Author: editor.udayarashmi@gmail.com

ಚಡಚಣ ಎಸ್‌ಬಿಆಯ್ ಬ್ಯಾಂಕ್ ದರೋಡೆ ಪ್ರಕರಣ | ಗ್ರಾಹಕರಿಗೆ ಬ್ಯಾಂಕ್ ಅಧಿಕಾರಿಗಳ ಅಭಯ *ಉದಯರಶ್ಮಿ ದಿನಪತ್ರಿಕೆ* ಚಡಚಣ: ಇತ್ತೀಚೆಗೆ ನಡೆದ ಪಟ್ಟಣದ ಎಸ್‌ಬಿಐ ಬ್ಯಾಂಕ್ ದರೋಡೆಯಾದ ಹಿನ್ನಲೆಯಲ್ಲಿ ಬ್ಯಾಂಕ್‌ನಲ್ಲಿ ಠೇವಣಿ ಹಾಗೂ ಚಿನ್ನ ಅಡವಿಟ್ಟ ಗ್ರಾಹಕರು ಆಘಾತಕ್ಕೋಳಗಾಗಿದ್ದು, ಗ್ರಾಹಕರಲ್ಲಿ ಮೂಡಿದ ಆತಂಕವನ್ನು ದೂರ ಮಾಡಲು ಗ್ರಾಹಕರಿಗೆ ಎಸ್.ಬಿ.ಐ. ಬ್ಯಾಂಕ್ ವತಿಯಿಂದ ಸ್ಥಳೀಯ ಖಾಸಗಿ ಹೊಟೆಲ್‌ನಲ್ಲಿ ಶುಕ್ರವಾರ ಸಭೆಯನ್ನು ನಡೆಸಿ ಗ್ರಾಹಕರಿಗೆ ಧೈರ್ಯವನ್ನು ತುಂಬಲಾಯಿತು. ಸಭೆಯಲ್ಲಿ ಎಸ್‌ಬಿಐ ಬ್ಯಾಂಕಿನ ಡಿಜಿಎಂ, ಆರ್.ಎಂ. ಎಜಿಎಂ ಮಟ್ಟದ ಅಧಿಕಾರಿಗಳು ಭಾಗವಹಿಸಿ ಬ್ಯಾಂಕ್ ದರೋಡೆಯಲ್ಲಿ ಹಣ ಕಳೆದುಕೊಂಡ ಗ್ರಾಹಕರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು ಗ್ರಾಹಕರು ಯಾವುದೆ ಸಂದರ್ಭದಲ್ಲೂ ಭಯಪಡುವ ಅವಶ್ಯಕತೆ ಇಲ್ಲ, ಗ್ರಾಹಕರ ಎಲ್ಲ ಬಂಗಾರ ಮತ್ತು ಹಣದ ಜವಾಬ್ದಾರಿಯನ್ನು ಬ್ಯಾಂಕ್ ಹೊರಲಿದೆ. ಎಲ್ಲ ಸಂದರ್ಭಗಳಲ್ಲಿ ಬ್ಯಾಂಕ ಗ್ರಾಹಕರೊಂದಿಗೆ ಇರಲಿದೆ. ಗ್ರಾಹಕರು ದಯವಿಟ್ಟು ಬ್ಯಾಂಕಿನೊಂದಿಗೆ ಸಹಕರಿಸಬೇಕು ಎಂದು ಅಧಿಕಾರಿಗಳು ವಿನಂತಿಸಿದರು. ಈ ಸಂಧರ್ಭದಲ್ಲಿ ಗ್ರಾಹಕರು ಅನೇಕ ಪ್ರಶ್ನೆಗಳನ್ನು ಕೇಳಿದರು. ಬಂಗಾರ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ ಸಮಾಜಸೇವೆ,ರಾಷ್ಟ್ರಪ್ರೇಮ ಹಾಗೂ ಸೇವಾ ಮನೋಭಾವ ಮೂಡಿಸಲು ಎನ್.ಎಸ್.ಎಸ್ ಸಹಕಾರಿಯಾಗಿದೆ ಎಂದು ಶ್ರೀ ಅರವಿಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಚಂದ್ರಶೇಖರ್ ಖೇಡಗಿ ಹೇಳಿದರು.ತಾಲೂಕಿನ ಹಲಸಂಗಿ ಗ್ರಾಮದ ಶ್ರೀ ಅರವಿಂದ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪ್ರಾಸ್ತಾವಿಕವಾಗಿ ಎನ್ ಎಸ್ ಎಸ್ ಯೋಜನಾ ಅಧಿಕಾರಿ ಸಿ ಎ ಬಗಲಿ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳಿಗೆ ಎನ್.ಎಸ್.ಎಸ್ ಒಂದು ಸರಕಾರದ ಯೋಜನೆ. ಗಾಂಧೀಜಿಯವರ ಸರ್ವೋದಯ ತತ್ವದ ಮೇಲೆ ಈ ಯೋಜನೆ ಕಾರ್ಯ ನಿರ್ವಹಿಸುತ್ತಿದ. ವಿದ್ಯಾರ್ಥಿಗಳಲ್ಲಿ ಸಮಾಜ ಸೇವೆಯೊಂದಿಗೆ ರಾಷ್ಟ್ರ ನಿರ್ಮಾಣ ಹಾಗೂ ಶಿಸ್ತು ಮೂಡಿಸಲು ಸಹಕಾರಿಯಾಗುತ್ತದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ಅರವಿಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ರಾಮಣ್ಣ ರಗಟಿ ಮಾತನಾಡಿದರು.ವೇದಿಕೆಯ ಮೇಲೆ ಶ್ರೀ ಅರವಿಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಮಹಾದೇವ ಖೇಡಗಿ ನಿರ್ದೇಶಕರುಗಳಾದ ಬಾಬುರಾವ್ ಮನಮಿ, ಪ್ರಕಾಶ್ ಮನಮಿ, ಪ್ರಾಚಾರ್ಯ ಡಿ ಬಿ ತಿಕೋಟಿ, ಉಪನ್ಯಾಸಕ…

Read More

ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಕ್ರೀಡೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುದರಿಂದ ದೈಹಿಕ, ಮಾನಸಿಕವಾಗಿ ಸದೃಢರಾಗಲು ಸಾಧ್ಯ. ಕ್ರೀಡೆ ಯುವಜನರ ಚೇತನವಾಗಬೇಕು ಎಂದು ಶಿಕ್ಷಣ ಸಂಯೋಜಕರಾದ ಜಿ ಟಿ ಕಾಗವಾಡ ಗ್ರಾಮೀಣ ವಲಯ ವಿಜಯಪುರ ತಿಳಿಸಿದರು.ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ವಿ ವ ಸಂ ಪದವಿ ಪೂರ್ವ ಕಾಲೇಜನಲ್ಲಿ 2025-26ನೇ ಸಾಲಿನ ತಿಕೋಟಾ ಹಾಗೂ ಬಬಲೇಶ್ವರ ತಾಲೂಕಗಳ ಕ್ರೀಡಾ ಕೂಟ ಜರುಗಿದವು.ಇಂದಿನ ಯುವ ಜನಾಂಗ ಕ್ರೀಡಾ ಮನೋಭಾವನೆ ಬೆಳಿಸಿಕೊಳ್ಳಬೇಕು, ಮೊಬೈಲ್‌ ಬಳಕೆ ಕಡಿಮೆಮಾಡಿಕೊಂಡು ಅದರಿಂದ ಆಗುವ ದುಷ್ಪರಿಣಾಮಯಿಂದ ದೂರವಿರಿ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್ ಜಿ ಲಕ್ಕುಂಡಿಮಠ ಹೇಳಿದರು.ಪ್ರಾಚಾರ್ಯ ಎಂ ಎ ಹಿರೇಮಠ ಕ್ರೀಡಾ ಧ್ವಜಾರೋಹಣ ನಡೆಸಿಕೊಟ್ಟರು.ಕೃಷಿ ಅಧಿಕಾರಿ ಯಂಕಪ್ಪ ಉಪ್ಪಾರ ಹಾಗೂ ಸಂಸ್ಥೆಯ ಕಾರ್ಯದರ್ಶಿ ಪ್ರವೀಣ್ ಮಸಳಿ ಕ್ರೀಡಾ ಜ್ಯೋತಿ ಸ್ವೀಕರಿಸಿದರು.