Subscribe to Updates
Get the latest creative news from FooBar about art, design and business.
Author: editor.udayarashmi@gmail.com
ರಾಜ್ಯ ಪೊಲೀಸ್ ಇಲಾಖೆಯಿಂದ ಸೈಬರ್ ಅಪರಾಧಗಳ ತಡೆಗೆ ಸೂಕ್ತ ಕ್ರಮ | ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಮತ್ತು ಪೊಲೀಸ್ ಮಹಾ ನಿರೀಕ್ಷಕ ಅಲೋಕ್ ಮೋಹನ್ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರಸ್ತುತ ದೇಶದಲ್ಲಿ ಹೆಚ್ಚುತ್ತಿರುವ ಆನ್ಲೈನ್ ಹಣಕಾಸು ವಂಚನೆಗಳನ್ನು ತಡೆಯಲು ರಾಜ್ಯದಲ್ಲಿ ಸೈಬರ್ ಅಪರಾಧ ಸಹಾಯವಾಣಿ-೧೯೩೦ ಜೊತೆಗೆ ವೆಬ್ ಬಾಟ್ ಉನ್ನತೀಕರಣ ಮಾಡಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಮತ್ತು ಪೊಲೀಸ್ ಮಹಾ ನಿರೀಕ್ಷಕರಾದ ಅಲೋಕ್ ಮೋಹನ್ ತಿಳಿಸಿದರು.ಮಂಗಳವಾರ ನಗರದ ಮಹಾತ್ಮಗಾಂಧಿ ರಸ್ತೆಯಲ್ಲಿರುವ ಎಡಿಜಿಪಿ ಸಿಎಲ್&ಎಮ್ ಕಾರ್ನರ್ ಹೌಸ್ ಕಚೇರಿಯಲ್ಲಿ ಉನ್ನತೀಕರಿಸಲಾದ ಸೈಬರ್ ಅಪರಾಧ ಸಹಾಯವಾಣಿ-೧೯೩೦ ವೆಬ್ ಬಾಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕರ್ನಾಟಕ ರಾಜ್ಯದಲ್ಲಿ ೧೯೩೦ ಸಹಾಯವಾಣಿಯಲ್ಲಿ ಸ್ವೀಕರಿಸಿದ ಕರೆಗಳ ಸಂಖ್ಯೆ ೨೦೨೨ ರಲ್ಲಿ ೧.೩೦ ಲಕ್ಷ ಇದ್ದು, ನಂತರ ೨೦೨೪ ರಲ್ಲಿ ೮.೨೬ ಲಕ್ಷಕ್ಕೆ ಮತ್ತು ೨೦೨೫ ರ ಮೊದಲ ತ್ರೈಮಾಸಿಕದಲ್ಲಿ (ಜನವರಿ-ಮಾರ್ಚ್) ೪.೩೪ ಲಕ್ಷಕ್ಕೆ ಏರಿಕೆಯಾಗಿದೆ ಎಂದು ಹೇಳಿದರು.ಪ್ರಸ್ತುತ ರಾಜ್ಯದಲ್ಲಿ ಸಾರ್ವಜನಿಕರು ಪ್ರತಿನಿತ್ಯ…
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ) ಡಾ.ಬಸವರಾಜ ಕನಮಡಿ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ವಿಜಯಪುರ ತಾಲ್ಲೂಕಿನ ವತಿಯಿಂದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ೭ನೇ ಸುತ್ತಿನ ಕಾಲುಬಾಯಿ ಲಸಿಕಾ ಕಾರ್ಯಕ್ರಮವು ಏ.೨೬ ರಿಂದ ಜೂನ್ ೦೪ ರವರೆಗೆ ನಡೆಯಲಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಮುಖ್ಯ ಪಶು ವೈದ್ಯಾಧಿಕಾರಿಗಳಾದ (ಆಡಳಿತ) ಡಾ.ಬಸವರಾಜ ಕನಮಡಿ ತಿಳಿಸಿದ್ದಾರೆ.ಕಾಲುಬಾಯಿ ಲಸಿಕೆ ಕಾರ್ಯಕ್ರಮದೊಂದಿಗೆ ಚರ್ಮಗಂಟು ರೋಗದ ವಿರುದ್ದ ಲಸಿಕೆಯನ್ನು ಉಚಿತವಾಗಿ ಹಾಕಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ವಿಜಯಪುರ ತಾಲ್ಲೂಕಿನಲ್ಲಿ ದನಗಳು-೧೦೦೬೯, ಎಮ್ಮೆಗಳು-೧೩೧೭೦ ಒಟ್ಟು ೨೩೨೩೯ ವಾಸ್ತವ ಜಾನುವಾರುಗಳಿದ್ದು, ಲಸಿಕೆದಾರರು-೧ ಮತ್ತು ಲಸಿಕೆದಾರರು-೨ ಒಟ್ಟು ೫೦ ಜನ ಲಸಿಕೆದಾರರಿದ್ದು, ಮೇಲ್ವಿಚಾರಕರಾಗಿ ೪ ಜನ ಪಶುವೈದ್ಯಾಧಿಕಾರಿಗಳಿದ್ದಾರೆ.ವಿಜಯಪುರ ಉಪವಿಭಾಗಾಧಿಕಾರಿಗಳಾದ ಗುರುನಾಥ್ ದಡ್ಡೆ ಹಾಗೂ ತಾಲ್ಲೂಕು ಉಸ್ತುವಾರಿ ಸಮಿತಿ ಅಧ್ಯಕ್ಷರಾದ ತಹಶೀಲ್ದಾರ ಪ್ರಶಾಂತ ಚನಗೊಂಡ ಅವರು ಏ.೨೨ ರಂದು ಲಸಿಕಾ ಅಭಿಯಾನದ ಕರಪತ್ರ…
ವಿಶ್ವ ಭೂ ದಿನ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಅರವಿಂದ ಎಸ್ ಹಾಗರಗಿ ಸಲಹೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭೂಮಿಯು ಸಕಲ ಜೀವಜಂತುಗಳಿಗೆ ಆಶ್ರಯ ತಾಣವಾಗಿದೆ. ಇದನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಅರವಿಂದ ಎಸ್ ಹಾಗರಗಿ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಸಹಾಯಕ ನಿರ್ದೇಶಕರ ಕಛೇರಿ ವಿಭಾಗೀಯ ಗುಣ ನಿಯಂತ್ರಣ ತರಬೇತಿ ಕೇಂದ್ರದಲ್ಲಿ ಮಂಗಳವಾರ ಜರುಗಿದ ವಿಶ್ವ ಭೂದಿನ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಾಲಿನ್ಯದಿಂದ ಪರಿಸರ ನಾಶವಾಗಿ ಭೂಮಿಯನ್ನು ವಿನಾಶದ ಅಂಚಿನತ್ತ ಕೊಂಡೊಯುತ್ತದೆ. ಅದನ್ನು ನಾವು ಕಾಪಾಡಬೇಕು ಎಂದು ಅವರು ಹೇಳಿದರು.ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಪರಿಸರ ಅಧಿಕಾರಿಗಳಾದ ವಿವೇಕ ಗುನಗ ಮಾತನಾಡಿ ಮಾನವ ಅಗತ್ಯತೆಯ ಮಿತಿಯನ್ನು ಕಂಡುಕೊಂಡಾಗ ಪ್ರಕೃತಿ ಸಂರಕ್ಷಣೆ ಮಾಡಲು ಸಾಧ್ಯ ಎಂದರು.ವಕೀಲರ ಸಂಘದ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಹಯೋಗದಲ್ಲಿ ಏಪ್ರಿಲ್ ೨೪ರಂದು ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ವರನಟ ಡಾ.ರಾಜ್‌ಕುಮಾರ್ ಅವರ ೯೭ನೇ ಜನ್ಮದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಬೆಳಿಗ್ಗೆ ೧೦;೩೦ ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಉದ್ಘಾಟಿಸಲಿದ್ದಾರೆ. ವಿಜಯಪುರ ನಗರದ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಎಸ್.ಪಾಟೀಲ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರಾದ ರವಿಕುಮಾರ ಎನ್, ಪರಿಷತ್ತಿನ ಶಾಸಕರಾದ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ-೨ ಪ್ರಕಾಶ ಹುಕ್ಕೇರಿ, ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ ನಿಯಮಿತದ ಅಧ್ಯಕ್ಷರಾದ ಶಾಸಕ ಅಪ್ಪಾಜಿ ಸಿ.ಎಸ್.ನಾಡಗೌಡ, ಸಂಸದರಾದ ರಮೇಶ ಜಿಗಜಿಣಗಿ ಹಾಗೂ ಡಾ.ಸುಧಾ ಮೂರ್ತಿ, ಶಾಸಕರಾದ ಯಶವಂತರಾಯಗೌಡ ವಿ.ಪಾಟೀಲ, ಹಣಮಂತ ಆರ್ ನಿರಾಣಿ, ಸುನೀಲಗೌಡ ಬಿ.ಪಾಟೀಲ, ಪಿ.ಎಚ್.ಪೂಜಾರ, ವಿಠ್ಠಲ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ದಿ.ಮುತ್ತಪ್ಪ ರೈ ಅವರ ಮಗ ರಿಕ್ಕಿ ರೈ ಇವರ ಮೇಲೆ ನಡೆದಿರುವ ದಾಳಿಯ ಕುರಿತು ಸೂಕ್ತ ತನಿಖೆ ಹಾಗೂ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಹಾಗೂ ರಿಕ್ಕಿ ರೈ ಕುಟುಂಬಕ್ಕೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಜಯ ಕರ್ನಾಟಕ ಸಂಘಟನೆ ವತಿಯಿಂದ ರಾಜ್ಯದ ಗೃಹ ಸಚಿವರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಯಿತು.ಈ ಸಮಯದಲ್ಲಿ ಜಯ ಕರ್ನಾಟಕ ಸಂಘಟನೆಯ ವಿಜಯಪುರ ಜಿಲ್ಲಾಧ್ಯಕ್ಷ ಸಂಗಮೇಶ ಸಿದ್ದನಗೌಡ ದಾಶ್ಯಾಳ ಮಾತನಾಡಿ, ಎಲ್ಲ ಜನರಿಗೆ ನ್ಯಾಯ ಒದಗಿಸುವಲ್ಲಿ ಸಂಘಟನೆಯು ತನ್ನನ್ನು ತಾನು ತೊಡಗಿಸಿಕೊಂಡಿದೆ. ಇಂತಹ ಸಂಘಟನೆಯ ಸಂಸ್ಥಾಪಕರ ಮಗನ ಮೇಲೆ ಯಾರೋ ಕಿಡಿಗೇಡಿಗಳು ಗುಂಡಿನ ದಾಳಿ ಮಾಡಿದ್ದು, ಸದ್ಯ ಇವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಮೇಲೆ ಹಲ್ಲೆ ಮಾಡಿರುವ ದುಷ್ಟರನ್ನು ಶೀಘ್ರದಲ್ಲಿ ಸರಕಾರವ ಸೂಕ್ತ ತನಿಖೆ ಕೈಗೊಂಡು ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಹಾಗೂ ಈ ದಾಳಿಯಿಂದ ಬೆಚ್ಚಿಬಿದ್ದಿರುವ ಇವರ ಕುಟುಂಬಕ್ಕೆ ಸೂಕ್ತ ಪೊಲೀಸ್…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ತಾಲೂಕಿನ ಜಂಬಗಿ ಗ್ರಾಮದ ಬಳಿ ಲಿಂಗದಕಟ್ಟಿ ಜಮೀನಿನಲ್ಲಿ ಕಟ್ಟಿರುವ ಜರಸಿ ಆಕಳ ಮೇಲೆ ತಡರಾತ್ರಿಯಲ್ಲಿ ಯಾವುದೋ ಕಾಡು ಪ್ರಾಣಿ ದಾಳಿ ಮಾಡಿ ತಿಂದು ಸಾಯಿಸಿದ್ದು. ಪಕ್ಕದ ಗ್ರಾಮಗಳಲ್ಲಿ ಚಿರತೆಯ ಹಾವಳಿ ಇರುವ ಕಾರಣ ಚಿರತೆ ತಿಂದು ಹಾಕಿತೆಂದು ಗ್ರಾಮಸ್ಥ ಶ್ರೀಶೈಲ ಸಿದ್ದಪ್ಪ ನ್ಯಾಮಗೌಡ ತಿಳಿಸಿದ್ದಾರೆ.ತಡರಾತ್ರಿಯಲ್ಲಿ ಯಾವುದೋ ಕಾಡುಪ್ರಾಣಿ ಬಂದು ಆಕಳ ಮೇಲೆ ದಾಳಿ ಮಾಡಿದ್ದು. ಆಕಳ ಮೈಮೇಲೆ ಗಾಯಗಳು ಕಾಣಿಸಿ ಕೊಂಡಿರುವ ಹಿನ್ನಲೆಯಲ್ಲಿ ಚಿರತೆಯು ದಾಳಿ ಮಾಡಲಾಗಿದೆಂದು ಗ್ರಾಮಸ್ಥರು ಹೇಳುವ ಮಾತು. ಚಿರತೆಯ ಓಡಾಟದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದನ್ನು ಕಂಡು ಗ್ರಾಮಸ್ಥರು ಭಯಬೀತಗೊಂಡಿದ್ದಾರೆ. ಕುಂಚನೂರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಸಿಸಿಟಿವಿ ಕ್ಯಾಮರಾ ಹಾಗೂ ಬೋನ್ ಅಳವಡಿಸಲಾಗಿದೆ ಎಂದು ಆರ್‌ಎಫ್‌ಓ ಕಿರಣ ರೆಡ್ಡಿ ತಿಳಿಸಿದ್ದಾರೆ.ಇತ್ತೀಚಿಗೆ ಕುಂಚನೂರ ಗ್ರಾಮದಲ್ಲಿ ರೈತರೊಬ್ಬರಿಗೆ ರಾತ್ರಿ ಚಿರತೆ ಕಾಣಿಸಿಕೊಂಡಿದ್ದು, ಅವರು ಅರಣ್ಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರು. ಚಿರತೆ ಹೆಜ್ಜೆ ಗುರುತುಗಳನ್ನು ಪತ್ತೆಹಚ್ಚಿ ಬೋನ್ ಅಳವಡಿಸಿಲಾಗಿದೆ…
