Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಅನುದಾನ ಮಂಜೂರಿಸಲು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಶಿಫಾರಸ್ಸು ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸನ್ 2021-22ನೇ ಸಾಲಿನ ಕೇಂದ್ರ ಪುರಷ್ಕೃತ ಅಮೃತ 2.0 ಯೋಜನೆಯಡಿ ವಿಜಯಪುರ ನಗರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿವಿಧ ಕಾಲೊನಿ/ಬಡಾವಣೆಗಳ ಉದ್ಯಾನವನಗಳ ಅಭಿವೃದ್ಧಿ ಕಾಮಗಾರಿಗಳಿಗೆ ರೂ.4.10 ಕೋಟಿ ಅನುದಾನ ಬಿಡುಗಡೆಯಾಗಿದೆ.2022 ರ ಜುಲೈ 17 ರಂದು ಉದ್ಯಾನಗಳ ಅಭಿವೃದ್ಧಿಗಾಗಿ ಅನುದಾನ ಮಂಜೂರಿಸಲು ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ಶಿಫಾರಸ್ಸು ಮಾಡಿದ್ದರು. ಅದರಂತೆ ಈಗ ನಗರದ ವಾರ್ಡ್ ನಂ.6ರ ಅಲಕುಂಟೆ ನಗರದ ಸಿದ್ದಿವಿನಾಯಕ ಗುಡಿ ಹತ್ತಿರದ ಉದ್ಯಾನವನ ಅಭಿವೃದ್ಧಿಗೆ ರೂ.30 ಲಕ್ಷ, ವಾರ್ಡ್ ನಂ.35ರ ಗಿರಿಮಲ್ಲೇಶ್ವರ ಕಾಲೊನಿಯಲ್ಲಿ ಉದ್ಯಾನವನ ಅಭಿವೃದ್ಧಿಗೆ ರೂ.50 ಲಕ್ಷ ಹಾಗೂ ಭವಾನಿ ನಗರದಲ್ಲಿ ಉದ್ಯಾನವನ ಅಭಿವೃದ್ಧಿಗೆ ರೂ.50 ಲಕ್ಷ, ವಾರ್ಡ್ ನಂ.29ರ ವಜ್ರಹನುಮಾನ ನಗರದಲ್ಲಿ ಉದ್ಯಾನವನ ಅಭಿವೃದ್ಧಿಗೆ ರೂ.40 ಲಕ್ಷ, ವಾರ್ಡ್ ನಂ.21ರ ನಂದಿನಿ ಬಡಾವಣೆಯ ಗುರುಪಾದೇಶ್ವರ ನಗರದ ಉದ್ಯಾನವನ ಅಭಿವೃದ್ಧಿಗೆ ರೂ.60 ಲಕ್ಷ, ವಜ್ರಹನುಮಾನ ಉದ್ಯಾನವನ (2) ಅಭಿವೃದ್ಧಿಗೆ…
ವಿಜಯಪುರ ಜಿಲ್ಲೆಯಲ್ಲಿ ನ.೦೧ ರಿಂದ ಕಬ್ಬು ನುರಿಸುವ ಕಾರ್ಯ ಆರಂಭಿಸಲು ಜಿಲ್ಲಾಧಿಕಾರಿ ಡಾ.ಆನಂದ ಕೆ. ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ ಪಕ್ವವಾಗಿರುವ ಕಬ್ಬನ್ನು ಆದ್ಯತೆಯ ಮೇಲೆ ಕಟಾವು ಮಾಡಿ ನವೆಂಬರ್ ೦೧ ರಿಂದ ಕಬ್ಬು ನುರಿಸುವ ಕಾರ್ಯ ಆರಂಭಿಸಿ ಕಬ್ಬು ಪೂರೈಸಿದ ರೈತರಿಗೆ ೧೪ ದಿನಗಳೊಳಗಾಗಿ ಕಬ್ಬಿನ ಹಣ ಪಾವತಿಸಲು ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಸೂಚನೆ ನೀಡಿದ್ದಾರೆ.ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಸಭೆ ನಡೆಸಿದ ಅವರು, ಜಿಲ್ಲೆಯ ಚಡಚನ ತಾಲೂಕಿನಆಯುಕ್ತರು ಕಬ್ಬು ಅಭಿವೃದ್ದಿ ಹಾಗೂ ಸಕ್ಕರೆ ನಿರ್ದೇಶಕರು ಬೆಂಗಳೂರು ಪ್ರಸಕ್ತ ೨೦೨೪-೨೫ನೇ ಸಾಲಿನಲ್ಲಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ನುರಿಸಿ ಉತ್ಪಾದಿಸಲಾಗುವ ಸಕ್ಕರೆ ಪ್ರಮಾಣಕ್ಕನುಗುಣವಾಗಿ ಕಬ್ಬು ನುರಿಸುವ ಹಂಗಾಮಿಗೆ ಪ್ರತಿ ಟನ್ ಕಬ್ಬಿಗೆ ಸಾಗಾಣಿಕೆ ಮತ್ತು ಕಟಾವು ಮಾಡುವ ದರ ಸೇರಿದಂತೆ ಪ್ರತಿ ಟನ್ ಕಬ್ಬಿಗೆ ಕಾರ್ಖಾನೆವಾರು ಎಫ್‌ಆರ್‌ಪಿ ದರವನ್ನು ನಿಗದಿಪಡಿಸಲಾಗಿದ್ದು,ಆಯುಕ್ತರು ಕಬ್ಬು ಅಭಿವೃದ್ದಿ ಹಾಗೂ ಸಕ್ಕರೆ ನಿರ್ದೇಶನಾಲಯ ಬೆಂಗಳೂರು ಅವರು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಕ್ಟೋಬರ್ ೬ ರಂದು ಕೊಪ್ಪಳದಲ್ಲಿ ಮುಖ್ಯಮಂತ್ರಿಗಳಿಂದ ಫಲಾನುಭವಿಗಳ ಸೌಲಭ್ಯ ವಿತರಣೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಡಳಿತದ ಮನವಿ ಮೇರೆಗೆ, ವಿಜಯಪುರದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗದಿಂದ ಎರಡು ನೂರು ಬಸ್ ಗಳನ್ನು ಒಪ್ಪಂದದ ಮೇರೆಗೆ ಒದಗಿಸಲಾಗುತ್ತಿದೆ.ಅ.೬ರಂದು ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಪ್ರಯಾಣಿಕರು ಸಹಕರಿಸುವಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಅವರು ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮುದ್ದೇಬಿಹಾಳ ತಾಲ್ಲೂಕಿನ ದೇವರ ಹುಲಗಬಾಳ ಗ್ರಾಮದಲ್ಲಿನ ರಿಸನಂ.೯೯ರಲ್ಲಿನ ೪ ಎಕರೆ ಸರಕಾರಿ ಜಮೀನನ್ನು ಜಮ್ಮಲದಿನ್ನಿ ಗ್ರಾಮದಲ್ಲಿ ೧೧೦ ಕೆ.ವಿ. ವಿದ್ಯುತ್ ಉಪ ಕೇಂದ್ರ ಸ್ಥಾಪನೆ ಹಾಗೂ ವಸತಿ ಗೃಹ ನಿರ್ಮಾಣಕ್ಕಾಗಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಯೋಜನಾ ವಿಭಾಗದ ಕಾರ್ಯನಿರ್ವಾಹಕ ಇಂಜನೀಯರ್ ಅವರಿಗೆ ಮಂಜೂರಿಸಲು ಉದ್ದೇಶಿಸಲಾಗಿದೆ.ಆಕ್ಷೇಪಣೆ ಆಹ್ವಾನ: ಮಸೂತಿ ಗ್ರಾಮದ ರಿಸನಂ.೪೪೭ರ ಪೈಕಿ ೪ ಎಕರೆ ಜಮೀನುಕೋಲ್ಹಾರ ತಾಲೂಕಿನ ಮಸೂತಿ ಗ್ರಾಮದಲ್ಲಿನ ರಿಸನಂ.೪೪೭ರ ಪೈಕಿ ೪ ಎಕರೆ ಗಾಯರಾಣ ಜಮೀನು ಮಸೂತಿ ಗ್ರಾಮದಲ್ಲಿ ೧೧೦ ಕೆ.ವಿ. ವಿದ್ಯುತ್ ಉಪ ಕೇಂದ್ರ ಸ್ಥಾಪನೆ ಹಾಗೂ ವಸತಿ ಗೃಹ ನಿರ್ಮಾಣಕ್ಕಾಗಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಯೋಜನಾ ವಿಭಾಗದ ಕಾರ್ಯನಿರ್ವಾಹಕ ಇಂಜನೀಯರ್ ಅವರಿಗೆ ಮಂಜೂರಿಸಲು ಉದ್ದೇಶಿಸಲಾಗಿದೆ.ಆಕ್ಷೇಪಣೆ ಆಹ್ವಾನ: ವಡವಡಗಿ ಗ್ರಾಮದ ರಿಸನಂ.೩೬೯ರ ೫ ಎಕರೆ ಜಮೀನುಬಸವನ ಬಾಗೇವಾಡಿ ತಾಲ್ಲೂಕಿನ ವಡವಡಗಿ ಗ್ರಾಮದಲ್ಲಿನ ರಿಸನಂ.೩೬೯ರ ೫ ಎಕರೆ ಹುಲ್ಲುಗಾವಲು ಜಮೀನನ್ನು ೧೧೦ ಕೆ.ವಿ. ವಿದ್ಯುತ್ ಉಪ ಕೇಂದ್ರ ಸ್ಥಾಪನೆ ಹಾಗೂ ವಸತಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕುಟುಂಬ ವ್ಯವಸ್ಥೆಯಲ್ಲಿ ಹಿರಿಯರ ಪಾತ್ರ ಬಹಳ ಮಹತ್ವದ್ದಾಗಿದೆ. ಚಿಕ್ಕ ಮಕ್ಕಳು ಪರಿಪೂರ್ಣತೆ ಹೊಂದಲು ಮನೆಯ ಹಿರಿಯರ ಅನುಭವದ ನುಡಿ ಕಿರಿಯರಿಗೆ ಅಮೃತವಿದ್ದಂತೆ, ಕಿರಿಯರು ತಮ್ಮ ಜೀವನವನ್ನು ಸುಂದರವಾಗಿ ರೂಪಿಸಿಕೊಂಡು ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಮನೆಯ ಹಿರಿಯರ ಮಾರ್ಗದರ್ಶನ ಹಾಗೂ ಸಲಹೆ ಅತಿ ಅಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಪತ್ರಾಧಿಕಾರಿ ರಾಮಣ್ಣ ಅಥಣಿ ಹೇಳಿದರು.