Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಇತ್ತೀಚೆಗೆ ಬೆಂಗಳೂರಿನ ಬಿಡದಿಯಲ್ಲಿರುವ ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾಗಿದ್ದ ದಿ.ಎನ್.ಮುತ್ತಪ್ಪ ರೈ ಅವರ ಮನೆಯ ಹತ್ತಿರ ಕೆಲ ದುಷ್ಕರ್ಮಿಗಳು ಬಂದು, ಎನ್.ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಲ್ಲದೆ ಅವರ ವಾಹನ ಚಾಲಕನ ಮೇಲೂ ಕೂಡ ಗುಂಡಿನ ದಾಳಿ ನಡೆಸಿದ್ದು, ತೀವ್ರ ಖಂಡನೀಯ ಎಂದು ಜಯ ಕರ್ನಾಟಕ ಸಂಘಟನೆಯ ತಾಲೂಕಾಧ್ಯಕ್ಷ ಸಂತೋಷ ಮನಗೂಳಿ ಹೇಲಿದ್ದಾರೆ.ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದ ಅವರು, ಈ ಘಟನೆಯಿಂದ ರಾಜ್ಯದ ಜನತೆಯಲ್ಲಿ ಭಯಾನಕ ವಾತವರಣ ನಿರ್ಮಾಣವಾಗಿದೆ. ಅವರ ಮೇಲೆ ದಾಳಿ ನಡೆಸಿದವರಿಗೆ ಬಂಧಿಸಿ ಕಠಿಣ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಸಾರಂಗಮಠದ ಪೀಠಾಧಿಪತಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರ ಅಭಿಮತ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಯುವಕರಿಗೆ ಆಧ್ಯಾತ್ಮಿಕ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಆಧ್ಯಾತ್ಮಿಕ ಸತ್ಸಂಗದಲ್ಲಿ ಭಾಗವಹಿಸುವಂತೆ ಗುರು ಹಿರಿಯರು ಕುಟುಂಬದಲ್ಲಿ ತಂದೆ-ತಾಯಿ ಅವರಿಗೆ ಮಾರ್ಗದರ್ಶನ ನೀಡುವುದು ಅವಶ್ಯವಿದೆ ಎಂದು ಸಾರಂಗಮಠದ ಪೀಠಾಧಿಪತಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.ತಾಲೂಕಿನ ಬಂದಾಳ ಗ್ರಾಮದ ಬಸಯ್ಯ ಮುತ್ಯಾನ ಮಠದಲ್ಲಿ ಸಾರಂಗಮಠದ ಲಿಂ.ಸಿದ್ಧಲಿಂಗ ಶಿವಾಚಾರ್ಯರಿಂದ ಅನುಗ್ರಹಿತ ಮಹಾಮಹಿಮ ಶ್ರೀ ಬಸಯ್ಯ ಮುತ್ಯಾನ ಹಿರೇಮಠದ ಜಾತ್ರೆ ಹಾಗೂ ಜಗನ್ಮಾತೆ ಶ್ರೀದೇವಿ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡ ಗೊಲಗೇರಿ ಶ್ರೀ ಗೊಲ್ಲಾಳೇಶ್ವರ ಮಹಾಪುರಾಣ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ದಿನ ಸತ್ಯದ ಸಹವಾಸ ಮಾಡಿದಾಗ ಸತ್ಸಂಗವಾಗುತ್ತದೆ. ಆದ್ದರಿಂದ ಆಧ್ಯಾತ್ಮಿಕ ಹಾದಿಯಲ್ಲಿ ನಡೆಯಲು ಪ್ರಾರಂಭಿಸುವದರಿಂದ ಆಧ್ಯಾತ್ಮಿಕ ಜ್ಞಾನವನ್ನು ಪಡೆದುಕೊಳ್ಳಲು ಸಹಕಾರಿಯಾಗುತ್ತದೆ ಎಂದರು.