ಬಿ.ಎಲ್.ಡಿ.ಇ ಡೀಮ್ಡ್ ವಿವಿ ವತಿಯಿಂದ ಸಚಿವ ಎಂ. ಬಿ. ಪಾಟೀಲ ಚೆಕ್ ವಿತರಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ; ಬಿ. ಎಲ್. ಡಿ. ಇ ಸಂಸ್ಥೆ ಅಧ್ಯಕ್ಷ ಮತ್ತು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ವತಿಯಿಂದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ವಿದ್ಯಾರ್ಥಿನಿಯರ ಹಾಸ್ಟೇಲ್ ನಿರ್ಮಾಣಕ್ಕೆ ರೂ. 50 ಲಕ್ಷ ವಿಶೇಷ ಅನುದಾನ ನೀಡಿದ್ದಾರೆ.ಮಂಗಳವಾರ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಮಹಿಳಾ ವಿವಿಯ ಕುಲಪತಿ ಪ್ರೊ. ಶಾಂತಾದೇವಿ ಟಿ. ಅವರಿಗೆ ಸಚಿವರು ವಿಶೇಷ ಅನುದಾನದ ಚೆಕ್ ನ್ನು ವಿತರಿಸಿದರು.ಇತ್ತೀಚೆಗೆ ಮಹಿಳಾ ವಿವಿಯಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿವರಿಗೆ ಕುಲಪತಿಗಳು ವಿದ್ಯಾರ್ಥಿನಿಯರಿಗೆ ಮೂಲಸೌಕರ್ಯ ಒದಗಿಸಲು ಅನುದಾನದ ಕೊರತೆ ಇದೆ ಎಂದು ಗಮನ ಸೆಳೆದಿದ್ದರು. ಅಂದು ನೀಡಿದ ಭರವಸೆಯಂತೆ ಸಚಿವರು ಇಂದು ಅನುದಾನದ ಚೆಕ್ ವಿತರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಸೂಚನೆ ನೀಡಿದರು. ಅಲ್ಲದೇ,…
ಬಿಎಲ್ಡಿಇ ಸಂಸ್ಥೆ ಪ್ರ.ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಎಚ್ಚರಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯ ಸರ್ಕಾರ ಆಯುರ್ವೇದ ಮಹಾವಿದ್ಯಾಲಯಕ್ಕೆ ಕೋಟೆಗೋಡೆ ಪಕ್ಕದಲ್ಲಿ ಲೀಸ್ ಆಧಾರದ ಮೇಲೆ 17ಎಕರೆ 20ಗುಂಟೆ ಜಮೀನನ್ನು ಮಂಜೂರು ಮಾಡಿದ್ದು, ಈ ಜಮೀನಿನಲ್ಲಿ ಅಂದಾಜು 1ಎಕರೆ 10ಗುಂಟೆ ಜಾಗೆಯಲ್ಲಿ ಈಗಾಗಲೇ ಕೆಲವರು ಕಾನೂನು ಬಾಹಿರವಾಗಿ ಅತೀಕ್ರಮಣ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಬಾಕಿ ಉಳಿದಿರುವ 16ಎಕರೆ 10ಗುಂಟೆ ಸರ್ಕಾರಿ ಆಸ್ತಿಯನ್ನು ಕಾಪಾಡಿಕೊಳ್ಳುವುದು ಲೀಸ್ ಪಡೆದ ಬಿ.