ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೆ.ಪಿ.ಟಿ.ಸಿ.ಎಲ್ ವತಿಯಿಂದ ೧೧೦ ಕೆ.ವ್ಹಿ ಕಾಖಂಡಕಿಯಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿದ್ದು, ಸ್ಥಾವರ ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಮಮದಾರಪುರ-೧ ಹಾಗೂ ರೋಣಿಹಾಳ, ಮಮದಾಪುರ-೨ರ ಮಾರ್ಗಗಳ ೧೧೦ ಕೆ.ವ್ಹಿ, ಮಮದಾಪುರ, ೧೧೦ ಕೆ.ವ್ಹಿ ದೇವರಗೆಣ್ಣೂರು, ೧೧೦ ಕೆ.ವ್ಹಿ ಬೆಳ್ಳುಬ್ಬಿ, ೧೧೦ ಕೆ.ವ್ಹಿ ಶಿರಬೂರ, ೧೧೦ ಕೆ.ವ್ಹಿ ಕಂಬಾಗಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೋಗುವ ಎಲ್ಲಾ ೩೩ ಕೆ.ವ್ಹಿ ಹಾಗೂ ೧೧ ಕೆ.ವ್ಹಿ ವಿದ್ಯುತ್ ಮಾರ್ಗಗಳಿಗೆ ದಿನಾಂಕ ೨೧-೦೨-೨೦೨೫ ಹಾಗೂ ೨೨-೦೨-೨೦೨೫ಕ್ಕೆ ಬೆಳಿಗ್ಗೆ ೬ ರಿಂದ ಸಂಜೆ ೬ ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಈ ಎಲ್ಲ ಐ ಪಿ ಫೀಡರಗಳಿಗೆ ೩ ರಿಂದ ೪ ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಲಾಗುವುದು.
ದಿನಾಂಕ:೨೧-೦೨-೨೦೨೫ ರಂದು ೧೧೦ ಕೆ.ವ್ಹಿ ಮಮದಾಪುರ, ೧೧೦ ಕೆ.ವ್ಹಿ ಬೆಳ್ಳುಬ್ಬಿ, ೧೧೦ ಕೆ.ವ್ಹಿ ಕಂಬಾಗಿ ಹಾಗೂ ೧೧೦ ಕೆ.ವ್ಹಿ ಬಬಲೇಶ್ವರ, ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೋಗುವ ಎಲ್ಲಾ ೩೩ ಕೆ.ವ್ಹಿ ಹಾಗೂ ೧೧ ಕೆ.ವ್ಹಿ ವಿದ್ಯುತ್ ಮಾರ್ಗಗಳಿಗೆ ದಿನಾಂಕ: ೨೨-೦೨-೨೦೨೫ ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಆದ್ದರಿಂದ ಗ್ರಾಹಕರು ಸಹಕರಿಸುವಂತೆ ವಿಜಯಪುರ ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.
