ಜಿಲ್ಲೆಗೆ ೮ನೇ ಸ್ಥಾನ ಪಡೆದ ಸುಶ್ಮೀತಾ | ಶೇ.೧೦೦ ಫಲಿತಾಂಶ ದಾಖಲಿಸಿದ ಶ್ರೀಶರಣಬಸವೇಶ್ವರ ಪಿಯು ಸೈನ್ಸ್ ಕಾಲೇಜು
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಪ್ರತಿಷ್ಠಿತ ಶ್ರೀ ಶರಣಬಸವೇಶ್ವರ ಪಿಯು ವಿಜ್ಞಾನ ಕಾಲೇಜು ದ್ವಿತಿಯ ಪಿಯುಸಿ ಫಲಿತಾಂಶದಲ್ಲಿ ಶೇಕಡಾ ನೂರರಷ್ಟು ಫಲಿತಾಂಶದೊಂದಿಗೆ ಮೊದಲ ವರ್ಷದಲ್ಲೇ ಅದ್ಭುತ ಸಾಧನೆ ಮೆರೆದಿದೆ.
೨೦೨೪-೨೫ನೇ ಸಾಲಿನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಅತ್ಯುತ್ತವ ಫಲಿತಾಂಶದೊಂದಿಗೆ ಉತ್ತೀರ್ಣರಾಗಿ, ಕಾಲೇಜಿನ ಫಲಿತಾಂಶ ಶೇಕಡಾ ೧೦೦ ದಾಖಲೆ ಬರೆಯಲು ಕಾರಣವಾಗಿದೆ.
೧೦ ವಿದ್ಯಾರ್ಥಿಗಳು ಶೇ.೯೦ ಕ್ಕಿಂತ ಹೆಚ್ಚಿನ ಅಂಕದೊಂದಿಗೆ ಅತ್ಯುನ್ನತ ಶ್ರೇಣಿ ಪಡೆದಿದ್ದರೆ, ೧೮ ವಿದ್ಯಾರ್ಥಿಗಳು ಶೇ.೮೫ ಕ್ಕೂ ಹೆಚ್ಚಿನ ಅಂಕದೊಂದಿಗೆ ಉನ್ನತ ಶ್ರೇಣಿಯಲ್ಲಿ ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ. ೪೬ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
ಶೇ.೯೭ ಅಂಕ ಪಡೆದಿರುವ ಸುಶ್ಮೀತಾ ಬಿದರಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದು, ಜಿಲ್ಲೆಗೆ ೮ನೇ ಸ್ಥಾನ ಜೀವಶಾಸ್ತ್ರದಲ್ಲಿ ಶೇ.೧೦೦ ಅಂಕ ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾಳೆ.
ಗಂಗಾಧರ ಕುಂಬಾರ ಶೇ.೯೪.೬೭, ಗಾಯತ್ರಿ ಗಗನಮಾಲೆ ಶೇ.೯೪.೩೩, ರಕ್ಷಿತಾ ಸಿಂಧೆ ಶೇ.೯೨.೫೦, ವೈಷ್ಣವಿ ಮೇತ್ರಿ ಶೇ.೯೨.೩೩, ಪ್ರೀಯಂಕ ನಾಯಕ್ ಶೇ.೯೨, ಸೃಷ್ಟಿ ಉಳ್ಳಿ ಶೇ.೯೨, ಯಶವಂತ ವಗ್ಗೆನವರ್ ಶೇ.೯೧, ಕಿರಣ ತೋಟದ ಶೇ.೯೦.೫೦, ವೈದೆಹಿ ಜಾಧವ ಶೇ.೯೦, ರಂಜೀತ್ ಚವ್ಹಾಣ ಶೇ.೮೮.೧೭ ಫಲಿತಾಂಶ ಪಡೆಯುವ ಮೂಲಕ ವ್ಯಕ್ತಿಗತ ಸಾಧನೆ ಹಾಗೂ ನಮ್ಮ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಕಾಲೇಜಿಗೆ ಕೀರ್ತಿ ತಂದಿರುವ ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು, ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದ ಹರ್ಷ ವ್ಯಕ್ತಪಡಿಸಿದ್ದು, ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ಇದಲ್ಲದೇ ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರವೇಶಕ್ಕಾಗಿ ಕಾಲೇಜಿನ ಪ್ರವೇಶಗಳು ಪ್ರಾರಂಭವಾಗಿದ್ದು, ಪ್ರವೇಶಕ್ಕಾಗಿ ಮೊ. ೭೭೦೯೫೧೧೯೭೨ / ೭೬೭೬೧೪೫೭೬೦ ಸಂಪರ್ಕಿಸುವಂತೆ ಪ್ರಾಚಾರ್ಯರು ಮನವಿ ಮಾಡಿದ್ದಾರೆ.