ಈ ವೇಳೆ ಕನ್ನೊಳ್ಳಿ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಭಾಗವಹಿಸಿ ಮಾತನಾಡಿದರು. ಸಿದ್ದರಾಮ ಕುಳಕುಮಟಗಿ, ಸಿದ್ದರಾಮ ಬ್ಯಾಕೋಡ ಸಂಗೀತ ಸೇವೆ ನೀಡಿದರು. ಸಮಾರಂಭದಲ್ಲಿ ವಿಶ್ವನಾಥ ಕುರಡಿ, ದುಳಪ್ಪಗೌಡ ಬಿರಾದಾರ, ತಾಲೂಕು ಜಂಗಮ ಕ್ಷೇಮಾಭಿವೃದ್ಧಿ ಸಂಘದ…
ಬಿ ಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಎನ್ ಸಿ ಸಿ ಜೈ ಹಿಂದ್ ಎಂದು ಆರಂಭವಾಗುವ ಹಾಗೂ ಜೈ ಹಿಂದ್ ಕೊನೆಗೊಳ್ಳುವ ಒಂದು ಘಟಕ. ಆರ್ಮಿ ಕನಸು ಹೊತ್ತ ಎಷ್ಟೋ ಯುವಕ ಯುವತಿಯರ ಮಾರ್ಗದರ್ಶನದ ಶಾಖೆಯೇ ರಾಷ್ಟ್ರೀಯ ಕಾಡೆಟ್ ಕ್ರಾಪ್ಸ್ ಎಂದು ಕರ್ನಲ್ ಬಿ ಕೆ ಕೆ ವಂಶಿ ಹೇಳಿದರು.ನಗರದ ಬಿ ಎಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕಾಲೇಜಿನ ಎನ್ ಸಿ ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಕಾಡೆಟ್ಸ್ಗಳಿಗೆ ನಿಮ್ಮ ಮುಂದಿನ ಜೀವನ ಉಜ್ವಲವಾಗಿ ಬೆಳಗಲಿ, ಮತ್ತು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಗಳಲ್ಲಿ ಭಾಗವಹಿಸಲು ತಿಳಿಸಿದರು.ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಉಪಪ್ರಾಚಾರ್ಯ ಡಾ. ಅನಿಲ್ ಬಿ ನಾಯಕ್ ಮಾತನಾಡಿ ಕಾಡೆಟ್ಗಳಿಗೆ ನಿಮ್ಮ ಒಳ್ಳೆಯ ನಾಯಕತ್ವ ಗುಣದೊಂದಿಗೆ ಉತ್ತಮವಾದ ಜೀವನ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಪ್ರಧಾನಮಂತ್ರಿ ಕುಸುಮ-ಬಿ ಮತ್ತು ಸಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಿ ಅನುಷ್ಠಾನಗೊಳಿಸಲಾಗುತ್ತಿದ್ದು, ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಪ್ರಧಾನಮಂತ್ರಿ ಕುಸುಮ ಸಿ ಯೋಜನೆ ಅನುಷ್ಠಾನಗೊಳಿಸಿ ರೈತರಿಗೆ ನಿರಂತರವಾಗಿ ಏಳು ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಎಂದು ಹೆಸ್ಕಾಂ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.