ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇಂದಿನ ಯುವಕರು ನಮ್ಮ ದೇಶದ ಸೈನಿಕರು ಗಡಿಯಲ್ಲಿ ಕಾದಂತೆ ಅದರಂತೆ ವಿದ್ಯಾರ್ಥಿಗಳು ಎನ್ ಎಸ್ ಎಸ್ ಸೇವೆಯ ಮೂಲಕ ಕಾರ‍್ಯಪ್ರವೃತ್ತರಾಗಬೇಕಿದೆ ಎಂದು ವಿಜಯಪುರ ತಾಲೂಕು ಎನ್ ಎಸ್ ಎಸ್ ಪ್ರಭಾರಿ ಸಂಯೋಜನಾಧಿಕಾರಿ ಪ್ರೊ. ರಾಜು ಬಿ.ಕಪಾಲಿ ಹೇಳಿದರು.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ, ರಾಷ್ಟ್ರೀಯ ಸೇವಾ ಯೋಜನೆಯ ಘಟಕ ೧ & ೨ ಸಂಯೋಜನೆಯಡಿ ೨೦೨೪-೨೫ ನೇ ಸಾಲಿನ ಹಂಚನಾಳ ಪಿಹೆಚ್ ಗ್ರಾಮದಲ್ಲಿ ಏ.೧೩ ರಂದು ಎನ್ ಎಸ್ ಎಸ್ ೭ ದಿನಗಳ ವಿಶೇಷ ಶಿಬಿರ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ಸ್ವಯಂ ಸೇವೆಯ ಮೂಲಕ ದೇಶ ಸೇವೆಗೆ ಮುಂದಾಗಬೇಕು. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಲು ನಾವೆಲ್ಲರೂ ಶ್ರಮಿಸಬೇಕಾಗಿದೆ. ಅದರಂತೆ ವಿದ್ಯಾರ್ಥಿಗಳು ಇಂತಹ ೭ ದಿನಗಳ ಕ್ಯಾಂಪ್‌ಗಳು ಕೇವಲ ಸ್ವಚ್ಛತೆ ಅಲ್ಲದೆ ಶಿಸ್ತು, ವ್ಯಕ್ತಿತ್ವ ವಿಕಸನ, ಜೀವನದ ಮೌಲ್ಯಗಳನ್ನು ಅರ‍್ಧೈಸಿಕೊಳ್ಳಲು ಇಂತಹ ಶಿಬಿರವು ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾಗಿದೆ ಎಂದರು.
ಈ ವೇಳೆ ಮಹಾವಿದ್ಯಾಲಯದ ಪ್ರಾಚಾರ‍್ಯೆ ಡಾ.ಆರ್.ಎಂ.ಮಿರ್ಧೆ ೭ ದಿನಗಳ ವಿಶೇಷ ಶಿಬಿರದ ಮೂಲ ನಿಯಮ ಮತ್ತು ಶಿಬಿರದ ಮುಖ್ಯ ಅಂಶಗಳ ಬಗ್ಗೆ ವಿದ್ಯಾರ‍್ಥಿಗಳು ಅರಿತುಕೊಂಡು ಉತ್ತಮವಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕೆಂದು ಹೇಳಿದರು.
ಮಹಾವಿದ್ಯಾಲಯದ ಉಪ ಪ್ರಾಚಾರ್ಯ ಡಾ ಅನಿಲ್ ಬಿ ನಾಯಕ್ ರಾಷ್ಟ್ರೀಯ ಸೇವಾ ಯೋಜನೆಯ ದ್ಯೇಯ ಮತ್ತು ಉದ್ದೇಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಹಂಚಿನಾಳ ಪಿ ಹೆಚ್ ಗ್ರಾಮದ ಮುಖ್ಯ ಗುರು ಕೆ ಜಿ ಲಮಾಣಿ ಸ್ವಚ್ಛತೆ ಮತ್ತು ಮೊಬೈಲ್ ಬಳಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.
ಮಹಾವಿದ್ಯಾಲಯದ ಐಕ್ಯೂಎಸಿ ನಿರ್ದೇಶಕ ಡಾ.ಪಿ.ಎಸ್.ಪಾಟೀಲ, ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕ ೧ & ೨ ಅಧಿಕಾರಿಗಳಾದ ಡಾ.ಮಿಲನ್.ರಾಠೋಡ್, ಡಾ.ತರನ್ನುಮ್ ಜಬೀನಖಾನ್, ಹಂಚಿನಾಳ ಪಿ ಹೆಚ್ ಗ್ರಾಮದ ಮುಖಂಡರು, ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

