Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಬಾಗಲಕೋಟೆˌ (ಜಮಖಂಡಿ): ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ತಡರಾತ್ರಿ ನಿಲ್ಲಿಸಿದ್ದ ಮಹೀಂದ್ರ ಎಕ್ಸ್ಯುವಿ (XUV300) ಕಾರು ಏಕಾಏಕಿ ಭಾರೀ ಸ್ಫೋಟಗೊಂಡು ಸಂಪೂರ್ಣ ಛಿದ್ರಛಿದ್ರವಾದ ಘಟನೆ ನಡೆದಿದೆ. ಸ್ಫೋಟದ ತೀವ್ರತೆಗೆ ಕಾರಿನ ಭಾಗಗಳು ಸುತ್ತಮುತ್ತಲಿನ ಪ್ರದೇಶಕ್ಕೆ ಚದುರಿಬಿದ್ದಿದ್ದು, ಎಂಜಿನ್ ಸಹ ತುಂಡು-ತುಂಡಾಗಿರುವುದು ಕಂಡುಬಂದಿದೆ. ಅದೃಷ್ಟವಶಾತ್ ಕಾರಿನ ಮಾಲೀಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಸ್ಫೋಟಗೊಂಡ ವಾಹನವು ಹಿಪ್ಪರಗಿ ಗ್ರಾಮದ ಜಯಶ್ರೀ ಹಣಮಂತ ಅಥಣಿ ಅವರ ಹೆಸರಿನಲ್ಲಿರುವ XUV300 ಕಾರು ಎಂದು ತಿಳಿದುಬಂದಿದೆ. ಸುಮಾರು ಮೂರು ವರ್ಷಗಳ ಹಿಂದೆ ವೈನ್ ಶಾಪ್ ನಡೆಸುತ್ತಿರುವ ಹನುಮಂತ ಅಥಣಿ ಅವರು ತಮ್ಮ ಪತ್ನಿಯ ಹೆಸರಿನಲ್ಲಿ ಈ ವಾಹನವನ್ನು ಖರೀದಿಸಿದ್ದರು.ಘಟನೆ ಕುರಿತು ಮಾಹಿತಿ ನೀಡಿದ ಕಾರಿನ ಮಾಲೀಕ ಹನುಮಂತ ಅಥಣಿ, “ನಮ್ಮ ಊರು ರಬಕವಿ. ಶನಿವಾರ ಸುಮಾರು 4.30 ಗಂಟೆಗೆ ಹಿಪ್ಪರಗಿಯ ಬಾರ್ ಬಳಿ ಕಾರು ನಿಲ್ಲಿಸಿದ್ದೆ. ರಾತ್ರಿ ಸುಮಾರು 10.45ರ ವೇಳೆಗೆ ಬಾರ್‌ನ ಲೆಕ್ಕಪತ್ರ ಹಾಗೂ ಹಣದ ವ್ಯವಹಾರ ಮುಗಿಸಿಕೊಂಡು ಹೊರಬರುತ್ತಿದ್ದಾಗ ಏಕಾಏಕಿ ಭಾರೀ ಸ್ಫೋಟದ ಶಬ್ದ…

