ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇದೇ ಫೆ.21 ಹಾಗೂ 22 ರಂದು ಎರಡು ದಿನಗಳ ಕಾಲ ಜೈವಿಕ ವಿಜ್ಞಾನದ ಗಡಿಗಳು : ಸಂಶೋಧನೆ, ನಾವೀನ್ಯತೆ ಮತ್ತು ಸಹಯೋಗದ ಕುರಿತು ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ.
ನಗರದ ಎಸ್.ಬಿ.ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗ ಹಾಗೂ ಕಲಬುರಗಿ ಖಾಜಾ ಬಂದೇನವಾಜ್ ವಿಶ್ವವಿದ್ಯಾಲಯ ಹಾಗೂ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಸಹಯೋಗಲ್ಲಿ ವಿಜಯಪುರದ ಎಸ್.ಬಿ.ಕಲಾ ಹಾಗೂ ಕೆ. ಸಿ. ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆಯಲಿರುವ ರಾಷ್ಟ್ರೀಯ ಸಮ್ಮೇಳನವನ್ನು ದಿ.21 ರಂದು ಬೆಳಿಗ್ಗೆ 10 ಗಂಟೆಗೆ ಹಿಟ್ನಳ್ಳಿ ಕೃಷಿ ವಿವಿ ಡಿನ್ ಡಾ.ಅಶೋಕ ಸಜ್ಜನ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.
ಬಿ.ಎಲ್.ಡಿ ಸಂಸ್ಥೆಯ ಪ್ರೊ. ವಾಯ್. ಎಂ. ಜಯರಾಜ್ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದು, ಡಾ. ರಾಘವೇಂದ್ರ ಕುಲಕರ್ಣಿ ಹಾಗೂ ಪ್ರೊ.ವಿ.ಎಸ್.ಬಗಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಆರ್ ಎಂ ಮಿರ್ದೆ, ಆಯ್.ಕ್ಯೂ.ಎ.ಸಿ ನಿರ್ದೇಶಕ ಡಾ. ಪಿ. ಎಸ್. ಪಾಟೀಲ, ಡಾ. ಸಯ್ಯದ್ ಅಬ್ರಾರ್ ಹಾಗೂ ಡಾ. ರಾಮಚಂದ್ರ ನಾಯಕ್ ಎಂ ಉಪಸ್ಥಿತರಿರಲಿದ್ದಾರೆ.
ಅದರಂತೆ ದಿ. 22 ರಂದು ಸಂಜೆ 4 ಗಂಟೆಗೆ ಅತಿಥಿಗಳಿಗೆ ಹಾಗೂ ಸಾಧಕರಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ನಡಯಲಿದ್ದು, ಮುಖ್ಯ ಅತಿಥಿಗಳಾಗಿ ಡಾ. ನಿಶಾಂತ್ ಆರಿಫ್ ಹುಸೇನ್ ಭಾಗವಹಿಸಲಿದ್ದಾರೆ ಎಂದು ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಆರ್ ಎಂ ಮಿರ್ದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

