ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ತಾಲೂಕಿನ ಬಳೂತಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಣಮಾಪುರ ಪಂಚಾಯಿತಿ ಮಟ್ಟದ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಗಳಾಗಿ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಅಶೋಕ ಗಿಡ್ಡಪ್ಪಗೋಳ ಮಾತನಾಡಿ, ಮಗುವಿನ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆಯು ಸಹಕಾರಿಯಾಗಿದೆ ಮತ್ತು ಮಕ್ಕಳ ಕಲಿಕೆಗೆ ಪೂರಕವಾಗಿದೆ ಎಂದು ಹೇಳಿದರು.
ಅತಿಥಿಗಳಾಗಿ ದೈಹಿಕ ಶಿಕ್ಷಣಾಧಿಕಾರಿ ಎಸ್ ಎಸ್ ಅವಟಿ ಮಾತನಾಡಿ, ಮಕ್ಕಳ ಆರೋಗ್ಯ ಮತ್ತು ಜ್ಞಾನ ಸಂಪಾದನೆಗೆ ಕ್ರೀಡೆ ಅಡಿಪಾಯ ಇದ್ದಂತೆ ಮತ್ತು ಪಾಲಕರು ಮಕ್ಕಳ ಕ್ರೀಡೆಗೆ ಪ್ರೋತ್ಸಾಹ ನೀಡುವ ಕೆಲಸ ಆಗಬೇಕು ಎಂದು ಹೇಳಿದರು.
ಸಾನಿಧ್ಯ ಶೆಂಕ್ರೆಯ್ಯ ಚಿಕ್ಕಮಠ, ಅಧ್ಯಕ್ಷತೆಯನ್ನು ಎಸ್ ಡಿಎಂಸಿ ಅಧ್ಯಕ್ಷ ಬಸವರಾಜ ಬನಾಗೊಂಡ, ಸಿಆರ್ಪಿ ಸಂಗಮೇಶ ಜಂಗಮಶೆಟ್ಟಿ, ಮುಖ್ಯ ಶಿಕ್ಷಕ ವ್ಹಿ.ಬಿ. ಬಡಿಗೇರ, ದುಂಡಪ್ಪ ಬನಾಗೊಂಡ, ಶ್ರೀಶೈಲ ಗಾಮನ್ನವರ, ಬಸವರಾಜ ಮಾಳೆದ, ಶೇಕಪ್ಪ ಔರಸಂಗ, ಜಗದೀಶ ಸುನಗದ, ಬಸವರಾಜ ಚೌಧರಿ, ಅಭಿಷೇಕ ಹೆಬ್ಬಾಳ, ನವೀನ್ ಕೋರಿ, ಶಿವಾನಂದ ಪಡಶೆಟ್ಟಿ , ಸುರೇಶ ಬಿರಾದಾರ ಉಪಸ್ಥಿತರಿದ್ದರು.

