ನಿಡಗುಂದಿ ಪಟ್ಟಣ ಪಂಚಾಯತ್ ವಾರ್ಡ ನಂ.೫ ಉಪ ಚುನಾವಣೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಜ್ಯ ಚುನಾವಣಾ ಆಯೋಗದ ಮಾರ್ಗದರ್ಶನ ಜಿಲ್ಲೆಯ ನಿಡಗುಂದಿ ಪಟ್ಟಣ ಪಂಚಾಯತ್ ವಾರ್ಡ-೦೫ರ ಉಪ ಚುನಾವಣೆಗೆ ಸಂಬಂಧಿಸಿದಂತೆ ಮತದಾರ ಕರಡು ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
ನಿಡಗುಂದಿ ತಹಶೀಲ್ದಾರ ಕಾರ್ಯಾಲಯ, ಪಟ್ಟಣ ಪಂಚಾಯತ್ ಕಾರ್ಯಾಲಯ ಹಾಗೂ ಸಂಬಂಧಿಸಿದ ಮತಗಟ್ಟೆಗಳಲ್ಲಿ ಸಾರ್ವಜನಿಕರು ಹಾಗೂ ಮತದಾರರ ವೀಕ್ಷಣೆಗೆ ಕರಡು ಪ್ರತಿಯನ್ನು ಇರಿಸಲಾಗಿದೆ. ಪ್ರಕಟಿಸಲಾದ ಕರಡು ಮತದಾರ ಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ ಜುಲೈ ೨೪ರೊಳಗೆ ನಿಡಗುಂದಿ ತಹಶೀಲ್ದಾರರಿಗೆ ಸಲ್ಲಿಸಬೇಕು. ಸ್ವೀಕೃತವಾಗುವ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಿ ಅಂತಿಮ ಮತದಾರ ಪಟ್ಟಿಯನ್ನು ೨೦೨೫ರ ಜುಲೈ ೨೫ರಂದು ಪ್ರಕಟಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.