Read More

ಬಿ.ಎಲ್.ಡಿ.ಇ- ರಘುಕುಲ ಸಮನ್ವಯ ಶಾಲೆ ಉದ್ಘಾಟಿಸಿದ ಸಚಿವ ಎಂ.ಬಿ.ಪಾಟೀಲ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಶೇಷಚೇತನ ಮಕ್ಕಳು ನಮ್ಮ ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಅವರಿಗೂ ಎಲ್ಲ ಮಕ್ಕಳಂತೆ ಸಮಾನ ಶಿಕ್ಷಣ, ಸಮಾನ ಅವಕಾಶ ಹಾಗೂ ಗೌರವಯುತ ಬದುಕು ದೊರೆಯುವಂತೆ ಮಾಡುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ, ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಸೋಮವಾರ ನಗರದ ಪ್ರಕೃತಿ ಕಾಲನಿಯಲ್ಲಿ ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಸಂಭವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಪ್ರಾರಂಭಿಸಲಾಗಿರುವ ಬಿ.ಎಲ್.ಡಿ.ಇ- ರಘುಕುಲ ಸಮನ್ವಯ ಶಾಲೆ ಉದ್ಟಾಟಿಸಿ ಅವರು ಮಾತನಾಡಿದರು.ವಿಶೇಷಚೇತನ ಮಕ್ಕಳ ಸಬಲೀಕರಣಕ್ಕೆ ಸಮರ್ಪಕ ಹೆಜ್ಜೆಯಾಗಿ ಬಿ.ಎಲ್.ಡಿ.ಇ-ರಘುಕುಲ ಸಮನ್ವಯ ಶಾಲೆ ಪ್ರಾರಂಭಿಸಲಾಗಿದೆ. ಪ್ರತಿಯೊಂದು ವಿಶೇಷಚೇತನ ಮಗುವಿನ ಕನಸಿಗೆ ರೆಕ್ಕೆ ನೀಡಿ ಅವರಲ್ಲಿ ಆತ್ಮವಿಶ್ವಾಸ ಬೆಳೆಸುವ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಗೌರವದಿಂದ ಬದುಕಲು ಅವಕಾಶ ಕಲ್ಪಿಸುವ ಶಿಕ್ಷಣ ಕೇಂದ್ರವಾಗಿ ಈ ಶಾಲೆ ರೂಪುಗೊಳ್ಳಲಿದೆ. ಇದು ರಾಷ್ಟ್ರಕ್ಕೆ ಮಾದರಿಯಾಗುವ ವಿಶ್ವಾಸವಿದೆ.…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಮತದಾರರ ಪಟ್ಟಿಯ ಪರಿಷ್ಕರಣೆ ಅಂಗವಾಗಿ ನಡೆಯುತ್ತಿರುವ ಅನಿಮೇಷನ್ ಫಾರ್ಮ್‌ಗಳ ಭರ್ತಿ ಕಾರ್ಯದಲ್ಲಿ ಮಾಜಿ ಸಚಿವರಾದ ಎಸ್.ಕೆ. ಬೆಳ್ಳುಬ್ಬಿ ಅವರು ಭಾಗವಹಿಸಿ ಸ್ವತಃ ಫಾರ್ಮ್ ಭರ್ತಿ ಮಾಡಿದರು.ತಾಲೂಕಿನ ಮತಗಟ್ಟೆ ಸಂಖ್ಯೆ ೧೭೬ರಲ್ಲಿ ಈ ಕಾರ್ಯ ನಡೆದಿದ್ದು, ಬಿ.ಎಲ್.ಓ ಸದ್ದಾಮಹುಸೇನ ಹೊನ್ಯಾಳ ಅವರ ನೇತೃತ್ವದಲ್ಲಿ ಪ್ರಕ್ರಿಯೆ ನಡೆಯಿತು.ಈ ಸಂದರ್ಭದಲ್ಲಿ ಬಿಎಲ್‌ಎ-೨ ಸುಭಾಷ್ ರಾಮಚಂದ್ರ ಭಜಂತ್ರಿ, ಅಂಗನವಾಡಿ ಸಹಾಯಕಿಯರಾದ ಗಾಯತ್ರಿ ಮೇಡಂ ಹಾಗೂ ಶಂಕ್ರಮ್ಮ ಪಡಸಲಗಿ ಉಪಸ್ಥಿತರಿದ್ದರು.ಮತದಾರರು ತಮ್ಮ ವಿವರಗಳನ್ನು ಸರಿಯಾಗಿ ನವೀಕರಿಸಿಕೊಳ್ಳುವಂತೆ ಈ ಸಂದರ್ಭದಲ್ಲಿ ತಿಳಿಸಲಾಯಿತು.