ಎಲ್.ಡಿ.ಇ ಸಂಸ್ಥೆಯ ಜವಾಬ್ದಾರಿಯಾಗಿದೆ ಎಂದು ಸಂಸ್ಥೆ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ತಿಳಿಸಿದ್ದಾರೆ.ಈ ಕುರಿತು ಬುಧವಾರ ಪ್ರಕಟಣೆ ನೀಡಿರುವ ಅವರು, ಇತ್ತೀಚೆಗೆ ಕೆಲವು ವ್ಯಕ್ತಿಗಳು “ಈ ಕೋಟೆಗೋಡೆಯಲ್ಲಿ ಚಾಲುಕ್ಯರ ಕಾಲದ ಸ್ವಯಂಭು ದೇವಸ್ಥಾನ ಇದೆ. ಬಿ.ಎಲ್.ಡಿ.ಇ ಸಂಸ್ಥೆಯವರು ಹಿಂದು ದೇವಸ್ಥಾನದ ಮೇಲೆ ದಾಳಿ ಮಾಡಿ, ದೇವಸ್ಥಾನದ ಜಾಗವನ್ನು ಅತೀಕ್ರಮಿಸಿ, ಅಕ್ರಮ ಕಟ್ಟಡ ಕಟ್ಟಿ, ಷಡ್ಯಂತ್ರ ಮಾಡಿದ್ದಾರೆ” ಎಂದು ಅಪಪ್ರಚಾರ ಮಾಡುತ್ತಿದ್ದು, ಇದು ವಾಸ್ತವಕ್ಕೆ ದೂರ…
ಲೇಖನ- ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕುದ.ಕ ಜಿಲ್ಲೆ-೫೭೪೧೯೮ದೂ:೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ಶಿಖರಪುರ ಪಟ್ಟಣದಲ್ಲಿ ಜೋನಾರ್ಸ್ ಎಂಬ ಹೆಸರಿನ ಹೆಸರಾಂತ ಪಾದರಕ್ಷೆ ತಯಾರಿಸುವ ಕಂಪನಿಯು ಬಹಳ ವರ್ಷಗಳ ಕಾಲದಿಂದ ಮಹಿಳೆಯರು ಪುರುಷರು ಮತ್ತು ಮಕ್ಕಳ ಪಾದರಕ್ಷೆಗಳನ್ನು ತಯಾರಿಸುತ್ತಿತ್ತು. ತನ್ನ ಅತ್ಯಾಕರ್ಷಕ ವಿನ್ಯಾಸದ ಪಾದರಕ್ಷೆಗಳು ಮತ್ತು ಶೂಗಳ ಕಾರಣದಿಂದಾಗಿ ಅದು ಪ್ರಪಂಚದಾದ್ಯಂತ ತನ್ನದೇ ಆದ ಮಾರುಕಟ್ಟೆ ಜಾಲವನ್ನು ಹೊಂದಿತ್ತು. ಹಾಗಾಗಿ ಜೋನಾರ್ಸ್ ಸಂಸ್ಥೆಯ ಮಾಲೀಕನಾದ ದೇವೇಂದ್ರನಿಗೆ ತನ್ನ ಕಂಪನಿಯು ತಯಾರಿಸಿದ ಪಾದರಕ್ಷೆಗಳನ್ನು ಮಾರಾಟ ಮಾಡಲು ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ತನ್ನ ಕಂಪನಿಯು ವಾರ್ಷಿಕವಾಗಿ ತಯಾರಿಸುವ ಒಟ್ಟು ಪಾದರಕ್ಷೆಗಳ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯ ಪಾದರಕ್ಷೆಗಳ ಬೇಡಿಕೆಯು ಜಾಗತಿಕ ಮಾರುಕಟ್ಟೆಯಿಂದ ನಿರಂತರವಾಗಿ ಬರುತ್ತಾ ಇದ್ದುದರಿಂದ ವ್ಯವಹಾರವು ಅತ್ಯುನ್ನತವಾಗಿ ನಡೆಯುತ್ತಿತ್ತು.