ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಇವರ ವತಿಯಿಂದ ಹಮ್ಮಿಕೊಳ್ಳಲಾದ ಯುವ ಕವಿಗೋಷ್ಠಿಗೆ ವಿಜಯಪುರ ಜಿಲ್ಲೆ, ಸಿಂದಗಿ ತಾಲೂಕಿನ ಯುವಕವಿ ಸಾಯಬಣ್ಣ ಮಲ್ಲಪ್ಪ ಮಾದರ ಆಯ್ಕೆಯಾಗಿದ್ದಾರೆ.
ದಿನಾಂಕ ೨೧-೦೭-೨೦೨೫ ರಂದು ಸೋಮವಾರ ಬೆಳಗ್ಗೆ ೧೦. ೩೦ ಗಂಟೆಗೆ ಕನ್ನಡ ಭವನ ಬೆಳಗಾವಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

