ಸರಕಾರಿ ಪ್ರೌಢಶಾಲೆ ಝಳಕಿಯಲ್ಲಿ ಪ್ರೌಢಶಾಲಾ ಮುಖೋಪಾಧ್ಯಾಯರ ಸಭೆಯಲ್ಲಿ ಬಿಇಓ ಸುಜಾತಾ ಮಾಹಿತಿ
ಉದಯರಶ್ಮಿ ದಿನಪತ್ರಿಕೆ
ಚಡಚಣ: ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಸುಜಾತ ಹುನೂರ ನೇತೃತ್ವದಲ್ಲಿ ತಾಲೂಕಿನ ಸರಕಾರಿ, ಅನುದಾನಿತ, ಅನುದಾನರಹಿತ ಪ್ರೌಢಶಾಲಾ ಮುಖ್ಯೋಪಾಧ್ಯಾಯರುಗಳ ಸಭೆಯನ್ನು ಸರಕಾರಿ ಪ್ರೌಢಶಾಲೆ ಝಳಕಿಯಲ್ಲಿ ಶನಿವಾರ ಆಯೋಜಿಸಲಾಗಿತ್ತು.
ಸಭೆಯಲ್ಲಿ ತಾಲೂಕಿನ ಎಲ್ಲಾ ಸರಕಾರಿ, ಅನುದಾನಿತ, ಅನುದಾನರಹಿತ ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಭಾಗವಹಿಸಿದ್ದರು.
ಸಭೆಯಲ್ಲಿ ಪ್ರಾಸ್ತಾವಿಕವಾಗಿ ತಾಲೂಕಿನ ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿಗಳಾದ ಎನ್ ಜೆ ಸಿನಖೇಡ ಶಿಕ್ಷಣ ಸಂಯೋಜಕರು ೨೦೨೫-೨೬ನೇ ಸಾಲಿನ ಫಲಿತಾಂಶ ಸುಧಾರಣೆಗೆ ಘಟಕವಾರು ಮೌಲ್ಯಂಕನ (LBA) ನೂತನ ವ್ಯವಸ್ಥೆ ಬಗ್ಗೆ ಮತ್ತು ಫಲಿತಾಂಶ ಸುಧಾರಣೆಗೆ ಇಲಾಖೆಯ ೨೯ ಅಂಶಗಳ ಕುರಿತು ಮಾಹಿತಿ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಹುನೂರ ಮಾತನಾಡಿ, ೨೦೨೫-೨೬ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಿಸಲು ಇಲಾಖೆಯ ನೂತನ ಯೋಜನೆಗಳಾದ ಪ್ರತಿ ಘಟಕವಾರು ಪರೀಕ್ಷೆಗಳನ್ನು ನಡೆಸಿ (LBA) ಅಂಕಗಳನ್ನು SATS ನಲ್ಲಿ ಕೇಂದ್ರಿಕರಿಸುವುದು, ಇಲಾಖೆ ಅಧಿಕಾರಿಗಳು ಪ್ರತಿ ಶುಕ್ರವಾರ ಶಾಲೆಗಳಿಗೆ ಭೇಟಿ ಕೊಟ್ಟು ಕಡಿಮೆ ಫಲಿತಾಂಶ ಬಂದ ಶಾಲೆಗಳ ಮೇಲೆ ತೀವ್ರ ನಿಗಾ ಇಡುವುದು, ಘಟಕವಾರು ಹೊಸ ನೀಲನಕ್ಷೆ ಪರೀಕ್ಷೆ-೧ ಮತ್ತು ೨ ರ ವೇಳಪಟ್ಟಿ ಮುಂಚಿತವಾಗಿ ಬಿಡುಗಡೆ ಮಾಡಿ ಪ್ರತಿ ತಿಂಗಳು ಎಲ್ಲಾ ಹಂತಗಳಲ್ಲಿ ಪ್ರಗತಿ ಪರಿಶೀಲನಾ ಸಭೆಗಳನ್ನು ಆಯೋಜಿಸಿವದು.
ವಿದ್ಯಾರ್ಥಿಗಳ ಗೈರು ಹಾಜರಿ ತಪ್ಪಿಸುವುದು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಇಲಾಖೆಯ ವೆಬ್ ಸೈಟ್‌ನಲ್ಲಿ ಬಿಟ್ಟಿದ್ದು ಅವುಗಳನ್ನು ಬಳಸಿಕೊಳ್ಳುವುದು ಪ್ರಾರ್ಥನೆ ಅವಧಿಯಲ್ಲಿ ನೈತಿಕ ಮೌಲ್ಯಗಳನ್ನು ತಿಳಿಸುವುದು, ಇಲಾಖೆಯ ನೂತನ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಸರಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಎ ಬಿ ಪಾವಲೆಯವರು ಇಲಾಖೆಯ ಎಲ್ಲ ಯೋಜನೆಗಳನ್ನು ಶಾಲೆಗಳಲ್ಲಿ ಅನುಷ್ಠಾನ ಮಾಡಿ ಫಲಿತಾಂಶ ಹೆಚ್ಚಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೆವೆಂದು ಎಲ್ಲ ಮುಖ್ಯಶಿಕ್ಷಕರ ಪರವಾಗಿ ಮಾತನಾಡಿದರು.
ತಾಲೂಕಿನ ಪ್ರೌಢಶಾಲೆಯ ಎಲ್ಲ ಮುಖ್ಯ ಗುರುಗಳು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು.