Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಜಾಬ್ ಕಾರ್ಡ್ ಮೇಳಕ್ಕೆ ತಾಪಂ ಇಓ ಅನಸೂಯಾ ಚಾಲನೆ

ವಿಜಯಪುರ ಜಿಲ್ಲೆಗೆ 371(ಜೆ) ಮೀಸಲಾತಿ ಪ್ರಸ್ತಾವನೆ ಕಳಿಸಲು ಒತ್ತಾಯ

ವಿಬಿಜಿ–ರಾಮ್–ಜಿ ಕಾಮಗಾರಿಗಳಿಗೆ ವೇಗದ ಸ್ಪರ್ಶ ನೀಡಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಡಿಜಿಟಲೀಕರಣದಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕ್ರಾಂತಿ :ಗುಡದಿನ್ನಿ
(ರಾಜ್ಯ ) ಜಿಲ್ಲೆ

ಡಿಜಿಟಲೀಕರಣದಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕ್ರಾಂತಿ :ಗುಡದಿನ್ನಿ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಜಾಗತೀಕರಣದ ಪ್ರಸ್ತುತ ಸಂದರ್ಭದಲ್ಲಿ ವ್ಯವಹಾರಗಳು ಬಹುತೇಕ ಡಿಜಿಟಲೀಕರಣಗೊಂಡಿವೆ. ಹೀಗಾಗಿ ಡಿಜಿಟಲೀಕರಣದೀಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭಾರಿ ಬದಲಾವಣೆ ಆಗಿದೆ. ತಾಂತ್ರೀಕರಣದ ಬದಲಾವಣೆಗೆ ತಕ್ಕಂತೆ ಬ್ಯಾಂಕಿಂಗ್ ಕ್ಷೇತ್ರದಲ್ಲೂ ಡಿಜಿಟಲ್ ಡಿಜಿಟಲೀಕರಣಕ್ಕೆ ಒಗ್ಗಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷರಾದ ರಾಜಶೇಖರ ಗುಡದಿನ್ನಿ ಅಭಿಪ್ರಾಯಪಟ್ಟರು.
ನಬಾರ್ಡ ಹಾಗೂ ವಿಜಯಪುರ ಜಿಲ್ಲಾ ಕೇಂದ್ರ ಸಹಾಕಾರಿ ಬ್ಯಾಂಕ್ ಸಹಯೋಗದಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕೇಂದ್ರ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಪ್ಯಾಕ್ಸುಗಳ ಮುಖ್ಯ ಕಾರ್ಯನಿವಾಹಣಾ ಅಧೀಕಾರಿಗಳಿಗೆ ಹಾಗೂ ಬ್ಯಾಂಕಿನ ಗ್ರಾಹಕರಿಗೆ ಎಂ-ಪಾಸ್ ಮಶಿನ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಧುನಿಕತೆಗೆ ತಕ್ಕಂತೆ ಬದಲಾವಣೆಗೆ ಹೊಂದಿಕೊಳ್ಳುವುದು ಅನಿವಾರ್ಯವೂ ಹೌದು ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನಬಾರ್ಡ ಡಿಡಿಎಂ ವಿಕಾಸ ರಾಠೋಡ ಮಾತನಾಡಿ, ಎಂಪಿಒಎಸ್ ಮಸಿನ್ ಬಳಕೆ ಕುರಿತು ಬ್ಯಾಕಿಂಗ್ ಕ್ಷೇತ್ರದಲ್ಲಿರುವವರು ಅಗತ್ಯ ಜ್ಞಾನ ಹೊಂದಿರಬೇಕಿದೆ. ನಗದು ರಹಿತ ವ್ಯವಹಾರ, ಹಣ ವರ್ಗಾವಣೆ ಮತ್ತು ಮೊಬೈಲ್ ಆ್ಯಪ್ ಗಳ ಬಳಕೆ ಕುರಿತು ಅರಿವು ಹೊಂದಿರುವುದು ಅಗತ್ಯವಾಗಿದೆ ಎಂದರು.
ರೈತ ಜನರು ಬೀಜ, ಗೊಬ್ಬರ, ಕೀಟನಾಶಕ ಸೇರಿದಂತೆ ಕೃಷಿ ಹಾಗೂ ದೈನಂದಿನ ವ್ಯವಹಾರ, ವಸ್ತುಗಳನ್ನು ಖರೀದಿಸಲು ಅಂಗಡಿಗಳಲ್ಲಿಯ ಎಂ-ಪಾಸ್ ಮಶಿನ್ ಉಪಯೋಗಿಸುವುದು ಸಾಮಾನ್ಯವಾಗಿದೆ. ಈಗಾಗಲೇ ನಬಾರ್ಡ ಸಹಾಯ ಧನದಲ್ಲಿ ಬ್ಯಾಂಕು ಮತ್ತು ಪ್ಯಾಕ್ಸುಗಳಿಗೆ ಮೈಕ್ರೋ ಎಟಿಎಮ್ ಒದಗಿಸಲಾಗಿದ್ದು, ಗ್ರಾಹಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಎಸ್.ಎ.ಢವಳಗಿ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಡಿಜಿಟಿಲೀಕರಣದ ಸಂದರ್ಭದಲ್ಲಿ ನಗದು ರಹಿತ ವ್ಯವಹಾರದ ವ್ಯವಸ್ಥೆಯಲ್ಲಿ ವಿಜಯಪುರ ಡಿಸಿಸಿ ಬ್ಯಾಂಕು ಇತರೆ ವಾಣಿಜ್ಯ ಬ್ಯಾಂಕುಗಳಿಗಿಂತ ಮುಂಚೂಣಿಯಲ್ಲಿದೆ. ಬ್ಯಾಂಕಿನ ಗ್ರಾಹಕರು ನಗದು ರಹಿತ ವ್ಯವಹಾರ ಮಾಡಿ, ಇದರ ಸದುಪಯೋಗ ಪಡೆಯುವಂತೆ ಮನವಿ ಮಾಡಿದರು.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಹುಲ್ಯಾಳ ಗ್ರಾಮದ
ಹಂಸದ್ವನಿ ಜನಜಾಗೃತಿ ಗಾಮೀಣಾಭಿವೃಧ್ಧಿ ಸೇವಾ ಸಂಸ್ಥೆ ಕಲಾ ತಂಡದವರು ಕಿರು ನಾಟಕ ಪ್ರದರ್ಶಿಸಿದರು.
ಬ್ಯಾಂಕಿನ ಉಪ ಪ್ರಧಾನ ವ್ಯವಸ್ಥಾಪಕರಾದ ಸತೀಶ ಡಿ.ಪಾಟೀಲ ಸ್ವಾಗತಿಸಿದರು. ಎಮ್.ಜಿ.ಬಿರಾದಾರ ವಂದಿಸಿದರು.
ಬ್ಯಾಂಕಿನ ಉಪ ಪ್ರಧಾನ ವ್ಯವಸ್ಥಾಪಕರಾದ ಎಸ್.ಬಿ.ಪಾಟೀಲ, ಪಿ.ವಾಯ್.ಡೆಂಗಿ, ಜೆ.ಬಿ.ಪಾಟೀಲ, ಆರ್.ಎಮ್.ಪಾಟೀಲ ಸೇರಿದಂತೆ ಜಿಲ್ಲೆಯ ಪ್ಯಾಕ್ಸುಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ವ್ಯಾಪಾರಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಜಾಬ್ ಕಾರ್ಡ್ ಮೇಳಕ್ಕೆ ತಾಪಂ ಇಓ ಅನಸೂಯಾ ಚಾಲನೆ

