ್ಠಲ ಸಂದಿಮನಿ, ಪರಶುರಾಮ ಪಾರಣ್ಣವರ,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ “ಮಗಳನ್ನು ರಕ್ಷಿಸಿ ಮಗಳನ್ನು ಓದಿಸಿ” (ಬೇಟಿ ಪಡಾವೋ ಬೇಟಿ ಬಚಾವೋ) ಯೋಜನೆಯು ೧೦ ವರ್ಷ ಪೂರ್ಣವಾದ ಹಿನ್ನಲೆಯಲ್ಲಿ ವಿನೂತನವಾಗಿ ದಶಮಾನೋತ್ಸವ ಸರಣಿ ಕಾರ್ಯಕ್ರಮವನ್ನು ಬುಧವಾರ ಆಯೋಜಿಸಲಾಗಿತ್ತು.ಜಿಲ್ಲಾಧಿಕಾರಿ ಟಿ.ಭೂಬಾಲನ್ ಹಾಗೂ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ರಿಷಿ ಆನಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, “ಮಗಳನ್ನು ರಕ್ಷಿಸಿ ಮಗಳನ್ನು ಓದಿಸಿ” ಪ್ರತಿಜ್ಞಾ ವಿಧಿ ಬೋಧಿಸಿ, ಬೈಕ್ ರ‍್ಯಾಲಿಗೆ ಚಾಲನೆ ನೀಡಿದರು.ಜಿಲ್ಲಾಧಿಕಾರಿ ಟಿ.ಭೂಬಾಲನ್ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿ, ಲಿಂಗ ಪಕ್ಷಪಾತ ಹಾಗೂ ಲಿಂಗ ಆಯ್ಕೆ ಮಾಡುವುದನ್ನು ತಡೆಗಟ್ಟಬೇಕು. ಹೆಣ್ಣು ಮಕ್ಕಳ ಉಳಿವು ಮತ್ತು ಅವರ ರಕ್ಷಣೆ ಮಾಡಿ ಹೆಣ್ಣು ಲಿಂಗಾನುಪಾತ ಅಸಮಾನತೆ ತಡೆಯಬೇಕು ಹಾಗೂ ಹೆಣ್ಣು ಮಗುವಿಗೆ ಶಿಕ್ಷಣ ದೊರೆಯುತ್ತಿರುವ ಬಗ್ಗೆ ಖಾತ್ರಿ ಪಡೆಸಿಕೊಳ್ಳುವಂತೆ ರ‍್ಯಾಲಿಯಲ್ಲಿ ಅವರು ಹೇಳಿದರು.ಪ್ರತಿ ವರ್ಷ ಶೇಕಡಾ ೦೨% ರಷ್ಟು ಹೆಣ್ಣು ಮಗುವಿನ ಜನನ ಪ್ರಮಾಣದಲ್ಲಿ ಸುಧಾರಣೆ, ಸಾಂಸ್ಥಿಕ ಹೆರಿಗೆ ಪ್ರಮಾಣದಲ್ಲಿ ಶೇಕಡಾ ೯೫% ಕ್ಕಿಂತ ಅಧಿಕಗೊಳಿಸುವುದು,…
ಕಾರ್ಮಿಕರ ಕಲ್ಯಾಣ & ಹಕ್ಕುಗಳ ರಕ್ಷಣೆ ಕುರಿತ ವಿಡಿಯೋ ಸಂವಾದದಲ್ಲಿ ಡಿಸಿ ಟಿ.ಭೂಬಾಲನ್ ಅಧಿಕಾರಿಗಳಿಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿರುವ ಪ್ರತಿಯೊಂದು ಇಟ್ಟಂಗಿ ಭಟ್ಟಿಗಳ ಮಾಹಿತಿ ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚಿಸಿದರು.ಕಾರ್ಮಿಕರ ಕಲ್ಯಾಣ ಮತ್ತು ಹಕ್ಕುಗಳ ರಕ್ಷಣೆ ಕುರಿತು ಗುರುವಾರ ಬೆಳಿಗ್ಗೆ ೯.೩೦ಕ್ಕೆ ನಡೆದ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಇತ್ತೀಚೆಗೆ ನಡೆದ ಇಟ್ಟಂಗಿ ಬಟ್ಟೆಯಲ್ಲಿ ಕಾರ್ಮಿಕರಿಗೆ ಹಲ್ಲೆ ಮಾಡಿದ ಘಟನೆ ಕುರಿತು ಜಂಟಿ ತಪಾಸಣೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.ತಾಲೂಕಿನ ತಹಶೀಲ್ದಾರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಸಮಿತಿಯಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು, ವೃತ್ತ ಆರಕ್ಷಕ ನಿರೀಕ್ಷಿಕರು, ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳು, ಮುಖ್ಯ ಅಧಿಕಾರಿಗಳು/ ಪಟ್ಟಣ ಪಂಚಾಯತಿ ಸದಸ್ಯರನೊಳಗೊಂಡು ಕಾರ್ಮಿಕ ನಿರೀಕ್ಷಕರು ಸದಸ್ಯ ಕಾರ್ಯದರ್ಶಿಗಳಾಗಿ ಕರ್ತವ್ಯ ನಿರ್ವಹಿಸುವಂತೆ ಅವರು ಹೇಳಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಗ ಗೆಣ್ಣೂರ, ಉಪ ವಿಭಾಗಾಧಿಕಾರಿಗಳಾದ ಗುರುನಾಥ ದಡ್ಡಿ, ಅಬಿದ ಗದ್ಯಾಳ, ಜಿಲ್ಲಾ…
