Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಜಿಲ್ಲೆಯಲ್ಲಿ ಇತ್ತೀಚೆಗೆ ವಿವಿಧ ಠಾಣೆಗಳಲ್ಲಿ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಅಡಿ ದಾಖಲಾದ ಪ್ರಕರಣಗಳಲ್ಲಿ ಒಟ್ಟು 09 ಜನ ಆರೋಪಿತರನ್ನು ಪತ್ತೆ ಮಾಡಿ, ಅವರಿಂದ 09 ಕಂಟ್ರಿ ಪಿಸ್ತೂಲುಗಳನ್ನು ಹಾಗೂ 24 ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳುವಲ್ಲಿ ತಿಕೋಟಾ ಠಾಣಾ ಪಿಎಸ್ಐ ಬಸವರಾಜ ಉಳ್ಳಾಗಡ್ಡಿ ಹಾಗೂ ತಂಡದವರು ಅತೀ ಪ್ರಮುಖ ಪಾತ್ರ ನಿರ್ವಹಿಸಿದ್ದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಗಳವಾರ ಪ್ರಶಂಸನಾ ಪತ್ರ ನೀಡಿದ್ದಾರೆ.ನಿಮ್ಮ ಕರ್ತವ್ಯನಿಷ್ಠೆ ಹಾಗೂ ಪರಿಶ್ರಮ ಶ್ಲಾಘನೀಯವಾದದ್ದು. ನಿಮ್ಮ ಈ ಸಮರ್ಪಣಾಭಾವದ ಕೆಲಸ ಸಾರ್ವಜನಿಕರ ವಿಶ್ವಾಸವನ್ನು ಮತ್ತಷ್ಟು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇನ್ನು ಮುಂದೆಯು ಸಹ ನೀವು ನಿಮ್ಮ ಕರ್ತವ್ಯದಲ್ಲಿ ಇದೇ ರೀತಿ ಪ್ರಾಮಾಣಿಕ ಪ್ರಯತ್ನ ಮಾಡಿ ಇಲಾಖೆಗೆ ಗೌರವ ಹೆಚ್ಚಿಸುತ್ತೀರೆಂದು ಆಶಿಸುತ್ತಾ ಈ ಪ್ರಶಂಸನಾ ಪತ್ರ ವಿತರಿಸಿದರು.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕಳೆದ ಒಂದು ವಾರದಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಗ್ರಾಮ ಆಡಳಿತಾಧಿಕಾರಿಗಳು ರಾಜ್ಯಾದ್ಯಂತ ಮುಷ್ಕರ ಹಮ್ಮಿಕೊಂಡಿದ್ದು, ಸರಕಾರ ಅವರ ಮುಷ್ಕರಕ್ಕೆ ಕಿವಿಗೊಡದೇ ಇರುವುದು ದುರಂತ ಎಂದು ಮಾಜಿ ಶಾಸಕ ರಮೇಶ ಭೂಸನೂರ ಅಸಮಾಧಾನ ವ್ಯಕ್ತಪಡಿಸಿದರು.ಸಿಂದಗಿ ಪಟ್ಟಣದ ಆಡಳಿತ ಸೌಧದಲ್ಲಿ ಗ್ರಾಮ ಆಡಳಿತಾಧಿಕಾರಿಗಳು ಹಮ್ಮಿಕೊಂಡ ೨ನೆಯ ಹಂತದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಅವರು, ಮೊದಲ ಹಂತದಲ್ಲಿ ಸರಕಾರದ ಪ್ರದಾನ ಕಾರ್ಯದರ್ಶಿಗಳು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿತ್ತು. ಕಾರಣ ಗ್ರಾಮ ಆಡಳಿತಾಧಿಕಾರಿಗಳು ಮುಷ್ಕರವನ್ನು ಕೈ ಬಿಟ್ಟಿದ್ದರು. ಆದರೆ ಕೊಟ್ಟ ಭರವಸೆ ಇಲ್ಲಿಯವರೆಗೆ ಈಡೆರಿಲ್ಲ. ಇದರಿಂದ ಬೇಸರಗೊಂಡ ಗ್ರಾಮ ಆಡಳಿತಾಧಿಕಾರಿಗಳು ಮುಷ್ಕರ ನಡೆಸುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕರ ಕಾರ್ಯಗಳಿಗೆ ತೊಂದರೆಯಾಗುತ್ತಿದೆ. ಅವರ ೨೨ ಬೇಡಿಕೆಗಳಲ್ಲಿ ಸರಕಾರ ಕನಿಷ್ಠ ೧೦ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.ಈ ವೇಳೆ ಎಸ್‌ಟಿ ಮೋರ್ಚಾ ತಾಲೂಕಾಧ್ಯಕ್ಷ ಪ್ರಶಾಂತ ಕದ್ದರಕಿ, ಗ್ರಾಮ ಆಡಳಿತಾಧಿಕಾರಿಗಳಾದ ನಿಖಿಲ…

Read More

ಅಲ್-ಅಮೀನ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ರ‍್ಯಾಗಿಂಗ್ ಪ್ರಕರಣ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಿಕೋಟಾ ತಾಲೂಕಿನ ನವರಸಪುರ ಗ್ರಾಮದಲ್ಲಿರುವ ಅಲ್-ಅಮೀನ್ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಯೋರ್ವನ ಮೇಲೆ ಅದೇ ಕಾಲೇಜಿನ ೦೫ ಜನ ಎಂಬಿಬಿಎಸ್ ಹಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್ ಮತ್ತು ದೈಹಿಕ ಹಿಂಸೆ ನೀಡಲಾಗಿದೆ ಎಂಬ ವರದಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ವಿಜಯಪುರ ಮತ್ತು ತಿಕೋಟಾ ತಹಶೀಲ್ದಾರ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು ಹಲ್ಲೆಗೊಳಗಾದ ವಿದ್ಯಾರ್ಥಿ ಹಮೀಮಗೆ ಭೇಟಿ ಮಾಡಿ, ಪರಿಶೀಲಿಸಿ, ಯೋಗಕ್ಷೇಮ ವಿಚಾರಣೆ ನಡೆಸಿದ್ದು, ವಿದ್ಯಾರ್ಥಿಗೆ ಯಾವುದೇ ಗಾಯಗಳಾಗಿರುವುದಿಲ್ಲ ಹಾಗೂ ವಿದ್ಯಾರ್ಥಿಯು ದೈಹಿಕವಾಗಿ ಆರೋಗ್ಯಕರವಾಗಿದ್ದಾನೆ ಎಂದು ವರದಿ ನೀಡಿದ್ದಾರೆ.ಘಟನೆಯ ವಿವರವನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಮೊಹ್ಮದ ಮೊಹಸೀನ್ ಅವರಿಗೆ ಒದಗಿಸಿದ್ದು, ಈ ಕುರಿತು ಅವರು ಹಲ್ಲೆಗೊಳಗಾದ ವಿದ್ಯಾರ್ಥಿಗೆ ಸೂಕ್ತ ಸಹಾಯ ಹಾಗೂ ಹಲ್ಲೆ ಮಾಡಿರುವ ೦೫ ಜನ ಹಿರಿಯ ವಿದ್ಯಾರ್ಥಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಅವರು ತಿಳಿಸಿದ್ದು, ಹಲ್ಲೆ ಮಾಡಿದ ವಿದ್ಯಾರ್ಥಿಗಳ ವಿರುದ್ದ ಸೂಕ್ತ ಕಾನೂನು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ವಿಪತ್ತು ನಿರ್ವಹಣಾ ಕೋಶ ಹಾಗೂ ಎನ್‌ಟಿಪಿಸಿ ಇವರ ವತಿಯಿಂದ ಎನ್‌ಟಿಪಿಸಿಯಲ್ಲಿ ಫೆ.೧೮ರಂದು ಅಗ್ನಿ ಅವಘಢಗಳಲ್ಲಿ ಜಾಗೃತಿ ಹಾಗೂ ಅನುಸರಿಸಬೇಕಾದ ಕ್ರಮಗಳ ಕುರಿತ ಅಣುಕು ಪ್ರದರ್ಶನ ಯಶಸ್ವಿಯಾಗಿ ನಡೆಸಲಾಯಿತು.ಜಿಲ್ಲಾಧಿಕಾರಿಗಳಾದ ಟಿ.ಭೂಬಾಲನ್ ಅವರ ಮಾರ್ಗದರ್ಶನದಲ್ಲಿ ಅಣುಕು ಪ್ರದರ್ಶನವನ್ನು ನಡೆಸಲಾಗಿದ್ದು, ಅಪಾಯದ ಸಂದರ್ಭದಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು ಹಾಗೂ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಈ ಅಣುಕು ಪ್ರದರ್ಶನದಲ್ಲಿ ಜಾಗೃತಿ ಮೂಡಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಉಪಸ್ಥಿತರಿದ್ದು, ಅಣುಕು ಪ್ರದರ್ಶನವನ್ನು ವೀಕ್ಷಿಸಿದರು. ಎನ್‌ಟಿಪಿಸಿ ಅಧಿಕಾರಿಗಳು ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ವಿಪತ್ತು ನಿರ್ವಹಣಾ ಕೋಶ ಹಾಗೂ ಎನ್‌ಟಿಪಿಸಿ ಇವರ ವತಿಯಿಂದ ಎನ್‌ಟಿಪಿಸಿಯಲ್ಲಿ ಫೆ.೧೮ರಂದು ಅಗ್ನಿ ಅವಘಢಗಳಲ್ಲಿ ಜಾಗೃತಿ ಹಾಗೂ ಅನುಸರಿಸಬೇಕಾದ ಕ್ರಮಗಳ ಕುರಿತ ಅಣುಕು ಪ್ರದರ್ಶನ ಯಶಸ್ವಿಯಾಗಿ ನಡೆಸಲಾಯಿತು.ಜಿಲ್ಲಾಧಿಕಾರಿಗಳಾದ ಟಿ.ಭೂಬಾಲನ್ ಅವರ ಮಾರ್ಗದರ್ಶನದಲ್ಲಿ ಅಣುಕು ಪ್ರದರ್ಶನವನ್ನು ನಡೆಸಲಾಗಿದ್ದು, ಅಪಾಯದ ಸಂದರ್ಭದಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು ಹಾಗೂ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಈ ಅಣುಕು ಪ್ರದರ್ಶನದಲ್ಲಿ ಜಾಗೃತಿ ಮೂಡಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಉಪಸ್ಥಿತರಿದ್ದು, ಅಣುಕು ಪ್ರದರ್ಶನವನ್ನು ವೀಕ್ಷಿಸಿದರು. ಎನ್‌ಟಿಪಿಸಿ ಅಧಿಕಾರಿಗಳು ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೆ.ಪಿ.ಟಿ.ಸಿ.ಎಲ್ ವತಿಯಿಂದ ೧೧೦ ಕೆ.ವ್ಹಿ ಕಾಖಂಡಕಿಯಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿದ್ದು, ಸ್ಥಾವರ ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಮಮದಾರಪುರ-೧ ಹಾಗೂ ರೋಣಿಹಾಳ, ಮಮದಾಪುರ-೨ರ ಮಾರ್ಗಗಳ ೧೧೦ ಕೆ.ವ್ಹಿ, ಮಮದಾಪುರ, ೧೧೦ ಕೆ.