ವಿಜಯಪುರ ಜಿಲ್ಲೆಗೆ 371(ಜೆ) ಮೀಸಲಾತಿ ಪ್ರಸ್ತಾವನೆ ಕಳಿಸಲು ಒತ್ತಾಯ

ವಿಬಿಜಿ–ರಾಮ್–ಜಿ ಕಾಮಗಾರಿಗಳಿಗೆ ವೇಗದ ಸ್ಪರ್ಶ ನೀಡಿ

ಗ್ರಂಥಾಲಯಗಳು ಜನಸಾಮಾನ್ಯರ ವಿಶ್ವವಿದ್ಯಾಲಯಗಳು

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಜಾಬ್ ಕಾರ್ಡ್ ಮೇಳಕ್ಕೆ ತಾಪಂ ಇಓ ಅನಸೂಯಾ ಚಾಲನೆ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಜಿಲ್ಲೆಗೆ 371(ಜೆ) ಮೀಸಲಾತಿ ಪ್ರಸ್ತಾವನೆ ಕಳಿಸಲು ಒತ್ತಾಯ
    In (ರಾಜ್ಯ ) ಜಿಲ್ಲೆ
  • ವಿಬಿಜಿ–ರಾಮ್–ಜಿ ಕಾಮಗಾರಿಗಳಿಗೆ ವೇಗದ ಸ್ಪರ್ಶ ನೀಡಿ
    In (ರಾಜ್ಯ ) ಜಿಲ್ಲೆ
  • ಗ್ರಂಥಾಲಯಗಳು ಜನಸಾಮಾನ್ಯರ ವಿಶ್ವವಿದ್ಯಾಲಯಗಳು
    In (ರಾಜ್ಯ ) ಜಿಲ್ಲೆ
  • ವಿಬಿ ಜಿ ರಾಮ್ ಜಿ ಕಾಮಗಾರಿಗಳಿಗೆ ವೇಗ ನೀಡಲು ಸಿಇಒ ಸೂಚನೆ
    In (ರಾಜ್ಯ ) ಜಿಲ್ಲೆ
  • ಸುಸ್ಥಿರ, ಆರೋಗ್ಯಯುತ ಭಾರತಕ್ಕಾಗಿ ಕಂಕಣಬದ್ಧರಾಗಿ
    In (ರಾಜ್ಯ ) ಜಿಲ್ಲೆ
  • ಸ್ವಾರ್ಥಬಿಟ್ಟು ಬಾಳೋಣ, ಮಾನವೀಯತೆ ಮೆರೆಯೋಣ
    In ವಿಶೇಷ ಲೇಖನ
  • ಹೆಣ್ಣಿನ ಜೀವನವನ್ನು ಮರುರೂಪಿಸಿದ ಸುಧಮ್ಮನ ಕೃತಿ
    In ವಿಶೇಷ ಲೇಖನ
  • ರಾಯಣ್ಣ ಉತ್ಸವ ಪೂರ್ವಭಾವಿ ಸಭೆ :ಆ.23 ರಂದು ಉತ್ಸವ
    In (ರಾಜ್ಯ ) ಜಿಲ್ಲೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಆಗಸ್ಟ್ 18, 2026
    In ದಿನಪತ್ರಿಕೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.