ಜಿಲ್ಲಾಡಳಿತ,ಜಿಲ್ಲಾ ಪಂಚಾಯತಿ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡ ಹಿರಿಯ ನಾಗರೀಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಒಂದು ಕುಟುಂಬಕ್ಕೆ ಭದ್ರ ಬುನಾದಿಯಾಗಿರುವ ಹಿರಿಯ ನಾಗರಿಕರ ಉಪಸ್ಥಿತಿ ಅವಶ್ಯಕವಾಗಿದೆ. ಎಳವೆಯಲ್ಲಿಅಜ್ಜ-ಅಜ್ಜಿ ಹತ್ತಿರ ಬೆಳೆಯುವುದರಿಂದ ಮಕ್ಕಳು ಸುಸಂಸ್ಕೃತರಾಗಿ ಜೀವನ ಸುಂದರಗೊಳ್ಳುತ್ತದೆ. ಮನೆಯ ಹಿರಿಯರು ಕಿರಿಯರಿಗೆ ಸದಾ ಮಾದರಿಯಾಗಿರುತ್ತಾರೆ ಎಂದು ಅವರು ಹೇಳಿದರು.ನಿವೃತ್ತ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಎಸ್.ಎನ್.ಬಸವರೆಡ್ಡಿ ಅವರು ಉಪನ್ಯಾಸ ನೀಡಿದರು.ಹಿರಿಯ…
ಕಲಕೇರಿಯಲ್ಲಿ ಶ್ರೀ ಪರಮೇಶ್ವರಿ ದೇವಿ ಪುರಾಣ ಪ್ರವಚನ | ದಾರ್ಮಿಕ ವಿಜಯ ಮಹೋತ್ಸವ ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಪ್ರತಿಯೊಬ್ಬರೂ ತಮ್ಮ ಅಂತ:ಕರಣದ ಮಾತುಗಳನ್ನು ಕೇಳಿ ಆತ್ಮಸಾಕ್ಷಿಯಾಗಿ ಬದುಕನ್ನು ನಡೆಸಿದರೆ ಜೀವನದಲ್ಲಿ ಪುಣ್ಯಪ್ರಾಪ್ತಿಯಾಗುತ್ತದೆ ಜೊತೆಗೆ ನಾವು ಪರರಿಗೆ ಉಪಕಾರ ಮಾಡಿದಾಗ ನಮಗೆ ಪುಣ್ಯ ಬರುತ್ತದೆಯೇ ಹೊರತು ಇನ್ನೊಬ್ಬರಿಗೆ ಕೇಡನ್ನು ಬಯಸಿದರೆ ಅವರಲ್ಲಿರುವ ಪಾಪ ಕಡಿಮೆಯಾಗಿ ನಮ್ಮನ್ನು ಸುತ್ತಿಕೊಳ್ಳುತ್ತದೆ ಆದ್ದರಿಂದ ಪರರಿಗೆ ಉಪಕಾರ ಮಾಡದಿದ್ದರೂ ಪರವಾಗಿಲ್ಲ ಇನ್ನೊಬ್ಬರಿಗೆ ಮನಸ್ಸಿನಲ್ಲಿಯೂ ಕೂಡಾ ಕೇಡನ್ನು ಬಯಸಬಾರದು ಅಂದಾಗ ಮಾತ್ರ ನಮ್ಮ ಜೀವನ ಪಾವನವಾಗುತ್ತದೆ ಎಂದು ಕಾಶಿ ಜ್ಞಾನ ಸಿಂಹಾಸನಾಧೀಶ್ವರ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ಆಶಿರ್ವಚನದಲ್ಲಿ ಹೇಳಿದರು.ಈ ಜಗತ್ತಿನಲ್ಲಿ ಅತಿ ವೇಗವಾಗಿ ಚಲಿಸುವ ವಸ್ತು ಎಂದರೆ ಮನಸ್ಸು, ಅಂತಹ ಮನಸ್ಸನ್ನು ಒಳ್ಳೆಯದಕ್ಕೊಸ್ಕರ ಇಂತಹ ಧಾರ್ಮಿಕ ಕಾರ್ಯಗಳಲ್ಲಿ, ದೇವರ ಪ್ರಾರ್ಥನೆಯಲ್ಲಿ, ಪುರಾಣ, ಪ್ರವಚನಗಳಲ್ಲಿ ತೊಡಗಿಸಿಕೊಂಡರೆ ಒಳ್ಳೆಯ ಸದೃಡ, ಸುಶಿಕ್ಷಿತ ಸಮಾಜ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ ಎಂದರು.ಕಲಕೇರಿಯ ಭವಾನಿ ದೇವಸ್ಥಾನದಲ್ಲಿ ಶರನ್ ನವರಾತ್ರಿ ವಿಜಯದಶಮಿ ನಿಮಿತ್ಯವಾಗಿ ದೇವಿ ಪುರಾಣ ಮಂಗಲೋತ್ಸವ,…
ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಪಾನಿಸಾಹೇಬ ಉರುಸ್ ಸಾಕ್ಷಿ ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಜಾತಿ ಜಾತಿ ಎಂದು ಹೊಡೆದಾಡದೇ, ಬೇಧಭಾವ ಮಾಡದೇ ಎಲ್ಲರೂ ಕೂಡಿ ಬಾಳಿದರೇ ಭೂಮಿಯೇ ಸ್ವರ್ಗ ಎಂದು ಶಿರಹಟ್ಟಿ ಜಗದ್ಗುರು ಫಕೀರೇಶ್ವರ ಭಾವೈಕ್ಯತಾ ಸಂಸ್ಥಾನಮಠ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.ತಾಲ್ಲೂಕಿನ ಬಾಬಾನಗರ ಗ್ರಾಮದಲ್ಲಿ ಶನಿವಾರ ನಡೆದ ಹಜರತ್ ಬಾಬಾ ಪಾನಿಸಾಹೇಬ ಉರುಸ್ (ಜಾತ್ರೆ) ಹಾಗೂ ಸರ್ವ ಧರ್ಮ ಭಾವೈಕ್ಯತೆಯ ಮಹೋತ್ಸವದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ದೇವರು ಮನುಷ್ಯರನ್ನು ಸೃಷ್ಠಿ ಮಾಡಿದ, ಮನುಷ್ಯ ಜಾತಿಯನ್ನು ಸೃಷ್ಠಿ ಮಾಡಿದನು. ಗಂಡು ಮತ್ತು ಹೆಣ್ಣು ಎರಡೇ ಜಾತಿ, ಎಲ್ಲರ ದೇಹದಲ್ಲಿ ಹರಿಯುವ ರಕ್ತ ಒಂದೇಯಾಗಿದೆ. ಭೂಮಿಯ ಮೇಲೆ ಯಾರೂ ಹೆಚ್ಚಿನ ಜಾತಿಯವರಲ್ಲ ಯಾರೂ ಕಡಿಮೆ ಜಾತಿಯವರಲ್ಲ. ಮನುಷ್ಯ ಜಾತಿ ಅಂತ ಮಾತ್ರ ನಮ್ಮಲಿರಬೇಕು. ಮಕ್ಕಳ ತಲೆಯಲ್ಲಿ ಜಾತಿ ಎಂಬ ವಿಷ ಬೀಜ ತುಂಬದೇ ನೀತಿ, ಪ್ರೀತಿ, ಕರುಣೆ, ಮಮಕಾರ ತುಂಬಬೇಕು. ಎಲ್ಲರೂ ದ್ವೇಷ ಬಿಟ್ಟು ಪ್ರೀತಿ ಮಾಡಬೇಕು, ಪ್ರೀತಿಗಿಂತ ಮತ್ತೊಂದು ವಸ್ತು ಈ…
ಐತಿಹಾಸಿಕ ಜಾತ್ರೆಯಲ್ಲಿ ಹೇಳಿಕೆಗಳನ್ನು ಕೇಳಲು ಸೇರಿದ ಜನಸ್ತೋಮ ಉದಯರಶ್ಮಿ ದಿನಪತ್ರಿಕೆ ದೇವರ ಹಿಪ್ಪರಗಿ: ಅಶ್ವಾರೂಢ ರಾವುತರಾಯ ಬಂಡಿಯಲ್ಲಿ ಆಸೀನನಾಗಿ ಮಲ್ಲಯ್ಯನ ದೇವಸ್ಥಾನಕ್ಕೆ ತೆರಳುವುದರೊಂದಿಗೆ ಐತಿಹಾಸಿಕ ರಾವುತರಾಯ-ಮಲ್ಲಯ್ಯ ಜಾತ್ರೆ ಆರಂಭಗೊಂಡಿತು.