ವ್ಹಿ ದೇವರಗೆಣ್ಣೂರು, ೧೧೦ ಕೆ.ವ್ಹಿ ಬೆಳ್ಳುಬ್ಬಿ, ೧೧೦ ಕೆ.ವ್ಹಿ ಶಿರಬೂರ, ೧೧೦ ಕೆ.ವ್ಹಿ ಕಂಬಾಗಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೋಗುವ ಎಲ್ಲಾ ೩೩ ಕೆ.ವ್ಹಿ ಹಾಗೂ ೧೧ ಕೆ.ವ್ಹಿ ವಿದ್ಯುತ್ ಮಾರ್ಗಗಳಿಗೆ ದಿನಾಂಕ ೨೧-೦೨-೨೦೨೫ ಹಾಗೂ ೨೨-೦೨-೨೦೨೫ಕ್ಕೆ ಬೆಳಿಗ್ಗೆ ೬ ರಿಂದ ಸಂಜೆ ೬ ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಈ ಎಲ್ಲ ಐ ಪಿ ಫೀಡರಗಳಿಗೆ ೩ ರಿಂದ ೪ ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಲಾಗುವುದು.ದಿನಾಂಕ:೨೧-೦೨-೨೦೨೫ ರಂದು ೧೧೦ ಕೆ.ವ್ಹಿ ಮಮದಾಪುರ, ೧೧೦ ಕೆ.ವ್ಹಿ ಬೆಳ್ಳುಬ್ಬಿ, ೧೧೦ ಕೆ.ವ್ಹಿ ಕಂಬಾಗಿ ಹಾಗೂ ೧೧೦ ಕೆ.ವ್ಹಿ ಬಬಲೇಶ್ವರ, ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೋಗುವ ಎಲ್ಲಾ ೩೩ ಕೆ.ವ್ಹಿ ಹಾಗೂ ೧೧ ಕೆ.ವ್ಹಿ ವಿದ್ಯುತ್ ಮಾರ್ಗಗಳಿಗೆ ದಿನಾಂಕ: ೨೨-೦೨-೨೦೨೫…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ಜಿಲ್ಲೆಯ ೧೩ ತಾಲೂಕುಗಳಲ್ಲಿ ಮಾರ್ಚ ೦೧ ರಿಂದ ಮಾರ್ಚ್ ೨೦ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಸಸೂತ್ರವಾಗಿ ಹಾಗೂ ವ್ಯವಸ್ಥಿತವಾಗಿ ಜರುಗಿಸುವಂತೆ ನೋಡಿಕೊಳ್ಳಲು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರು ಅವರು ಸೂಚಿಸಿದರು.ನಗರದ ದರಬಾರ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಜಿಲ್ಲೆಯ ಆಲಮೇಲ, ಬಬಲೇಶ್ವರ, ಬಸವನ ಬಾಗೇವಾಡಿ, ವಿಜಯಪುರ, ಚಡಚಣ, ದೇವರಹಿಪ್ಪರಗಿ, ಇಂಡಿ, ಕೋಲ್ಹಾರ, ಮುದ್ದೇಬಿಹಾಳ, ನಿಡಗುಂದಿ, ಸಿಂದಗಿ, ತಾಳಿಕೋಟಿ ಹಾಗೂ ತಿಕೋಟಾ ತಾಲೂಕಿನಲ್ಲಿ ಒಟ್ಟು ೬೩ ಪರೀಕ್ಷಾ ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಯಲಿದ್ದು, ಒಟ್ಟು ೩೪,೪೧೧ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಯಾವುದೇ ಲೋಪವಾಗದೆ ವ್ಯವಸ್ಥಿತವಾಗಿ, ಸುಸೂತ್ರವಾಗಿ ಪರೀಕ್ಷೆ ನಡೆಯುವಂತೆ ನೋಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚಿಸಿದರು.ಪರೀಕ್ಷೆ ಕೇಂದ್ರ ಹಾಗೂ ಕೊಠಡಿಗಳಲ್ಲಿ ಪರೀಕ್ಷಾ ನಿಯಮಗಳನ್ನು ಉಲ್ಲಂಘಿಸುವ ಸಿಬ್ಬಂದಿಗಳ ಮೇಲೆ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲಾಗುವುದು. ಪರೀಕ್ಷೆ ನಿಯೋಜಿತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಡ್ಡಾಯವಾಗಿ ಗುರುತಿನ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸರ್ಕಾರದ ನಿರ್ದೇಶನದಂತೆ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ ನಂ.೨೧, ೧೨ ಹಾಗೂ ೪ನೇ ವಾರ್ಡಗಳಲ್ಲಿ ಅಧಿಕೃತ, ಅನಧಿಕೃತ ಕಟ್ಟಡಗಳ ಹಾಗೂ ನಿವೇಶನಗಳಿಗೆ ಎ ಖಾತೆ ಮತ್ತು ಬಿ ಖಾತೆ ಮಾಡುವ ಕುರಿತು ಫೆ.೨೧ ಹಾಗೂ ೨೨ ರಂದು ಎರಡು ದಿನಗಳ ಕಾಲ ಇ-ಆಸ್ತಿ ಆಂದೋಲನ ಹಮ್ಮಿಕೊಂಡಿದ್ದು, ಸದರಿ ವಾರ್ಡಗಳಲ್ಲಿನ ಆಸ್ತಿ ಮಾಲೀಕರು ತಮ್ಮ ಕಟ್ಟಡ-ನಿವೇಶನಗಳಿಗೆ ಸಂಬಂಧಿಸಿದ ದಾಖಲಾತಿ ಪತ್ರಗಳನ್ನು ಅಭಿಯಾನ ನಡೆಯುವ ಸ್ಥಳದಲ್ಲಿ ನೀಡಿ ಇ-ಖಾತಾ ನಮೂನೆ ೨/೩ನ್ನು ಪಡೆಯಬಹುದಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರಾದ ವಿಜಯಕುಮಾರ ಮೆಕ್ಕಳಕಿ ಅವರು ತಿಳಿಸಿದ್ದಾರೆ.ಸಲ್ಲಿಸಬೇಕಾದ ದಾಖಲೆಗಳು (ಎ ರಜಿಸ್ಟರ್‌ನಲ್ಲಿ ದಾಖಲಿಸಿ ಆಸ್ತಿ ಇ-ಖಾತಾ ಪಡೆಯಲು) : ೧) ಆಸ್ತಿಗೆ ಸಂಬಂಧಿಸಿದ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ನೊಂದಾಯಿತ ಮಾರಾಟ ಪತ್ರ/ ದಾನ ಪತ್ರಗಳು ವಿಭಾಗ ಪತ್ರಗಳು/ ಸಕಾರ ಅಥವಾ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕು ಪತ್ರಗಳು/ ಕಂದಾಯ ಇಲಾಖೆಯಿಂದ ೯೪೪ ಸಿಸಿ ಅಡಿ ನೀಡಲಾದ ಹಕ್ಕು ಪತ್ರ ೨) ಸ್ವತ್ತಿನ ಮಾಲೀಕರ…

Read More

ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಾಲ್ಯದಲ್ಲಿಯೇ ಸೈನ್ಯ ಕಟ್ಟಿದ ಕೀರ್ತಿ ಶಿವಾಜಿ ಮಹಾರಾಜರವರದ್ದು, ಅವರ ಧೈರ್ಯ, ಸ್ಥೈರ್ಯ, ಸಾಹಸ ಹಾಗೂ ಮಹಾತ್ವಾಕಾಂಕ್ಷಿ ಗುಣಗಳನ್ನು ಇಂದಿನ ಯುವಕರು ಮೈಗೂಡಿಸಿಕೊಳ್ಳಬೇಕುಕು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ವತಿಯಿಂದ ಬುಧವಾರ ಹಮ್ಮಿಕೊಂಡ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅವರು, ಶಿವಾಜಿ ಮಹಾರಾಜರು, ತಾಯಿಯ ಮಾರ್ಗದರ್ಶನದಿಂದ ಅಪ್ರತಿಮ ವ್ಯಕ್ತಿತ್ವವನ್ನು ರೂಪಿಸಿಕೊಂಡರು ಎಂದು ಹೇಳಿದರು.