ವರ್ಷಗಳು ಉರುಳಿದಂತೆ ಜೋನಾರ್ಸ್ ಕಂಪನಿಯ ಪಾದರಕ್ಷೆಗಳ ಗುಣಮಟ್ಟಕ್ಕಿಂತ ಉನ್ನತ ದರ್ಜೆಯ ಹಾಗೂ ಕಡಿಮೆ ದರದ ಪಾದರಕ್ಷೆಗಳು ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಲಭಿಸುತ್ತಿದ್ದುದರಿಂದ ಜೋನಾರ್ಸ್ ಸಂಸ್ಥೆಯ ಪಾದರಕ್ಷೆಗಳಿಗೆ ಬೇಡಿಕೆಯು ಗಣನೀಯವಾಗಿ ಕುಸಿದು ವ್ಯವಹಾರವು ನಷ್ಟದ ಸ್ಥಿತಿಗೆ…
ಚಿಂತನೆ-ಡಾ. ತಾರಾ ಬಿ ಏನ್ಧಾರವಾಡ ಉದಯರಶ್ಮಿ ದಿನಪತ್ರಿಕೆ ಸಿದ್ಧರಾಮೇಶ್ವರರು ಒಬ್ಬ ಶ್ರೇಷ್ಠ ಅನುಭವಿಗಳಾಗಿದ್ದರು ಅಲ್ಲಮಪ್ರಭು ಬಸವೇಶ್ವರರು ಚನ್ನಬಸವ ಮುಂತಾದ ಶರಣ ಶ್ರೇಷ್ಠ ಸಾಲಿನಲ್ಲಿ ನಿಲ್ಲುವ ಸಮಕಾಲಿನ ಶಿವಶರಣರು..ಯೋಗಿಗಳ ಯೋಗಿ ಶಿವಯೋಗಿ ಸೊಡ್ದಳ ಸಿದ್ದರಾಮಯ್ಯ ಎಂದು ಸೊಡ್ದಳ ಬಾಚರಿಸರಿಂದಹೊಗಳಿಸಿಕೊಂಡ ಮಹಾನ್ ಚೇತನ, ಮಹಾನ್ ಯೋಗಿ ಸಿದ್ಧರಾಮೇಶ್ವರರು.ಅನೌತಿಕ ಶಕ್ತಿಯನ್ನು ಪಡೆದ ಅನುಪಮಾ ಸಾಧನೆಗಳ ಸಿದ್ಧಾಪುರುಷ ಆಗಿದ್ದರು ಅವರ 68000 ವಚನಂಗಳ ಹಾಡಿ ಹಾಡಿ ಸೋತಿದ್ದನ್ನ ಮನ ಎಂದು ಅವರೇ ತಮ್ಮ( ವಚನ ಸಂಖ್ಯೆ 909 )ವಚನ ಒಂದರಲ್ಲಿ ಹೇಳಿಕೊಂಡಿದ್ದಾರೆ .ಇವರ ವಚನಗಳಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನ ಅಥವಾ ಕಬಲಿಸಿದ್ದಮಲ್ಲ ಕಪಿಲಸಿದ್ಧ ಮಲ್ಲಿನಾಥ ಕಪಿಲಸಿದ್ಧ ಮಲ್ಲೇಂದ್ರ ಕಪಿಲಸಿದ್ಧ ಮಲ್ಲೇಶ್ವರ ಕಪಿಲಸಿದ್ಧ ಮಲ್ಲೇಶ್ವರ ದೇವರು ಕಪಿಲಸಿದ್ಧ ಮಲ್ಲ ಎಂಬ ಅಂಕಿತಗಳು ಕಂಡುಬರುತ್ತದೆ ಚಿತ್ರದುರ್ಗದ ಬ್ರಹನ್ಮಠದಲ್ಲಿ ಇತ್ತೀಚೆಗೆ ದೊರೆತ ಓಲೆ ಪ್ರತಿಗಳಲ್ಲಿ ಕವಿಲಸಿದ್ಧ ಮಲ್ಲಿಕಾರ್ಜುನ, ಕವಿಲಸಿದ್ಧಮಲ್ಲಿಕಾರ್ಜುನ ಲಿಂಗ . ಕವಿಲಸಿದ್ಧಮಲ್ಲೇಶ್ವರ. ಕವಿಲಸಿದ್ಧಮಲ್ಲಿನಾಥಯ್ಯ ಎಂಬ ಅಂಕಿತಗಳು ಕೂಡ ಬಳಕೆಯಾಗಿದೆ.ಇನ್ನು ಕೆಲವೊಂದು ವಚನಗಳಲ್ಲಿ ವಿರಳವಾಗಿ ಕಪಿಲಸಿದ್ಧ ಮಲ್ಲಿಕಾರ್ಜುನ ಯೋಗಿನಾಥ ಎಂಬ ಅಂಕಿತವನ್ನು ಕೂಡ ಕಾಣಬಹುದಾಗಿದೆ.ಸೊನ್ನಲಿಗಿಯ…
