ಉದಯರಶ್ಮಿ ದಿನಪತ್ರಿಕೆ
ಚಡಚಣ: ರಾಷ್ಟ್ರೀಯ ಸ್ವಯಂಸೇವಕ ಸಂಘದವತಿಯಿಂದ ಪಟ್ಟಣದ ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ಜು. ೨೦ ರವಿವಾರದಂದು ಗುರುಪೂಜಾ ಉತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಅಂದು ಸಾಯಂಕಾಲ ೬:೦೦ಕ್ಕೆ ಆರಂಭಗೊಳ್ಳಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ನಿವೃತ್ತ ಶಿಕ್ಷಕ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಗಂಗಾಧರಯ್ಯ ಮಠ ಅವರು ವಹಿಸಲಿದ್ದು, ವಕ್ತಾರರಾಗಿ ಉತ್ತರ ಕರ್ನಾಟಕ ಸಹಪ್ರಾಂತ ಪ್ರಚಾರಕರಾದ ಶ್ರೀನಿವಾಸ ಜೀ ಆಗಮಿಸಲಿದ್ದಾರೆಂದು ತಾಲೂಕಾ ಕಾರ್ಯವಾಹ ಸಂಜೀವ ಜಾಲಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