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪಟ್ಟಣದ ಶ್ರೀ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ ಶಾಲಾ-ಕಾಲೇಜುಗಳ ಆವರಣದಲ್ಲಿ ಜುಲೈ 28ರಂದು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ವಿವಿಧ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಲಿವೆ ಎಂದು ಸಂಸ್ಥೆಯ ನಿರ್ದೇಶಕ ಟಿ.ಟಿ. ಹಗೇದಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಪದವಿ ಪೂರ್ವ ವಿಜ್ಞಾನ ವಿಭಾಗದ ಪ್ರಾರಂಭೋತ್ಸವ, ಎಲ್ಲಾ ವಿಭಾಗಗಳ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ, ಪ್ರೌಢಶಾಲೆಯ ಕಂಪ್ಯೂಟರ್ ಕೊಠಡಿ ಉದ್ಘಾಟನೆ, ಹಿರಿಯ ಪ್ರಾಥಮಿಕ ಶಾಲೆಯ ಭೋಜನ ಆಸನಗಳ ಉದ್ಘಾಟನೆ, ಜೊತೆಗೆ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಶ್ರೀಶೈಲ ಬಿ. ಪತಂಗಿಯವರ ಜನ್ಮದಿನದ ವಜ್ರ ಮಹೋತ್ಸವ ಹಾಗೂ ಪಟ್ಟಣದ ಯುವ ಸಾಹಿತಿ ಮಲ್ಲು ಗಿಡ್ಡಪ್ಪಗೋಳ ಸಂಪಾದಿತ “ವಿದ್ಯಾಸಂಗಮ ಸ್ಮರಣ ಸಂಚಿಕೆ” ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಬಸಪ್ಪ ಉ. ಗಿಡ್ಡಪ್ಪಗೋಳ ವಹಿಸುವರು. ಉದ್ಘಾಟನೆಯನ್ನು ಬೆಳಗಾವಿಯ ವಿಶ್ರಾಂತ ಪ್ರಾಚಾರ್ಯ ಡಾ. ಬಸವರಾಜ ಜಗಜಂಪಿ ನೆರವೇರಿಸುವರು. ಪ್ರೌಢಶಾಲೆಯ ಕಂಪ್ಯೂಟರ್ ಕೊಠಡಿಯನ್ನು ಬೆಳಗಾವಿ ಲೋಕಾಯುಕ್ತ ಜಿಲ್ಲಾ ವರಿಷ್ಠಾಧಿಕಾರಿ ಪ್ರಸನ್ನ ಬಿ. ದೇಸಾಯಿ ಉದ್ಘಾಟಿಸುವರು.ಸ್ಮರಣ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪ್ರತಿ ವರ್ಷವೂ ನಡೆಯುವಂತೆ ಈ ವರ್ಷವೂ ಉತ್ತರ ಕರ್ನಾಟಕದ ಜೀವನದಿ ಕೃಷ್ಣಾ ನದಿಯ ಉಗಮಸ್ಥಳ ಮಹಾಬಳೇಶ್ವರದಲ್ಲಿ ಗಂಗಾಪೂಜೆ ನೆರವೇರಿಸಲು ಅವಳಿ ಜಿಲ್ಲೆಯ ರೈತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಯುವ ಮುಖಂಡರಾದ ಜಗದೀಶ ಸುನಗದ ಮತ್ತು ಈರಯ್ಯ ಹ. ಮಠಪತಿ ಮನವಿ ಮಾಡಿದ್ದಾರೆ.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಎಸ್.ಕೆ. ಬೆಳ್ಳುಬ್ಬಿ ಅವರ ನೇತೃತ್ವದಲ್ಲಿ ಕಳೆದ 25 ವರ್ಷಗಳಿಂದ ಪಂಚನದಿಗಳು ಗೋಮಾತೆಯ ಬಾಯಿ ಮೂಲಕ ಹರಿಯುವ ಪವಿತ್ರ ಕ್ಷೇತ್ರವಾದ ಮಹಾಬಳೇಶ್ವರದಲ್ಲಿ ಗಂಗಾಪೂಜೆ ನೆರವೇರಿಸಲಾಗುತ್ತಿದೆ. ವರ್ಷಪೂರ್ತಿ ಕೃಷ್ಣಾ ನದಿ ಮೈದುಂಬಿಕೊಂಡು ನದಿ ಪಾತ್ರದ ಸಕಲ ಜೀವಿಗಳಿಗೆ ಜಲ ಒದಗಿ ಪಾವನಗೊಳಿಸಲಿ ಎಂಬ ಸಂಕಲ್ಪದೊಂದಿಗೆ ಈ ಪೂಜೆ ನಡೆಯುತ್ತಿದೆ ಎಂದು ತಿಳಿಸಿದರು.ಈ ಹಿನ್ನೆಲೆ ರೈತರು ಇಂತಹ ಪವಿತ್ರ ಕಾರ್ಯದಲ್ಲಿ ಭಾಗವಹಿಸಿ ಗಂಗಾಪೂಜೆಯನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.ದಿನಾಂಕ 28 ಮಂಗಳವಾರ ಮುಂಜಾನೆ 9.30ಕ್ಕೆ ಪಟ್ಟಣದ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ವಿಜಯಪುರ–ತಿಕೋಟಾ–ಜತ್ತ–ಕರಾಡ–ಸಾತಾರ ಮಾರ್ಗವಾಗಿ ಮಹಾಬಳೇಶ್ವರಕ್ಕೆ ಪ್ರಯಾಣ…

