Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇದೇ ಫೆ.21 ಹಾಗೂ 22 ರಂದು ಎರಡು ದಿನಗಳ ಕಾಲ ಜೈವಿಕ ವಿಜ್ಞಾನದ ಗಡಿಗಳು : ಸಂಶೋಧನೆ, ನಾವೀನ್ಯತೆ ಮತ್ತು ಸಹಯೋಗದ ಕುರಿತು ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ.ನಗರದ ಎಸ್.ಬಿ.ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗ ಹಾಗೂ ಕಲಬುರಗಿ ಖಾಜಾ ಬಂದೇನವಾಜ್ ವಿಶ್ವವಿದ್ಯಾಲಯ ಹಾಗೂ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಸಹಯೋಗಲ್ಲಿ ವಿಜಯಪುರದ ಎಸ್.ಬಿ.ಕಲಾ ಹಾಗೂ ಕೆ. ಸಿ. ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆಯಲಿರುವ ರಾಷ್ಟ್ರೀಯ ಸಮ್ಮೇಳನವನ್ನು ದಿ.21 ರಂದು ಬೆಳಿಗ್ಗೆ 10 ಗಂಟೆಗೆ ಹಿಟ್ನಳ್ಳಿ ಕೃಷಿ ವಿವಿ ಡಿನ್ ಡಾ.ಅಶೋಕ ಸಜ್ಜನ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.ಬಿ.ಎಲ್.ಡಿ ಸಂಸ್ಥೆಯ ಪ್ರೊ. ವಾಯ್. ಎಂ. ಜಯರಾಜ್ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದು, ಡಾ. ರಾಘವೇಂದ್ರ ಕುಲಕರ್ಣಿ ಹಾಗೂ ಪ್ರೊ.ವಿ.ಎಸ್.ಬಗಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಆರ್ ಎಂ ಮಿರ್ದೆ, ಆಯ್.ಕ್ಯೂ.ಎ.ಸಿ ನಿರ್ದೇಶಕ ಡಾ. ಪಿ. ಎಸ್. ಪಾಟೀಲ, ಡಾ. ಸಯ್ಯದ್ ಅಬ್ರಾರ್ ಹಾಗೂ ಡಾ. ರಾಮಚಂದ್ರ ನಾಯಕ್ ಎಂ ಉಪಸ್ಥಿತರಿರಲಿದ್ದಾರೆ.ಅದರಂತೆ…

Read More

ಲೇಖನಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಗಾಜಿನ ಲೋಟವು ಅರ್ಧ ಖಾಲಿಯಾಗಿದೆ ಅಥವಾ ಅರ್ಧ ತುಂಬಿದೆ ಎನ್ನುವ ಸಕಾರಾತ್ಮಕ ಚಿಂತನೆಗೆ ಕುರಿತಾದ ಹಳೆಯ ಪ್ರಶ್ನೆಗೆ ನಾವು ಹೇಗೆ ಉತ್ತರಿಸುತ್ತೇವೆ ಎನ್ನುವುದು ಜೀವನದ ಮೇಲಿನ ದೃಷ್ಟಿಕೋನವನ್ನು ತೋರಿಸುತ್ತದೆ. ಆಶಾವಾದಿಯೇ, ನಿರಾಶಾವಾದಿಯೇ ಎಂಬುದನ್ನು ಪ್ರತಿಬಿಂಬಿಸಬಹುದು. ವಿನಸ್ಟನ್ ಚರ್ಚಿಲ್ ಅವರ ಮಾತೊಂದು ಹೀಗಿದೆ: ‘ನಿರಾಶಾವಾದಿ ಪ್ರತಿ ಅವಕಾಶದಲ್ಲೂ ಕಷ್ಟವನ್ನು ನೋಡುತ್ತಾನೆ. ಆಶಾವಾದಿ ಪ್ರತಿ ಕಷ್ಟದಲ್ಲೂ ಅವಕಾಶವನ್ನು ನೋಡುತ್ತಾನೆ.’ ಈ ತೆರನಾದ ಚಿಂತನೆ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ವಾಸ್ತವವಾಗಿ ಆಶಾವಾದ ಮತ್ತು ನಿರಾಶಾವಾದದಂತಹ ವ್ಯಕ್ತಿತ್ವ ಗುಣಲಕ್ಷಣಗಳು ಆರೋಗ್ಯ ಮತ್ತು ಯೋಗಕ್ಷೇಮದ ಹಲವು ಕ್ಷೇತ್ರಗಳ ಮೇಲೆ ಪರಿಣಾಮ ಬೀರಬಹುದು ಎಂದು ಕೆಲವು ಅಧ್ಯಯನಗಳು ತೋರಿಸುತ್ತವೆ. ನಮ್ಮ ಆಲೋಚನೆ ಚೆನ್ನಾಗಿದ್ದರೆ ನಮ್ಮ ಸುತ್ತಲಿನ ವಾತಾವರಣವೂ ಚೆನ್ನಾಗಿ ಇರುತ್ತದೆ. ಎಂಬ ವಿಚಾರ ಸರ್ವವೇದ್ಯ. ಹಾಗಾದರೆ ಆಲೋಚನೆಗಳು ಅದ್ಹೇಗೆ ನಮ್ಮ ಕಣ್ತೆರೆಸುತ್ತವೆ ನೋಡೋಣ ಬನ್ನಿ.ಧನಾತ್ಮಕ ಚಿಂತನೆನಮ್ಮ ಬಳಿ ಏನಿದೆಯೋ ಅದನ್ನು ನೋಡಿದಾಗ, ನಮ್ಮ ಜೀವನದ ಅಗತ್ಯಗಳಿಗಿಂತ ಹೆಚ್ಚೇ ನಮ್ಮ ಬಳಿ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಇಂಗಳಗಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿಯಮಿತ ಇಂಗಳಗಿ ಚುನಾವಣೆ ಯಾದಿಯಲ್ಲಿ ಸಾಕಷ್ಟು ಅಕ್ರಮವೆಸಗಲಾಗಿದೆ ಎಂದು ಸಂಘದ ಅ ವರ್ಗದ ಸದಸ್ಯ ಆನಂದ ಪವಾರ್ ಸೇರಿದಂತೆ ಹಲವರು ಆರೋಪಿಸಿದ್ದಾರೆ.ಮಂಗಳವಾರ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತಿಮ ಶೇರುದಾರರ ಪಟ್ಟಿಯಲ್ಲಿ ಅಪೂರ್ಣ ಶೇರ್ ಹೊಂದಿದ ಸದಸ್ಯರ ಹೆಸರು ಸಹ ಇವೆ. ಅಲ್ಲದೆ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮೂರಕ್ಕಿಂತ ಹೆಚ್ಚು ಸಹಿ ಮಾಡಿದ್ದರೂ ಸಹ ಅಂತಹವರ ಹೆಸರುಗಳನ್ನು ಕೈ ಬಿಡಲಾಗಿದೆ. ಅಚಿತಿಮ ಯಾದಿಯಲ್ಲಿನ ಸದಸ್ಯತ್ವ ಸಂಖ್ಯೆ ಹಾಗೂ ಸಂಘದ ಗಣಕಯಂತ್ರದಲ್ಲಿನ ಸದಸ್ಯತ್ವ ಸಂಖ್ಯೆಗಳನ್ನು ಪರಿಶೀಲಿಸಿದಾಗ ಎರಡೂ ಸಹ ಬೇರೆ-ಬೇರೆ ಇವೆ. ಹಿಂದಿನ ಆಡಳಿತ ಮಂಡಳಿ ಅಧ್ಯಕ್ಷರ ಕುಮ್ಮಕ್ಕಿನಿಂದ ಸಂಘದ ಮುರ್ಕಯ ಕಾರ್ಯನಿರ್ವಹಣಾಧಿಕಾರಿ ವಿಷ್ಣು ವಾಘಮೋರೆ ದೊಡ್ಡ ಪ್ರಮಾಣದ ಅಕ್ರಮವೆಸಗಿದ್ದಾರೆ ಎಂದು ಆರೋಪಿಸಿದರು.ಚುನಾವಣೆ ಪ್ರಕ್ರಿಯೆ ಫೆ. ೧೫ ರಿಂದ ಆರಂಭವಾಗಿದ್ದು ಅದಕ್ಕಿಂತಲೂ ಒಂದು ದಿನ ಮುಂಚೆಯೇ ನೋಟಿಸ್ ಭೋರ್ಡಿಗೆ ಅರ್ಹ ಮತದಾರರ ಯಾದಿ…