ಪ್ರಧಾನಮಂತ್ರಿ ಕುಸುಮ-ಬಿ ಯೋಜನೆಯಡಿ ೧೬೪ ನೀರಾವರಿ ಪಂಪಸೆಟ್‌ಗಳ ಪೈಕಿ ೨೭ ನೀರಾವರಿ ಪಂಪಸೆಟ್‌ಗಳಿಗೆ ಸೌರಶಕ್ತಿ ಚಾಲಿತ ಪಂಪಸೆಟ್‌ಗಳನ್ನು ಅಳವಡಿಸಲಾಗಿದೆ. ಉಳಿದ ಫಲಾನುಭವಿಗಳ ಕಾಮಗಾರಿ ಪ್ರಗತಿಯಲ್ಲಿದೆ. ಈ ಯೋಜನೆಯಿಂದ ರೈತರಿಗೆ ಹಗಲು ವೇಳೆಯಲ್ಲಿ ನಿರಂತರ ವಿದ್ಯುತ್ ಸರಬರಾಜು ಮಾಡಲಾಗುತ್ತಿದ್ದು, ಸೌರಮಿತ್ರ ಪೋರ್ಟಲ್ ಮೂಲಕ ೨೨೯೫ ರೈತರು ಸೋಲಾರ್ ಪಂಪಸೆಟ್ ಅಳವಡಿಸಿಕೊಳ್ಳಲು ನೊಂದಾಯಿಸಿಕೊಂಡಿದ್ದು, ಸ್ಥಳಪರಿಶೀಲನೆ ಕಾರ್ಯ ಪ್ರಗತಿಯಲ್ಲಿದೆ.ಪ್ರಧಾನಮಂತ್ರಿ ಕುಸುಮ-ಸಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು ೧೭ ವಿದ್ಯುತ್ ಉಪ ಕೇಂದ್ರಗಳ ಮೂಲಕ ೪೦ ವಿದ್ಯುತ್ ಮಾರ್ಗಗಳನ್ನು ಸೌರೀಕರಣ ಮಾಡಲು ಉದ್ಧೇಶಿಸಿ, ೮೭.೭೧ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ ಹೊಂದಲಾಗಿದೆ. ದಿನಾಂಕ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಪಟ್ಟಣದ ವಾರ್ಡ ನಂ ೧೭ ರ ಕರಿಮ ನಗರ, ಬಾಗವಾನ ನಗರ ಮತ್ತು ಮಾಡೆಲ ಸ್ಕೂಲ್ ಪ್ರದೇಶ ಹೋಗುವ ದಾರಿಗಳಲ್ಲಿ ಗಟಾರು ನೀರು ರಸ್ತೆ ಮೇಲೆ ಬರುತ್ತಿದೆ.ಕೆಲವು ಕಡೆ ಗಟಾರು ಮಾಡಿದ್ದು ಅವುಗಳಲ್ಲಿ ಕೆಲವನ್ನು ಅರ್ಧಕ್ಕೆ ನಿಲ್ಲಿಸಿ ಗಟಾರದಲ್ಲಿ ಕಾಂಕ್ರೀಟ್ ಹಾಕಿ ಗಟಾರು ನೀರು ಮುಂದೆ ಹೋಗದಂತೆ ಮಾಡಿದ್ದಾರೆ.ಮತ್ತು ಕೆಲವು ಕಡೆ ಗಟಾರು ಅರ್ಧಕ್ಕೆ ಬಂದ್ ಮಾಡಿ ಅಲ್ಲಿಂದ ಗಟಾರ ನೀರನ್ನು ಅದರ ಎದುರಿನ ಗಟಾರಕ್ಕೆ ತಿರುವು ನೀಡಿ ಎದುರಿನ ಗಟಾರಕ್ಕೆ ನೀರು ಹೋಗುವಂತೆ ಮಾಡಿದ್ದಾರೆ.ವ್ಯವಸ್ಥೆ ಸಂಪೂರ್ಣ ಅವೈಜ್ಞಾನಿಕವಾಗಿದ್ದು ಅಲ್ಲಿ ಯ ಕೊಳಚೆ ನೀರಿನಿಂದ ಸಾರ್ವಜನಿಕರು ರೋಗಗಳಿಂದ ನರಳುತ್ತಿದ್ದಾರೆ.ಈ ಕುರಿತು ಸಂಬಂಧಿತ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ.ಕೂಡಲೇ ಸ್ಪಂದಿಸದಿದ್ದರೆ ಹೋರಾಟ ಮಾಡುವದಾಗಿ ನಗರ ನಿವಾಸಿಗಳು ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಇಂಡಿ: ನಗರದ ವಿವಿಧ ವಾರ್ಡ ಜನರಿಗೆ, ರೈತರಿಗೆ, ಮಹಿಳೆಯರಿಗೆ ಮತ್ತು ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ನಗರ ಸಾರಿಗೆ ವ್ಯವಸ್ಥೆ ಇಂದಿನಿಂದ ಪ್ರಾರಂಭಮಾಡಿದ್ದು ಸದುಪಯೋಗ ಪಡೆಯಲು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೆ.ಎಸ್.ಆರ್.ಟಿ ಸಿಯಿಂದ ಇಂಡಿಯಲ್ಲಿ ನಗರ ಸಭೆಗೆ ಬಸ್ ಗೆ ಚಾಲನೆ ನೀಡಿ ಮಾತನಾಡಿದರು.ನಿಜವಾಗಲೂ ಬಸ್ ನಿಲ್ದಾಣದಲ್ಲೆ ಚಾಲನೆ ನೀಡಬೇಕಾಗಿತ್ತು. ಆದರೆ ಬಸ್ ನಿಲ್ದಾಣ ಸ್ವಚ್ಷತೆ ಇಲ್ಲದೆ ಅವ್ಯವಸ್ಥಿತೆಯಿಂದ ಕೂಡಿದ್ದರಿಂದ ನಗರ ಬಸ್ ಸಾರಿಗೆ ಪ್ರವಾಸಿ ಮಂದಿರದಲ್ಲಿ ಚಾಲನೆ ನೀಡಲಾಯಿತು. ಬಹುದಿನಗಳ ಹಿಂದೆ ನಗರ ಸಾರಿಗೆ ಮಾಡಬೇಕಾಗಿತ್ತು. ಆದರೆ ಅಧಿಕಾರಿಗಳ ಜವಾಬ್ದಾರಿ ಕೊರತೆಯಿಂದ ತಡವಾಗಿದೆ ಎಂದು ಸೂಕ್ಷ್ಮವಾಗಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು. ಜಿಲ್ಲೆಯಲ್ಲಿ ಅತ್ಯಂತ ಜನ ಸಂಖ್ಯೆ ಹೊಂದಿರುವ ತಾಲ್ಲೂಕು ಹಾಗೂ ನಗರ. ಈ ಭಾಗದ ಜನರಿಗೂ ಎಲ್ಲಾ ರೀತಿಯಲ್ಲೂ ಸರಕಾರದ ಸೌಲಭ್ಯ, ಸೌಕರ್ಯ ಸಿಗಬೇಕು ಎಂದು ಹೇಳಿದರು.ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರಬರ ಮಾತನಾಡಿ ಇಂದಿನಿಂದ ಎರಡು ನಗರ ಬಸ್ ಗೆ ಚಾಲನೆ…
ಸಂಕನಾಳ ಶಾಖಾ ಕಾಲುವೆಯಿಂದ ಹೂವಿನಹಿಪ್ಪರಗಿ ಹೋಬಳಿ ವ್ಯಾಪ್ತಿಯಲ್ಲಿ ಇನ್ನೂ ಬಾಕಿಯಿರುವ ೨ ಕಿ.ಮೀ ವಿತರಣಾ ಕಾಲುವೆ ನಿರ್ಮಾಣಕ್ಕೆ ಆಗ್ರಹ ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಮುಳವಾಡ ಏತ ನೀರಾವರಿ ಯೋಜನೆಯ ಸಂಕನಾಳ ಶಾಖಾ ಕಾಲುವೆಯಿಂದ ಹೂವಿನಹಿಪ್ಪರಗಿ ಹೋಬಳಿ ವ್ಯಾಪ್ತಿಯಲ್ಲಿ ಇನ್ನೂ ಬಾಕಿಯಿರುವ ೨ ಕಿ.ಮೀ ವಿತರಣಾ ಕಾಲುವೆ ನಿರ್ಮಾಣಕ್ಕೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘ ಮಂಗಳವಾರ ಇಲ್ಲಿಯ ಮುಖ್ಯ ಎಂಜಿನಿಯರ್ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿತು.ಇಲ್ಲಿಯ ರಾಮಲಿಂಗೇಶ್ವರ ದೇವಸ್ಥಾನದಿಂದ ಹೊರಟ ಪ್ರತಿಭಟನಾ ಮೆರವಣಿಗೆಯಲ್ಲಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಲಾಯಿತು. ಹಲಗೆ ವಾದನ, ಎತ್ತುಗಳೊಂದಿಗೆ ಮೆರವಣಿಗೆ ನಡೆಯಿತು.ಧರಣಿನಿರತರನ್ನುದ್ದೇಶಿಸಿ ಮಾತನಾಡಿದ ಸಂಘಟನೆಯ ರಾಜ್ಯ ಘಟಕದ ಪ್ರಧಾನಕಾರ್ಯದರ್ಶಿ ಅರವಿಂದ ಕುಲಕರ್ಣಿ, ಕಳೆದ ತಿಂಗಳು ಹೋರಾಟ ಮಾಡಿದಾಗ ೧೫ ದಿನಗಳಲ್ಲಿ ಬಾಕಿ ಉಳಿದ ವಿತರಣಾ ಕಾಲುವೆಯ ಕಾಮಗಾರಿ ಆರಂಭಿಸುವ ಬಗ್ಗೆ ಕೆಬಿಜೆಎನ್ಎಲ್ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಒಂದು ತಿಂಗಳು ಗತಿಸಿದರೂ ಇನ್ನೂ ಕಾಮಗಾರಿ ಆರಂಭಿಸಿಲ್ಲ, ಸುಳ್ಳು ಹೇಳಿ ರೈತರ ದಾರಿತಪ್ಪಿಸುತ್ತಿದ್ದಾರೆ, ಬೇಸಿಗೆಯಲ್ಲಿ ಹಳ್ಳಿಗಳಲ್ಲಿ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಹುಣಶ್ಯಾಳ ಗ್ರಾಮದ ಕ್ರಾಸ್‌ನಿಂದ ಗುತ್ತಿ ಬಸವಣ್ಣ ಕಾಲುವೆಯವರೆಗಿನ ರಸ್ತೆ ಡಾಂಬರು ಕಾಣದೇ ಸಂಪೂರ್ಣ ಹಾಳಾಗಿದ್ದು ಕೂಡಲೇ ರಸ್ತೆ ನಿರ್ಮಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.ತಾಲ್ಲೂಕಿನ ಹುಣಶ್ಯಾಳ ಗ್ರಾಮದ ಗ್ರಾಮಸ್ಥರು ಮಂಗಳವಾರ ಪತ್ರಿಕಾ ಹೇಳಿಕೆಯ ಮೂಲಕ ಆಗ್ರಹ ಪಡಿಸಿದ್ದಾರೆ.ಗ್ರಾಮದಿಂದ ಕಾಲುವೆಯವರೆಗಿನ ೫.೫ ಕಿ.ಮೀ ಸಂಪೂರ್ಣ ಹಾಳಾಗಿದೆ. ಇಲ್ಲಿ ಖಾಸಗಿ ವಾಹನ ಅಥವಾ ದ್ವಿಚಕ್ರವಾಹನಗಳ ಮೂಲಕ ಸಂಚರಿಸುವವರ ಪರಿಸ್ಥಿತಿ ಹೇಳತೀರದಾಗಿದೆ. ತಗ್ಗು ದಿನ್ನೆಗಳಿಂದ ಕೂಡಿದ ರಸ್ತೆಯಲ್ಲಿ ವಾಹನಗಳು ಧೂಳ ಎಬ್ಬಿಸುತ್ತಾ, ತೆವಳುತ್ತಾ ನಿಧಾನವಾಗಿ ಚಲಿಸಿದರೆ, ಅದರಲ್ಲಿ ಕುಳಿತವರು ಬೆಳಿಗ್ಗೆ ಶುಭ್ರಬಟ್ಟೆಗಳೊಂದಿಗೆ ಹೊರಟವರು ಧೂಳುಮಯವಾಗಿ ಮರಳುವಂತಾಗಿದೆ. ಇನ್ನೂ ಆನೆಮಡು, ಸಲಾದಹಳ್ಳಿ, ಚಟ್ನಳ್ಳಿ, ಅಸಂತಾಪೂರ ಗ್ರಾಮಗಳಿಂದ ಪಂಚಾಯಿತಿ ನಿತ್ಯ ಅಗತ್ಯ ಕೆಲಸಗಳಿಗೆ ಬರುವವರು ಸಹ ರಸ್ತೆಯನ್ನು ಕಂಡು ಪಂಚಾಯಿತಿಗೆ ಹಿಡಿಶಾಪ ಹಾಕುವುದು ಸಾಮಾನ್ಯವಾಗಿದೆ.