Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಶಿಕ್ಷಣ ಸಚಿವರನ್ನು ಬೇಟಿಯಾದ ಶಿಕ್ಷಕರ ಸಂಘದ ಮುಖಂಡರು ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಕಾನೂನು ಇಲಾಖೆಯ ಅಭಿಪ್ರಾಯದಂತೆ ಕೂಡಲೇ ವೃಂದ ಮತ್ತು ನೇಮಕಾತಿ ನಿಯಮಗಳ ಸಮಸ್ಯೆಯನ್ನು ಪರಿಹರಿಸಬೇಕೆಂದು ಕನಾ೯ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಒತ್ತಾಯಿಸಿದೆ.ಸಂಘದ ಮುಖಂಡರು ದಿ,16 ರಂದು ಬುಧವಾರ ಬೆಳಗಿನ ವೇಳೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರನ್ನು ಬೇಟಿಯಾಗಿ ನೇಮಕಾತಿ ನಿಯಮಗಳ ಸಮಸ್ಯೆ ನಿವೇದಿಸಿಕೊಂಡರು.ಸಂಘದ ರಾಜ್ಯಾಧ್ಯಕ್ಷ ಕೆ.ನಾಗೇಶ, ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಅವರ ಮುಂದಾಳತ್ವದಲ್ಲಿ ಸಂಘದ ಪ್ರಮುಖರು ರಾಜಧಾನಿಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಬೇಟಿಯಾಗಿ ನೇಮಕಾತಿ ನಿಯಮಗಳ ಕುರಿತು ಕಾನೂನು ಇಲಾಖೆ ಸಮ್ಮತಿಸಿದ ಅಭಿಪ್ರಾಯ ಬಗ್ಗೆ ಚಚಿ೯ಸಿದರು.ಈ ವೇಳೆ ಸಚಿವರಾದ ಮಧು ಬಂಗಾರಪ್ಪ ನವರು ಚಚಿ೯ತ ಎಲ್ಲ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರು. ಕಾನೂನು ಇಲಾಖೆಯ ಅಭಿಪ್ರಾಯ ಒಳ್ಳೆಯ ರೀತಿಯಲ್ಲಿ ಸಲ್ಲಿಕೆಯಾಗಿದೆ. ಇಂದು ಬುಧವಾರ ಕೂಡಾ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆಯಿದೆ. ಸಾಧ್ಯವಾದಷ್ಟು ಬೇಗನೆ ಈ ಸಮಸ್ಯೆಗಳನ್ನು…
ಜಿಲ್ಲೆಗೆ ೮ನೇ ಸ್ಥಾನ ಪಡೆದ ಸುಶ್ಮೀತಾ | ಶೇ.೧೦೦ ಫಲಿತಾಂಶ ದಾಖಲಿಸಿದ ಶ್ರೀಶರಣಬಸವೇಶ್ವರ ಪಿಯು ಸೈನ್ಸ್ ಕಾಲೇಜು ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಪ್ರತಿಷ್ಠಿತ ಶ್ರೀ ಶರಣಬಸವೇಶ್ವರ ಪಿಯು ವಿಜ್ಞಾನ ಕಾಲೇಜು ದ್ವಿತಿಯ ಪಿಯುಸಿ ಫಲಿತಾಂಶದಲ್ಲಿ ಶೇಕಡಾ ನೂರರಷ್ಟು ಫಲಿತಾಂಶದೊಂದಿಗೆ ಮೊದಲ ವರ್ಷದಲ್ಲೇ ಅದ್ಭುತ ಸಾಧನೆ ಮೆರೆದಿದೆ.೨೦೨೪-೨೫ನೇ ಸಾಲಿನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಅತ್ಯುತ್ತವ ಫಲಿತಾಂಶದೊಂದಿಗೆ ಉತ್ತೀರ್ಣರಾಗಿ, ಕಾಲೇಜಿನ ಫಲಿತಾಂಶ ಶೇಕಡಾ ೧೦೦ ದಾಖಲೆ ಬರೆಯಲು ಕಾರಣವಾಗಿದೆ.೧೦ ವಿದ್ಯಾರ್ಥಿಗಳು ಶೇ.೯೦ ಕ್ಕಿಂತ ಹೆಚ್ಚಿನ ಅಂಕದೊಂದಿಗೆ ಅತ್ಯುನ್ನತ ಶ್ರೇಣಿ ಪಡೆದಿದ್ದರೆ, ೧೮ ವಿದ್ಯಾರ್ಥಿಗಳು ಶೇ.೮೫ ಕ್ಕೂ ಹೆಚ್ಚಿನ ಅಂಕದೊಂದಿಗೆ ಉನ್ನತ ಶ್ರೇಣಿಯಲ್ಲಿ ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ. ೪೬ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ.ಶೇ.೯೭ ಅಂಕ ಪಡೆದಿರುವ ಸುಶ್ಮೀತಾ ಬಿದರಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದು, ಜಿಲ್ಲೆಗೆ ೮ನೇ ಸ್ಥಾನ ಜೀವಶಾಸ್ತ್ರದಲ್ಲಿ ಶೇ.೧೦೦ ಅಂಕ ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾಳೆ.ಗಂಗಾಧರ ಕುಂಬಾರ ಶೇ.೯೪.೬೭, ಗಾಯತ್ರಿ ಗಗನಮಾಲೆ ಶೇ.೯೪.೩೩,…
ವಿಜಯಪುರದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಕೀಲ್ ಬಾಗಮಾರೆ ಮನವಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪದೇ ಪದೇ ಶಾಂತಿ, ಸೌಹಾರ್ದತೆ ಕದಡುವ ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಒತ್ತಡ ಹೇರುವಂತೆ ಒತ್ತಾಯಿಸಿ ವಿಜಯಪುರದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಕೀಲ್ ಬಾಗಮಾರೆ ನೇತೃತ್ವದ ನಿಯೋಗ ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಅವರಿಗೆ ಮನವಿ ಸಲ್ಲಿಸಿದರು.ಬಿಜೆಪಿಯಿಂದ ಉಚ್ಚಾಟಿತವಾಗಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮುಸ್ಲಿಂ ಸಮುದಾಯದ ವಿರುದ್ಧ ನಿತ್ಯ ಅಪಮಾನಕಾರಿ ಭಾಷೆ ಬಳಸಿ, ಅವರನ್ನು ಪಾಕಿಸ್ತಾನೀ ಎಂದು ಕರೆಯುತ್ತಿದ್ದಾರೆ. ಪ್ರವಾದಿರವರ ಹಾಗೂ ಮುಸ್ಲಿಮರ ನಾಯಕರಾದ ಟಿಪ್ಪು ಸುಲ್ತಾನ್ ಮತ್ತು ಔರಂಗಜೇಬ್ ಅವರನ್ನು ಕೂಡ ನಿಂದಿಸುತ್ತಾರೆ. ಆದರೆ ಈ ಬಾರಿ ಇವರು ತಮ್ಮ ಅವಹೇನಕಾರಿ ಭಾಷನದ ಮೂಲಕ ಹುಬ್ಬಳ್ಳಿಯಲ್ಲಿ ರಾಮನವಮಿ ದಿನ ಮುಸ್ಲಿಂ ಧರ್ಮದ ಪ್ರವಾದಿ ಮುಹಮ್ಮದ್ ಪೈಗಂಬರ್ ವಿರುದ್ಧ ಅವಹೇಳನಕಾರಿಯಾಗಿ…
ಮುಡಾ ಹಗರಣ ಬಗ್ಗೆ ಸಿಬಿಐ ತನಿಖೆ ಕೋರಿ ಅರ್ಜಿ | ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ಮೇಲ್ಮನವಿ ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ನಿರ್ದೇಶನ ಕೋರಿ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಹಾಗೂ ಇತರರಿಗೆ ನೋಟಿಸ್ ಜಾರಿ ಮಾಡಿದೆ.ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಿಂದ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಬಿ.ಎಂ ಅವರಿಗೆ 14 ನಿವೇಶನಗಳನ್ನು ಅಕ್ರಮ ಹಂಚಿಕೆ ಬಗ್ಗೆ ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸರು ಈಗಾಗಲೇ ಬಿ ರಿಪೋರ್ಟ್ ಸಲ್ಲಿಸಿದ್ದಾರೆ.