Read More

ಲೇಖನ- ರಶ್ಮಿ ಕೆ. ವಿಶ್ವನಾಥ್ಮೈಸೂರು ಉದಯರಶ್ಮಿ ದಿನಪತ್ರಿಕೆ ಹೌದು ಹಿಂದಿನ ದಿನಗಳ ಮತ್ತು ಇಂದಿನ ದಿನಗಳ ವರ್ತನೆಯನ್ನು ತುಲನೆ ಮಾಡಿದರೆ ಆ ವ್ಯತ್ಯಾಸಗಳು ವೇದ್ಯವಾಗುತ್ತವೆ.ಹೆಣ್ಣುಮಕ್ಕಳು ೧೧ -೧೨ ವರ್ಷಕ್ಕೇನೆ ಋತುಮತಿಯಾಗುವುದು, ಡೆಲಿವರಿ ದಿನಾಂಕಕ್ಕೆ ೧೫- ೨೦ ದಿನಗಳ ಮುಂಚೆಯೇ ಮಗು ಆಗುವುದು, ಮೆನೋಪಾಸ್ ಗೆ ೧೦-೧೨ ವರ್ಷಗಳ ಮುಂಚೆಯೇ ಋತುಸ್ರಾವ(ಮುಟ್ಟು) ನಿಲ್ಲುವುದು, ಇನ್ನು ಹುಡುಗರ ವಿಷಯಕ್ಕೆ ಬಂದರೆ, ಡಿಗ್ರಿಗೆ ಬರಬೇಕಾಗಿದ್ದ ಗಡ್ಡ – ಮೀಸೆ, ಇನ್ನೂ ಹೈಸ್ಕೂಲು ಪಿಯುಸಿಗೇನೆ ಬಂದುಬಿಡುವುದು, ೪-೫ ವರ್ಷಕ್ಕೇನೇ ಬಿಪಿ, ಶುಗರ್, ಹಾರ್ಟ್ಅಟ್ಯಾಕ್ ಇವೆಲ್ಲವೂ ಇವಾಗಿನ ಆಹಾರದಿಂದ ಮತ್ತು ಜೀವನ ಕ್ರಮದಿಂದಾದ ಬದಲಾವಣೆಗಳು ಎಂದಿಟ್ಟುಕೊಳ್ಳೋಣ.ಆದರೆ ಮಕ್ಕಳೆಂದರೆ ಮುಗ್ದರು, ಅವರು ದೇವರಿಗೆ ಸಮಾನ, ಅವರು ಸತ್ಯವನ್ನು ಬಿಟ್ಟು ಬೇರೇನನ್ನೂ ಹೇಳುವುದಿಲ್ಲ, ಹೇಳುವುದಕ್ಕೆ ತಿಳಿಯುವುದೂ ಇಲ್ಲ ಎಂಬುದು ಸಾಮಾನ್ಯ ನಂಬಿಕೆ. ಆದರೆ ಇವಾಗಿನ ಕೆಲವು ಮಕ್ಕಳ ಉದ್ಧಟತನದ ಮಾತುಗಳನ್ನೂ ವರ್ತನೆಗಳನ್ನೂ ನೋಡಿದಾಗ ಆಶ್ಚರ್ಯವಾಗುತ್ತದೆ. ‘ಅರೇ ಹೀಗೂ ಹೇಳಬಹುದೆ? ದೊಡ್ಡವರಾದ ನಾವೇ ಇಷ್ಟು ಹದ್ದುಮೀರಿ ಮಾತನಾಡುವುದಿಲ್ಲವಲ್ಲ’ ಎನಿಸುತ್ತದೆ. ಅದ್ಯಾರಿಂದ ಇವರು ಹೀಗೆ…