ಈ ಸಂದರ್ಭದಲ್ಲಿ ತಾಲೂಕಾ ದೈಹಿಕ ಪರಿವಿಕ್ಷಕ ಕೆ ಎಲ್ ಚವ್ಹಾಣ, ಕೃಷ್ಣಾಜಿ ಬುಯಿನ ಕ್ರೀಡಾ ಸಂಯೋಜಕರಾದ ಬಿ ಎಲ್ ನಾಟಿಕಾರ ಎಂ ಎಸ್ ಮಸಳಿ ಪಿ ಕೆ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಕೊಲ್ಹಾರ ವಲಯದ ಚಿಕ್ಕಆಸಂಗಿ ಗ್ರಾಮದಲ್ಲಿ ಕಾರ್ಯಕ್ಷೇತ್ರದಲ್ಲಿ ಜ್ಞಾನವಿಕಾಸದ ಅಡಿಯಲ್ಲಿ ನಾಗಸಂಪಿಗೆ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮುಖಾಂತರ ಕಾರ್ಯಕ್ರಮ ಚಾಲನೆ ನೀಡಲಾಯಿತು.ವಲಯದ ಮೇಲ್ವಿಚಾರಕರಾದ ಕಿರಣ ಪ್ರಾಸ್ತಾವಿಕವಾಗಿ ಮಾತನಾಡಿ, ಯೋಜನೆಯ ಕಾರ್ಯಕ್ರಮಗಳ ಕುರಿತು ಮತ್ತು ಮಾತೋಶ್ರೀ ಹೇಮಾವತಿ ಅಮ್ಮನವರ ಕನಸಿನ ಕೂಸಾದ ಜ್ಞಾನವಿಕಾಸ ಕಾರ್ಯಕ್ರಮ ದಡಿಯಲಿ ಉಚಿತವಾಗಿ ಆರೋಗ್ಯ ತಪಾಸಣೆ ಶಿಬಿರ ಕೇಂದ್ರವನ್ನು ನಡೆಸಿದ್ದು ಅದರ ಪ್ರಯೋಜನವನ್ನು ಪಡೆದುಕೊಳ್ಳುವ ಕುರಿತು ಮಾಹಿತಿ ನೀಡಿದರು.ಸ್ತ್ರೀ ಯೋಗ ತಜ್ಞ ರಾಜೇಶ್ವರಿ ಕುಂಬ ಅವರು 12 ನೆ ವಯಸ್ಸಿನಿಂದ 60 ವರ್ಷದ ಮಹಿಳೆಯರಲ್ಲಿ ಆಗುವ ಬದಲಾವಣೆಗಳ ಬಗ್ಗೆ ರೋಗಗಳ ಬಗ್ಗೆ ಮಾಹಿತಿ ತಿಳಿಸಿದರು.ಮಡಿವಾಳ ಸ್ವಾಮಿ ಡವಲಗಿಮಠ ಅವರು, ಹೃದಯಾಘಾತ ತಡೆಯುವ ಬಗ್ಗೆ ಹೃದಯಾಘಾತ ಆಗುವ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿದರು.ಆರೋಗ್ಯ ಶಿಬಿರದಲ್ಲಿ ನರ ರೋಗ ತಜ್ಞೆ ಅಶ್ವಿನಿ ಹಿರೇಮಠ, ಸ್ತ್ರೀ ರೋಗ ತಜ್ಞೆ ರಾಜೇಶ್ವರಿ, ಕಣ್ಣಿನ ತಜ್ಞೆ ಕೀರ್ತಿ ವಾಲಿ, ಡೆಂಟಿಸ್ಟ್ ಶಿವರಾಜ್ ಕಟಗಿ, ಸ್ತ್ರೀ ರೋಗ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಬಸವನ ಬಾಗೇವಾಡಿ ಪಟ್ಟಣದ ಬಿಎಲ್ ಡಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಅಖಂಡ ಬಸವನ ಬಾಗೇವಾಡಿ ತಾಲೂಕು ಮಟ್ಟದ ಅಥ್ಲೇಟಿಕ್ಸನಲ್ಲಿ ಪಟ್ಟಣದ ಸಂಗಮೇಶ್ವರ ಪದವಿಪೂರ್ವ ಕಾಲೇಜು ವೈಯಕ್ತಿಕ ವಿರಾಗ್ರಣಿ ಪ್ರಶಸ್ತಿ ಪಡೆದು ವಿಶೇಷ ಸಾಧನೆ ಗೈದಿದೆ.