ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಹೊರವಲಯದ ಇಟ್ಟಂಗಿ ಭಟ್ಟಿಯಲ್ಲಿ ಕೂಲಿ ಕಾರ್ಮಿಕರ ಮೇಲೆ ನಡೆದ ಮಾರಣಾಂತಿಕ ಹಲ್ಲೆಗೊಳಗಾದ ಕಾರ್ಮಿಕರನ್ನು ಜಿಲ್ಲಾಸ್ಪತ್ರೆಯಲ್ಲಿ ಇಂದು ವಿಜಯಪುರ ಜಿಲ್ಲಾ ಪರಿಶಿಷ್ಟ ಜಾತಿ ಘಟಕದ ವತಿಯಿಂದ ಭೇಟಿಯಾಗಿ ಸಾಂತ್ವನ ಹೇಳಲಾಯಿತು.
ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ರಮೇಶ ಗುಬ್ಬೇವಾಡ ಮಾತನಾಡಿ, ಅಮಾಯಕ ಕಾರ್ಮಿಕರ ಮೇಲೆ ದೌರ್ಜನ್ಯ ಎಸಗಿರುವ ಇಟ್ಟಂಗಿ ಭಟ್ಟಿ ಮಾಲಿಕನಿಗೆ ಗಡಿಪಾರು ಮಾಡಬೇಕು. ಅವನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಈ ರೀಇಯ ಘಟನೆಗಳು ಮರುಕಳಿಸದಂತೆ ಸರಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಕಾರ್ಮಿಕರಿಗೆ ಸೂಕ್ತ ರಕ್ಷಣೆಯನ್ನು ಒದಗಿಸಬೇಕೆಂದು ಆಗ್ರಹಿಸಿದರು.
ವಿಜಯಪುರ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುಭಾಷ ಕಾಲೇಬಾಗ, ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಮಾಧ್ಯಮ ವಕ್ತಾರ ಸಂಜೀವ ಚವ್ಹಾಣ ಮಾತನಾಡಿ, ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ನೊಂದ ಕಾರ್ಮಿಕರಿಗೆ ಸೂಕ್ತ ನ್ಯಾಯ ಒದಗಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯೆ ಆರತಿ ಶಹಾಪೂರ, ರಾಘವೇಂದ್ರ ವಡವಡಗಿ, ಮಲ್ಲಿಕಾರ್ಜುನ ಮಡ್ಡಿಮನಿ, ಲಕ್ಷ್ಮಣ ಚಲವಾದಿ, ವಿಠ್ಠಲ ಸಂದಿಮನಿ, ಪರಶುರಾಮ ಪಾರಣ್ಣವರ, ಯಲ್ಲಪ್ಪ ಬಂಡೆನ್ನವರ,ಸತೀಶ ದೊಡಮನಿ, ಕೃಷ್ಣಾ ರತ್ನಾಕರ, ಸವಿತಾ ಧನರಾಜ, ನಾಗೇಂದ್ರಪ್ಪ ಮೇತ್ರಿ ಮುಂತಾದವರು ಹಾಜರಿದ್ದರು.