ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಗ್ರಾಮದಿಂದ ಜಮಖಂಡಿಗೆ ತೆರಳುವ ವಸತಿ ಬಸ್ ಬಿಡುವ ವೇಳೆಯನ್ನು ಬದಲಾಯಿಸಬೇಕೆಂದು ಇಲ್ಲಿನ ವಿದ್ಯಾರ್ಥಿಗಳು, ಪಾಲಕರು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಗ್ರಾಮದ ವಿದ್ಯಾರ್ಥಿಗಳಿಗಾಗಿಯೇ ವಿಶೇಷವಾಗಿ ಬಿಡಲಾಗುವ ಈ ಬಸ್ ಗ್ರಾಮದಿಂದ ಪ್ರತಿದಿನ ಬೆಳಿಗ್ಗೆ ೭ ಘಂಟೆಗೆ ಇಲ್ಲಿನ ಬಸ್ ನಿಲ್ದಾಣದಿಂದ ಹೊರಡುತಿತ್ತು ಆದರೆ ಪ್ರಸಕ್ತ ಶೈಕ್ಷಣಿಕ ಅವಧಿಯಿಂದ ಈ ಬಸ್ಸಿನ ವೇಳಾಪಟ್ಟಿಯನ್ನು ೬ ಘಂ. ೩೦ ನಿಮಿಷಕ್ಕೇ ಬದಲಾಯಿಸಿರುವುದರಿಂದ ಹೊಲ ಗದ್ದೆಗಳಿಂದ ಬರುವ ಬಹುತೇಕ ವಿದ್ಯಾರ್ಥಿಗಳಿಗೆ ಬಸ್ ಸೇವೆ ಲಭ್ಯವಾಗುತ್ತಿಲ್ಲ, ಪ್ರತಿದಿನ ಅರ್ಧಘಂಟೆ ಮುಂಚಿತವಾಗಿ ಹೊರಡುತ್ತಿರುವುದರಿಂದ ಹೊಲ ಗದ್ದೆಗಳಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಈ ಬಸ್ ಹೋದನಂತರ ಸುಮಾರು ಒಂದು ಘಂಟೆಗಳಕಾಲ ಈ ಮಾರ್ಗದಲ್ಲಿ ಬೇರೆ ಬಸ್‌ಗಳಿಲ್ಲ ಅಲ್ಲದೇ ನಂತರ ಬರುವ ಬಸ್‌ಗಳು ಅನ್ಯ ರಾಜ್ಯಕ್ಕೆ ಹೋಗುವುದರಿಂದ ವಿದ್ಯಾರ್ಥಿನಿಯರು ಪ್ರತಿದಿನ ಬಸ್ ಟಿಕೇಟ ಪಡೆದು ಪ್ರಯಾಣಿಸುವಂತಾಗಿದೆ ಇದರಿಂದ ಬಡ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಅಲ್ಲದೇ ಪ್ರತಿದಿನ ಕಾಲೇಜಿನಲ್ಲಿ ಬೆಳಗಿನ ತರಗತಿಗಳಿಗೆ ಗೈರು ಹಾಜರಾಗುತ್ತಿರುವುರಿಂದ ಶೈಕ್ಷಣಿಕ ಹಿನ್ನಡೆಯಾಗುತ್ತಿದೆ ಸಂಬಂದಿಸಿದ ಇಲಾಖೆಯ ಅಧಿಕಾರಿಗಳು ಕೂಡಲೆ ಕ್ರಮ ಕೈಗೊಂಡು ಈ ಮುಂಚಿನಂತೆ ಬೆಳಿಗ್ಗೆ ೭ ಘಂಟೆಗೆ ಗ್ರಾಮದಿಂದ ಬಸ್ ಹೊರಡುವಂತೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮದ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.