ಕಾಲೇಜಿನ ವಿದ್ಯಾರ್ಥಿಗಳಾದ ಕುಮಾರ ಕಿರಣ ಬೆಳ್ಳುಬ್ಬಿ ತ್ರಿಬಲ್ ಜಂಪ್ ಮತ್ತು ಉದ್ದ ಜಿಗಿತದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ 800 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪಡೆದು ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿದ್ದಾನೆ. ಬಾಲಕರ ವಿಭಾಗದ 4×100 ಮೀಟರ್ ರೀಲೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಸೋಮಲಿಂಗ ನುಚ್ಚಣ್ಣನವರ 400 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಹಾಗೂ ಅಕ್ಷಯಕುಮಾರ ಪೂಜಾರಿ ಪೋಲೋ ಆಟದಲ್ಲಿ ಪ್ರಥಮ ಸ್ಥಾನ, ಹಾಗೂ ಎಸ್.ಕೆ.ಎಮ್. ಗುಡ್ಡಗಾಡು ಓಟದಲ್ಲಿ ರೇಣುಕಾ ಜಮಾದಾರ ದ್ವಿತೀಯ ಸ್ಥಾನ, ಹಾಗೂಭಾಗ್ಯಶ್ರೀ ಕೊಠಾರಿ ಎತ್ತರ ಜಿಗಿತದಲ್ಲಿ ತೃತೀಯ ಸ್ಥಾನ ಹಾಗೂ ರೇಣುಕಾ ಜಮಾದಾರ ಟ್ರಿಪಲ್ ಜಂಪ್ ನಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ.ಕಾಲೇಜಿನ ಕೀರ್ತಿ ಪತಾಕೆಯನ್ನು…

Read More

ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ತಾಲೂಕಿನ ಕರಜಗಿ ಗ್ರಾಮದ ರೈತನಾದ ಸಿದ್ದರಾಮ ಪರಿಟ ಅವರ ಕಬ್ಬು ಧಾರಾಕಾರ ಮಳೆ ಹಾಗೂ ಗಾಳಿಯ ರಭಸಕ್ಕೆ 4 ಎಕರೆ ಕಬ್ಬು ಸಂಪೂರ್ಣವಾಗಿ ನೆಲಕಚ್ಚಿದೆಎಲ್ಲ ಬೆಳೆಗಳು ಮಳೆ ಹೆಚ್ಚಾಗಿ ಕೊಳೆಯುತ್ತಿವೆ. ಕಬ್ಬು ನೆಲಕಚ್ಚಿದೆ ಇದರಿಂದಾಗಿ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು ದಿಕ್ಕು ತೋಚದಂತಾಗಿದೆ,ಮಳೆಯ ರಭಸಕ್ಕೆ ತೊಗರಿ, ಹತ್ತಿ, ಶೇಂಗಾ, ಬೆಳೆ ಹಾನಿಯಾಗಿದ್ದು ಹಳ್ಳದ ನೀರು ಹೆಚ್ಚಾಗಿ ಜಮೀನುಗಳ ಒಡ್ಡುಗಳು ಒಡೆದು ಹೋಗಿದ್ದು, ಬದುಗಳು ಸಮತಟ್ಟವಾಗಿವೆ, ಹಳ್ಳ ಯಾವುದು ಹೊಲ ಯಾವುದು ಎಂಬುದು ಕಾಣದಾಗಿದೆ.