ಆದರೆ ಲೋಕಾಯುಕ್ತ ಪಾರದರ್ಶಕ ತನಿಖೆ ನಡೆಸಿಲ್ಲ ಎಂದು ಆರೋಪಿಸಿದ ಸ್ನೇಹಮಯಿ ಕೃಷ್ಣ ಅವರು, ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆ(ಸಿಬಿಐ)ಗೆ ವರ್ಗಾಯಿಸಬೇಕೆಂಬ ಮನವಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಫೆಬ್ರವರಿ 7 ರಂದು ತಿರಸ್ಕರಿಸಿತ್ತು. ಈ ಆದೇಶ ಪ್ರಶ್ನಿಸಿ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ…
ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಭರವಸೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಾಡಿನ ಸಮಸ್ತ ಮಕ್ಕಳ ಸೇವೆಗಾಗಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಸದಾ ಸಿದ್ಧವಾಗಿದೆ. ಮಕ್ಕಳ ಸೇವೆ ಭಗವಂತನ ಸೇವೆ, 23 ವರ್ಷಗಳಿಂದ ಸತತವಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಬೇಸಿಗೆ ಶಿಬಿರವನ್ನು ಏರ್ಪಡಿಸುವುದರ ಮೂಲಕ ಈ ಭಾಗದ ಮಕ್ಕಳ ಬಾಳಿಗೆ ಬೆಳಕು ನೀಡುತ್ತಿರುವ ಕನ್ನೂರಿನ ಶಾಂತಿ ಕುಠೀರದ ಗಣಪತರಾವ ಮಹಾರಾಜರ ಶಾಂತಿ ಕುಟೀರದ ಕಾರ್ಯ ನಿಜಕ್ಕೂ ಅಭಿನಂದನಾರ್ಹವಾದದ್ದು ಎಂದು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.ಅವರು ವಿಜಯಪುರ ತಾಲೂಕಿನ ಕನ್ನೂರು ಶಾಂತಿ ಕುಟಿರದಲ್ಲಿ ನಡೆಯುತ್ತಿರುವ ವಿಶೇಷ ಬೇಸಿಗೆ ಶಿಬಿರದ ವಿದ್ಯಾರ್ಥಿಗಳಿಗೆ ಎಸ್, ಎಸ್, ಎಲ್, ಸಿ ವಿದ್ಯಾರ್ಥಿಗಳಿಗೆ ಕರ್ನಾಟಕ ಬಾಲವಿಕಾಸ ಅಕಾಡೆಮಿಯಿಂದ ಉಚಿತವಾಗಿ ಪುಸ್ತಕಗಳನ್ನು ವಿತರಿಸಿ ಅವರು ಮಾತನಾಡಿದರು.ಒಂದು ತಿಂಗಳವರೆಗೆ ಸುಮಾರು 515 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಅವರ ಸರ್ವಾಂಗಿನ ವ್ಯಕ್ತಿತ್ವ ಬೆಳವಣಿಗೆಗೆ ಪೂರಕವಾದ ಸಂಸ್ಕಾರಯುತವಾದ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸುವ…
ತಾಪಮಾನದ ಏರಿಕೆಗೆ ಜನತೆ ಹೈರಾಣ | ಗಗನಕ್ಕೇರುತ್ತಿದೆ ತಂಪು ಪಾನೀಯಗಳ ಬೆಲೆ ಉದಯರಶ್ಮಿ ದಿನಪತ್ರಿಕೆ ವರದಿ: ಎಸ್ ಎಮ್ ಇಟ್ಟಿ ಜಮಖಂಡಿ: ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಬೇಸಿಗೆ ಬಿಸಿ ಏರುತ್ತಿದ್ದು, ಜನತೆ ತಾಪ ತಾಳಲಾರದೆ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಬೆಳಗ್ಗೆ 9.30ರಿಂದ ಆರಂಭವಾಗುವ ಬಿಸಿಲಿನ ಪ್ರಖರತೆಗೆ ಜನತೆ ರೋಸಿ ಹೋಗಿದ್ದಾರೆ. ಕಲ್ಲಂಗಡಿ, ದ್ರಾಕ್ಷಿ, ಮೋಸಂಬಿ, ಎಳನೀರು, ಮಜ್ಜಿಗಿ ಮತ್ತಿತರ ತಂಪು ಪಾನೀಯಗಳಿಗೆ ಬೇಡಿಕೆ ಅಧಿಕವಾಗುತ್ತಿದೆ.