೩೬ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಹೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸಲಹೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದೇಶದಲ್ಲಿ ಮಹಾಮಾರಿ ಕೊರೊನಾ ಬಂದಂತಹ ಸಂದರ್ಭದಲ್ಲಿ ಆದ ಸಾವು ನೋವುಗಳಿಗಿಂತ ರಸ್ತೆ ಅಪಘಾತಗಳಿಂದ ಸಂಬವಿಸುತ್ತಿರುವ ಸಾವು ನೋವುಗಳ ಪ್ರಮಾಣವು ಹೆಚ್ಚಾಗುತ್ತಿವೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಕಳವಳ ವ್ಯಕ್ತಪಡಿಸಿದರು.ಗುರುವಾರ ನಗರದ ಕಂದಗಲ್ ಶ್ರೀ ಹನುಂತರಾಯ ರಂಗಮಂದಿರದಲ್ಲಿ ಜಿಲ್ಲಾ ಆಡಳಿತ ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ ೩೬ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಹೆಯ ಕಾರ್ಯಕ್ರಮವನ್ನು ಸಸಿಗೆ ನೀರುನ್ನಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿ, ಕೋವಿಡ ಭಯದಿಂದ ಎರಡೆರಡು ಮಾಸ್ಕ್ ಧರಿಸುತ್ತಿದ್ದ ಜನರು; ರಸ್ತೆ ಅಪಘಾತದ ಭಯವಿಲ್ಲದೆ ಹೆಲ್ಮೇಟ್ ಧರಿಸದೆ ಬೈಕ್ ಸವಾರರು ತಮ್ಮ ಪ್ರಾಣಕ್ಕೆ ಕುತ್ತು ತರುತ್ತಿದ್ದಾರೆ.ದೇಶ ಅಭಿವೃದ್ಧಿಯಾದಂತೆ ರಸ್ತೆಯಲ್ಲಿ ವಾಹನ ದಟ್ಟನೆಗಳು ಹೆಚ್ಚಾಗುತ್ತಿವೆ. ಸಾರ್ವಜನಿಕರು ರಸ್ತೆ ಸುರಕ್ಷತೆಯನ್ನು ಅಳವಡಿಸಿಕೊಂಡು ವಾಹನ ಚಲಾಯಿಸಬೇಕು. ರಸ್ತೆ ಸುರಕ್ಷತೆಯಲ್ಲಿ ಇಲಾಖೆಗಳ ಜವಾಬ್ದಾರಿ ಅಷ್ಟೇ ಅಲ್ಲದೇ ಸಾರ್ವಜನಿಕರ ಜವಾಬ್ದಾರಿಗಳು ಸಹ ಅಷ್ಟೇ ಮಹತ್ವದಾಗಿದೆ ಎಂದು…
ಉದಯರಶ್ಮಿ ದಿನಪತ್ರಿಕೆ ಝಳಕಿ: ಸಮೀಪದ ಲೋಣಿ ಗ್ರಾಮದಲ್ಲಿ ಸಿದ್ದೇಶ್ವರ ಮೂರ್ತಿಯನ್ನು ಜಮಖಂಡಿ ತಾಲೂಕಿನ ಹನಗಂಡಿ ಗ್ರಾಮದಿಂದ ಲೋಣಿ ಬಿ ಕೆ ಗ್ರಾಮದವರೆಗೆ ಶಿವನಿಗೆ ಪ್ರಿಯವಾದ ನಂದಿ ಅಂದರೆ ಎತ್ತಿನ ಗಾಡಿಗಳಲ್ಲಿ ಪದಯಾತ್ರೆಯ ಮೂಲಕ ನೂತನ ಮೂರ್ತಿಗಳನ್ನು ತಂದು ಗ್ರಾಮದ ಮುಖ್ಯ ರಸ್ತೆಯಲ್ಲಿ ಸಾವಿರಾರು ಕುಂಭ ಹೊತ್ತ ಸುಮಂಗಲೆಯರು ಮತ್ತು ವಾದ್ಯ ವೈಭವಗಳೊಂದಿಗೆ ಗ್ರಾಮಕ್ಕೆ ಸ್ವಾಗತಿಸಿ, ದೇವಾಲಯದಲ್ಲಿ ಹೋಮ ಹವನಾದಿ ಕಾರ್ಯಕ್ರಮಗಳನ್ನು ಪ್ರಾರಂಭಿಸಿದ್ದು ಪೆ.3 ಸೋಮವಾರದಂದು ಜಗದ್ಗುರು ಪ್ರಸನ್ನ ರೇಣುಕ ಡಾ.