Read More

ಆಕ್ಸಫರ್ಡ ಐಐಟಿ ಒಲಂಪಿಯಾಡ್ ಶಾಲೆಯ ವಾರ್ಷಿಕೋತ್ಸವದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸಲಹೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪಾಲಕರು ತಮ್ಮ ಕನಸುಗಳಿಗೆ ಅನುಗುಣವಾಗಿ ಮಕ್ಕಳನ್ನು ಓದಿಸುವುದಕ್ಕಿಂತ ಮಕ್ಕಳ ಕನಸುಗಳಿಗೆ ಪ್ರೋತ್ಸಾಹ ನೀಡಿ ಪೋಷಿಸಬೇಕು. ಆಗ ಮಾತ್ರ ಉತ್ತಮವಾದ ಫಲಿತಾಂಶ ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ಒತ್ತಾಯದ ಶಿಕ್ಷಣ ಯಾವತ್ತಿಗೂ ನಿರರ್ಥಕವಾಗುತ್ತದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.ನಗರದ ಆಕ್ಸಫರ್ಡ ಐಐಟಿ ಒಲಂಪಿಯಾಡ್ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು; ಇಂದಿನ ದಿನಗಳಲ್ಲಿ ಪಾಲಕರು ಮಕ್ಕಳು ಹೀಗೆ ಆಗಬೇಕು, ಹಾಗೆ ಆಗಬೇಕು ಎನ್ನುವ ತಮ್ಮ ಕನಸುಗಳನ್ನು ಮಕ್ಕಳ ಮೇಲೆ ಹೇರುವ ಕಾರ್ಯ ಮಾಡುತ್ತಿರುವುದರಿಂದ ಮಕ್ಕಳ ಭವಿಷ್ಯದ ಮೇಲೆ ಗೊಂದಲದ ಕಾರ್ಮೋಡ ಮುಸುಕುತ್ತಿದೆ. ತನ್ನಲ್ಲಿ ಅಡಗಿರುವ ಪ್ರತಿಭೆಯನ್ನು ಬದಿಗೊತ್ತಿ ಹೆತ್ತವರ ಆಸೆಯನ್ನು ಈಡೇರಿಸುವುದಕ್ಕೆ ಹೆಣಗುವ ಮಕ್ಕಳು ಯಶಸ್ಸಿನ ಹಾದಿಯಲ್ಲಿ ಸಾಗುವುದಕ್ಕಿಂತ ಅದರ ವಿರುದ್ಧ ದಿಕ್ಕಿನೆಡೆಗೆ ಮುಖ ಮಾಡುತ್ತಿದ್ದಾರೆ. ಆ ನಿಟ್ಟಿನಲ್ಲಿ ಪಾಲಕರು ಮಕ್ಕಳನ್ನು ಇಂಜಿನಿಯರ್ ಆಗು, ಡಾಕ್ಟರ್ ಆಗು ಎಂದು ಒತ್ತಡವನ್ನು ಹೇರದೇ ನೀನು ಏನಾಗಬೇಕೆಂದು ಬಯಸುತ್ತಿಯಾ ಹೇಳು…

Read More