ಪಟ್ಟಣದ ಸರ್ವಜನಪೂಜಿತ ರಾವುತರಾಯ ಶನಿವಾರ ನಸುಕಿನ ಮೂರು ಗಂಟೆಗೆ ಅಶ್ವಾರೂಢನಾಗಿ ತೆರೆದ ಬಂಡಿಯಲ್ಲಿ ಆಸೀನನಾಗಿ ಮೂಲ ದೇವಸ್ಥಾನದಿಂದ ಹೊರಟು ಬೆಳಗಿನ ೮ ಗಂಟೆಗೆ ಮಾನೆದೊಡ್ಡಿ ಎಂದೇ ಕರೆಯಲಾಗುವ ಸ್ಥಳದಲ್ಲಿ ನೂರಾರು ಭಕ್ತರು ಕಾಲ್ನಡಿಯಿಂದ ಹೊತ್ತು ತಂದ ಹೂಹಾರಗಳಿಂದ ಅಲಂಕಾರಗೊಂಡನು. ಇದನ್ನು ಹೂ ಮುಡಿಯುವುದು ಎಂದೇ ಕರೆಯಲಾಗುತ್ತಿದೆ. ನಂತರ ಶೀಡಗಟ್ಟಿ ಎಂಬ ಸ್ಥಳದಲ್ಲಿ ಕಾರಣಿಕರಿಂದ ಮುಂಬರುವ ಭವಿಷ್ಯದ ಕುರಿತಾಗಿ ಹೇಳಿಕೆಗಳು ಹೇಳಲ್ಪಟ್ಟವು.ಕಾರಣಿಕರ ಹೇಳಿಕೆಗಳು: ಬಿಳಿ ಕಾಳ ಮೇಲಾಯಿತು, ಕೆಂಪಕಾಳ ಕೆಳಗಾಯಿತು. ಕುಸುಬಿ, ಅಗಸಿ ಬೆನ್ನುಹತ್ತಿದವು. ಹತ್ತಿ ಗಗನಕ್ಕ ಹಾರಿತು, ಕಾಲಮಾನ ಬಾಳ ಕಷ್ಟ ಬಂತು, ಬಸವಣ್ಣನ ಕಾಪಾಡುಕೊಂಡವನ ಲಿಂಗದಂಗ ರಕ್ಷಣೆ ಮಾಡತೀನಿ. ನನ್ನ ಮೇಲೆ ನಂಬಿಕೆ ಇಟ್ಟು ಮಾಡಕತ್ತಿರಲ್ಲಾ ಬಾಳ ಸಂತೋಷ ಆಯಿತು. ಇದೇ ರೀತಿ ಮಾಡಿದ್ರ ಒಂದನೇ ಶ್ರೀಶೈಲ ಮಾಡ್ತೀನಿ. ಧರ್ಮ, ಕರ್ಮ…
ದೇವರಹಿಪ್ಪರಗಿ ಬಳಿ ಸಂಭವಿಸಿದ ಬಸ್ ಹಾಗೂ ಲಾರಿ ಅಪಘಾತ | ಅಪಘಾತದಲ್ಲಿ ಮೃತಪಟ್ಟ ಬಳಗಾನೂರಿನ ಬಾಲಕ | ಗಾಯಾಳುಗಳನ್ನು ತುರ್ತಾಗಿ ಆಸ್ಪತ್ರೆಗೆ ದಾಖಲಿಸಿದ ಶಾಸಕ ಅಶೋಕ ಮನಗೂಳಿ ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಚಲಿಸುತ್ತಿದ್ದ ಲಾರಿಯ ಹಿಂಬದಿಗೆ ಬಸ್ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಬಾಲಕನೋರ್ವ ಮೃತಪಟ್ಟು, ೩೦ ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ರಾತ್ರಿ ಪಟ್ಟಣದ ಹೊರವಲಯದಲ್ಲಿ ಜರುಗಿದೆ.ಪಟ್ಟಣದ ರಾಷ್ಟ್ರೀಯ ಹೆದ್ದಾರಿ ೫೦ ರಲ್ಲಿ ಸಿಂದಗಿ ರಸ್ತೆಯಲ್ಲಿನ ರಾಜಸ್ಥಾನಿ ಡಾಭಾ ಹತ್ತಿರ ಶುಕ್ರವಾರ ರಾತ್ರಿ ೧೦ ಗಂಟೆಯ ಸುಮಾರಿಗೆ ಈ ಘಟನೆ ಜರುಗಿದೆ.