ಮಳೆ ನೀರಿನಿಂದ ಅಸ್ತವ್ಯಸ್ತಕರಜಗಿಯಲ್ಲಿ ಸುರಿದ ಧಾರಾಕಾರ ಮಳೆಗೆ ಗ್ರಾಮದ ಜನರು ತೊಂದರೆ ಅನುಭವಿಸಿದರು. ರಸ್ತೆಗಳು ಹಾಗೂ ಬಡಾವಣೆಗಳು ಜಲಾವೃತವಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು ಮನೆಗಳಿಗೆ ನೀರು ನುಗ್ಗಿ ದವಸ ಧಾನ್ಯಗಳು, ಗೃಹ ಉಪಯೋಗಿ ವಸ್ತುಗಳು ನೀರು ಪಾಲಾಗಿದೆ.ಕರಜಗಿದ ಗ್ರಾಮದಲ್ಲಿ ಮನೆ ವೊಂದರಲ್ಲಿ ನೀರು ಹೊಕ್ಕು ಮಕ್ಕಳ ಪಠ್ಯ ಪುಸ್ತಕಗಳು ಶಾಲಾ ದಾಖಲಾ ತಿಗಳು ಶಾಲಾ ನೆನೆದು ಹಾಳಾಗಿವೆ.ಮಾಶಾಳ ಗ್ರಾಮದಲ್ಲಿ ಕೆರೆ ಒಡೆದು ಮನೆಗಳಿಗೆ ನೀರು…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಬ್ಯಾಂಕು ಪ್ರಾರಂಭಗೊಂಡು ೧೧ ವರ್ಷದಲ್ಲಿ ರೂ.೬.೧೩ ಕೋಟಿ ವ್ಯವಹಾರ ಮಾಡುತ್ತಿದೆ. ಪ್ರಸಕ್ತ ವರ್ಷದಲ್ಲಿ ರೂ.೭.೧೨ ಲಕ್ಷ ಲಾಭದಲ್ಲಿ ಉತ್ತಮ ರೀತಿಯ ವ್ಯವಹಾರ ಮಾಡಲಾಗುತ್ತಿದೆ ಎಂದು ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರುದ್ರಸ್ವಾಮಿ ಹಿರೇಮಠ ಹೇಳಿದರು.ಪಟ್ಟಣದ ಜಗದ್ಗುರು ರೇಣುಕಾಚಾರ್ಯ ಪತ್ತಿನ ಸಹಕಾರಿ ಬ್ಯಾಂಕಿನ ವಾರ್ಷಿಕ ಸಾಮನ್ಯ ಸಭೆಯಲ್ಲಿ ಮಾತನಾಡುತ್ತ ಹೇಳಿದರು.ಬ್ಯಾಂಕ್ ಪ್ರಾರಂಭದಿಂದ ಉತ್ತಮ ರೀತಿ ವ್ಯವಹಾರ ಮಾಡುತ್ತ ಬಂದಿದ್ದು ಕಳೆದ ೮ ವರ್ಷಗಳಿಂದ “ಬ” ವರ್ಗದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.ಮುಖ್ಯ ಅತಿಥಿಯಾಗಿ ಪಿಕೆಪಿಎಸ್ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಭಾಗಣ್ಣ ಗುರಕಾರ ಮಾತನಾಡಿಸ್ಥಳಿಯ ಸಹಕಾರಿ ಬ್ಯಾಂಕಗಳು ಅಭಿವೃದ್ದಿಗೊಳ್ಳಬೇಕು ಎಂದರೆ ಸೇರುದಾರರು ತಮ್ಮ ಬ್ಯಾಂಕಿನಲ್ಲಿ ಉತ್ತಮ ವ್ಯವಹಾರದ ಜೊತೆಗೆ ಹೆಚ್ಚಿನ ಠೇವಣಿ ಇಡುತಿರಬೇಕು ಅಂದಾಗ ಮಾತ್ರ ಬ್ಯಾಂಕ ಹೆಚ್ಚೆ ಅಭಿವೃದ್ದಿ ಹೊಂದಲು ಸಾದ್ಯ ಎಂದು ಹೇಳಿದರು.ಬ್ಯಾಂಕಿನ ಸಂಸ್ಥಾಪಕ ನಿರ್ದೇಶಕ ತಾರಾಪೂರ ಹಿರೇಮಠದ ಗುರುಲಿಂಗ ಶಿವಾಚಾರ್ಯರು, ಸಂಗನಬಸವ ಶಿವಾಚಾರ್ಯರು ಸಾನಿದ್ಯ ವಹಿಸಿದ್ದರು. ಅಧ್ಯಕ್ಷ ವೀರುಪಾಕ್ಷಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷ ಎಂ.ಆರ್. ರಸ್ತಾಪೂರಮಠ, ನಿರ್ದೇಶಕರಾದ…