ಗಗನಕ್ಕೇರಿದ ಬೆಲೆ: ಬಿಸಿಲಿನ ತಾಪದೊಂದಿಗೆ ತಂಪು ಪಾನೀಯಗಳ ಬೆಲೆಯೂ ಗಗನಕ್ಕೇರಿರುವುದರಿಂದ ಜನತೆಯ ಜೇಬಿಗೆ ಕತ್ತರಿ ಬೀಳುತ್ತಿದೆ. 35 ರೂ. ಇದ್ದ ಎಳನೀರು 45 ರೂ. ಆಗಿದೆ. ಕಲ್ಲಂಗಡಿ ಹಣ್ಣಿನ ಬೆಲೆ 50 ರಿಂದ 100 ರೂ.ವರೆಗೆ ಇದೆ. 10 ರೂ.ಗೆ 3 ನಿಂಬೆ ದೊರೆಯುತ್ತಿವೆ. ಹಣ್ಣು, ಲಸ್ಸಿ, ಮಜ್ಜಿಗೆ, ಕಬ್ಬಿನ ಹಾಲು ಮತ್ತಿತರ ಪಾನೀಯಗಳ ಬೆಲೆಯೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಬದುಕು ದುಸ್ತರ: ಈ ವರ್ಷ ಬಿಸಿಲಿನ ಜಳಕ್ಕೆ ಭೂಮಿ ಕಾದ ಕಬ್ಬಿಣದಂತಾಗಿದ್ದು, ಜನತೆ ಮನೆಯಿಂದ…
ಕಾಂಗ್ರೆಸ್ ಸರ್ಕಾರದಿಂದ ಮುಸ್ಲಿಂ ಓಲೈಕೆ, ದಲಿತರ ಹಣ ಲೂಟಿ, ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ :ಶಾಸಕ ಗುಡಗುಂಟಿ ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಬಾಗಲಕೊಟೆಯಲ್ಲಿ ಇಂದು ಬಿಜೆಪಿಯಿಂದ ಜನಾಕ್ರೋಶ ಯಾತ್ರೆ ನಡೆಯಲಿದೆ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.ಮಂಗಳವಾರ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ, ಮುಸ್ಲಿಂ ಓಲೈಕೆ ಹಾಗೂ ದಲಿತರ ಹಣ ಲೂಟಿಯ ವಿರುದ್ದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.ರಾಜ್ಯ ಸರ್ಕಾರ ಎಸ್ಸಿ, ಎಸ್ಟಿ ಅಭಿವೃದ್ಧಿ ಯೋಜನೆಯ 38,860 ಕೋಟಿ ಹಣವನ್ನು ದುರ್ಬಳಕೆಮಾಡಿಕೊಂಡಿದೆ. ಎಸ್‌ಸಿಎಸ್‌ಪಿ, ಟಿಎಸ್‌ಪಿಯ ಸುಮಾರು 10 ಸಾವಿರ ಕೋಟಿ ಹಣವನ್ನು ಅಲ್ಪಸಂಖ್ಯಾತರಿಗೆ ವರ್ಗಮಾಡಿದೆ. ಮಿತಿ ಮೀರಿ ಮುಸ್ಲಿಂ ಓಲೈಕೆ ಮಾಡುತ್ತಿದ್ದು, ಸರ್ಕಾರಿ ಗುತ್ತಿಗೆಯಲ್ಲಿ ಮೀಸಲಾತಿ, ಶಾದಿ ಭಾಗ್ಯಕ್ಕೆ ₹50 ಸಾವಿರ, ಉರ್ದು ಶಾಲೆಗಳಿಗೆ 500 ಕೊಟಿ, ಮುಸ್ಲಿಂ ವಿದ್ಯಾರ್ಥಿಗಳ ವಿದೇಶಿ ಆಭ್ಯಾಸಕ್ಕೆ 30 ಲಕ್ಷ, ಅಭಿವೃದ್ಧಿಗೆ ₹4500 ಕೋಟಿ ಮೀಸಲು, ಕಾಲೋನಿಗಳ ಅಭಿವೃದ್ಧಿಗೆ ಸಾವಿರಕೋಟಿ ಮೀಸಲಿಟ್ಟು ಉಳಿದ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ೨೦೨೫-೨೬ನೇ ಸಾಲಿನ ಪ್ರತಿಷ್ಟಿತ ಶಾಲೆ ಯೋಜನೆಯಡಿ ಜಿಲ್ಲೆಯ ಪ್ರತಿಷ್ಟಿತ ಶಾಲೆಗಳಿಗೆ ೬ನೇ ತರಗತಿ ಪ್ರವೇಶ ಪರೀಕ್ಷೆಗೆ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಅರ್ಹ ಅಭ್ಯರ್ಥಿಗಳು ಇಲಾಖೆ ವೆಬ್ ಸೈಟ್ https://swd.karnataka.gov.inನಲ್ಲಿ ದಿನಾಂಕ:೦೩-೦೫-೨೦೨೫ ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಪ್ರಕಟಣೆ ತಿಳಿಸಿದೆ.
ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಂದಿನ ಯುವಕರು ನಮ್ಮ ದೇಶದ ಸೈನಿಕರು ಗಡಿಯಲ್ಲಿ ಕಾದಂತೆ ಅದರಂತೆ ವಿದ್ಯಾರ್ಥಿಗಳು ಎನ್ ಎಸ್ ಎಸ್ ಸೇವೆಯ ಮೂಲಕ ಕಾರ‍್ಯಪ್ರವೃತ್ತರಾಗಬೇಕಿದೆ ಎಂದು ವಿಜಯಪುರ ತಾಲೂಕು ಎನ್ ಎಸ್ ಎಸ್ ಪ್ರಭಾರಿ ಸಂಯೋಜನಾಧಿಕಾರಿ ಪ್ರೊ. ರಾಜು ಬಿ.ಕಪಾಲಿ ಹೇಳಿದರು.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ, ರಾಷ್ಟ್ರೀಯ ಸೇವಾ ಯೋಜನೆಯ ಘಟಕ ೧ & ೨ ಸಂಯೋಜನೆಯಡಿ ೨೦೨೪-೨೫ ನೇ ಸಾಲಿನ ಹಂಚನಾಳ ಪಿಹೆಚ್ ಗ್ರಾಮದಲ್ಲಿ ಏ.೧೩ ರಂದು ಎನ್ ಎಸ್ ಎಸ್ ೭ ದಿನಗಳ ವಿಶೇಷ ಶಿಬಿರ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ಸ್ವಯಂ ಸೇವೆಯ ಮೂಲಕ ದೇಶ ಸೇವೆಗೆ ಮುಂದಾಗಬೇಕು. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಲು ನಾವೆಲ್ಲರೂ ಶ್ರಮಿಸಬೇಕಾಗಿದೆ. ಅದರಂತೆ ವಿದ್ಯಾರ್ಥಿಗಳು ಇಂತಹ ೭ ದಿನಗಳ ಕ್ಯಾಂಪ್‌ಗಳು ಕೇವಲ…
ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಂದಿನ ಯುವಕರು ನಮ್ಮ ದೇಶದ ಸೈನಿಕರು ಗಡಿಯಲ್ಲಿ ಕಾದಂತೆ ಅದರಂತೆ ವಿದ್ಯರ‍್ಥಿಗಳು ಎನ್ ಎಸ್ ಎಸ್ ಸೇವೆಯ ಮೂಲಕ ಕಾರ‍್ಯಪ್ರವೃತ್ತರಾಗಬೇಕಿದೆ ಎಂದು ವಿಜಯಪುರ ತಾಲೂಕು ಎನ್ ಎಸ್ ಎಸ್ ಪ್ರಭಾರಿ ಸಂಯೋಜನಾಧಿಕಾರಿ ಪ್ರೊ. ರಾಜು ಬಿ.ಕಪಾಲಿ ಹೇಳಿದರು.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ, ರಾಷ್ಟ್ರೀಯ ಸೇವಾ ಯೋಜನೆಯ ಘಟಕ ೧ & ೨ ಸಂಯೋಜನೆಯಡಿ ೨೦೨೪-೨೫ ನೇ ಸಾಲಿನ ಹಂಚನಾಳ ಪಿಹೆಚ್ ಗ್ರಾಮದಲ್ಲಿ ಏ.೧೩ ರಂದು ಎನ್ ಎಸ್ ಎಸ್ ೭ ದಿನಗಳ ವಿಶೇಷ ಶಿಬಿರ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ಸ್ವಯಂ ಸೇವೆಯ ಮೂಲಕ ದೇಶ ಸೇವೆಗೆ ಮುಂದಾಗಬೇಕು. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಲು ನಾವೆಲ್ಲರೂ ಶ್ರಮಿಸಬೇಕಾಗಿದೆ. ಅದರಂತೆ ವಿದ್ಯಾರ್ಥಿಗಳು ಇಂತಹ ೭ ದಿನಗಳ ಕ್ಯಾಂಪ್‌ಗಳು ಕೇವಲ…
