ಶಿಕ್ಷಣ ಸಚಿವರನ್ನು ಬೇಟಿಯಾದ ಶಿಕ್ಷಕರ ಸಂಘದ ಮುಖಂಡರು
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಕಾನೂನು ಇಲಾಖೆಯ ಅಭಿಪ್ರಾಯದಂತೆ ಕೂಡಲೇ ವೃಂದ ಮತ್ತು ನೇಮಕಾತಿ ನಿಯಮಗಳ ಸಮಸ್ಯೆಯನ್ನು ಪರಿಹರಿಸಬೇಕೆಂದು ಕನಾ೯ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಒತ್ತಾಯಿಸಿದೆ.
ಸಂಘದ ಮುಖಂಡರು ದಿ,16 ರಂದು ಬುಧವಾರ ಬೆಳಗಿನ ವೇಳೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರನ್ನು ಬೇಟಿಯಾಗಿ ನೇಮಕಾತಿ ನಿಯಮಗಳ ಸಮಸ್ಯೆ ನಿವೇದಿಸಿಕೊಂಡರು.
ಸಂಘದ ರಾಜ್ಯಾಧ್ಯಕ್ಷ ಕೆ.ನಾಗೇಶ, ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಅವರ ಮುಂದಾಳತ್ವದಲ್ಲಿ ಸಂಘದ ಪ್ರಮುಖರು ರಾಜಧಾನಿಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಬೇಟಿಯಾಗಿ ನೇಮಕಾತಿ ನಿಯಮಗಳ ಕುರಿತು ಕಾನೂನು ಇಲಾಖೆ ಸಮ್ಮತಿಸಿದ ಅಭಿಪ್ರಾಯ ಬಗ್ಗೆ ಚಚಿ೯ಸಿದರು.
ಈ ವೇಳೆ ಸಚಿವರಾದ ಮಧು ಬಂಗಾರಪ್ಪ ನವರು ಚಚಿ೯ತ ಎಲ್ಲ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರು. ಕಾನೂನು ಇಲಾಖೆಯ ಅಭಿಪ್ರಾಯ ಒಳ್ಳೆಯ ರೀತಿಯಲ್ಲಿ ಸಲ್ಲಿಕೆಯಾಗಿದೆ. ಇಂದು ಬುಧವಾರ ಕೂಡಾ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆಯಿದೆ. ಸಾಧ್ಯವಾದಷ್ಟು ಬೇಗನೆ ಈ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಶಿಕ್ಷಣ ಸಚಿವರು ಬೇಟಿಯಾದ ಶಿಕ್ಷಕರ ಸಂಘದ ನಿಯೋಗಕ್ಕೆ ಭರವಸೆ ನೀಡಿದರು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಗಡಿ ತಾಲೂಕಿನ ಶಿಕ್ಷಕರ ಸಂಘದ ಪದಾಧಿಕಾರಿಗಳು, ಪ್ರಮುಖರಾದ ಮೂತಿ೯, ತಾಲೂಕಾ ಮಾಜಿ ಅಧ್ಯಕ್ಷ ಕೆ.ಪಿ.ರವರು ಉಪಸ್ಥಿತರಿದ್ದರು.