Read More

ಲೇಖನ- ಅವಿನಾಶ ಸೆರೆಮನಿಬೈಲಹೊಂಗಲ ಉದಯರಶ್ಮಿ ದಿನಪತ್ರಿಕೆ ಇಂದಿನ ಯುಗದಲ್ಲಿ ಪ್ರತಿಯೊಬ್ಬರಲ್ಲೂ ಒಂದು ವಿಚಿತ್ರ ಮನಸ್ಥಿತಿ ಬೆಳೆದುಬಿಟ್ಟಿದೆ. ಒಂದು ಬರಹ ಪ್ರಕಟವಾದ ತಕ್ಷಣ ಲೇಖಕನ ಕಣ್ಣು ಓದುಗರ ಮನಸ್ಸಿನತ್ತ ಹೋಗುವುದಿಲ್ಲ ಬದಲಾಗಿ ಎಷ್ಟು ಲೈಕ್ ಬಂದವು? ಎಷ್ಟು ಕಾಮೆಂಟ್ ಬಂದವು? ಎಷ್ಟು ಜನ ಹಂಚಿಕೊಂಡರು? ಎಂಬ ಅಂಕಿ-ಅಂಶಗಳತ್ತ ಓಡುತ್ತದೆ. ನಿಧಾನವಾಗಿ ಪ್ರತಿಕ್ರಿಯೆಗಳೇ ಬರಹದ ಗುಣಮಟ್ಟದ ಮಾನದಂಡ ಎಂಬ ತಪ್ಪು ಕಲ್ಪನೆ ಬೇರೂರುತ್ತಿದೆ.ಆದರೆ ನಿಜಕ್ಕೂ ಪ್ರತಿಕ್ರಿಯೆಗಳೇ ಬರಹದ ಮೌಲ್ಯವನ್ನು ಅಳೆಯಬಹುದೇ?ಒಂದು ಉತ್ತಮ ಬೀಜ ನೆಲದೊಳಗೆ ಬಿದ್ದ ತಕ್ಷಣ ಮರವಾಗುವುದಿಲ್ಲ. ಅದು ಸಮಯ ತೆಗೆದುಕೊಳ್ಳುತ್ತದೆ. ಹಾಗೆಯೇ ಒಂದು ಉತ್ತಮ ಬರಹವೂ ಪ್ರಕಟವಾದ ಕ್ಷಣದಲ್ಲೇ ಎಲ್ಲರ ಮೆಚ್ಚುಗೆ ಗಳಿಸಬೇಕೆಂಬ ನಿಯಮವಿಲ್ಲ. ಕೆಲವು ಬರಹಗಳು ಓದುಗರ ಮನಸ್ಸಿನಲ್ಲಿ ವರ್ಷಗಳ ಕಾಲ ಮಲಗಿದ್ದು, ಸೂಕ್ತ ಸಂದರ್ಭ ಬಂದಾಗ ಎಚ್ಚರಗೊಂಡು ಜನ ಮಾನಸದಲ್ಲಿ ಹೊಸ ನೆಲೆಯನ್ನು ಸ್ಥಾಪಿಸುತ್ತವೆ.ಇತಿಹಾಸವನ್ನು ನೋಡಿದರೆ ಅನೇಕ ಶ್ರೇಷ್ಠ ಕೃತಿಗಳು ತಮ್ಮ ಕಾಲದಲ್ಲಿ ನಿರೀಕ್ಷಿತ ಮೆಚ್ಚುಗೆ ಪಡೆಯಲಿಲ್ಲ. ಆದರೆ ಕಾಲವೇ ಅವುಗಳ ಶ್ರೇಷ್ಠತೆಯನ್ನು ಸಾಬೀತುಪಡಿಸಿತು. ಆದ್ದರಿಂದ ಕ್ಷಣಿಕ ಪ್ರತಿಕ್ರಿಯೆಗಿಂತ…