ಶಿವಾಜಿ ಮಹಾರಾಜರು ಉತ್ತಮ ಆಡಳಿತಗಾರರಾಗಿದ್ದರು. ಗೆರಿಲ್ಲಾ ಯುದ್ದ ಕೌಶಲ್ಯ ಸೈನ್ಯದಲ್ಲಿ ಅಳವಡಿಸಿಕೊಂಡಿದ್ದ ಅವರ ಧೈರ್ಯ-ಸಾಹಸ, ಉತ್ತಮ ಆಡಳಿತ ಇಂದಿನ ಪಿಳಿಗೆಗೆ ಪ್ರೇರಣಾದಾಯಕವಾಗಿದೆ ಎಂದು ಅವರು ಹೇಳಿದರು.ಛತ್ರಪತಿ ಶಿವಾಜಿ ಮಹಾರಾಜರ ಕುರಿತು ಉಪನ್ಯಾಸ ನೀಡಿದ ಡಾ. ಆನಂದ ಕುಲಕರ್ಣಿ ಅವರು ಶಿವಾಜಿ ಮಹಾರಾಜರ ಮಹಾನ ವ್ಯಕ್ತಿತ್ವ ದಾರ್ಶನಿಕ ವಿಚಾರಧಾರೆಗಳು,…

Read More

ಇಂದಿನಿಂದ (ಫೆ.೨೦ ರಿಂದ ಫೆ.೨೫ ರವರೆಗೆ) ಮಳ್ಳಿ ಗ್ರಾಮದೇವತೆ ಚೌಡೇಶ್ವರಿ, ನಾಗರಳ್ಳಿಯ ಗ್ರಾಮದೇವತೆ ದ್ಯಾವಮ್ಮನ ಅದ್ಧೂರಿ ಜನಪದ ಜಾತ್ರೆ ಪ್ರಯುಕ್ತ ಈ ವಿಶೇಷ ಲೇಖನ ಲೇಖನ- ಡಾ. ಸಂತೋಷ ನವಲಗುಂದಮಳ್ಳಿ ಉದಯರಶ್ಮಿ ದಿನಪತ್ರಿಕೆ ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನಿಂದ ೧೨ ಕಿ.ಮೀ ದೂರದಲ್ಲಿರುವ, ಶಹಾಪುರ-ಸಿಂದಗಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಮಳ್ಳಿ ಗ್ರಾಮವು ಶ್ರಿ ಚೌಡೇಶ್ವರಿ ಜಾತ್ರೆಯ ಉತ್ಸವಕ್ಕಾಗಿಯೇ ಪ್ರಸಿದ್ಧಿ ಪಡೆದಿದೆ. ಮಳ್ಳಿಯಿಂದ ಕೂಗಳತೆಯಲ್ಲಿರುವ ಚಿಕ್ಕ ಗ್ರಾಮ ನಾಗರಳ್ಳಿ. ಇಲ್ಲಿ ದ್ಯಾವಮ್ಮ ದೇವಿ ನೆಲೆಸಿದ್ದಾಳೆ. ಈ ಎರಡೂ ಊರುಗಳು ‘ಸಹೋದರ ಗ್ರಾಮಗಳೆಂದೆ’ ಹೆಸರು ಪಡೆದಿವೆ. ಸಗರನಾಡಿನಲ್ಲಿಯೇ ವೈಶಿಷ್ಟತೆಯಿಂದ ಜರುಗಲಿರುವ ಜಾತ್ರೆ ಎಂದರೆ ಮಳಲಿ(ಮಳ್ಳಿ)ಯ ಶ್ರೀ ಚೌಡೇಶ್ವರಿ ಜಾತ್ರೆ ಹಾಗೂ ನಾಗರಳ್ಳಿ ದ್ಯಾವಮ್ಮ ದೇವಿಯ ಉತ್ಸವ ಪ್ರತಿ ಎರಡು ವರ್ಷಕ್ಕೊಮ್ಮೆ ಶಿವರಾತ್ರಿ ಅಮವಾಸ್ಯೆಯ ಹಿಂದಿನ ಶುಕ್ರವಾರದಂದು ಜಾತ್ರೆ ನಡೆಯುತ್ತದೆ. ಐದು ದಿನಗಳ ಕಾಲ ವಿಜೃಂಭಣೆಯಿಂದ ಜರುಗುವ ಜಾತ್ರೆಯಲ್ಲಿ ನಾಡಿನ ನಾನಾ ಮೂಲೆಗಳಿಂದ ಭಕ್ತಸಾಗರವೇ ಹರಿದು ಬರುತ್ತದೆ. ನಾಳೆ ಗುರುವಾರ( ಫೆ.೨೦) ದಿಂದ ಪ್ರಾರಂಭವಾಗುವ ಜಾತ್ರೆ…

Read More