ಕಲಬುರ್ಗಿಗೆ ತೆರಳುತ್ತಿದ್ದ ಚಿಕ್ಕೋಡಿ-ಕಲಬುರ್ಗಿ(ಕೆಎ ೨೮ ಎಫ್ ೨೩೬೯) ಸಾರಿಗೆ ಬಸ್ ಮುಂದೆ ಚಲಿಸುತ್ತಿದ್ದ ಲಾರಿಗೆ(ಎಮ್‌ಎಚ್-೧೩ ಎಎಕ್ಸ ೩೫೬೫) ಗುದ್ದಿದ ಪರಿಣಾಮ ಬಸ್‌ನಲ್ಲಿ ಚಲಿಸುತ್ತಿದ್ದ ೩೦ ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡರು.ಅದೇ ಸಮಯದಲ್ಲಿ ಹೆದ್ದಾರಿ ಮೂಲಕ ತೆರಳುತ್ತಿದ್ದ ಸಿಂದಗಿ ಶಾಸಕ ಅಶೋಕ ಮನಗೂಳಿ ಅಪಘಾತ ಸ್ಥಳದಲ್ಲಿದ್ದು ತಕ್ಷಣವೇ ಕಾರ್ಯಪ್ರವೃತ್ತರಾಗಿ ಗಾಯಾಳಗಳನ್ನು ಸಿಂದಗಿ, ರೋಗಿಗಳಿಗೆ ಧೈರ್ಯ ತುಂಬಿದರಲ್ಲದೆ,…
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕಾರ್ಯಕ್ರಮದಲ್ಲಿ ಹಿರಿಯ ಗಾಂಧೀವಾದಿ ಸುಧೀಂದ್ರ ಕುಲಕರ್ಣಿ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸತ್ಯ ಮತ್ತು ಅಹಿಂಸೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜೀವನ ಸಂದೇಶಗಳಾಗಿವೆ. ನನ್ನ ಜೀವನ ಕ್ರಮವೇ ನನ್ನ ಜೀವನ ಸಂದೇಶ ಎಂದು ಗಾಂಧೀಜಿ ಅವರು ಯಾವಾಗಲೂ ಹೇಳುತ್ತಿದ್ದರು ಎಂದು ಹಿರಿಯ ಗಾಂಧೀವಾದಿ ಸುಧೀಂದ್ರ ಕುಲಕರ್ಣಿ ಹೇಳಿದರು.ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್ ಕೋಶ ಹಾಗೂ ಗಾಂಧಿ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಆಗಸ್ಟ್ಕ್ರಾಂತಿ ಟ್ರಸ್ಟ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ “ಮಹಾತ್ಮಾ ಗಾಂಧೀಜಿ ಅವರ ಜೀವನ ಸಂದೇಶಗಳು” ಕುರಿತು ಮಾತನಾಡಿದರು.ನಾನು ಬರೆದದ್ದು, ನನ್ನ ಬಗೆಗೆ ಬೇರೆಯವರು ಬರೆದಿರುವುದಕ್ಕಿಂತ ನನ್ನ ಬದುಕೇ ನನ್ನ ಜೀವನ ಸಂದೇಶ ಎಂದು ಹೇಳುತ್ತಿದ್ದ ಮಹಾತ್ಮಾ ಗಾಂಧೀಜಿಯವರ ವಿಚಾರ-ಆಚಾರಗಳಲ್ಲಿ ಯಾವುದೇ ಅಂತರವಿರುತ್ತಿರಲಿಲ್ಲ. ಇಂಥ ಮಹಾನ್ ವ್ಯಕ್ತಿಯ ಆದರ್ಶ ಇಡೀ ಜಗತ್ತಿಗೇ ಮಾದರಿ ಎಂದು ಬಣ್ಣಿಸಿದರು.ಸತ್ಯ ಬಹಳ ಗಹನವಾದ ವಿಷಯ. ಸತ್ಯವೇ ದೇವರು. ನಾಸ್ತಿಕರಿಗೆ ದೇವರ ಬಗೆಗೆ ನಂಬಿಕೆ ಇರಲಿಕ್ಕಿಲ್ಲ. ಆದರೆ ಸತ್ಯವೇ…