Read More

ವಿಜಯಪುರದಲ್ಲಿ ಸಿದ್ದಸಿರಿ ಸೌಹಾರ್ದ ಸಹಕಾರಿಯ 19ನೇ ವಾರ್ಷಿಕೋತ್ಸವ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಿಬ್ಬಂದಿ ಹಾಗೂ ಗ್ರಾಹಕರ ಸಹಕಾರದಿಂದ ಸಿದ್ದಸಿರಿ ಸೌಹಾರ್ದ ಸಹಕಾರಿ ರೂ. 4117.94 ಕೋಟಿ ಠೇವಣಿ ಹೊಂದಿದ್ದು, 2024-25ನೇ ಸಾಲಿನಲ್ಲಿ ರೂ.26,14,11,111 ನಿವ್ವಳ ಲಾಭ ಗಳಿಸಿದೆ ಎಂದು ಸೌಹಾರ್ದದ ಅಧ್ಯಕ್ಷರು ಹಾಗೂ ಶಾಸಕರಾದ ಬಸನಗೌಡ ರಾ ಪಾಟೀಲ ಯತ್ನಾಳ ಅವರು ಹೇಳಿದರು.ನಗರದ ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿ ಭಾನುವಾರ ನಡೆದ ಸಿದ್ದಸಿರಿ ಸೌಹಾರ್ದ ಸಹಕಾರಿ ಸಂಘ ನಿಯಮಿತದ 19ನೇ ಸರ್ವ ಸಾಧಾರಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲೇ ನಂಬರ್-1 ಸೌಹಾರ್ದ ಸ್ಥಾನದಲ್ಲಿರುವ ನಮ್ಮ ಸಿದ್ದಸಿರಿ ಸೌಹಾರ್ದ ಸಹಕಾರಿಯಿಂದ, ಪ್ರಸಕ್ತ ವರ್ಷ ಶೇ 18 ರಷ್ಟು ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.ಸಹಕಾರಿಯ ಶೇರು ಬಂಡವಾಳ ರೂ.67.80 ಕೋಟಿ, ದುಡಿಯುವ ಬಂಡವಾಳ ರೂ.4549.37 ಕೋಟಿ ಇದ್ದು, ಠೇವಣಿಗಳು ರೂ.4117.94 ಕೋಟಿ, ಸಾಲವ ಮುಂಗಡ ರೂ.3038.59 ಕೋಟಿ, ಕಾಯ್ದಿಟ್ಟ ನಿಧಿ ರೂ.85.67 ಕೋಟಿ, ನಿಶ್ಚಿತ ಆಸ್ತಿಗಳು ರೂ.49.33 ಕೋಟಿ,…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರ ಬೇಡಿಕೆಯ ಅನುಗುಣವಾಗಿ ಗಣವೇಶ ಮಾರಾಟ ಮಳಿಗೆಗೆ ಚಾಲನೆ ನೀಡಲಾಗಿದೆ ಎಂದು ಕಾರ್ಯಕರ್ತ ಗುರುರಾಜ್ ದೇಸಾಯಿ ಹೇಳಿದರು.ಪಟ್ಟಣದ ಬಸ್ ನಿಲ್ದಾಣ ಸಮೀಪದ ಸಾಲಕ್ಕಿ ಸಂಕೀರ್ಣದಲ್ಲಿನ ಓಂ ಮಾರಾಟ ಮಳಿಗೆಯಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಗಣವೇಶಗಳ ಮಾರಾಟಕ್ಕೆ ಚಾಲನೆ ನೀಡಿ ಮಾತನಾಡಿದರು.