ಗ್ರಾಮದಿಂದ ಕಲಬುರಗಿ, ಯಾದಗಿರಿ, ಆಲಗೂರ, ಗೋಲಗೇರಿ, ಮಳ್ಳಿ, ಕೆಂಭಾವಿ, ಯಡ್ರಾಮಿ, ಶಹಾಪೂರಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯೇ ಇದಾಗಿದ್ದು ಇಲ್ಲಿ ನಿತ್ಯ ನೂರಾರು ವಾಹನಗಳು, ದ್ವಿಚಕ್ರ ಸವಾರರು ಪ್ರಯಾಣಿಸುತ್ತಾರೆ. ಇವರ ನಿತ್ಯ ಕೆಲಸಗಳಿಗೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಗೊಳಸಂಗಿಯ ಶ್ರೀ ಚನ್ನಮಲ್ಲಪ್ಪ ಚನ್ನವೀರಪ್ಪ ಹೆಬ್ಬಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೨೦೨೫-೨೬ನೇ ಶೈಕ್ಷಣಿಕ ಸಾಲಿನ ಪದವಿ ಪ್ರಥಮ ವರ್ಷದ ಪ್ರವೇಶಾವಕಾಶ ಪ್ರಾರಂಭವಾಗಿವೆ.ಬಿ.ಎ ಹಾಗೂ ಬಿಕಾಂ ಪದವಿ ಕೊರ್ಸುಗಳ ಪ್ರವೇಶಾವಕಾಶ ಪಡೆಯಬಹುದಾಗಿದೆ. ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ಪ್ರಾಂಶುಪಾಲರಾದ ಎಸ್.ಎಸ್.ರಾಜಮಾನ್ಯ (ಮೊ:೯೪೪೮೭೦೨೯೫೧), ಪ್ರೊ.ಸಿ.ಎಂ.ನಾಯಕ (ಮೊ:೭೦೧೯೬೭೦೪೯೮), ಪ್ರೊ.ಎಸ್ ಅರ್ ಕುಂಬಾರ (ಮೊ:೯೪೮೧೩೪೮೨೧೬), ಪ್ರೊ.ಮೊಹಮ್ಮದ ಯೂನುಸ್ (ಮೊ:೭೦೧೯೩೨೪೮೧೦), ಪ್ರೊ.ಶ್ರೀಶೈಲ ಬಬಲಾದ (ಮೊ:೮೭೨೨೫೯೫೪೫೩) ಇವರನ್ನು ಸಂಪರ್ಕಿಸುವಂತೆ ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಸಿಂದಗಿ ಶಿಸು ಅಭಿವೃದ್ದಿ ಯೋಜನೆ ವ್ಯಾಪ್ತಿಯ ಸಿಂದಗಿ, ಆಲಮೇಲ, ದೇವರಹಿಪ್ಪರಗಿ ಮತ್ತು ತಾಳಿಕೋಟೆ ತಾಲೂಕಿನಲ್ಲಿರುವ ೪ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗೆ ಆಯ್ಕೆಯಾದ ತಾತ್ಕಾಲಿಕವಾಗಿ ಆಯ್ಕೆ ಪಟ್ಟಿಯನ್ನು ಶಿಶು ಅಭಿವೃದ್ದಿ ಯೋಜನಾ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.ಪ್ರಕಟಿತ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ, ದಿನಾಂಕ : ೦೨-೦೫-೨೦೨೫ರೊಳಗಾಗಿ ಸೂಕ್ತ ದಾಖಲಾತಿಗಳೊಂದಿಗೆ ಆಕ್ಷೇಪಣೆಗಳನ್ನು ಸಂಬಂಧಪಟ್ಟ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಗೆ ಸಲ್ಲಿಸುವಂತೆ ಸಿಂದಗಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