ವೀರ ಸೋಮೇಶ್ವರ ರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಅಡ್ಡಪಲ್ಲಕ್ಕಿ ಉತ್ಸವ ಮತ್ತು ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಧರ್ಮಸಭೆ ನಡೆಯುತ್ತದೆ ಎಂದು ಶ್ರೀ ಸಿದ್ದೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿಯ ಕಾರ್ಯಾಧ್ಯಕ್ಷ ಕೆ ಎಸ್ ಪಾಟೀಲ, ಹಾಗೂ ಎಲ್ಲಾ ಆಡಳಿತ ಮಂಡಳಿಯ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೈಗಾರಿಕೆ, ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಮಮದಾಪುರ ಗ್ರಾಮದಲ್ಲಿ ದಿ.25 ಶನಿವಾರ ಪ್ರವಾಸ ಕೈಗೊಂಡು ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.ಅಂದು ಮ.2ಗಂ. ಮಮದಾಪುರ ಎಂ.ಸಿ.ಆರ್.ಪಿ ಕೇಂದ್ರದಲ್ಲಿ ಸಿ.ಎಸ್.ಆರ್., ಶಾಸಕರ ಮತ್ತು ತಾ.ಪಂ ಅನುದಾನದಲ್ಲಿ ನಿರ್ಮಿಸಿದ ಮೂರು ಶಾಲಾ ಕೊಠಡಿಗಳನ್ನು ಉದ್ಘಾಟಿಸಲಿದ್ದಾರೆ. ನಂತರ ಸಮಾಜಕಲ್ಯಾಣ ಇಲಾಖೆಯಿಂದ ರೂ.50 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಅಂಬೇಡ್ಕರ ಭವನ ಹಾಗೂ ಕೆ.ಬಿ.ಜೆ.ಎನ್.ಎಲ್ ಎಸ್.ಟಿ..ಪಿ ಅನುದಾನದಲ್ಲಿ ರೂ.25 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಖಾಜಾ ಬಾಪುಸಾಹೇಬ್ ಮಠ ಸಮುದಾಯಭವನ ಉದ್ಘಾಟಿಸಲಿದ್ದಾರೆ.ನಂತರ ಮ.2.30ಗಂ. ಟೊಯೊಟಾ ಕಿರ್ಲೋಸ್ಕರ್ ಸಿ.ಎಸ್.ಆರ್. ಅನುದಾನದಲ್ಲಿ ಸರಕಾರಿ ಪದವಿ ಕಾಲೇಜು ಹಾಗೂ ಕಣಮುಚನಾಳ ಸರ್ಕಾರಿ ಪ್ರೌಢಶಾಲೆ ನೂತನ ಕಟ್ಟಡ ನಿರ್ಮಾಣದ ಕಾಮಗಾರಿಗೆ ಸರಕಾರಿ ಪದವಿ ಕಾಲೇಜು ಆವರಣದಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಸಚಿವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಬಲೇಶ್ವರ ಹಾಗೂ ತಿಕೋಟಾ ತಾಲೂಕಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಚ್. ಎಂ. ರೇವಣ್ಣ ಆದೇಶ ಹೊರಡಿಸಿದ್ದಾರೆ.ಬಬಲೇಶ್ವರ ತಾಲೂಕಿನ ಸಂಗಾಪುರ ಎಸ್. ಎಚ್ ಗ್ರಾಮದ ಪ್ರಗತಿಪರ ರೈತ ಮಲ್ಲಪ್ಪ ಗೌಡಪ್ಪ ದಳವಾಯಿ ಮತ್ತು ತಿಕೋಟಾ ತಾಲೂಕಿನ ಬರಟಗಿ ಗ್ರಾಮದ ಪ್ರಗತಿಪರ ರೈತ ಹಾಗೂ ಯುವ ಉದ್ದಿಮೆದಾರ ಗುರುಪಾದಪ್ಪ ಸಿದ್ದನಗೌಡ ದಾಶ್ಯಾಳ ಅವರನ್ನು ಸಚಿವ ಎಂ. ಬಿ.ಪಾಟೀಲ ಅವರ ಶಿಫಾರಸ್ಸಿನ ಮೆರೆಗೆ ತಾಲೂಕಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.ನೂತನ ತಾಲೂಕಾ ಅಧ್ಯಕ್ಷರಿಗೆ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಸಚಿವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