ಸಂಘ ಶತಾಬ್ದಿಯ ಈ ಸಂದರ್ಭದಲ್ಲಿ ಗಣವೇಶಧಾರಿಗಳಿಗೆ ಅಗತ್ಯವಾದ ಕಪ್ಪು ಟೋಪಿ, ದಂಡ, ಉದ್ದ ತೋಳಿನ ಬಿಳಿ ಅಂಗಿ, ಬಟ್ಟೆ ಬೆಲ್ಟ್, ಖಾಕಿ ಪ್ಯಾಂಟ್, ಖಾಕಿ ಕಾಲುಚೀಲ ಹಾಗೂ ಲೇಸ್ ಇರುವ ಪದವೇಶ ಯೋಗ್ಯದರದಲ್ಲಿ ದೊರೆಯುತ್ತಿದ್ದು ಆಸಕ್ತ ಗ್ರಾಮೀಣ ಕಾರ್ಯಕರ್ತರು ಇದರ ಸದುಪಯೋಗ ಪಡೆಯಬಹುದಾಗಿದೆ ಎಂದರು.ಕಾರ್ಯಕರ್ತರಾದ ಚಿದಾನಂದ ಕುಂಬಾರ, ಪ್ರವೀಣ ದೇಸಾಯಿ, ಓಂಕಾರ ಬಡಿಗೇರ, ಮಹೇಶ ದೇಸಾಯಿ, ದರ್ಶನ ನಾಡಗೌಡ, ಷಣ್ಮುಖಪ್ಪ ಸಿದಗೊಂಡ, ರವಿ ಮಸಬಿನಾಳ ಹಾಗೂ ಇತರರು ಇದ್ದರು.

Read More

ಕೋರವಾರಲ್ಲಿ ವಿವಿಧೋದ್ದೇಶ ಗ್ರಾಮೀಣ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಅಧ್ಯಕ್ಷ ಸಂಗಮೇಶ ಛಾಯಾಗೋಳ ಸಲಹೆ ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಕೃಷಿ ಸಹಕಾರಿ ಸಂಘ ರೈತ ಸಮುದಾಯಕ್ಕೆ ಸೇರಿದ ಸಂಸ್ಥೆ, ಇದರ ಲಾಭ, ಹಾನಿ ಸಹಿತ ಪ್ರತಿಯೊಂದು ಚಟುವಟಿಕೆಗಳ ಬಗ್ಗೆ ಅರಿಯುವುದು ರೈತರ ಜವಾಬ್ದಾರಿಯಾಗಿದೆ ಎಂದು ವಿವಿಧೋದ್ದೇಶ ಗ್ರಾಮೀಣ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಅಧ್ಯಕ್ಷ ಸಂಗಮೇಶ ಛಾಯಾಗೋಳ ಹೇಳಿದರು.ತಾಲ್ಲೂಕಿನ ಕೋರವಾರ ಗ್ರಾಮದಲ್ಲಿ ಭಾನುವಾರ ಜರುಗಿದ ವಿವಿಧೋದ್ದೇಶ ಗ್ರಾಮೀಣ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಸಂಘದ ಸದಸ್ಯರಾದ ಎಲ್ಲ ರೈತರು ಪಾಲ್ಗೊಳ್ಳುವಿಕೆ ಅತ್ಯಂತ ಅವಶ್ಯ ಹಾಗೂ ಅಗತ್ಯವಾಗಿದೆ ಎಂದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೆಶಕ ಕೆ.ಕೆ.ಚವ್ಹಾಣ ಮಾತನಾಡಿ, ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಆಧಾರಸ್ತಂಭವಾದ ರೈತ ಸಮುದಾಯ ಸರ್ವಸಾಧಾರಣ ಸಭೆಗೆ ಹಾಜರಾಗಿ ತಮ್ಮ ಇಚ್ಛಾಶಕ್ತಿಯನ್ನು ತೋರಿರುವುದು ಪ್ರಗತಿಯ ಸಂಕೇತ ಎಂದರು.ಸಾನಿಧ್ಯ ವಹಿಸಿದ್ದ ಚೌಕಿಮಠದ ಮುರುಗೇಂದ್ರ ಸ್ವಾಮೀಜಿ ಆಶೀರ್ವಚನ ನೀಡುತ್ತಾ,…

Read More