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಇಲ್ಲಿಯ ಸಮೀಪದ ಮರಿಮಟ್ಟಿ ಗ್ರಾಮದಲ್ಲಿ ವಾಸವಾಗಿರುವ ಸುಡುಗಾಡುಸಿದ್ಧ ಜನಾಂಗದವರ ಕಾಲೋನಿಗೆ ಭಾನುವಾರ ರಾತ್ರಿ ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ. ಜಿ, ಭೇಟಿ ನೀಡಿ ಅವರ ಕುಂದುಕೊರತೆ ಆಲಿಸಿದರು.ಸುಡುಗಾಡುಸಿದ್ಧ ಜನಾಂಗ ಅಲೆಮಾರಿಯಾಗಿದ್ದರೂ, ಈಗ ನಾವೆಲ್ಲಾ ಒಂದೆಡೆ ನೆಲೆನಿಂತಿದ್ದರೂ, ಸಾಕಷ್ಟು ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದ್ದೇವೆ ಎಂದು ಮುಖಂಡ ಭೀಮಾಶಂಕರ ಉದಂಡಿ ಹೇಳಿದರು.ಮರಿಮಟ್ಟಿಯಲ್ಲಿ ನೆಲೆನಿಂತು, ಅದು ಮುಳುಗಡೆಯಾದಾಗ ಇಲ್ಲಿ ಸ್ಥಳಾಂತರಗೊಂಡಿದ್ದೇವೆ, ಆದರೆ ಈಗ ನಮ್ಮ ಕುಟುಂಬಗಳು ವಿಸ್ತಾರಗೊಂಡಿವೆ, ಹೊಸ ಮನೆ ಕಟ್ಟಿಕೊಳ್ಳಲು ಗ್ರಾಮದಲ್ಲಿ ನಿವೇಶನಗಳಿಲ್ಲ, ಹೀಗಾಗಿ ಚಿಮ್ಮಲಗಿ ಭಾಗ ೧ ಬಿ ಪುನರ್ವಸತಿ ಕೇಂದ್ರದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಇಲಾಖೆಯ ಅಧೀನದಲ್ಲಿ ಸಾಕಷ್ಟು ನಿವೇಶನಗಳು ಖಾಲಿಯಿವೆ, ಅವುಗಳಲ್ಲಿ ೬೦ ನಿವೇಶನಗಳನ್ನು ನಮ್ಮ ಅಲೆಮಾರಿ ಜನಾಂಗಕ್ಕೆ ಹಂಚಬೇಕು, ಸರ್ಕಾರದ ವಸತಿ ಯೋಜನೆಯಡಿ ಮನೆ ಕಟ್ಟಿಕೊಳ್ಳಲು ಹಣಕಾಸಿನ ನೆರವು ನೀಡಬೇಕೆಂದರು.ಹಿರಿಯರಾದ ಎಸ್.ಆರ್. ವಿಭೂತಿ ಮಾತನಾಡಿ, ಗ್ರಾಮದ ತುಂಬಾ ವಿದ್ಯುತ್ ಸೌಕರ್ಯದ ಅಭಾವವಿದೆ, ಹಳೆ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಪಿ ಎಂ ಇಂಟರ್ನ್‌ಶಿಪ್ ಯೋಜನೆಯು 21 ರಿಂದ 24 ವಯಸ್ಸಿನ ಯುವಕರಿಗೆ ಪ್ರಾಯೋಗಿಕ ಅನುಭವವನ್ನು ಪಡೆಯಲು ಮತ್ತು ಅವರ ವೃತ್ತಿ ನಿರೀಕ್ಷೆಗಳನ್ನು ಹೆಚ್ಚಿಸಲು ಒಂದು ಅತ್ಯುತ್ತಮ ಅವಕಾಶವಾಗಿದೆ ಎಂದು ವಿಜಯಪುರದ ಬಿಜ್ಜರಗಿ ಮೋಟಾರ್ಸ್ ನ ಮಾನವ ಸಂಪನ್ಮೂಲ ಅಧಿಕಾರಿ ದಯಾನಂದ ಬಿರಾದಾರ ಹೇಳಿದರು.ಮಂಗಳವಾರದಂದು ಪಟ್ಟಣದ ಸರಕಾರಿ ಐಟಿಐ ಕಾಲೇಜಿನಲ್ಲಿ ಜಿಲ್ಲೆಯ ಉದ್ದಿಮೆದಾರರು ಮತ್ತು ತರಬೇತುದಾರರಿಗೆ ಹಮ್ಮಿಕೊಂಡ ಪಿ ಎಂ ಇಂಟರ್ನ್‌ಶಿಪ್ ಯೋಜನೆಯ ಕುರಿತು ಅರಿವು ಮೂಡಿಸುವ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ಈ ಇಂಟರ್ನ್‌ಶಿಪ್ ಯೋಜನೆಯು ಉದ್ಯಮದ ಅನುಭವ, ಕೌಶಲ್ಯ ಅಭಿವೃದ್ಧಿ ಮತ್ತು ರಾಷ್ಟ್ರದ ಬೆಳವಣಿಗೆಗೆ ಕೊಡುಗೆ ನೀಡುವ ಅವಕಾಶ ನೀಡುತ್ತದೆ. ರಚನಾತ್ಮಕ ಕಲಿಕಾ ವಾತಾವರಣದೊಂದಿಗೆ, ಇದು ಯಶಸ್ವಿ ವೃತ್ತಿಜೀವನವನ್ನು ನಿರ್ಮಿಸಲು ಪರಿಪೂರ್ಣ ಅವಕಾಶವಾಗಿದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಚಾರ್ಯ ಪಿ ವೈ ರಜನಿಕರ ಮಾತನಾಡಿ, ಇಂದಿನ ಯುವಕರು ವಿವಿಧ ವೃತ್ತಿ ಮತ್ತು ಉದ್ಯೋಗಾವಕಾಶಗಳಲ್ಲಿ ನಿಜ ಜೀವನದ ವ್ಯವಹಾರ ವಾತಾವರಣಕ್ಕೆ ಒಡ್ಡಿಕೊಳ್ಳಬೇಕು. ಈ ಯೋಜನೆಯುಯುವಕರಿಗೆ ನೈಜ ಪ್ರಪಂಚದ ವ್ಯಾಪಾರ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ತಾಲ್ಲೂಕಿನ ಬಿದರಕುಂದಿ ಗ್ರಾಮದ ಆದರ್ಶ ವಿದ್ಯಾಲಯ (ಆರ್.ಎಮ್.ಎಸ್.ಎ.), ಶಾಲೆಗೆ ೬ನೇ ತರಗತಿಗೆ ಪ್ರವೇಶ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಕಾರಣ ಆಸಕ್ತ ಪಾಲಕರು www.schooleducation.kar.nic.in CxÀªÁ www.vidyavahini.karnataka.gov.inವೆಬ್‌ಸೈಟ್ ಬಳಸಿ ಫೆ೨೮ ರ ಒಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚಿನ ಮಾಹಿತಿಗಾಗಿ ಸಂಪರ್ಕಿಸಿ-೯೯೪೫೬೧೪೩೦೧, ೯೮೪೫೭೬೨೭೦೧

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ತಾಲ್ಲೂಕ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ ತಾಲೂಕು ಘಟಕದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಯಿತು. ಅಧ್ಯಕ್ಷರಾಗಿ ಶಿವಾನಂದ ಭಾಸಗಿ, ಹಿರಿಯ ಉಪಾಧ್ಯಕ್ಷರಾಗಿ ಬಸವರಾಜ ಮೇತ್ರಿ, ವಕ್ತಾರರಾಗಿ ಅಬ್ಬಾಸಲಿ ಮನಿಯರ, ಮಹಿಳಾ ಸಂಘ ಕಾರ್ಯದರ್ಶಿಗಳಾಗಿ ಮೋಹಸಿನಾ ಮಕಾನದಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಶಶಿಧರ ಕಾಂಬಳೆ ತಿಳಿಸಿದ್ದಾರೆ. ನೂತನ ಪದಾಧಿಕಾರಿಗಳಿಗೆ ತಾಲ್ಲೂಕ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ವಿಶೇಷವಾಗಿ ಕೊಳಗೇರಿ ನಿವಾಸಿಗಳಿಗೆ ಪ್ರಯೋಜನವಾಗಬೇಕು. ಎಲ್ಲರೂ ಉತ್ತಮ ಆರೋಗ್ಯವಂತರಾಗಬೇಕು ಎನ್ನುವ ದಿಸೆಯಲ್ಲಿ ರಾಜ್ಯ ಸರಕಾರ ಸಿಂದಗಿ ನಗರಕ್ಕೆ ೨ ನಮ್ಮ ಕ್ಲಿನಿಕ್‌ನ್ನು ಮಂಜೂರು ಮಾಡಿದ್ದು ಸಂತಸ ತಂದಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಬಂದಾಳ ರಸ್ತೆಯಲ್ಲಿ ವಿಜಯಪುರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಪಂಚಾಯತ್ ಮತ್ತು ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಮ್ಮ ಕ್ಲಿನಿಕ್ ಉದ್ಘಾಟನಾ ಸಮಾರಂಭವನ್ನು ಶಾಸಕ ಅಶೋಕ ಮನಗೂಳಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಮದೀನಾ ನಗರ ಮತ್ತು ಹೆಗ್ಗೆರೇಶ್ವರ ದೇವಸ್ಥಾನದ ಬಳಿ ಸಿಂದಗಿ ನಗರಕ್ಕೆ ಮತ್ತೆರಡು ನಮ್ಮ ಕ್ಲಿನಿಕ್ ಮಂಜೂರಾಗಿದೆ. ಇಲ್ಲಿ ದೊರೆಯುವ ಎಲ್ಲ ಸೌಲಭ್ಯಗಳ ಸದುಪಯೋಗವನ್ನು ಎಲ್ಲ ಸಾರ್ವಜನಿಕರು ಪಡೆದುಕೊಳ್ಳಬೇಕು. . ಈ ಭಾಗದ ಜನರ ಆರೋಗ್ಯದ ದೃಷ್ಠಿಯಿಂದ ಈ ಶಾಖೆಯನ್ನು ಪ್ರಾರಂಭ ಮಾಡಲಾಗಿದೆ.ಈ ವೇಳೆ ಜಿಲ್ಲಾ ವೈದ್ಯಾಧಿಕಾರಿ ಡಾ.ಸಂಪತ್ತಕುಮಾರ ಗುಣಾರಿ ಮಾತನಾಡಿ, ೧೫೭ ಕೋಟಿ ಜನ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ತಾಲ್ಲೂಕ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ ತಾಲೂಕು ಘಟಕದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಯಿತು. ಅಧ್ಯಕ್ಷರಾಗಿ ಶಿವಾನಂದ ಭಾಸಗಿ, ಹಿರಿಯ ಉಪಾಧ್ಯಕ್ಷರಾಗಿ ಬಸವರಾಜ ಮೇತ್ರಿ, ವಕ್ತಾರರಾಗಿ ಅಬ್ಬಾಸಲಿ ಮನಿಯರ, ಮಹಿಳಾ ಸಂಘ ಕಾರ್ಯದರ್ಶಿಗಳಾಗಿ ಮೋಹಸಿನಾ ಮಕಾನದಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಶಶಿಧರ ಕಾಂಬಳೆ ತಿಳಿಸಿದ್ದಾರೆ. ನೂತನ ಪದಾಧಿಕಾರಿಗಳಿಗೆ ತಾಲ್ಲೂಕ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.

Read More