Read More

ಉದಯರಶ್ಮಿ ದಿನಪತ್ರಿಕೆ ಅಥಣಿ: ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅಥಣಿ ತಾಲೂಕಿನಲ್ಲಿ ಮತ್ತಷ್ಟು ನಾಲ್ಕು ಎಐ (AI) ಆಧಾರಿತ ಸಂಚಾರ ಕ್ಯಾಮೆರಾಗಳು ಕಾರ್ಯಾರಂಭಿಸಿವೆ ಎಂದು ಅಥಣಿ ಪೊಲೀಸ್ ಇಲಾಖೆ ತಿಳಿಸಿದೆ.ಈಗಾಗಲೇ ತಾಲೂಕಿನಲ್ಲಿ ಎರಡು ಎಐ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿದ್ದು, ಇದೀಗ ಸಂಗೊಳ್ಳಿ ರಾಯಣ್ಣ ವೃತ್ತ, ಶಿವಯೋಗಿ ಸರ್ಕಲ್ (ಹಳ್ಯಾಳ ಸರ್ಕಲ್), ಜತ್ತ ರಸ್ತೆ ಚಮಕೇರಿ ಮಡ್ಡಿ ಕ್ರಾಸ್ ಹಾಗೂ ಮುರುಗುಂಡಿ ಪ್ರದೇಶಗಳಲ್ಲಿ ಹೊಸದಾಗಿ ನಾಲ್ಕು ಎಐ ಕ್ಯಾಮೆರಾಗಳನ್ನು ಅಳವಡಿಸಿ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ.ಈ ಮೂಲಕ ಅಥಣಿ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಐ ಕ್ಯಾಮೆರಾಗಳ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.ಸಂಚಾರ ನಿಯಮ ಉಲ್ಲಂಘನೆ, ಹೆಲ್ಮೆಟ್ ಧರಿಸದೇ ವಾಹನ ಚಾಲನೆ, ಸೀಟ್ ಬೆಲ್ಟ್ ಬಳಸದಿರುವುದು, ಮೊಬೈಲ್ ಫೋನ್ ಬಳಸಿ ವಾಹನ ಚಲಾಯಿಸುವುದು ಸೇರಿದಂತೆ ವಿವಿಧ ಸಂಚಾರ ನಿಯಮ ಉಲ್ಲಂಘನೆಗಳನ್ನು ಎಐ ಕ್ಯಾಮೆರಾಗಳು ಸ್ವಯಂಚಾಲಿತವಾಗಿ ಪತ್ತೆಹಚ್ಚಲಿವೆ. ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ದಂಡ ವಿಧಿಸುವ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.ವಾಹನ ಸವಾರರು ಕಡ್ಡಾಯವಾಗಿ…

Read More

ಮಾದಕ ವ್ಯಸನ ಮುಕ್ತ ಯುವ ಸಮುದಾಯ ಜಾಗೃತಿ ಕಾರ್ಯಕ್ರಮದಲ್ಲಿ ಶಾಸಕ ಲಕ್ಷ್ಮಣ ಸವದಿ ಸಲಹೆ ಉದಯರಶ್ಮಿ ದಿನಪತ್ರಿಕೆ ಅಥಣಿ: ಇಂದಿನ ಯುವ ಪೀಳಿಗೆಯು ಮಾದಕ ವಸ್ತುಗಳ ದುಶ್ಚಟಕ್ಕೆ ಬಲಿಯಾಗುತ್ತಿರುವುದು ರಾಷ್ಟ್ರದ ಭವಿಷ್ಯಕ್ಕೆ ದೊಡ್ಡ ಸವಾಲಾಗಿದೆ ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ವ್ಯಸನಗಳಿಗೆ ಒಳಗಾಗದೆ, ಶಿಕ್ಷಣದ ಮೂಲಕ ದೇಶದ ಸದೃಢ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಕರೆ ನೀಡಿದರು.ಅವರು ಅಂತರರಾಷ್ಟ್ರೀಯ ಮಾದಕ ವ್ಯಸನ ಮತ್ತು ಕಳ್ಳಸಾಗಾಣಿಕೆ ವಿರೋಧಿ ದಿನದ ಅಂಗವಾಗಿ ಶನಿವಾರ ಜಿ.ಎ. ಪದವಿ ಪೂರ್ವ ಕಾಲೇಜು ಆವರಣದಲ್ಲಿ ಅಥಣಿ ಪೊಲೀಸ್ ಠಾಣೆ ವತಿಯಿಂದ ಮಾದಕ ವ್ಯಸನ ಮುಕ್ತ ಯುವ ಸಮುದಾಯ ಜಾಗೃತಿ ಕಾರ್ಯಕ್ರಮ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪೋಷಕರು ತಮ್ಮ ಮಕ್ಕಳ ಬಗ್ಗೆ ಅಪಾರ ಕನಸು ಕಂಡಿರುತ್ತಾರೆ. ಆ ನಂಬಿಕೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ಹೇಳಿದರು.ಪೊಲೀಸ್ ಇಲಾಖೆಯು ಶಾಲಾ ಕಾಲೇಜುಗಳಲ್ಲಿ ಈ ರೀತಿ ಜಾಗೃತಿ ಮೂಡಿಸುತ್ತಿರುವುದು ಸ್ವಾಗತಾರ್ಹ. ವ್ಯಸನಮುಕ್ತ…

Read More